ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅನ್ನೋದು ದೊಡ್ಡ ಹೆಸರುಗಳು. ಇವರ ಬಗ್ಗೆ ಏನೇ ಸುದ್ದಿ ಬಂದರೂ ಕೂಡ ಕುತೂಹಲ ಇದ್ದೇ ಇರುತ್ತದೆ. ನಟ ದರ್ಶನ್ ಮತ್ತು ಸುದೀಪ್ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರ ಸ್ನೇಹದ ಬಗ್ಗೆಯೂ ಎಲ್ಲರಿಗೂ ಗೊತ್ತಿದೆ. ಇವರಿಬ್ಬರನ್ನು ಒಂದೇ ಫ್ರೇಮಿನಲ್ಲಿ ನೋಡಲು ಇಬ್ಬರ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ಆಗಾಗ ಈ ವಿಚಾರದಲ್ಲಿ ಅಭಿಮಾನಿಗಳು ಅಭಿಯಾನ ನಡೆಸುತ್ತಿರುತ್ತಾರೆ. ಅವರೆಲ್ಲರ ಇಚ್ಛೆಯಂತೆ ಈಗ ದರ್ಶನ್ ಮತ್ತು ಸುದೀಪ್ ಅವರು ಒಂದೇ ಫ್ರೇಮಿನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಕಳೆದ ಕೆಲವು ವರ್ಷಗಳಿಂದ ಆದ ವಿದ್ಯಮಾನಗಳನ್ನು ಗಮನಿಸಿದರೆ ಈ ವಿಷಯ ಖಂಡಿತ ಎಲ್ಲರಿಗೂ ಅಚ್ಚರಿ ಎನಿಸುವ ವಿಷಯ ಎನಿಸಿರಬಹುದು ಆದರೆ ಇದು ನಿಜ.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಕ್ರಾಂತಿ ಮತ್ತು ವಿಕ್ರಾಂತ್ ರೋಣ ಪೋಸ್ಟರ್ ಹಿಡಿದು ಇಬ್ಬರೂ ಫೋಟೋಗೆ ಫೋಸ್ ನೀಡಿದ್ದಾರೆ. ಸದ್ಯಕ್ಕೆ ಇವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ನೀವು ಮೊದಲೇ ಅನುಮಾನ ಪಟ್ಟಂತೆ ಇವರಿಬ್ಬರು ಫೋಟೋ ಫ್ರೇಮಿನಲ್ಲಿ ಒಟ್ಟಿಗೆ ಇರುವುದು ನಿಜ ಆದರೆ ಇಬ್ಬರೂ ಒಟ್ಟಿಗೆ ಇರುವ ಸಂದರ್ಭದಲ್ಲಿ ತೆಗೆದ ಫೋಟೋ ಅಲ್ಲ. ಇದು ದರ್ಶನ್ ಮತ್ತು ಸುದೀಪ್ ಅಭಿಮಾನಿಯೊಬ್ಬನ ಕೈಚಳಕ. ಅಭಿಮಾನಿಯೊಬ್ಬರು ಎಡಿಟ್ ಮಾಡಿ ಹಂಚಿಕೊಂಡಿರುವ ಫೋಟೋ ಇದು. ಇನ್ನು ವಿಶೇಷ ಏನೆಂದರೆ ಈ ಫೋಟೋದಲ್ಲಿ ನಟ ದರ್ಶನ್ ಮತ್ತು ಸುದೀಪ್ ಇಬ್ಬರೂ ಕೂಡ ಒಂದೇ ರೀತಿಯ ಕಾಸ್ಟ್ಯೂಮ್ ತೊಟ್ಟಿದ್ದಾರೆ. ಅದರಲ್ಲೂ ಅವರ ಕೈಯಲ್ಲಿರುವ ಫೋಟೋ ವಿಶೇಷವಾಗಿದೆ. ವಿಕ್ರಾಂತ್ ರೋಣ ಸಿನಿಮಾದ ಕಿಚ್ಚ ಸುದೀಪ್ ಹಾಗೂ ಕ್ರಾಂತಿ ಸಿನಿಮಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಲುಕ್ ಒಟ್ಟಿಗೆ ಇವರಿಬ್ಬರು ಹಿಡಿದಿರುವ ಫೋಟೋ ಫ್ರೇಮಿನಲ್ಲಿ ಇದೆ.
ಇನ್ನು ಈ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ ತುಂಬಾ ವೈರಲ್ ಆಗಿದೆ. ಸುದೀಪ್ ಮತ್ತು ದರ್ಶನ್ ಅಭಿಮಾನಿಗಳು ಇದಕ್ಕೆ ತುಂಬಾನೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗೆ ಇವರಿಬ್ಬರನ್ನು ಯಾವಾಗಲೂ ಜೊತೆಯಲ್ಲೇ ನೋಡಲು ಇಷ್ಟಪಡುತ್ತೇವೆ ಎಂದು ತಮ್ಮ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ. ಇದರ ಜೊತೆಗೆ ಈ ಫೋಟೋವನ್ನು ಮಾಡಿರುವ ಕಲಾವಿದನ ಕೆಲಸಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ಕಲಾವಿದ ಹಿಂದೊಮ್ಮೆ ಇದೇ ರೀತಿಯ ಇನ್ನೊಂದು ಫೋಟೋವನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ಸಂದರ್ಭದಲ್ಲೂ ಕೂಡ ಇವರ ಕಲೆಗೆ ಸಾಕಷ್ಟು ಮೆಚ್ಚುಗೆ ಮಾತುಗಳು ಕೇಳಿಬಂದಿದ್ದವು. ಕಳೆದ ಎರಡು ವರ್ಷಗಳಿಂದ ನಮ್ಮನ್ನು ಬಿಟ್ಟು ಅಗಲಿದ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ಗಳ ಎಡಿಟ್ ಮಾಡಿರುವ ಫೋಟೋ ಆಗಿತ್ತು ಅದು. ಆ ಫೋಟೋದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸೋಫಾ ಮೇಲೆ ಕುಳಿತಿದ್ದರು. ಅವರ ಹಿಂದೆ ಯುವಸಾಮ್ರಾಟ್ ಚಿರು ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರಿಬ್ಬರು ಜೊತೆಯಾಗಿ ನಿಂತಿದ್ದರು.
ಮತ್ತು ಈ ಫೋಟೋವನ್ನು ಮಾಡಿದ ಕಲಾವಿದ ಪುನೀತ್ ಅವರ ಎದುರಿಗೆ ಪಾದಗಳಿಗೆ ಒರಗಿ ಕುಳಿತಿದ್ದನು. ಹಾಗೂ ಈ ಫೋಟೋದಲ್ಲಿ ಕೂಡ ನಾಲ್ಕು ಜನರು ಒಂದೇ ಬಣ್ಣದ ಬಟ್ಟೆ ತೊಟ್ಟಿದ್ದರು. ಕಳೆದ ಕೆಲವು ತಿಂಗಳ ಹಿಂದೆ ಈ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಇದನ್ನು ನೋಡಿದ ನೆಟ್ಟಿಗರು ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದರು ಹಾಗೂ ಫೋಟೋವನ್ನು ನೋಡಿದ ಎಲ್ಲರ ಕಣ್ಣಂಚು ಕೂಡ ಒದ್ದೆಯಾಗಿತ್ತು. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು ನಮಗೆ ತಪ್ಪದೆ ಕಾಮೆಂಟ್ ಮಾಡಿ ಒಂದು ವೇಳೆ ದರ್ಶನ್ ಮತ್ತು ಸುದೀಪ್ ಮತ್ತೆ ಮೊದಲಿನಂತೆ ಒಂದಾಗುವುದು ಇಷ್ಟಪಡುವುದಾದರೆ ನಮಗೆ ಕಿಚ್ಚ ದಚ್ಚು ಎಂದು ಕಾಮೆಂಟ್ ಮಾಡಿ.