ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷಗಳೇ ಕಳೆದು ಹೋಗಿದೆ ಕಳೆದ ವಾರವಷ್ಟೇ ಈ ಒಂದು ಸಂಭ್ರಮಾಚರಣೆಯನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದ ವಿಚಾರ ನಿಮ್ಮೆಲ್ಲರಿಗೂ ತಿಳಿದಿದೆ. ಇನ್ನು ದರ್ಶನ್ ಅವರು ನೋಡುವುದಕ್ಕೆ ಹೊರಟಾಗಿ ಕಂಡರು ಕೂಡ ತುಂಬಾ ಒರಟಾಗಿ ಮಾತನಾಡಿದರು ಕೂಡ ಅವರ ಮನಸ್ಸಿನಲ್ಲಿ ಯಾವುದೇ ರೀತಿಯಾದಂತಹ ಕಲ್ಮಶವನ್ನು ಇರುವುದಿಲ್ಲ. ಇದ್ದ ಮಾತನ್ನು ಇದ್ದಹಾಗೆ ನೇರವಾಗಿ ಹೇಳುವಂತಹ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದಾರೆ ಅಂದಿನ ಕಾಲದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅವರು ಯಾವ ರೀತಿ ನೇರ ವ್ಯಕ್ತಿತ್ವಕ್ಕೆ ಗುರಿಯಾಗಿದ್ದರೂ. ಅದೇ ರೀತಿ ಈಗಿನ ಕಾಲಕ್ಕೆ ಚಿತ್ರರಂಗದಲ್ಲಿ ಇದ್ದ ವಿಚಾರವನ್ನು ಇದ್ದಹಾಗೆ ಮುಖಕ್ಕೆ ಒಡೆದ ರೀತಿಯಲ್ಲಿ ಹೇಳುವಂತಹ ಧೈರ್ಯ ಇರುವುದು ದರ್ಶನ್ ಅವರಿಗೆ ಮಾತ್ರ.
ಈ ಒಂದು ಕಾರಣಕ್ಕಾಗಿಯೇ ದರ್ಶನ್ ಅವರು ಮಾಧ್ಯಮದಿಂದ ಬ್ಯಾನ್ ಆಗಿದ್ದಾರೆ ಈ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ಹೌದು ಮಾಧ್ಯಮ ಮಿತ್ರರಿಗೆ ಇರೋ ವಿಚಾರವನ್ನು ಇದ್ದಹಾಗೆ ಹೇಳಿದ್ದಕ್ಕಾಗಿ ಮಾಧ್ಯಮ ಮಿತ್ರರೆಲ್ಲರೂ ಕೂಡ ಕೋಪಗೊಂಡು ದರ್ಶನ ಅವರನ್ನು ಬ್ಯಾನ್ ಮಾಡಿದ್ದಾರೆ. ಈ ವಿಚಾರಕ್ಕಾಗಿಯೇ ದರ್ಶನ್ ಅವರ ಯಾವುದೇ ಸಿನಿಮಾ ಅಪ್ಡೇಟ್ಸ್ ಗಳನ್ನು ಕೂಡ ಟಿವಿ ಮಾಧ್ಯಮದಲ್ಲಿ ತೋರಿಸುವದಿಲ್ಲ. ಆದರೂ ಕೂಡ ದರ್ಶನ್ ಅವರು ಇದು ಯಾವುದಕ್ಕೂ ಕೂಡ ತಲೆಕೆಡಿಸಿಕೊಂಡಿಲ್ಲ ನನ್ನ ಅಭಿಮಾನಿಗಳು ನನ್ನ ಸೆಲೆಬ್ರೆಟಿಗಳು ನನ್ನನ್ನು ಕೈ ಬಿಡುವುದಿಲ್ಲ ನಾನು ಏನು ಎಂಬುವುದು ನನ್ನ ಅಭಿಮಾನಿಗಳಿಗೆ ಗೊತ್ತು ಆದಷ್ಟು ಸಾಕು ಅವರ ಪ್ರೀತಿ ಒಂದೇ ಸಾಕು ಅದೇ ನನಗೆ ಶ್ರೀ ರಕ್ಷೆ ನನ್ನ ಸಿನಿಮಾವನ್ನು ಅಭಿಮಾನಿಗಳೇ ಗೆಲ್ಲಿಸಿ ಕೊಡುತ್ತಾರೆ ಅಂತ youtube ವಾಹಿನಿಯೊಂದರಲ್ಲಿ ಹೇಳಿಕೊಂಡಿದ್ದರು.
ಇನ್ನು ಮೊನ್ನೆ ಎಷ್ಟೇ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಈ ಒಂದು ಕಾರ್ಯಕ್ರಮಕ್ಕೆ ದರ್ಶನ್ ಅವರನ್ನು ಮುಖ್ಯ ಅತಿಥಿಯಾಗಿ ಕರೆಸುತ್ತಾರೆ ಈ ಸಮಯದಲ್ಲಿ ದರ್ಶನ್ ಅವರು ಮಾತನಾಡಿ ನಮ್ಮ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡಲು ಗಾಂಧೀಜಿ, ನೆಹರು, ಅಂಬೇಡ್ಕರ್, ಭಗತ್ ಸಿಂಗ್, ಸರ್ದಾರ್ ವಲ್ಲಬಾಯ್ ಪಟೇಲ್ ಸರ್ವಕರ್ ಹೀಗೆ ಹಲವಾರು ಮಹನೀಯರು ತ್ಯಾಗ ಮಾಡಿದ್ದಾರೆ ಇವರೆಲ್ಲರೂ ಕೂಡ ನಮಗೆ ಗೊತ್ತಿರುವಂತಹ ವ್ಯಕ್ತಿಗಳು. ಆದರೆ ಇವರ ಬೆನ್ನೆ ಹಿಂದೆ ಹಲವಾರು ಜನ ಸ್ವಾತಂತ್ರ ಹೋರಾಟಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಅಂತಹ ವೀರ ಯೋಧರಿಗೆ ನಾವು ಎರಡು ನಿಮಿಷ ನಮನವನ್ನು ಸಲ್ಲಿಸೋಣ ಎಂದು ಕಳಕಳಿಯಿಂದ ವಿನಂತಿಸಿಕೊಂಡು ಎರಡು ನಿಮಿಷ ಮೌನಚರಣೆಯನ್ನು ಮಾಡುತ್ತಾರೆ.
ತದನಂತರ ನಾನೊಬ್ಬ ಕಂಟ್ರೋವರ್ಸಿ ಹೀರೋ ನಾನು ಏನು ಮಾತನಾಡಿದರು ಕೂಡ ಅದು ಕಂಟ್ರೋವರ್ಸಿಯಾಗುತ್ತದೆ ಈ ಕಾರಣಕ್ಕಾಗಿ ನನಗೆ ಏನು ಮಾತನಾಡುವುದಕ್ಕೂ ಕೂಡ ಭಯ ಆಗುತ್ತದೆ ಎಂದು ದರ್ಶನ್ ಅವರು ಹೇಳಿಕೊಂಡರು. ಆದರೂ ಕೂಡ ನಾನು ಒಂದು ಮಾತನ್ನು ಹೇಳಲೇಬೇಕು ಕ್ರಾಂತಿ ಸಿನಿಮಾ ನೀವು ಅಂದುಕೊಂಡ ಮಾದರಿಯಲ್ಲೇ ಒಳ್ಳೆಯ ಕಥೆಯನ್ನು ಒಳಗೊಂಡಿದೆ. ನೀವು ನಿರೀಕ್ಷೆ ಮಾಡಿದಂತೆಯೇ ನಾವು ಸಿನಿಮಾವನ್ನು ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನನ್ನಂತ ಕಾಂಟ್ರವರ್ಸಿ ಕಲಾವಿದನ ಮೇಲೆ ನಿಮ್ಮ ಕರುಣೆ ಆಶೀರ್ವಾದ ಎಂಬುದು ಸದಾ ಕಾಲ ಇರಲಿ ನನ್ನನ್ನು ಪ್ರೋತ್ಸಾಹಿಸಿ ನನ್ನನ್ನು ಅರಸಿ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಅಭಿಮಾನಿಯೊಬ್ಬರು ವೇದಿಕೆಯ ಮೇಲೆ ಬಂದು ಬೆಳ್ಳಿ ಗದೆಯನ್ನು ದರ್ಶನವರಿಗೆ ಉಡುಗೊರೆಯಾಗಿ ನೀಡುತ್ತಾರೆ ಅಭಿಮಾನಿ ನೀಡಿದಂತಹ ಬೆಳ್ಳಿ ಗದೆಯನ್ನು ದರ್ಶನವರು ಸ್ವೀಕರಿಸುತ್ತಾರೆ.
ಆದರೆ ಈ ಬೆಳ್ಳಿ ಗದೆಯನ್ನು ನಾನು ನನ್ನ ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳುವುದಕ್ಕೆ ಇಷ್ಟ ಇಲ್ಲ ಇದನ್ನು ದಯವಿಟ್ಟು ಯಾರಾದರೂ ಚೆನ್ನಾಗಿ ಓದುವಂತಹ ಮಕ್ಕಳಿಗೆ ದಾನವಾಗಿ ನೀಡಿ ಅಂತ ಹೇಳುತ್ತಾರೆ. ಎಚ್ಎಸ್ಆರ್ ಲೇಔಟ್ ನಲ್ಲಿ ಆಯೋಜನೆ ಮಾಡಿದಂತಹ ಈ ಒಂದು ಕಾರ್ಯಕ್ರಮಕ್ಕೆ ದರ್ಶನ್ ಅವರು ಮುಖ್ಯ ಅತಿಥಿಯಾಗಿ ಬರುತ್ತಾರೆ. ಹಾಗಾಗಿ ಈ ಒಂದು ಕ್ಷೇತ್ರದಲ್ಲಿ ಓದುವಂತಹ ಬಡ ಮಕ್ಕಳಿಗೆ ಈ ಬೆಳ್ಳಿ ಗದೆಯಿಂದ ಏನಾದರೂ ಸಹಾಯ ಮಾಡಿ ಶಿಕ್ಷಣಕ್ಕೆ ಉಪಯೋಗ ಆಗುವಂತಹ ವಸ್ತುಗಳನ್ನು ಕೊಡಿಸಿ ಬಡ ಮಕ್ಕಳಿಗೆ ಸಹಾಯ ಮಾಡಿ ಎಂದು ವಿನಂತಿಸಿಕೊಂಡಿದ್ದಾರೆ. ಸದ್ಯಕ್ಕೆ ದರ್ಶನವರು ಬೆಳ್ಳಿ ಗದೆಯನ್ನು ಅಭಿಮಾನಿಗಳಿಗೆ ಹಿಂತಿರುಗಿಸಿ ಕೊಟ್ಟಂತಹ ವಿಡಿಯೋ ಹಾಗೂ ಶಿಕ್ಷಣದ ಬಗ್ಗೆ ಇವರ ಹೊಂದಿರುವಂತಹ ಕಾಳಜಿ ಬಡ ಮಕ್ಕಳ ಬಗ್ಗೆ ಇರುವಂತಹ ಕರುಣೆ ಇವೆಲ್ಲವನ್ನೂ ನೋಡಿದಂತಹ ಅಭಿಮಾನಿಗಳು ದಾಸನ ಮೇಲೆ ಇಟ್ಟಿರುವಂತಹ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ.
ದರ್ಶನ್ ಅವರು ಮಾತನಾಡಿರುವಂತಹ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಇದನ್ನು ನೋಡಿದಂತಹ ಅಭಿಮಾನಿಗಳು ದರ್ಶನ್ ಅವರು ಮಾಧ್ಯಮದಿಂದ ಮಾತ್ರ ಬ್ಯಾನ್ ಆಗಿದ್ದಾರೆ. ಆದರೆ ನಮ್ಮ ಹೃದಯದಿಂದ ಅವರು ಎಂದಿಗೂ ಕೂಡ ಬ್ಯಾನ್ ಆಗುವುದಿಲ್ಲ ನಮ್ಮ ಮನಸ್ಸಿನಲ್ಲಿ ಸದಾ ಕಾಲ ಇರುತ್ತಾರೆ ಯಾರೇ ದೂರ ಮಾಡಿದರು ಕೂಡ ಅವರ ಅಭಿಮಾನಿಗಳು ಮಾತ್ರ ಅವರನ್ನು ಎಂದಿಗೂ ಕೂಡ ದೂರ ಮಾಡುವುದಿಲ್ಲ ಎಂದು ಹೇಳಿದ್ದಾರೆ.. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಕ್ರಾಂತಿ ಸಿನಿಮಾವನ್ನು ನೀವು ಪ್ರೋತ್ಸಾಹಿಸುವುದಾದರೆ ಕಾಮೆಂಟ್ ಬಾಕ್ಸ್ ನಲ್ಲಿ ಕ್ರಾಂತಿ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.