ದರ್ಶನ್ ಅವರ 56ನೇ ಸಿನಿಮಾಗೆ ಮಾಲಾಶ್ರೀ ಮಗಳನ್ನು ಕೈ ಬಿಟ್ಟು ಅನುಷ್ಕಾ ಶೆಟ್ಟಿಯನ್ನು ಹೀರೋಯಿನ್ ಆಗಿ ಹಾಕಿಕೊಳ್ತಾರ.?

ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಈಗಾಗಲೇ ಬಿಡುಗಡೆಗೆ ಸಜ್ಜಾಗಿದ್ದು ಡಬ್ಬಿಂಗ್ ಕಾರ್ಯವು ಕೂಡ ಮುಗಿದಿದೆ ಹಾಡುಗಳ ಚಿತ್ರೀಕರಣವು ಕೂಡ ಸಂಪೂರ್ಣವಾಗಿದೆ ಇನ್ನೇನು ಮುಂದಿನ ತಿಂಗಳು ಬಿಡುಗಡೆಯಾಗಬೇಕಷ್ಟೆ. ಇದರ ಬೆನ್ನಲ್ಲೇ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಡಿ ಬಾಸ್ ಅವರ ಮುಂದಿನ ಸಿನಿಮಾ ಯಾವುದು ಎಂಬುದನ್ನು ರಾಕ್ ಲೈನ್ ವೆಂಕಟೇಶ್ ಪ್ರೊಡಕ್ಷನ್ ಅವರು ರಿವೀಲ್ ಮಾಡಿದ್ದಾರೆ ಹೌದು. ಕನಕಪುರ ಸಮೀಪದಲ್ಲಿ ಇರುವಂತಹ ರವಿಶಂಕರ್ ಗುರೂಜಿ ಅವರ ಆಶ್ರಮದಲ್ಲಿ ದರ್ಶನ ಅವರ 56ನೇ ಸಿನಿಮಾ ಕಾಟೇರ ಸಿನಿಮಾದ ಮುಹೂರ್ತ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲಾಗಿತ್ತು. ಈ ಒಂದು ಅದ್ದೂರಿ ಕಾರ್ಯಕ್ರಮಕ್ಕೆ ಚಿತ್ರರಂಗದ ಕೆಲವು ಗಣ್ಯ ಅತಿಥಿಗಳು ಭಾಗವಹಿಸಿದ್ದರು ವಿಶೇಷವಾಗಿ ಮಾಲಾಶ್ರೀ ತರುಣ್ ಸುಧೀರ್ ರಾಕ್ಲೈನ್ ವೆಂಕಟೇಶ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ದರ್ಶನ್ ಅವರ 56ನೇ ಸಿನಿಮಾಗೆ ಮಾಲಾಶ್ರೀ ಮಗಳು ಹೀರೋಯಿನ್ ಆಗಿ ನಟಿಸಲಿದ್ದಾರೆ ಎಂಬ ವಿಚಾರವನ್ನು ರಿವೀಲ್ ಮಾಡಿದ್ದರು ಇದೇ ಮೊದಲ ಬಾರಿಗೆ ಮಾಲಾಶ್ರೀ ಅವರ ಮಗಳು ರಾಧನಾ ರಾಮ್ ಅವರು ದರ್ಶನ ಅವರ ಜೊತೆ ಅಭಿನಯಿಸುತ್ತಿರುವುದು. ಸ್ಯಾಂಡಲ್ ವುಡ್ ನಲ್ಲಿ ಈವರೆಗೂ ರಾಧನ ರಾಮ್ ಅವರು ಎಲ್ಲಿಯೂ ಕೂಡ ಕಾಣಿಸಿಕೊಂಡಿರಲಿಲ್ಲ. ದರ್ಶನವರ ಜೊತೆ ನಾಯಕ ನಟಿಯಾಗಿ ಎಂಟ್ರಿ ಪಡೆಯುವುದು ಇವರ ಮೂಲ ಉದ್ದೇಶವಾಗಿರುತ್ತದೆ ಹಾಗಾಗಿ ನಟನೆಗೆ ತರಬೇತಿಯನ್ನು ಪಡೆದು ಎರಡು ವರ್ಷವಾಗಿದ್ದರು ಕೂಡ ಯಾರ ಸಿನಿಮಾದಲ್ಲೂ ಕೂಡ ರಾಧನಾ ರಾಮ್ ಅವರು ನಟಿಸುವುದಕ್ಕೆ ಒಪ್ಪಿಕೊಂಡಿರಲಿಲ್ಲ.

ಇದೀಗ ದರ್ಶನ್ ಅವರ ಐವತ್ತಾರನೇ ಸಿನಿಮಾಗೆ ರಾಧನ ರಾಮ್ ಅವರೇ ಹೀರೋ ಇನ್ ಎಂಬುದನ್ನು ಫಿಕ್ಸ್ ಮಾಡಿದ್ದರು ಈ ವಿಚಾರದ ಬಗ್ಗೆ ಮಾಲಾಶ್ರೀ ಹಾಗೂ ತರುಣ್ ಸುಧೀರ್ ರಾಕ್ ಲೈನ್ ವೆಂಕಟೇಶ್ ದರ್ಶನ್ ಎಲ್ಲರೂ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಮಾಹಿತಿಯನ್ನು ಕೂಡ ಹಂಚಿಕೊಂಡಿದ್ದರು. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಕೆಲವು ಟೀಕೆ ನಿಂ.ದ.ನೆಗಳು ಕೂಡ ಕೇಳಿ ಬರುತ್ತಿತ್ತು. ಏಕೆಂದರೆ ದರ್ಶನ್ ಅವರಿಗೆ 46 ವರ್ಷ ರಾಧಾನ ರಾಮ್ ಅವರಿಗೆ ಕೇವಲ 21 ವರ್ಷ ಮಗಳ ವಯಸ್ಸಿನ ಜೊತೆ ಹೀರೋಯಿನ್ ಆಗಿ ಪಾತ್ರ ಮಾಡುವುದಕ್ಕೆ ಹೇಗೆ ಸಾಧ್ಯ ದಯವಿಟ್ಟು ಪಾತ್ರವನ್ನು ಬದಲಾವಣೆ ಮಾಡಿ ಎಂದು ಕೆಲವು ಅಭಿಮಾನಿಗಳು ಕೇಳಿಕೊಂಡಿದ್ದರು. ನೆಟ್ಟಿಗರಂತೂ ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡಿದರೂ ಆದರೆ ಇದು ಯಾವುದರ ಬಗ್ಗೆಯೂ ಕೂಡ ದರ್ಶನ್ ಆಗಲಿ ಮಾಲಾಶ್ರೀ ಅವರಾಗಲಿ ಪ್ರತಿಕ್ರಿಯೆ ನೀಡಿರಲಿಲ್ಲ.

ಆದರೆ ಇದ್ದಕ್ಕಿದ್ದ ಹಾಗೆ ಇದೀಗ ದರ್ಶನ್ ಅವರ 56ನೇ ಸಿನಿಮಾಗೇ ಬೇರೆ ಹೀರೋಯಿನ್ ಅನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹೌದು ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅನುಷ್ಕಾ ಶೆಟ್ಟಿ ಅವರ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಈ ಫೋಟೋ ನೋಡಿದಂತಹ ಅಭಿಮಾನಿಗಳು ಡಿ ಬಾಸ್ ಅವರ 56ನೇ ಸಿನಿಮಾ ಗೆ ಇವರೇ ಹೀರೋಯಿನ್ ಎಂದು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲದೆ ಈ ವಿಚಾರವನ್ನು ಎಲ್ಲಾ ಕಡೆ ಸ್ಪ್ರೆಡ್ ಮಾಡುತ್ತಿದ್ದಾರೆ ಹಾಗಾಗಿ ರಾಧನ ರಾಮ್ ಅವರನ್ನು ಕೈ ಬಿಟ್ಟು ಅನುಷ್ಕಾ ಶೆಟ್ಟಿ ಅವರನ್ನು ಈ ಸಿನಿಮಾಗೆ ಹಾಕಿಕೊಳ್ಳಬಹುದು ಎಂದು ಗಾಂಧಿನಗರದವರು ಮಾತನಾಡಿಕೊಳ್ಳುತ್ತಿದ್ದಾರೆ.

ಆದರೆ ಈ ವಿಚಾರದ ಬಗ್ಗೆ ದರ್ಶನ್ ಆಗಲಿ ಅಥವಾ ರಾಕ್ ಲೈನ್ ವೆಂಕಟೇಶ್ ಪ್ರೊಡಕ್ಷನ್ ಆಗಲಿ ಎಲ್ಲಿಯೂ ಕೂಡ ಪ್ರತಿಕ್ರಿಯೆ ನೀಡಿಲ್ಲ ಇವೆಲ್ಲವನ್ನು ನೋಡುತ್ತಿದ್ದರೆ ಅಭಿಮಾನಿಗಳ ಅನುಮಾನ ಭಾಗಶಃ ಸತ್ಯ ಎಂಬುದು ಕೆಲವು ನೆಟ್ಟಿಗರ ಅಭಿಪ್ರಾಯವಾಗಿದೆ. ಇನ್ನು ಈ ಫೋಟೋ ನೋಡಿದಂತಹ ಕೆಲವು ಅಭಿಮಾನಿಗಳು ಮಾಲಾಶ್ರೀ ಅವರ ಮಗಳಿಗೆ ಮೋಸ ಮಾಡಿ ಈ ರೀತಿ ಬೇರೆ ಹೀರೋಯಿನ್ ಅನ್ನೋ ಆಯ್ಕೆ ಮಾಡಿಕೊಳ್ಳುವುದು ತಪ್ಪು. ಈಗಾಗಲೇ ಮುಹೂರ್ತದ ಚಿತ್ರೀಕರಣ ನೆರವೇರಿದೆ ಇಂತಹ ಸಂದರ್ಭದಲ್ಲಿ ಮಾಲಾಶ್ರೀ ಮಗಳ ಕೈಬಿಡುವುದು ತಪ್ಪು ಅಂತ ಹೇಳಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ದರ್ಶನ್ ಅವರು ಒಂದು ಬಾರಿ ಮಾತು ಕೊಟ್ಟ ಮೇಲೆ ಮುಗಿಯಿತು. ಆ ಮಾತಿನಿಂದ ಅವರು ಎಂದು ಕೂಡ ಹಿಂದೆ ಬರುವುದಿಲ್ಲ ಈ ಸಿನಿಮಾಗೆ ಮಾಲಾಶ್ರೀ ಅವರ ಮಗಳೇ ಹೀರೋಯಿನ್ ಆಗಿ ಬರುತ್ತಾರೆ ಎಂದು ಹೇಳುತ್ತಿದ್ದಾರೆ.

ಇನ್ನು ಕೆಲವು ನೆಟ್ಟಿಗರು ಮಾಲಾಶ್ರೀ ಅವರ ಮಗಳಿಗೆ ಯಾವುದೇ ರೀತಿಯಾದಂತಹ ಅನುಭವವಿಲ್ಲ ವಯಸ್ಸು ಕೂಡ ಚಿಕ್ಕದು ಹಾಗಾಗಿ ಈ ಒಂದು ಸಿನಿಮಾಗೆ ಅನುಷ್ಕಾ ಶೆಟ್ಟಿಯವರೇ ಹೀರೋಯಿನ್ ಅಂತ ಹೇಳುತ್ತಿದ್ದಾರೆ. ಈ ವಿಚಾರದ ಬಗ್ಗೆ ದರ್ಶನ್ ಹಾಗೂ ಪ್ರೊಡಕ್ಷನ್ ಟೀಂ ಯಾವ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ದರ್ಶನ್ ಅವರಿಗೆ ನಾಯಕ ನಟಿಯಾಗಿ ರಾಧಾ ರಾಮ್ ಅವರು ಬಂದರೆ ಚೆನ್ನಾಗಿರುತ್ತದೆಯೋ ಅಥವಾ ಅನುಷ್ಕಾ ಶೆಟ್ಟಿ ಅವರು ಬಂದರೆ ಚೆನ್ನಾಗಿ ಇರುತ್ತದೆಯೋ ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ನಮಗೆ ತಿಳಿಸಿ.

Leave a Comment

WhatsApp Group Join Now
Telegram Group Join Now