ಸರ್ಕಾರಿ ಜಮೀನು ಅಥವಾ ಜಾಗದಲ್ಲಿ ಉಳುಮೆ ಮಾಡುತ್ತಿರುವಂತಹ ರಾಜ್ಯದ ಎಲ್ಲಾ ರೈತರಿಗೆ ಸರ್ಕಾರಿ ಜಮೀನು ನಿಮ್ಮ ಹೆಸರಿಗೆ ಮಾಡಿ ಕೊಳ್ಳಲು ಬಗರ್ ಹುಕುಂ ಸಾಗುವಳಿ ಅರ್ಜಿಯನ್ನು ಕರೆಯಲಾಗಿದೆ. ರಾಜ್ಯದಲ್ಲಿ ಸಾಕಷ್ಟು ಜನ ರೈತರು ಕೃಷಿಯನ್ನು ಅವಲಂಬಿಸಿದ್ದು ಉಳುಮೆ ಮಾಡಲು ಸ್ವಂತ ಜಮೀನು ಇಲ್ಲದೆ ಸರ್ಕಾರಿ ಗಾರಾಯಣ ಅಥವಾ ಸರ್ಕಾರಿ ಜಮೀನಿನಲ್ಲಿ ಅನೇಕ ವರ್ಷಗಳಿಂದ ಉಳುಮೆ ಮಾಡುತ್ತಾ ಬಂದಿದ್ದು.
ಬಡ ರೈತರು ಇತರೆ ಯಾವುದೇ ಸ್ವಂತ ಜಮೀನು ಹೊಂದಿದ್ದರೆ ಸರ್ಕಾರಿ ಭೂಮಿಯನ್ನು ಅವಲಂಬಿಸಿ ಉಳುಮೆ ಮಾಡುತ್ತಾ ಬಂದಿರುವಂತಹ ಎಲ್ಲಾ ರೈತರಿಗೆ ಬಗರ್ ಹುಕುಂ ಸಾಗುವಳಿ ಯೋಜನೆಯ ಅಡಿಯಲ್ಲಿ ಸರ್ಕಾರಿ ಜಮೀನು ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿ ಜಮೀನಿನ ಪಹಣಿಯನ್ನಾಗಿ ಮಾಡಿ ಸಾಗುವಳಿ ಚೀಟಿಯನ್ನು ನೀಡಲು ರಾಜ್ಯ ಸರ್ಕಾರ ಹೊಸ ಕ್ರಮಕ್ಕೆ ಮುಂದಾಗಿದೆ.
ಹಾಗಾದರೆ ಈದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ಜಮೀನು ಅಥವಾ ಜಾಗದಲ್ಲಿ ನೀವೇನಾದರೂ ಉಳುಮೆ ಮಾಡಿ ಕೊಂಡು ಬಂದಿದ್ದು ಅಥವಾ ವಾಸಿಸುತ್ತಿದ್ದು ಬಗರ್ ಹುಕುಂ ಸಾಗುವಳಿ ಯೋಜನೆಯ ಅಡಿಯಲ್ಲಿ ಸರ್ಕಾರಿ ಜಮೀನು ನಮ್ಮ ಹೆಸರಿಗೆ ಹೇಗೆ ಮಾಡಿಕೊಳ್ಳಬೇಕು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ.
ಜೊತೆಗೆ ಈ ಬಗರ್ ಹುಕುಂ ಸಾಗುವಳಿ ಯೋಜನೆಗೆ ಯಾರು ಅರ್ಹರು ಹಾಗೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು ಯಾವುದು, ಹಾಗೂ ಯಾರಿಗೆಲ್ಲ ಸಿಗುತ್ತದೆ ಉಚಿತವಾದಂತಹ ಸರ್ಕಾರಿ ಭೂಮಿ, ಹಾಗೂ ಎಷ್ಟು ದಿನದಲ್ಲಿ ನಮ್ಮ ಜಮೀನಿಗೆ ಪಹಣಿ ವರ್ಗಾವಣೆಯಾಗುತ್ತದೆ.
ಅಂದರೆ ಮುಂಚೆ ಜಮೀನು ಮಾಲಿಕತ್ವ ಹೊಂದಿದ್ದ ಬಳಿಕ ಹತ್ತು ವರ್ಷ ಗಳ ವರೆಗೆ ಯಾವುದೇ ಮಾರಾಟ ಮಾಡದಂತೆ ಅಂದರೆ ಯಾವುದೇ ಮಾರಾಟದ ಹಕ್ಕನ್ನು ಸರ್ಕಾರ ನೀಡುವುದಿಲ್ಲ ಅಂದರೆ ಯಾವುದೇ ಪಾರಬಾರ ಮಾಡುವಂತಿಲ್ಲ. ಹಾಗಾದರೆ ಬನ್ನಿ ರಾಜ್ಯ ಸರ್ಕಾರ ಬಗರ್ ಹುಕುಂ ಸಾಗುವಳಿ ಯೋಜನೆಯ ಅಡಿಯಲ್ಲಿ ಸರ್ಕಾರದಿಂದ ಉಚಿತ ಜಮೀನು ಅಥವಾ ಭೂಮಿ ಪಡೆದುಕೊಳ್ಳುವುದು ಹೇಗೆ ಎನ್ನುವುದನ್ನು ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ರೈತರು 15 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದರೆ ಮಾತ್ರ ಉಳುಮೆ ಭೂಮಿ ಸಕ್ರಮ ಮಾಡಿ ಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಬಗರ್ ಹುಕುಂ ನಲ್ಲಿ ಅನೇಕ ಭೋಗಸ್ ಅರ್ಜಿ ಸಲ್ಲಿಸಿದ್ದು ಆಪ್ ನ ಮೂಲಕ ನೈಜ್ಯ ಉಳುಮೆ ದಾರವನ್ನು ಗುರುತಿಸಿ ಅರ್ಹ ರೈತರ ನೆರವಿಗೆ ಮುಂದಾಗಲು ಕಂದಾಯ ಇಲಾಖೆ ಕ್ರಮ ಕೈಗೊಂಡಿದೆ.
ಕೆಲವರು ಐದಾರು ಕಡೆ ಖರೀದಿಸಿ ಸಂಕ್ರಮಕ್ಕೆ ಅರ್ಜಿ ಸಲ್ಲಿಸಿದ್ದು ಬೇರೆ ಬೇರೆ ತಾಲೂಕುಗಳಲ್ಲಿಯೂ ಸಹ ಬಗರ್ ಹುಕುಂ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಲಕ್ಷಾಂತರ ರೈತರು ಬಗರ್ ಹುಕುಂ ಜಮೀನು ಸಕ್ರಮಕ್ಕೆ ಕಾಯುತ್ತಿದ್ದು ಸರ್ಕಾರಿ ಭೂಮಿ ಕೂಡ ಭಾರೀ ಪ್ರಮಾಣದಲ್ಲಿ ಒತ್ತುವರಿಯಾಗುತ್ತಿದೆ.
ಇರುವ ಭೂಮಿಯನ್ನು ಉಳಿಸಿಕೊಂಡು ಅರ್ಹ ಬಡ ರೈತರಿಗೆ ಹಕ್ಕು ನೀಡಲು ಬಗರ್ ಹುಕುಂ ಸಕ್ರಮಕ್ಕೆ ಕೆಲವು ಕಠಿಣ ಕ್ರಮಗಳನ್ನು ತರಲಾಗುತ್ತಿದೆ. ಫಾರಂ 51 ರಲ್ಲಿ ಅರ್ಜಿ ಹಾಕುವುದು ದುರುಪಯೋಗ ಆಗಿರುವ ಸಾಧ್ಯತೆ ಇದೆ. 15 ವರ್ಷಗಳಿಂದ ಉಳುಮೆ ಮಾಡುತ್ತಿರುವಂತಹ ರೈತರಿಗೆ ಆಪ್ ಮೂಲಕ ಪತ್ತೆ ಮಾಡಿ ಅಂತಹ ರೈತರಿಗೆ ಸಾಗುವಳಿ ಚೀಟಿ ನೀಡಲಾಗುವುದು.
ಉಳಿದ ಸರ್ಕಾರಿ ಭೂಮಿ ಒತ್ತುವರಿಯಾಗದಂತೆ ಕೆಲವು ವ್ಯವಸ್ಥೆ ಜಾರಿಗೊಳಿಸಿದ್ದು ಕಂದಾಯ ಇಲಾಖೆ ಸಿಬ್ಬಂದಿ ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರಿ ಭೂಮಿ ಇರುವ ಕಡೆ ಪರಿಶೀಲನೆ ನಡೆಸಬೇಕು. ಜಿಎಫ್ ಎನ್ ಇಂಗ್ ಮಾಡಬೇಕು. ಭೂಮಿಯ ವಿವರಗಳನ್ನು ಹಾಕಬೇಕು. ಹಾಗೂ ಈ ಅರ್ಜಿಯನ್ನು ಆರು ತಿಂಗಳವರೆಗೆ ವಿಲೇವಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ 50 ಸಮಿತಿಗಳಲ್ಲಿ ಈ ಪ್ರಕ್ರಿಯೆ ಜಾರಿಯಲ್ಲಿ ಇದೆ.