ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಈಗಾಗಲೇ ಬಿಡುಗಡೆಗೆ ಸಜ್ಜಾಗಿದೆ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಡಬ್ಬಿಂಗ್ ಕೆಲಸವೂ ಕೂಡ ಪೂರ್ಣಗೊಂಡಿದೆ. ಕಳೆದ ಒಂದು ವಾರದಿಂದ ದರ್ಶನ್ ಹಾಗೂ ಕ್ರಾಂತಿ ಸಿನಿಮಾ ಚಿತ್ರತಂಡ ಎಲ್ಲಾ ಕಡೆಯಲ್ಲೂ ಕೂಡ ಭರ್ಜರಿಯಾಗಿ ಈ ಸಿನಿಮಾದ ಪ್ರಮೋಷನ್ ಕಾರ್ಯವನ್ನು ಮಾಡುತ್ತಿದೆ.
ಎಲ್ಲವೂ ಅಂದುಕೊಂಡ ಮಾದರಿಯಲ್ಲೇ ನಡೆಯುತ್ತಿದೆ ಹಾಗಾಗಿ ಈ ಸಿನಿಮಾವನ್ನು ಜನವರಿ 26ನೇ ತಾರೀಕು ಅಂದರೆ ಗಣರಾಜ್ಯೋತ್ಸವದ ದಿನದಂದೇ ಬಿಡುಗಡೆ ಮಾಡಬೇಕು ಎಂದು ಚಿತ್ರತಂಡ ನಿರ್ಧರಿಸಿದೆ. ಇನ್ನು ಕಳೆದ ಎರಡು ವರ್ಷಗಳಿಂದ ದರ್ಶನ್ ಅಭಿನಯದ ಯಾವ ಸಿನಿಮಾ ಕೂಡ ರಿಲೀಸ್ ಆಗಿರಲಿಲ್ಲ. ಹಾಗಾಗಿ ದರ್ಶನ್ ಅಭಿಮಾನಿಗಳಿಗೆ ಕ್ರಾಂತಿ ಸಿನಿಮಾದ ಬಿಡುಗಡೆ ಒಂದು ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡಿದೆ.
ತಮ್ಮ ನೆಚ್ಚಿನ ನಾಯಕ ನಟನನ್ನು ತೆರೆಯ ಮೇಲೆ ನೋಡಲು ದರ್ಶನ್ ಅಭಿಮಾನಿಗಳು ಕಾತುರದಿಂದ ಕಾದಿದ್ದರು ಆದರೆ ಇದೀಗ ಕ್ರಾಂತಿ ಸಿನಿಮಾಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ಹೌದು ಅದೇನೆಂದರೆ ದರ್ಶನ್ ಅಭಿಮಾನಿಗಳಿಂದಲೇ ಕ್ರಾಂತಿ ಸಿನಿಮಾದ ಅಭಿಯಾನ ಪ್ರಾರಂಭವಾಗಿದೆ. ಈಗಾಗಲೇ ದರ್ಶನ್ ಅವರನ್ನು ಮಾಧ್ಯಮದಿಂದ ಬ್ಯಾನ್ ಮಾಡಿರುವ ವಿಚಾರ ನಿಮಗೆ ತಿಳಿದೇ ಇದೆ ಕಳೆದ ಎರಡು ವರ್ಷಗಳಿಂದಲೂ ಕೂಡ ದರ್ಶನ್ ಅವರನ್ನು ಮಾಧ್ಯಮದಿಂದ ಬ್ಯಾನ್ ಮಾಡಲಾಗಿದೆ.
ಹಾಗಾಗಿ ದರ್ಶನ್ ಗೆ ಸಂಬಂಧಪಟ್ಟಂತಹ ಖಾಸಗಿ ವಿಚಾರ ಆಗಿರಬಹುದು ಅಥವಾ ವೈಯಕ್ತಿಕ ವಿಚಾರ ಆಗಿರಬಹುದು ಯಾವುದನ್ನು ಕೂಡ ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಿಲ್ಲ. ಕ್ರಾಂತಿ ಸಿನಿಮಾದ ವಿಚಾರವನ್ನು ಕೂಡ ಮಾಧ್ಯಮದಲ್ಲಿ ಕೇಳುತ್ತಿಲ್ಲ ಇದರಿಂದ ಬಹಳಷ್ಟು ಅಭಿಮಾನಿಗಳು ಈ ಸಿನಿಮಾ ಓಡುತ್ತಾ ಅಥವಾ ಇಲ್ಲವಾ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದರು. ಇದರ ನಡುವೆಯೇ ಇದೀಗ ಬಾಯ್ಕಟ್ ಅಭಿಯಾನ ಕೂಡ ಪ್ರಾರಂಭವಾಗಿರುವುದು ದರ್ಶನ್ ಗೆ ಅತಿ ದೊಡ್ಡ ತಲೆನೋವು ಅಂತಾನೇ ಹೇಳಬಹುದು.
ಅಷ್ಟಕ್ಕೂ ದರ್ಶನ್ ಸಿನಿಮಾವನ್ನು ಯಾಕೆ ಬಾಯ್ಕಟ್ ಮಾಡುತ್ತಿದ್ದಾರೆ ಎಂಬುದನ್ನು ನೋಡುವುದಾದರೆ ಕಳೆದ ಗಣೇಶ ಚತುರ್ಥಿಯಲ್ಲಿ ಶಾಸಕ ಜಮೀರ್ ಅಹಮದ್ ಬೆಂಗಳೂರಿನ ಈದ್ಗ ಮೈದಾನದಲ್ಲಿ ಗಣೇಶ ಹಬ್ಬವನ್ನು ಆಚರಣೆ ಮಾಡಬಾರದು, ಇದು ನಮ್ಮ ಸಮುದಾಯಕ್ಕೆ ಸೇರಿದ ಮೈದಾನ ನಾವು ಮಾತ್ರ ನಮಾಜ್ ಮಾಡಬೇಕು ಎಂದು ತಕರಾರು ತೆಗೆದು ಹೈಕೋರ್ಟ್ ಮೆಟ್ಟಿಲೇರಿ, ಇಲ್ಲಿ ಗಣೇಶ ಉತ್ಸವವನ್ನು ನಡೆಸಬಾರದು ಎಂದು ತಕರಾರು ಅರ್ಜಿ ಹಾಕಿದ್ದರು.
ಆದರೂ ಕೂಡ ಹಿಂದು ಪರ ಹೋರಾಟಗಾರರು ನಾವು ಇಲ್ಲಿ ಹಬ್ಬವನ್ನು ಮಾಡೇ ಮಾಡುತ್ತೇವೆ ಎಂದು ತಾವು ಕೂಡ ಕೋರ್ಟ್ ನಲ್ಲಿ ಕೇಸ್ ಹಾಕಿ ತಮ್ಮ ಪರವಾಗಿ ಜಯವನ್ನು ಗಳಿಸಿಕೊಳ್ಳುತ್ತಾರೆ. ತದನಂತರ ಗಣೇಶ್ ಉತ್ಸವವನ್ನು ಅಲ್ಲಿ ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ ಜಮೀರ್ ಮಾಡಿದ ಈ ಹೀನ ಕೃತ್ಯದಿಂದಾಗಿ ಹಿಂದುಗಳ ಕೆಂಗಣ್ಣಿಗೆ ಗುರಿಯಾದರು ಅಷ್ಟೇ ಅಲ್ಲದೆ ಜಮೀರ್ ಮೇಲೆ ಸಾಕಷ್ಟು ಕೋಪ ಕೂಡ ಮಾಡಿಕೊಂಡಿದ್ದರು.
ತದನಂತರ ಜಮೀರ್ ಗೆ ಬುದ್ಧಿ ಕಲಿಸಬೇಕು ಎಂದು ಅಂದುಕೊಂಡರು ಅದರಂತೆ ಜಮೀರ್ ಮಗ ಝೈದ್ ಖಾನ್ ಬನಾರಸ್ ಸಿನಿಮಾವನ್ನು ಬಾಯ್ಕಟ್ ಮಾಡಬೇಕು ಎಂದು ಅಭಿಯಾನ ಪ್ರಾರಂಭ ಮಾಡಿದರು. ಇದರ ನಡುವೆಯೇ ದರ್ಶನ್ ಅವರು ಜಮೀರ್ ಖಾನ್ ಮಗ ಝೈದ್ ಖಾನ್ ಅಭಿನಯದ ಬನಾರ ಸಿನಿಮಾದ ಪ್ರಮೋಷನ್ ಗೆ ತೆರಳಿದ್ದರು. ಅಷ್ಟೇ ಅಲ್ಲದೆ ಈ ಸಿನಿಮಾದಲ್ಲಿಯೂ ಕೂಡ ಅಭಿನಯ ಮಾಡಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ಬನಾರಸ್ ಸಿನಿಮಾಗೆ ಬೆನ್ನೆಲುಬಾಗಿ ನಿಂತರು ಇವರ ಜೊತೆ ಕೂಡ ಬಹಳ ಆತ್ಮೀಯರಾಗಿದ್ದಾರೆ.
ಹಾಗಾಗಿ ಕೆಲವು ಹಿಂದೂ ಪರ ಹೋರಾಟಗಾರರು ಮತ್ತು ದರ್ಶನ್ ಅಭಿಮಾನಿಗಳೆ ನನ್ನ ಧರ್ಮಕ್ಕೆ ಮತ್ತು ನನ್ನ ಸಂಸ್ಕೃತಿಗೆ ಅವಮಾನ ಮಾಡಿದ ಜಮೀರ್ ಮಗನ ಚಿತ್ರತಂಡಕ್ಕೆ ನೀವು ಸಪೋರ್ಟ್ ಮಾಡಿದ್ದಕ್ಕಾಗಿ ನಾನು ನಿಮ್ಮ ಅಪ್ಪಟ ಅಭಿಮಾನಿ ಆಗಿದ್ದರೂ ಕೂಡ ನಿಮ್ಮ ಸಿನಿಮಾವನ್ನು ನೋಡುವುದಿಲ್ಲ ಬಹಿಷ್ಕಾರ ಮಾಡುತ್ತೇನೆ. ಬಾಯ್ಕಟ್ ಮಾಡುತ್ತೇನೆ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕ್ರಾಂತಿ ಸಿನಿಮಾದ ವಿರುದ್ಧ ಪೋಸ್ಟರ್ ಹಾಕಿಕೊಳ್ಳುತ್ತಿದ್ದಾರೆ ಇದು ನಿಜಕ್ಕೂ ಕೂಡ ಆಘತಕಾರಿ ವಿಚಾರವೇ.
ಏಕೆಂದರೆ ಬೇರೆ ನಟರ ಫ್ಯಾನ್ಸ್ಗಳು ಈ ರೀತಿ ಮಾಡಿದ್ದರೆ ಒಂದು ರೀತಿಯಲ್ಲಿ ನಂಬಬಹುದಿತ್ತು ಆದರೆ ಅಪ್ಪಟ ದರ್ಶನ್ ಅಭಿಮಾನಿಗಳೆ ಇದೀಗ ದರ್ಶನ್ ವಿರುದ್ಧ ತಿರುಗಿ ಬಿದ್ದಿರುವುದು ನಿಜಕ್ಕೂ ಕೂಡ ವಿಷಾದಕಾರಿ ವಿಚಾರವೇ. ಒಂದು ಕಡೆ ಮಾಧ್ಯಮದವರು ಬ್ಯಾನ್ ಮಾಡಿದ್ದಾರೆ ಮತ್ತೊಂದು ಕಡೆ ಅಭಿಮಾನಿಗಳು ಕ್ರಾಂತಿ ಸಿನಿಮಾವನ್ನು ಬಹಿಷ್ಕಾರ ಮಾಡುತ್ತಿದ್ದಾರೆ. ಜಮೀರ್ ಮಗನ ಸಿನಿಮಾಗೆ ಸಪೋರ್ಟ್ ಮಾಡಲು ಹೋಗಿ ಈಗ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ
ಈ ಎರಡರ ನಡುವೆಯೂ ಹೋರಾಟ ಮಾಡಿ ದರ್ಶನ್ ಅವರು ಯಾವ ರೀತಿ ಕ್ರಾಂತಿ ಸಿನಿಮಾವನ್ನು ಬಿಡುಗಡೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಸಿನಿಮಾ ಗೆಲ್ಲುತ್ತದೆಯೋ ಅಥವಾ ಇಲ್ಲವೋ ಎಂಬುದೆ ಒಂದು ದೊಡ್ಡ ಯಕ್ಷ ಪ್ರಶ್ನೆಯಾಗಿದೆ. ನಿಮ್ಮ ಪ್ರಕಾರ ದರ್ಶನ್ ಸಿನಿಮಾ ಬಾಯ್ಕಾಟ್ ಮಾಡುವುದು ಒಳಿತ ಅಥವಾ ಸಪೋರ್ಟ್ ಮಾಡುವುದು ಒಳಿತ ಎಂಬುದನ್ನು ತಪ್ಪದೇ ಕಮೆಂಟ್ ಮಾಡಿ.