ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿಗೆ ತಕ್ಕಹಾಗೆ ಸಿನಿಮಾ ರಂಗಕ್ಕೆ ಬಂದ ದಿನದಿಂದಲೂ ಪ್ರತಿದಿನವನ್ನು ಕೂಡ ಚಾಲೆಂಜ್ ಆಗಿ ತೆಗೆದುಕೊಂಡು ಹಂತ ಹಂತವಾಗಿ ತಮ್ಮ ಕನಸನ್ನು ನನಸು ಮಾಡಿಕೊಂಡ ನಟ. ಹೊಟ್ಟೆಪಾಡಿಗಾಗಿ ಲೈಟ್ ಬಾಯ್ ಆಗಿ ಮೊದಲು ಸಿನಿಮಾಗಳಲ್ಲಿ ಸಹಾಯಕ್ಕೆ ಸೇರಿಕೊಂಡ ದರ್ಶನ್ ತಮ್ಮ ಹೀರೋ ಆಗುವ ಕನಸನ್ನು ನನಸು ಮಾಡಿಕೊಳ್ಳುತ್ತಾರೆ ಎಂದು ಯಾರು ಸಹ ಆ ದಿನ ಊಹಿಸಿರಲಿಲ್ಲ ಆದರೆ ಅವರ ಸತತ ಪ್ರಯತ್ನ ಮತ್ತು ಅದ್ಭುತವಾದ ಟ್ಯಾಲೆಂಟ್ ಇಂದ ಇಂದು ಇಡೀ ಕರ್ನಾಟಕದಲ್ಲಿ ಯಾವೊಬ್ಬ ಹೀರೋಗೂ ಇರದಷ್ಟು ಅಪಾರ ಅಭಿಮಾನಿಗಳು ದರ್ಶನ್ ಅವರಿಗೆ ಇದ್ದಾರೆ.
ದರ್ಶನ್ ಕರ್ನಾಟಕದಲ್ಲಿ ಇಂದು ಒಬ್ಬ ಸ್ಟಾರ್ ಹೀರೋ ಆಗಿ ಮೆರೆಯುತ್ತಿದ್ದಾರೆ. ಅವರ ಸಿನಿಮಾಗಳನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸಿ, ಸಂಭ್ರಮಿಸಿ, ಸೂಪರ್ ಹಿಟ್ ಮಾಡುತ್ತಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಫೇಮಸ್ ಆಗುವುದರ ಜೊತೆಗೆ ಅವರು ಒಂದು ಸಣ್ಣ ಘಟನೆಯಲ್ಲಿ ಭಾಗಿಯಾಗಿದ್ದರೂ ಅದು ವಿವಾದವಾಗಿ ಮಾಧ್ಯಮಗಳಲ್ಲಿ ದಿನಪೂರ್ತಿ ಪ್ರಸಾರ ಆಗುವುದು ಮಾಮೂಲು. ಆದರೆ ದರ್ಶನ್ ಅವರು ಮಾತ್ರ ಸ್ವತಃ ಅವರೇ ಅನೇಕ ಎಡವಟ್ಟುಗಳನ್ನು ಮಾಡಿಕೊಳ್ಳುವ ಮೂಲಕ ಅನೇಕ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಮೊದಲ ಬಾರಿ ದರ್ಶನ್ ಅವರು ಅವರ ಪತ್ನಿ ಮೇಲೆ ಹ.ಲ್ಲೆ ಮಾಡಿದಾಗ ಅವರು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದರು ಆ ಸಮಯದಲ್ಲಿ ದರ್ಶನ್ ಅವರು ಅರೆಸ್ಟ್ ಕೂಡ ಆಗಿದ್ದರು. ನಂತರ ನಟಿ ನಿಖಿತಾ ಅವರ ಜೊತೆಗೆ ದರ್ಶನ್ ಹೆಸರು ತಳುಕು ಹಾಕಿಕೊಂಡಿತ್ತು ಮತ್ತು ಕನ್ನಡದ ಸಿನಿಮಾಗಳಿಂದ ಕೆಲವು ವರ್ಷಗಳವರೆಗೆ ನಿಖಿತಾ ಅವರನ್ನು ಬ್ಯಾನ್ ಕೂಡ ಮಾಡಲಾಗಿತ್ತು. ಬಳಿಕ ಸಾಲು ಸಾಲು ವಿವಾದಗಳಲ್ಲಿ ದರ್ಶನ್ ಅವರ ಹೆಸರು ಮಾಧ್ಯಮಗಳಲ್ಲಿ ಪ್ರಸಾರವಾಗಿ ದೊಡ್ಡ ಸುದ್ದಿ ಆಗುತ್ತಿತ್ತು.
ದರ್ಶನ್ ಮತ್ತು ಸುದೀಪ್ ಅವರ ಸ್ನೇಹ ಒಡೆದು ಇಬ್ಬರು ಒಬ್ಬರಿಗೊಬ್ಬರು ಹೇಳಿಕೆ ಕೊಡುವ ಮೂಲಕ ಸುದ್ದಿಯಲ್ಲಿದ್ದರು ಮತ್ತು ಕಳೆದ ವರ್ಷ ಸಂದೇಶ್ ನಾಗರಾಜ್ ಅವರಿಗೆ ಸೇರಿದ ಮೈಸೂರಿನ ಹೋಟೆಲ್ ಒಂದರಲ್ಲಿ ಆದ ವಿವಾದ ನಿರ್ಮಾಪಕ ಉಮಾಪತಿ, ಅರುಣ ಕುಮಾರಿ, ದರ್ಶನ್ , ದರ್ಶನ್ ಸ್ನೇಹಿತರು, ದೊಡ್ಮನೆ, ನಿರ್ದೇಶಕ ಪ್ರೇಮ್ ಹಾಗೂ ರಕ್ಷಿತಾ ಹೀಗೆ ಹಲವರ ಹೆಸರನ್ನು ಇದು ಸೇರಿಸಿಕೊಂಡಿದ್ದು. ಕೊನೆಗೆ ಇಂದ್ರಜಿತ್ ಲಂಕೇಶ್ ಅವರು ಲಿಸ್ಟ್ ಅಲ್ಲಿ ಮತ್ತೊಂದು ಹೆಸರನ್ನು ಸೇರಿಸಿ ಅವರು ಕೂಡ ಆ ದಿನ ಗಲಾಟೆ ಆದ ಜಾಗದಲ್ಲಿ ಇದ್ದರು ಎಂದು ಆರೋಪಿಸಿದರು.
ಅದು ಬೇರೆ ಯಾರ ಹೆಸರು ಅಲ್ಲ ದರ್ಶನ್ ಜೊತೆ ಆಗಾಗ ಕೇಳಿ ಬರುವ ಪವಿತ್ರ ಗೌಡ ಅವರ ಹೆಸರು. ಪವಿತ್ರ ಗೌಡ ಅವರು ದರ್ಶನ್ ಅವರ ಸ್ನೇಹಿತರು. ಈ ಹಿಂದೆ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ದರ್ಶನ್ ಅವರೊಂದಿಗೆ ಇರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿ ಇದ್ದರು. ಅದಾದ ಬಳಿಕ ಅದು ವಿವಾದವಾಗುತ್ತಿದ್ದಂತೆ ದರ್ಶನ್ ಅವರ ತಾಯಿ ಹಾಗೂ ಅವರ ಅಕ್ಕನ ಜೊತೆ ಇರುವ ಫೋಟೋಗಳನ್ನು ದರ್ಶನ್ ಅವರ ಕುಟುಂಬದ ಸಮಾರಂಭಗಳಲ್ಲಿ ಭಾಗಿಯಾಗಿರುವ ಫೋಟೋಗಳನ್ನು ಹಂಚಿಕೊಂಡಿದ್ದರು.
ದರ್ಶನ್ ಅವರು ವಾರ್ನ್ ಮಾಡಿದ ಬಳಿಕ ಕೆಲವೇ ದಿನಗಳಲ್ಲಿ ಅದು ಅವರ ಖಾತೆಯಿಂದ ಡಿಲೀಟ್ ಆಗಿತ್ತು. ಇವರಿಬ್ಬರ ನಡುವೆ ಇರುವುದು ಸ್ನೇಹವಷ್ಟೇ ಅಲ್ಲಾ ಎನ್ನುವ ಆರೋಪಗಳು ಕೂಡ ಇವೆ. ಈಗಾಗಲೇ ಪವಿತ್ರ ಗೌಡ ಅವರಿಗೆ ಒಂದು ಮದುವೆಯಾಗಿದ್ದು ವಿ.ಚ್ಛೇ.ದ.ನ ಪಡೆದು ಮಗನ ಜೊತೆ ಬದುಕುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ದರ್ಶನ್ ಮತ್ತು ಪವಿತ್ರ ಗೌಡ ಇಬ್ಬರು ಕೂಡ ಆತ್ಮೀಯ ಸ್ನೇಹಿತರು ಅಷ್ಟೇ ಅದನ್ನು ಒರೆತುಪಡಿಸಿ ಬೇರೆ ಯಾವ ಸಂಬಂಧವೂ ಕೂಡ ಇಲ್ಲ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.