ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ದರ್ಶನ ಬರುವುದು ನೇರವಾದಿ ನೇರ ವ್ಯಕ್ತಿತ್ವವನ್ನು ಒಳಗೊಂಡಿರುವಂತಹ ವ್ಯಕ್ತಿ ಇದ್ದ ವಿಚಾರವನ್ನು ಇದ್ದ ಹಾಗೆ ಮುಖಕ್ಕೆ ಒಡೆದ ಹಾಗೆ ಹೇಳಿ ಬಿಡುತ್ತಾರೆ. ಅವರಿಗೆ ಒಳಗೊಂದು ಹೊರಗೊಂದು ಈ ರೀತಿ ನಟಕಾ ಮಾಡುವುದಕ್ಕೆ ಬರುವುದಿಲ್ಲ ಈ ಕಾರಣಕ್ಕಾಗಿಯೇ ಬಹಳಷ್ಟು ಜನರಿಗೆ ನಟ ದರ್ಶನ್ ಅವರು ಇಷ್ಟ ಆಗುತ್ತಾರೆ. ಇನ್ನು ಪ್ರೀತಿಸುವವರು ಎಷ್ಟು ಜನ ಇರುತ್ತಾರೆ ದ್ವೇಷ ಮಾಡುವವರು ಕೂಡ ಅಷ್ಟೇ ಜನ ಇರುತ್ತಾರೆ ಇದಕ್ಕೆ ಉದಾಹರಣೆ ಅಂದರೆ ನಟ ದರ್ಶನ್ ಅವರು ಮಾಧ್ಯಮಗಳು ಬ್ಯಾನ್ ಮಾಡಿರುವುದು.
ಇದೆಲ್ಲವೂ ಒಂದು ಕಡೆಯಾದರೆ ಇದೀಗ ನಟ ದರ್ಶನವರು ಮತ್ತೊಂದು ಸುದ್ದಿಗೆ ಗುರಿಯಾಗಿದ್ದಾರೆ. ಹೌದು ಕಳೆದ 10 ವರ್ಷಗಳಿಂದ ದರ್ಶನವರು ಯಾವುದೇ ಅವಾರ್ಡ್ ಫಂಕ್ಷನ್ ನಲ್ಲಿ ಭಾಗವಹಿಸುತ್ತಿಲ್ಲ ಎಲ್ಲಾ ನಟ ನಟಿಯರು ಕೂಡ ಪ್ರತಿ ವರ್ಷವೂ ನಡೆಯುವಂತಹ ಸೈಮಾ ಅವಾರ್ಡ್ ಫಂಕ್ಷನ್ ಆಗಿರಬಹುದು ಅಥವಾ ಐಫಾ ಫಂಕ್ಷನ್ ಆಗಿರಬಹುದು ಹೀಗೆ ಸ್ಯಾಂಡಲ್ವುಡ್ ಗೆ ಮತ್ತು ಚಿತ್ರರಂಗಕ್ಕೆ ಸಂಬಂಧಪಟ್ಟಂತಹ ಯಾವುದೇ ಕಾರ್ಯಕ್ರಮವಾದರೂ ಕೂಡ ಅದರಲ್ಲಿ ಪಾಲ್ಗೊಂಡು ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಾರೆ ಪ್ರಶಸ್ತಿ ದೊರೆಯದೆ ಇದ್ದರೂ ಕೂಡ ಅವರಿಗೆ ಬಂದಂತಹ ಆಹ್ವಾನ ಪತ್ರಿಕೆಯನ್ನು ಸ್ವೀಕರಿಸಿ ಆ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.
ಆದರೆ ನಟ ದರ್ಶನವರು ಮಾತ್ರ ಯಾವುದೇ ಕಾರ್ಯಕ್ರಮಕ್ಕೂ ಕೂಡ ಹೋಗುವುದಿಲ್ಲ ಇಂಟರ್ನ್ಯಾಷನಲ್ ಇರಲಿ ನಮ್ಮ ಕರ್ನಾಟಕದಲ್ಲಿಯ ಮಾಡುವಂತಹ ಅವಾರ್ಡ್ ಫಂಕ್ಷನ್ ಗಳಿಗೂ ಕೂಡ ಇವರು ತೆರಳುವುದಿಲ್ಲ. ಅಷ್ಟಕ್ಕೂ ದರ್ಶನ್ ಅವರು ಯಾಕೆ ಈ ರೀತಿ ಅವಾರ್ಡ್ ಫಂಕ್ಷನ್ ಗಳಿಂದ ದೂರ ಉಳಿಯುತ್ತಾರೆ ಎಂಬುದನ್ನು ನೋಡುವುದಾದರೆ. ದರ್ಶನ್ ಅವರು ಯಾವಾಗಲೂ ಆತ್ಮಗೌರವಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ ಅಷ್ಟೇ ಅಲ್ಲದೆ ಯಾವಾಗಲೂ ಅವರ್ ಫಂಕ್ಷನ್ಗಳಿಗೆ ನಾವು ಹೊರ ದೇಶಕ್ಕೆ ಅಥವಾ ಹೊರ ರಾಜ್ಯಕ್ಕೆ ಹೋಗಬೇಕಾಗುತ್ತದೆ ಅದರ ಬದಲು ನಮ್ಮ ರಾಜ್ಯದಲ್ಲಿಯೇ ಅವಾರ್ಡ್ ಫಂಕ್ಷನ್ ಏರ್ಪಡಿಸಿ ಎಂದು ಹೇಳಿಕೊಂಡಿದ್ದರು.
ಹೌದು ಕಳೆದ ಎರಡು ವರ್ಷಗಳ ಹಿಂದೆ ಯಜಮಾನ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಮಾಧ್ಯಮದಲ್ಲಿ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದಂತಹ ದರ್ಶನ್ ಅವರಿಗೆ ನಿರೂಪಕರು ಒಂದು ಪ್ರಶ್ನೆಯನ್ನು ಕೇಳುತ್ತಾರೆ. ನೀವು ಏಕೆ ಅವಾರ್ಡ್ ಫಂಕ್ಷನ್ಗಳಿಗೆ ತೆರಳುವುದಿಲ್ಲ ಅಂತ ಆಗ ಖಡಕ್ಕಾಗಿ ಹೇಳಿದಂತಹ ದರ್ಶನ್ ನಾವು ಬೇರೆ ರಾಜ್ಯಕ್ಕೆ ಹೋಗಿ ಅಥವಾ ಬೇರೆ ದೇಶಕ್ಕೆ ಹೋಗಿ ಯಾರೋ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಯಾವುದೋ ಒಂದು ಮೂಲೆಯಲ್ಲಿ ಕುಳಿತುಕೊಳ್ಳುವುದು ನಮ್ಮ ಹೆಸರು ಬಂದಾಗ ಹೋಗಿ ಅವಾರ್ಡ್ ಫಂಕ್ಷನ್ಸ್ ಸ್ವೀಕರಿಸಿದ ಇವೆಲ್ಲ ನನಗೆ ಇಷ್ಟವಿಲ್ಲ.
ನಮ್ಮ ರಾಜ್ಯಕ್ಕೆ ಬಂದು ಅವಾರ್ಡ್ ಫಂಕ್ಷನ್ ಏರ್ಪಡಿಸಲಿ ಅಷ್ಟೇ ಅಲ್ಲದೆ ನಮ್ಮ ಕಲಾವಿದರಿಗೆ ನಮ್ಮ ನಟ ನಟಿಯರಿಗೆ ಮೊದಲ ಸಾಲಿನಲ್ಲಿ ಸ್ಥಾನವನ್ನು ನೀಡಲಿ ಆಗ ಮಾತ್ರ ನಾನು ಅವಾರ್ಡ್ ಫಂಕ್ಷನ್ಗಳಿಗೆ ತೆರಳುತ್ತೇನೆ ಅಲ್ಲಿಯವರೆಗೂ ಕೂಡ ನಾನು ಯಾವುದೇ ಫಂಕ್ಷನ್ ಗೆ ತೆರಳುವುದಿಲ್ಲ ಅವಾರ್ಡನ್ನು ಕೂಡ ಸ್ವೀಕರಿಸುವುದಿಲ್ಲ ಎಂದು ಹೇಳಿಕೊಂಡಿರುತ್ತಾರೆ. ಅದರಂತೆ ದರ್ಶನ್ ಕೂಡ ಕೊಟ್ಟ ಮಾತಿಗೆ ತಪ್ಪದೆ ಯಾವುದೇ ಫಂಕ್ಷನ್ಗಳಿಗೂ ಕೂಡ ಹೋಗುತ್ತಿರಲಿಲ್ಲ ಅಷ್ಟೇ ಅಲ್ಲದೆ ಅವರ ಪಾಲಿಗೆ ಬಂದಂತಹ ಅವಾರ್ಡ್ ಗಳನ್ನು ಬೇರೆಯವರು ಸ್ವೀಕರಿಸಿದ್ದರು.
ಆದರೆ ಈ ಬಾರಿ ಬೆಂಗಳೂರಿನಲ್ಲಿ ಸೈಮಾ ಅವಾರ್ಡ್ ಫಂಕ್ಷನ್ ಅನ್ನು ಆಯೋಜಿಸಲಾಗುತ್ತದೆ ಅಷ್ಟೇ ಅಲ್ಲದೆ ದರ್ಶನ್ ಅವರ ಮನೆಗೆ ಬಂದು ಆಹ್ವಾನ ಪತ್ರಿಕೆಯನ್ನು ಕೊಟ್ಟು ಮೊದಲ ಸಾಲಿನಲ್ಲಿ ಅವರಿಗೆ ಸ್ಥಾನವನ್ನು ನಿಗದಿ ಮಾಡಲಾಗುತ್ತದೆ. ಈ ಕಾರಣಕ್ಕಾಗಿ ದರ್ಶನ್ ಅವರು ಯಾವುದೇ ಅವಾರ್ಡ್ ಫಂಕ್ಷನ್ ನಲ್ಲಿ ಕಾಣಿಸಿಕೊಳ್ಳದೆ ಇದ್ದರೂ ಮೊದಲ ಬಾರಿಗೆ ಸೈಮಾ ಅವಾರ್ಡ್ ಫಂಕ್ಷನ್ ನಲ್ಲಿ ಕಾಣಿಸಿಕೊಂಡಿದ್ದರೆ. ನಿಜಕ್ಕೂ ಇವರ ಹಠವನ್ನು ನಾವೆಲ್ಲರೂ ಮೆಚ್ಚಲೇಬೇಕು ಇಂದು ಕನ್ನಡಿಗರಿಗೆ ಸ್ಥಾನಮಾನ ಗೌರವ ಸಿಕ್ಕಿದೆ ಅಂದರೆ ಅದಕ್ಕೆ ದರ್ಶನ್ ಅವರೇ ಕರಣ ಅಂತ ಹೇಳಬಹುದು. ಸದ್ಯಕ್ಕೆ ದರ್ಶನ್ ಅವರು ನಿರೂಪಕರ ಜೊತೆ ಮಾತನಾಡಿದಂತಹ ಆ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.
https://www.instagram.com/reel/CiWxVaUtPnI/?igshid=YmMyMTA2M2Y=