ಚಪ್ಪಲಿ (Shoe) ಎಸೆತದ ಇನ್ಸಿಡೆಂಟ್ ಬಗ್ಗೆ ಮೊದಲ ಬಾರಿಗೆ ಮಾತನಾಡಿ, ಮುಂದೆ ಇವರಿಗೆ ಮಾರಿಹಬ್ಬ ಎಂದ ದರ್ಶನ್ (Darshan). ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಸದಾ ಒಂದಲ್ಲ ಒಂದು ವಿವಾದಗಳು ಆಗುತ್ತಲೇ ಇರುತ್ತವೆ. ಕೆಲವರು ದರ್ಶನ್ ಅವರ ಏಳಿಗೆಯನ್ನು ಸಹಿಸಲಾರದೆ ಈ ರೀತಿ ಮಾಡುತ್ತಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ಇನ್ನಿತರ ಸ್ಟಾರ್ ಗಳ ಹೆಸರು ಹೇಳಿಕೊಂಡು ಕಿರಿಕ್ ಮಾಡಿಕೊಳ್ಳುತ್ತಿದ್ದರೆ ದರ್ಶನವರು ಯಾವುದಕ್ಕೂ ಉತ್ತರ ಕೊಡದೇ ಸುಮ್ಮನಾಗುತ್ತಿದ್ದರು.
ಇದೀಗ ಮೊದಲ ಬಾರಿಗೆ ಅವರು ಹೊಸಪೇಟೆಯಲ್ಲಿ (Hosapet) ಆದ ಇನ್ಸಿಡೆಂಟ್ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಕ್ರಾಂತಿ (Kranti) ಚಿತ್ರದ ಪ್ರಚಾರದ ಅಂಗವಾಗಿ youtube ಚಾನೆಲ್ ಗಳಿಗೆ ಸಂದರ್ಶನ ಕೊಡುತ್ತಿರುವ ದರ್ಶನ್ ಅವರಿಗೆ ಸಂದರ್ಶನಕಾರರೊಬ್ಬರು ಪ್ರಶ್ನೆ ಅಭಿಮಾನಿಯಾಗಿ ಈ ಪ್ರಶ್ನೆ ಕೇಳಿದ್ದರು. ನಾನು ನಿಮ್ಮ ಅಪ್ಪಟ ಅಭಿಮಾನಿ ಆಗಿ ಕೇಳುತ್ತಿದ್ದೇನೆ ನಿಮ್ಮ ಕಟ್ ಔಟ್ ಮೇಲೆ ಹಾರ ಹಾಕಿದ್ದೇನೆ, ಹಾಲು ಹಾಕಿದ್ದೇನೆ, ನಿಮ್ಮ ಹೆಸರು ನನ್ನ ಮನಸಲ್ಲಿ ಶಾಶ್ವತವಾಗಿ ಇರಲಿ ಎನ್ನುವ ಕಾರಣಕ್ಕೆ ನಿಮ್ಮ ಹೆಸರನ್ನೇ ಹಚ್ಚೆ ಹಾಕಿಸಿಕೊಂಡಿದ್ದೇನೆ.
ಈಗ ನಿಮ್ಮ ಮೇಲೆ ಆದ ಆ ಹಲ್ಲೆಯನ್ನು ನಾನು ಹೇಗೆ ತೆಗೆದುಕೊಳ್ಳಬೇಕು ಎಂದು ಕೇಳಿದ್ದಾರೆ ಅದಕ್ಕೆ ದರ್ಶನ್ ಅವರು ಕೊಟ್ಟ ಉತ್ತರ ಬಹಳ ಮಾಸ್ ಆಗಿ ಇತ್ತು. ದರ್ಶನ್ ಅವರು ಆ ಘಟನೆ ಬಗ್ಗೆ ಹೇಳುತ್ತಾ ನಾನು ಎಲ್ಲೂ ತಪ್ಪು ಮಾಡಿಲ್ಲ ಎನ್ನುವ ಭರವಸೆ ನನಗಿದೆ. ನಾನು ಯಾರನ್ನು ಎಳೆದಾಡಿಲ್ಲ ಅಥವಾ ಇನ್ನೇನನ್ನು ಮಾಡಿಲ್ಲ ನಾನು ಒಬ್ಬ ಕಲಾವಿದನಾಗಿ ನಾನು ನನ್ನ ಸಿನಿಮಾ ಪ್ರಚಾರಕ್ಕೆ ಹೋಗಿದ್ದೆ ಅಷ್ಟೇ. ಆದರೆ ಆ ರೀತಿ ಯಾಕೆ ಮಾಡಿದರು ಎನ್ನುವುದರ ಬಗ್ಗೆ ಮಾಹಿತಿ ಬೇಕಾಗಿದೆ, ಇದೆಲ್ಲವನ್ನು ಕಲೆ ಹಾಕುವ ಕೆಲಸವೂ ಕೂಡ ನಡೆಯುತ್ತಿದೆ.
ತಪ್ಪೇ ಮಾಡಿದವನ ಮೇಲೆ ಈ ರೀತಿ ಮಾಡಿದರೆ ಯಾರು ತಾನೆ ಬಿಡುತ್ತಾರೆ ಅದಕ್ಕಾಗಿ ಸರಿಯಾಗಿ ಸಿಕ್ಕಿ ಹಾಕಿಕೊಳ್ಳಲಿ ಎಲ್ಲರ ಹೆಸರು ಆಚೆ ಬರಲಿ ಎಂದು ಕಾಯುತ್ತಿದ್ದೇನೆ. ಯಾಕೆಂದರೆ ಇದನ್ನು ಆ ವ್ಯಕ್ತಿ ಉದ್ದೇಶ ಪೂರ್ವಕವಾಗಿ ಮಾಡಿರುವುದಿಲ್ಲ. ಯಾರೋ ಒಬ್ಬರು ಅವನಿಗೆ ಹೇಳಿ ಈ ಕೆಲಸ ಮಾಡಿಸಿದ್ದಾರೆ. ಅದು ಸೊ ಕಾಲ್ಡ್ ದೊಡ್ಡ ದೊಡ್ಡವರೆ ಇದರ ಹಿಂದೆ ಇದ್ದಾರೆ ಅದರ ಬಗ್ಗೆ ಸುಳಿವು ಗೊತ್ತಾಗುತ್ತಿದೆ. ಸ್ವಲ್ಪ ದಿನ ಕಾಯಿರಿ ಎಲ್ಲದಕ್ಕೂ ಉತ್ತರ ಸಿಗುತ್ತದೆ.
ಕೊಚ್ಚೆ ಮೇಲೆ ಕಲ್ಲು ಹಾಕಬೇಡಿ ಎಂದೆ ಎಲ್ಲರೂ ಹೇಳುವುದು ಯಾರಾದರೂ ಅದರ ಮೇಲೆ ಕಾಲು ಹಾಕಿದಾಗ ಅಯ್ಯೋ ಪಾಪ ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಆ ಕೊಚ್ಛೆ ಮೇಲೆ ಕಾಲು ಹಾಕು ಅಂತಾನು ಹೇಳಿಕೊಟ್ಟವನು ಒಬ್ಬನು ಇರುತ್ತಾನೆ ಅಲ್ವಾ. ಅವನಿಗೆ ಬೇಟೆ ನಡೆಯುತ್ತಿದೆ ಅವನ ಸಿಕ್ಕಿಹಾಕಿಕೊಂಡರೆ ಮಾತ್ರ ಸುಮ್ಮನೆ ಬಿಡುವ ಮಾತೇ ಇಲ್ಲ, ಒಂದಷ್ಟು ಕೊಟ್ಟೆ ಕಳಿಸುವುದು. ಮಾಡಬಾರದು ಮಾಡಿದ್ದಾನೆ ಮುಂದೆ ಇದೆ ಅವನಿಗೆ ಮಾರಿಹಬ್ಬ ಎಂದು ಹೇಳಿದ್ದಾರೆ.
ಜೊತೆಗೆ ಅಭಿಮಾನಿಗಳಿಗೂ ನಾನು ಹೇಳುವುದು ಇಷ್ಟೇ. ಎಲ್ಲವೂ ಸಾಕ್ಷಿ ಸಮೇತ ಸಿಗಲಿ ಅಲ್ಲಿವರೆಗೂ ತಾಳ್ಮೆ ಇಂದ ಇರಿ. ಆಮೇಲೆ ನಾನು ಯಾರಿಗೂ ಏನು ರಿಸ್ಟ್ರಿಕ್ಷನ್ ಮಾಡುವುದಿಲ್ಲ. ಇತ್ತೀಚಿಗೆ ನಾನು ಈ ರೀತಿ ರಿಸ್ಟ್ರಿಕ್ಷನ್ ಮಾಡುವುದನ್ನೇ ಬಿಟ್ಟು ಬಿಟ್ಟಿದ್ದೇನೆ. ಆ ವ್ಯಕ್ತಿ ಕೂಡ ಹಿಂದೂ ಮುಂದು ಯೋಚನೆ ಮಾಡದೆ ನನ್ನ ಮೇಲೆ ಹ-ಲ್ಲೆ ಮಾಡಿದ್ದಾನೆ ಎಂದಾಗ ನಾನು ಯಾಕೆ ರಿಸ್ಟ್ರಿಕ್ಷನ್ ಹಾಕಬೇಕು.
ನಿಮ್ಮ ನಿಮ್ಮ ಇಷ್ಟ ಬಂದಂತೆ ನೀವು ಮಾಡಿ ಎಂದು ಹೇಳಿ ಸುಮ್ಮನೆ ಕೂತುಕೊಂಡು ನೋಡುತ್ತಿರುತ್ತೇನೆ ಅಷ್ಟೇ ಎಂದು ಉತ್ತರ ಕೊಟ್ಟಿದ್ದಾರೆ. ಇತ್ತೀಚೆಗೆ ಸ್ಟಾರ್ ವಾರ್ ಎನ್ನುವುದೆಲ್ಲಾ ತಪ್ಪು ಕಲ್ಪನೆ ನಮ್ಮ ಇಂಡಸ್ಟ್ರಿಯಲ್ಲಿ ಯಾವ ಸ್ಟಾರ್ ಕೂಡ ಯಾರ ಮೇಲೂ ಈ ರೀತಿ ದ್ವೇಷ ಸಾಧಿಸುತ್ತಿಲ್ಲ ಎಂದು ಅಂದುಕೊಂಡಿದ್ದೆಲ್ಲ ಸುಳ್ಳು ಎನ್ನುವುದು ಡಿ ಬಾಸ್ ಮಾತು ಕೇಳಿದ ಮೇಲೆ ಸ್ಪಷ್ಟ ಆಗುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.
https://www.instagram.com/reel/Cn055jfu3WU/?igshid=MDJmNzVkMjY=