ಕನ್ನಡ ಕಿರುತೆರೆಯ ಕೃಷ್ಣ ರುಕ್ಮಿಣಿ ಎನ್ನುವ ಸೂಪರ್ ಹಿಟ್ ಧಾರಾವಾಹಿ ಕೃಷ್ಣ ಪಾತ್ರಧಾರಿಯಾಗಿ ಕನ್ನಡದ ಜನತೆಗೆ ಪರಿಚಿತರಾಗಿದ್ದ ಸುನಿಲ್ ಅವರು ನಂತರ ತಮ್ಮ ಮೊದಲ ಸಿನಿಮಾ ವಾದ ಮದರಂಗಿ ಚಿತ್ರದ ಡಾರ್ಲಿಂಗ್ ಡಾರ್ಲಿಂಗ್ ಹಾಡಿನಿಂದ ಇನ್ನಷ್ಟು ಫೇಮಸ್ ಆದರು. ಈಗ ಹೆಚ್ಚಿನ ಜನ ಅವರನ್ನು ಡಾರ್ಲಿಂಗ್ ಕೃಷ್ಣ ಎಂದೇ ಗುರುತಿಸುತ್ತಿದ್ದಾರೆ.
ಕಳೆದ ಒಂದು ದಶಕದಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋ ಆಗಿ ಗುರುತಿಸಿಕೊಂಡಿರುವ ಇವರು ಲವ್ ಮಾಕ್ಟೇಲ್ ಸಿನಿಮಾದಿಂದ ಮತ್ತೊಮ್ಮೆ ಬ್ರೇಕ್ ಪಡೆದುಕೊಂಡರು. ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಡಾರ್ಲಿಂಗ್ ಕೃಷ್ಣ ಅವರ ಮತ್ತೊಂದು ಚಿತ್ರ ರಿಲೀಸ್ ಗೆ ನಿಂತಿದೆ. ಕಳೆದ ವರ್ಷ ಲಕ್ಕಿ ಮ್ಯಾನ್ ಮತ್ತು ದಿಲ್ ಪಸಂದ್ ಈ ಮೂರು ಚಿತ್ರಗಳು ಬಿಡುಗಡೆಯಾಗಿ ಮೂರು ಕೂಡ ತಕ್ಕಮಟ್ಟಿಗೆ ಹೆಸರು ಮಾಡಿದ್ದವು.
ಇದೀಗ ಅವರ ಬಹು ನಿರೀಕ್ಷಿತ ಚಿತ್ರ ಮಿ.ಬ್ಯಾಚುಲರ್ ರಿಲೀಸ್ ಹಂತಕ್ಕೆ ಬಂದಿದೆ ಸಿನಿಮಾ ಕುರಿತಾದ ಸಂದರ್ಶನದಲ್ಲಿ ಭಾಗಿಯಾಗಿರುವ ಡಾರ್ಲಿಂಗ್ ಕೃಷ್ಣ ಅವರು ಸಂದರ್ಶಕರು ಕೇಳಿರುವ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇವರನ್ನು ಇಂಟರ್ವ್ಯೂ ಮಾಡುತ್ತಿದ್ದವರು ಈಗಿನ ಪ್ರಸ್ತುತ ಸಂಗತಿಯನ್ನು ಕುರಿತು ಕೆದಕಿದ್ದಾರೆ ಅದನ್ನು ಪರೋಕ್ಷವಾಗಿ ಸ್ಟಾರ್ ಗಳ ಬಗ್ಗೆ ನೀವು ಏನು ಹೇಳುತ್ತೀರಿ ಎಂದು ಕೇಳಿದ್ದಾರೆ.
ಇದಕ್ಕೆ ತಾಳ್ಮೆಯಿಂದ ಹಾಗೂ ಜಾಳ್ಮೆಯಿಂದ ಉತ್ತರ ಕೊಟ್ಟಿರುವ ಡಾರ್ಲಿಂಗ್ ಕೃಷ್ಣ ಅವರ ಮಾತುಗಳು ಎಲ್ಲೆಡೆ ವೈರಲ್ ಆಗುತ್ತಿದ್ದು ಇದನ್ನು ಎಲ್ಲರೂ ಸಹ ಮೆಚ್ಚಿ ಕೊಂಡಾಡುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರು ಸ್ಟಾರ್ ವಾರ್ ಕುರಿತು ಆಡಿದ ಮಾತುಗಳು ಈ ರೀತಿ ಇದೆ. ಪ್ರತಿಯೊಬ್ಬ ಕಲಾವಿದನು ಸಹ ತನ್ನ ಚಿತ್ರವನ್ನು ಜನರು ನೋಡಲಿ ಎನ್ನುವ ಆಸೆಯಿಂದ ಪ್ರತಿ ಬಾರಿ ಹೊಸದೊಂದು ಹುರುಪಿನಲ್ಲಿ ಹೊಸ ರೀತಿ ತಯಾರಿಗಳೊಂದಿಗೆ ಸಿನಿಮಾ ಮಾಡುತ್ತಾನೆ.
ಆ ಸಿನಿಮಾವನ್ನು ಪ್ರೇಕ್ಷಕರು ಥಿಯೇಟರ್ ಅಲ್ಲಿ ಬಂದು ನೋಡಿದರೆ ಅದೇ ಅವನ ಪಾಲಿಗೆ ಆನಂದ ಅದರಲ್ಲೂ ಹಲವರು ಕೆಲವರನ್ನು ತಮ್ಮ ಫೇವರೆಟ್ ಹೀರೋಗಳು ಫೇವರೆಟ್ ಸ್ಟಾರ್ ಎಂದೆಲ್ಲ ಕಾಯ್ದುಕೊಳ್ಳುತ್ತಾರೆ ಅದು ಕೂಡ ಒಂದು ರೀತಿ ಸಂತಸದ ವಿಷಯವೇ ಆದರೆ ಆ ಸಂತಸ ಥಿಯೇಟರ್ ಅಲ್ಲಿ ಹೋಗಿ ಆ ಹಿರೋವಿನ ಸಿನಿಮ ನೋಡುವುದಕ್ಕೆ ಸೀಮಿತವಾಗಿರಬೇಕು.
ಕುಟುಂಬ ಸಮೇತವಾಗಿ ಸ್ನೇಹಿತರ ಜೊತೆ ಹೀಗೆ ಅವರ ಇಷ್ಟದ ಹೀರೋ ಸಿನಿಮಾವನ್ನು ಎಷ್ಟು ಬಾರಿಯಾದರೂ ಥಿಯೇಟರ್ ನಲ್ಲಿ ನೋಡಲಿ ಅದನ್ನು ಬಿಟ್ಟು ಆಚೆಗಿನ ವಿಷಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ಯಾಕೆಂದರೆ ಸಿನಿಮಾ ಮುಗಿದ ಮೇಲೆ ಅವರಿಗೂ ಒಂದು ಬದುಕಿದೆ ಸ್ಟಾರ್ಗಳ ಬಗ್ಗೆ ತಲೆ ಕೆಡಿಸಿಕೊಂಡು ಅವರ ಹಿಂದೆ ಯಾಕೆ ನಿಂತುಕೊಳ್ಳುತ್ತೀರಿ.?
ಪ್ರತಿಯೊಬ್ಬರಿಗೂ ಸಹ ತಮ್ಮದೇ ಆದ ಒಂದು ವೈಯಕ್ತಿಕ ಜೀವನ ಇದೆ ಮನೆ ಈಹೆಂಡತಿ ಮಕ್ಕಳು ಸ್ನೇಹಿತರು ಹೀಗೆ ಅವರಿಗೂ ಬದುಕಿದ ಪ್ರತಿಯೊಬ್ಬರು ಸಹ ಜೀವನದಲ್ಲಿ ಸಾಧನೆ ಮಾಡಬೇಕು ಅದನ್ನು ಬಿಟ್ಟು ಸ್ಟಾರ್ಗಳ ಹಿಂದೆ ನಿಂತುಕೊಂಡರೆ ಅವರುಗಳು ಸ್ಟಾರ್ ಆಗುತ್ತಿರುತ್ತಾರೆ. ನಾವು ಸ್ಟಾರ್ ಆಗುವುದಿಲ್ಲ. ಸಿನಿಮಾಗೆ ಬರುವ ಮುಂಚೆ ನಾನು ಮತ್ತು ಒಬ್ಬರ ಫ್ಯಾನ್ ಆಗಿದ್ದೆ ಆದರೆ ಅಷ್ಟಕ್ಕೆ ನಿಂತುಕೊಂಡಿದ್ದರೆ ಇಂದು ನಾನು ಕಟ್ ಔಟ್ ಹಾಕಿಸಿಕೊಳ್ಳಲು ಆಗುತ್ತಿರಲಿಲ್ಲ ಎಂದು ಉತ್ತರಿಸಿದ್ದಾರೆ. ಇವರ ಈ ಪ್ರಬುದ್ಧ ಮಾತುಗಳಿಂದ ಆದರೂ ಸದ್ಯದ ಪರಿಸ್ಥಿತಿ ತಿಳಿ ಆದರೆ ಇನ್ನಷ್ಟು ಜನ ಅರಿತುಕೊಂಡರೆ ಅಷ್ಟೇ ಸಾಕು.