ವೈಜ್ಞಾನಿಕವಾಗಿ ದೃಢಪಟ್ಟಿರುವಂತಹ ಕಾಮ ಕಸ್ತೂರಿ ಬೀಜವನ್ನು ನಾವು ಸೇವನೆ ಮಾಡುವುದರಿಂದ ಯಾವುದೆಲ್ಲ ರೀತಿಯ ಆರೋಗ್ಯ ಪ್ರಯೋ ಜನಗಳನ್ನು ಪಡೆದುಕೊಳ್ಳಬಹುದು ಹಾಗೂ ಇದನ್ನು ಯಾವ ವಿಧಾನ ದಲ್ಲಿ ಸೇವನೆ ಮಾಡಿದರೆ ಯಾವುದೆಲ್ಲ ರೀತಿಯ ಆರೋಗ್ಯ ಸಮಸ್ಯೆ ಗಳನ್ನು ದೂರ ಮಾಡಿಕೊಳ್ಳಬಹುದು ಹಾಗೂ ಇದರಲ್ಲಿ ಅಂತಹ ಯಾವ ಪೋಷಕಾಂಶ ಇದೆ.
ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ. ಕಾಮ ಕಸ್ತೂರಿ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಐರನ್ ಅಂಶ ನಮಗೆ ಸಿಗುತ್ತದೆ. ಹಾಗೂ ಇದರ ಜೊತೆ ಜಿಂಕ್, ರೈಬೋ ಫ್ಲೋವಿನ್, ಥಯಮಿನ್ ಹಾಗೆಯೇ ಇದರಲ್ಲಿ ಸ್ವಲ್ಪ ಪ್ರಮಾಣದ ಪ್ರೋಟೀನ್ ಅಂಶ, ಗುಡ್ ಕೊಲೆಸ್ಟ್ರಾಲ್ ಅಂಶ ಹಾಗೂ ಗುಡ್ ಐರನ್ ಅಂಶವನ್ನು ಸಹ ನಾವು ಕಾಮ ಕಸ್ತೂರಿ ಬೀಜದಲ್ಲಿ ಕಾಣಬಹುದು.
ಜೊತೆಗೆ ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಸಿದಾಗ ನಮಗೆ ಆಂಟಿ ಆಕ್ಸಿಡೆಂಟ್ ಪ್ರಮಾಣ ಹಾಗೂ ನೈಟ್ರಿಕ್ ಪ್ರಮಾಣವನ್ನು ಸಹ ನಾವು ಪಡೆದುಕೊಳ್ಳಬಹುದು. ಈ ಎಲ್ಲಾ ಪೋಷಕ ತತ್ವಗಳಿಂದ ಸಮೃದ್ಧಿಯಾಗಿರುವಂತಹ ಈ ಕಾಮಕಸ್ತೂರಿ ಬೀಜವನ್ನು ನಾವು ಹೇಗೆ ಸೇವನೆ ಮಾಡಬೇಕು, ಯಾವಾಗ ಸೇವನೆ ಮಾಡಬೇಕು.
ಯಾವ ಪ್ರಮಾಣದಲ್ಲಿ ಸೇವನೆ ಮಾಡಬೇಕು, ಹಾಗೂ ಎಷ್ಟು ದಿನದವರೆಗೆ ಇದನ್ನು ಸೇವನೆ ಮಾಡಬೇಕು ಎನ್ನುವಂತಹ ಮಾಹಿತಿ ಯಾರಿಗೂ ತಿಳಿದಿಲ್ಲ ಹಾಗಾದರೆ ಇದನ್ನು ಯಾವ ಪ್ರಮಾಣದಲ್ಲಿ ಹೇಗೆ ಉಪಯೋಗಿಸಬೇಕು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
* ಈ ಕಾಮಕಸ್ತೂರಿ ಬೀಜವನ್ನು ಮೂರು ತಿಂಗಳವರೆಗೆ ಸೇವನೆ ಮಾಡ ಬಹುದು. ಚಿಕ್ಕ ಮಕ್ಕಳಾದರೆ ಅರ್ಧ ಚಮಚ ದೊಡ್ಡವರಾದರೆ ಒಂದು ಚಮಚ ಒಂದು ದಿನಕ್ಕೆ ಸೇವನೆ ಮಾಡಬಹುದು ದಿನದಲ್ಲಿ ಒಮ್ಮೆ ಅಥವಾ ಎರಡು ಬಾರಿ ಸೇವನೆ ಮಾಡಬಹುದು. ಇದಕ್ಕೆ ಅನುಪಾನವಾಗಿ ಏನನ್ನು ಬಳಸಬೇಕು ಎಂದರೆ ರಾತ್ರಿ ಹೊತ್ತು ಹಾಲು ಬಳಸಿ ಹಾಗೂ ಬೆಳಗಿನ ಸಮಯ ಮಜ್ಜಿಗೆ ಎಳನೀರು ಇವುಗಳನ್ನು ಬಳಸಬಹುದು ಅಥವಾ ಹಣ್ಣಿನ ಜ್ಯೂಸ್ ತರಕಾರಿ ಜ್ಯೂಸ್ ಜೊತೆ ಸೇವನೆ ಮಾಡಬಹುದು.
ಕಾಮ ಕಸ್ತೂರಿ ಬೀಜವನ್ನು ಯಾವುದೇ ಕಾರಣಕ್ಕೂ ಹಾಗೆ ಸೇವನೆ ಮಾಡಬಾರದು. ಬದಲಿಗೆ ಅದನ್ನು ನೀರಿನಲ್ಲಿ ನೆನೆ ಹಾಕಿ ಆನಂತರ ಅದನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಬೇಕಾದಂತಹ ಅಗತ್ಯವಾದ ಪೋಷಕಾಂಶಗಳು ನಮಗೆ ಸಿಗುತ್ತದೆ. ಇದರ ಜೊತೆ ನಮ್ಮ ಶರೀರದಲ್ಲಿ ಆಕ್ಸಿಜನ್ ಪ್ರಮಾಣ ವೃದ್ಧಿಯಾಗುತ್ತದೆ. ಹಾಗಾದರೆ ಇದರ ಪ್ರಯೋಜನಗಳು ಏನು ಎಂದು ನೋಡುವುದಾದರೆ.
* ನಮ್ಮ ಶರೀರದಲ್ಲಿ ಜೀವ ಶಕ್ತಿ ವೃದ್ಧಿಯಾಗುತ್ತದೆ. ಇದು ಶೀತ ವೀರ್ಯ ಗುಣ ಧರ್ಮವನ್ನು ಹೊಂದಿರುವಂಥದ್ದು ಆದ್ದರಿಂದ ಪಿತ್ತಜನ್ಯವಾಗಿ ಬರುವಂತಹ ಹಾಗೂ ಉಷ್ಣ ವಿಕಾರದಿಂದ ಬರುವಂತಹ ಎಲ್ಲ ರೋಗಗಳಿಗೂ ಕೂಡ ಇದು ಪರಿಹಾರ ಮಾಡುತ್ತದೆ.
ಉದಾಹರಣೆಗೆ :- ವೆರಿಕೋಸ್ ವೇನ್, ಪಿಸಿಓಡಿ, ಕಣ್ಣುರಿ, ಕೂದಲು ಉದುರುವಂಥದ್ದು, ಹಾರ್ಟ್ ನಲ್ಲಿ ಬ್ಲಾಕೇಜ್ ಆಗುವುದು, ಬಿಪಿ, ಕೊಲೆಸ್ಟ್ರಾಲ್, ಪಿತ್ತ ವಿಕಾರದಿಂದ ಬರುವಂತಹ ಚರ್ಮದ ವ್ಯಾಧಿಗಳು, ಒಟ್ಟಾರೆಯಾಗಿ ಪಿತ್ತವಿಕಾರದಿಂದ ಸರಿ ಸುಮಾರು 60ಕ್ಕೂ ಹೆಚ್ಚು ಅಧಿಕ ರೋಗಗಳು ಕಾಣಿಸಿಕೊಳ್ಳುತ್ತದೆ.
ಹಾಗಾಗಿ ಈ ಎಲ್ಲಾ ರೀತಿಯ ಸಮಸ್ಯೆಗಳನ್ನು ಸಹ ದೂರ ಮಾಡಿಕೊಳ್ಳುವುದಕ್ಕೆ ಈ ಕಾಮ ಕಸ್ತೂರಿ ಬೀಜವನ್ನು ಈ ವಿಧವಾಗಿ ಸೇವನೆ ಮಾಡುವುದು ತುಂಬಾ ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.