ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರೇ ಹೇಳುವಂತೆ ಜೀವನವನ್ನು ಒಂದು ಚಾಲೆಂಜಿಂಗ್ ಆಗಿ ಸ್ವೀಕರಿಸಿ ಗೆದ್ದು ಬಂದವರು. ಕನ್ನಡದ ಫೇಮಸ್ ಖಳನಾಯಕನ ಪುತ್ರನಾಗಿದ್ದರೂ ಕೂಡ ದರ್ಶನ್ ಅವರ ಈ ಮಟ್ಟಕ್ಕೆ ಬೆಳೆಯಲು ತುಳಿದ ಹಾದಿ ಹೂವಿನದ್ದಾಗಿರಲಿಲ್ಲ. ತಂದೆ ಮರಣದ ಬಳಿಕ ಕುಟುಂಬದ ಜವಾಬ್ದಾರಿ ಹೊತ್ತುಕೊಂಡ ದರ್ಶನ್ ಅವರು ಹೊಟ್ಟೆಪಾಡಿಗಾಗಿ ಹಾಲು ಮಾರುವ ಕೆಲಸವನ್ನು ಕೂಡ ಮಾಡಿದ್ದಾರೆ. ದರ್ಶನ್ ಅವರು ಎಷ್ಟೇ ಬೆಳದಿದ್ದರೂ ಕೂಡ ಹಿಂದಿನ ದಿನಗಳನ್ನು ಇನ್ನು ಮರೆತಿಲ್ಲ ಯಾಕೆಂದರೆ ಅಂದು ಅವರು ಬಿದ್ದಿದ್ದ ಕಷ್ಟಗಳೇ ದರ್ಶನ್ ಅವರು ಇನ್ನೂ ಸಾಧನೆ ಮಾಡಬೇಕು ಎನ್ನುವುದಕ್ಕೆ ಸ್ಪೂರ್ತಿಯಂತೆ. ದರ್ಶನ್ ಅವರ ನೇರ ವ್ಯಕ್ತಿತ್ವ ಹಾಗೂ ಅವರು ಜೀವನದಲ್ಲಿ ಪಟ್ಟಿರುವ ಕಷ್ಟ ಮತ್ತು ಅವರು ಅಭಿಮಾನಿಗಳನ್ನು ಪ್ರೀತಿಸುವ ಪರಿಯಿಂದ ಮತ್ತು ಅವರ ಸಹೃದಯ ಗುಣಗಳಿಂದ ಕರ್ನಾಟಕದ ಅಪಾರ ಅಭಿಮಾನಿಗಳ ಅಭಿಮಾನ ಗಳಿಸಿದ್ದಾರೆ.
ದರ್ಶನ್ ಅವರು ಮೊದಮೊದಲು ಸಿನಿಮಾ ಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ನಂತರ ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಾ ಆಮೇಲೆ ಸಹಾಯಕ ನಿರ್ದೇಶನಕ್ಕೆ ಕೂಡ ಪಳಗಿ ನಂತರ ಹೀರೋ ಆಗಿ ಕಾಣಿಸಿಕೊಂಡರು. ಮೆಜೆಸ್ಟಿಕ್ ಎನ್ನುವ ಸಿನಿಮಾದಲ್ಲಿ ಅದ್ಭುತವಾಗಿ ಅಭಿನಯ ಮಾಡುವ ಮೂಲಕ ಕನ್ನಡಿಗರ ಮನದಲ್ಲಿ ಚಾಲೆಂಜಿಂಗ್ ಸ್ಟಾರ್ ಆಗಿ ಉಳಿದರು. ಮೆಜೆಸ್ಟಿಕ್ ಸಿನಿಮಾದ ಅದ್ಭುತ ಗೆಲುವಿನ ನಂತರ ದರ್ಶನ್ ಅವರು ನಡೆದದ್ದೇ ಇತಿಹಾಸ ಆಯ್ತು ಎನ್ನಬಹುದು ದರ್ಶನ್ ಅವರು ಮೆಜಸ್ಟಿಕ್ ಸಿನಿಮಾದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು ಹಾಗೂ ಇವರ ನಟಿಸಿದ ಅಷ್ಟು ಸಿನಿಮಾಗಳನ್ನು ಕೂಡ ಹಿಟ್ ಮಾಡಿದ್ದಾರೆ. ದರ್ಶನ್ ಅವರ ನನ್ನ ಪ್ರೀತಿಯ ರಾಮು ಅನಾಥರು ಲಾಲಿ ಹಾಡು ಲಂಕೇಶ್ ಪತ್ರಿಕೆ ದತ್ತ ದಾಸ ಅಯ್ಯಾ ಸುಂಟರಗಾಳಿ ಕಲಾಸಿಪಾಳ್ಯ ಮಂಡ್ಯ ಇನ್ನು ಮುಂತಾದ ಸಿನಿಮಾಗಳು ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಇರುತ್ತವೆ.
ದರ್ಶನ್ ಅವರು ಸಿನಿಮಾಗಳಲ್ಲಿ ಅಭಿನಯಿಸುವುದರ ಜೊತೆಗೆ ಪ್ರಾಣಿಗಳ ಬಗ್ಗೆ ಬಹಳ ಪ್ರೀತಿ ಇಟ್ಟುಕೊಂಡಿದ್ದಾರೆ. ಪ್ರಾಣಿಗಳನ್ನು ಸಾಕುವುದಕ್ಕಾಗಿಯೇ ಮೈಸೂರಿನ ಬಳಿ ಒಂದು ಫಾರಂ ಹೌಸ್ ಕೂಡ ಕಟ್ಟಿಸಿ ಅಲ್ಲಿ ಹಸು ದನ ಕುದುರೆ ಸೇರಿದಂತೆ ಅನೇಕ ಪ್ರಾಣಿ ಪಕ್ಷಿಗಳನ್ನು ಸಾಕುತ್ತಿದ್ದಾರೆ. ದರ್ಶನ್ ಅವರು ಕೊರೋನ ಲಾಕ್ಡೌನ್ ಸಮಯದಲ್ಲಿ ತಮ್ಮ ಅಭಿಮಾನಿಗಳಲ್ಲೂ ಕೂಡ ಮನವಿ ಮಾಡಿದ್ದರು. ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಾಕುವುದಕ್ಕೆ ಸಹಾಯ ಮಾಡಿ ಎಂದು ಇವರ ಒಂದೇ ಒಂದು ಕರೆಗೆ ಕರ್ನಾಟಕದಾದ್ಯಂತ ಅಭಿಮಾನಿಗಳು ಓಗೊಟ್ಟು ಅನೇಕ ಮೃಗಾಲಯಗಳಲ್ಲಿ ಪ್ರಾಣಿಗಳು ದತ್ತು ತೆಗೆದುಕೊಂಡು ಸಾಕುವ ನಿರ್ಧಾರ ಮಾಡಿದ್ದಾರೆ. ಸಿನಿಮಾ ಹಾಗೂ ಪ್ರಾಣಿಗಳನ್ನು ಬಿಟ್ಟರೆ ದರ್ಶನ್ ಅವರಿಗೆ ಬಹಳ ಇಷ್ಟವಾಗುವುದು ಅವರ ಸ್ನೇಹಿತರು. ದರ್ಶನ್ ಅವರಿಗೆ ಬಹುದೊಡ್ಡ ಸ್ನೇಹಿತರ ಬಳಗವೇ ಇದೆ. ದರ್ಶನ್ ಅವರು ಎಲ್ಲೇ ಹೋದರೂ ಕೂಡ ಅವರ ಸುತ್ತ ದೊಡ್ಡ ದಂಡೆ ಇರುತ್ತದೆ.
ದರ್ಶನ್ ಅವರು ಸ್ನೇಹಿತರಿಗೆ ಬಹಳ ಗೌರವ ಕೊಡುತ್ತಾರೆ ಹಾಗೂ ಒಮ್ಮೆ ಸ್ನೇಹಿತ ಎಂದು ಒಪ್ಪಿಕೊಂಡು ಬಿಟ್ಟರೆ ಒಳ್ಳೆಯದು ಹಾಗೂ ಕೆಟ್ಟದು ಎಲ್ಲದರಲ್ಲೂ ಅವರ ಜೊತೆ ನಿಲ್ಲುತ್ತಾರೆ. ದರ್ಶನ್ ಅವರ ಸ್ನೇಹ ಸಿಗುವುದಕ್ಕೆ ನಿಜವಾಗಿಯೂ ಅದೃಷ್ಟ ಮಾಡಬೇಕು ಅದರಲ್ಲೂ ದರ್ಶನ್ ಅವರಿಗೆ ಅವರ ಮೈಸೂರಿನ ಸ್ನೇಹಿತರು ಎಂದರೆ ಬಹಳ ಇಷ್ಟ ಹಾಗೂ ಅವರಿಗೆ ಅವರ ಮೈಸೂರಿನ ಸ್ನೇಹಿತರೇ ಬಹಳ ಆತ್ಮೀಯರು. ಅವರ ಸ್ನೇಹ ಬಳಗ ಎಷ್ಟು ದೊಡ್ಡದು ಎನ್ನುವುದನ್ನು ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಭಾಗವಹಿಸಿದಾಗ ನಾವೆಲ್ಲರೂ ಕಣ್ತುಂಬಿಕೊಂಡಿದ್ದೇವೆ ಹಾಗೂ ಆಶ್ಚರ್ಯವನ್ನು ಕೂಡ ಪಟ್ಟಿದ್ದೇವೆ. ಮತ್ತೊಂದು ದರ್ಶನ್ ಅವರ ಪ್ರಿಯ ವಿಚಾರ ಏನೆಂದರೆ, ದರ್ಶನ್ ಅವರಿಗೆ ಕಾರುಗಳ ಮೇಲೂ ಕೂಡ ಅಷ್ಟೇ ಮೋಹವಿದೆ.
ದರ್ಶನ್ ಅವರು ಕಾರುಪ್ರಿಯರು ಮಾರ್ಕೆಟ್ಗೆ ಯಾವುದೇ ಹೊಸ ರೀತಿಯ ಕಾರ್ ಬಂದರೂ ಕೂಡ ಮೊದಲು ಖರೀದಿಸಬೇಕು ಹಾಗೂ ಅದನ್ನು ಡ್ರೈವ್ ಮಾಡಿಕೊಂಡು ಹೋಗಬೇಕು ಎಂದು ದರ್ಶನ್ ಅವರು ಬಹಳ ಆಸೆ ಪಡುತ್ತಾರೆ. ಈಗಾಗಲೇ ದರ್ಶನ್ ಅವರ ಬಳಿ ಹಲವಾರು ಕಾರುಗಳ ಕಲೆಕ್ಷನ್ ಇದೆ. ಕನ್ನಡ ಸಿನಿಮಾ ರಂಗದಲ್ಲಿ ಉಳಿದ ಎಲ್ಲಾ ನಟರಿಗಿಂತಲೂ ದರ್ಶನ್ ಅವರ ಬಳಿಗೆ ಹೆಚ್ಚಿನ ದುಬಾರಿ ಬೆಲೆಯ ಕಾರುಗಳು ಇವೆ. ದರ್ಶನ್ ಅವರ ಬಳಿ ಲಂಬೋರ್ಗಿನಿ ಕಾರು ಇದೆ. ಒಂದಲ್ಲ ಎರಡೆರಡು ಲಂಬೋರ್ಗಿನಿ ಕಾರುಗಳು ದರ್ಶನ್ ಅವರ ಬಳಿ ಇದೆ ದರ್ಶನ್ ಅವರು ಮೊದಲು ಲಂಬೋರ್ಗಿನಿ ಅವೆಡೆಂಟರಿ ಕಾರನ್ನು ಖರೀದಿ ಮಾಡಿದ್ದರು, ಅದು ಬಿಳಿ ಬಣ್ಣದಾಗಿತ್ತು ಇದೀಗ ದರ್ಶನ್ ಅವರು ಅದೇ ಲಂಬೋರ್ಗಿನಿ ಕಂಪನಿಯ ಲಂಬೋರ್ಗಿನಿ ಉರುಸ್ ಕಾರು ಕೂಡ ಖರೀದಿಸಿದ್ದಾರೆ.
ಈಗ ಖರೀದಿಸಿರುವ ಲಂಬೋರ್ಗಿನಿ ಉರುಸ್ ಕಾರು ಹಳದಿ ಬಣ್ಣದಲ್ಲಿದ್ದು ಇದರ ಬೆಲೆ 3 ಕೋಟಿ. ಇದಕ್ಕೂ ಮುಂಚೆ ಇದ್ದ ಲಂಬೋರ್ಗಿನಿ ಬಿಳಿ ಬಣ್ಣದ ಕಾರಿಗೆ ಐದು ಕೋಟಿ ಕೊಟ್ಟು ಖರೀದಿ ಮಾಡಿದ್ದರು. ದರ್ಶನ್ ಅವರು ಆಯುಧ ಪೂಜೆಯಲ್ಲಿ ಪೂಜೆ ಮಾಡವುದು ನೋಡಲು ಎಲ್ಲರೂ ಕಾಯುತ್ತಿರುತ್ತಾರೆ. ಯಾಕೆಂದರೆ ಅವರ ಬಳಿ ಇರುವ ಎಲ್ಲಾ ಕಾರುಗಳು ಕೂಡ ಸಾಲಾಗಿ ಅವರ ಮನೆ ಮುಂದೆ ಅಂದು ನಿಂತಿರುತ್ತದೆ. ಅದನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ ಆ ಸಾಲಿನಲ್ಲಿ ಅವರ ಬಳಿ ಇರುವ ರೇಂಜ್ ರೋವರ್, ಫಾರ್ಚುನರ್, ಬೆನ್ಸ್, ಜಾಗ್ವಾರ್, ಪಾರ್ಚು ಆಡಿ ಕ್ಯೂ, ಮಿನಿ ಕೂಪರ್, ಲಂಬೋರ್ಗಿನಿ ಇನ್ನು ಮುಂತಾದ ಕಾರುಗಳು ಹಾಗೂ ಹಲವು ಫ್ಯಾಷನ್ ಬೈಕುಗಳು ಸಾಲಾಗಿ ನಿಂತಿರುತ್ತವೆ. ದರ್ಶನ್ ಅವರು ಹಿಂದೊಮ್ಮೆ ತುಂಬಾ ಆಸೆ ಬಿದ್ದು ದುಬೈ ಕಂಪನಿಯ ಕಾರೊಂದನ್ನು ಖರೀದಿಸಿದ್ದರಂತೆ.
ಆದರೆ ಅದರ ಬ್ರಾಂಚ್ ಗಳು ಇಂಡಿಯಾದಲ್ಲಿ ಇರದ ಕಾರಣ ಅದರಿಂದ ತುಂಬಾ ಸಮಸ್ಯೆ ಅನುಭವಿಸಿ ನಂತರ ಮಾರಿಬಿಟ್ಟರಂತೆ ಹಾಗಾಗಿ ಇವರು ಮತ್ತೆ ಕಾರು ಖರೀದಿ ಮಾಡಿದರೆ ಭಾರತದಲ್ಲಿ ಬ್ರಾಂಚ್ ಹೊಂದಿರುವ ಕಂಪನಿಗಳ ಕಾರನ್ನು ಮಾತ್ರ ಖರೀದಿಸುತ್ತಾರಂತೆ. ಸದ್ಯಕ್ಕೆ ದರ್ಶನ್ ಅವರಿಗೆ ದೆಹಲಿಯಲ್ಲಿ ಮಾತ್ರ ಬ್ರಾಂಚ್ ಇರುವ ಬೆಂಟ್ಲಿ ಕಾರು ಖರೀದಿಸುವ ಆಸೆಯಾಗಿದೆಯಂತೆ ಹಾಗೂ ಸದ್ಯದಲ್ಲೇ ಅದನ್ನು ಖರೀದಿಸಲಿದ್ದಾರಂತೆ. ಯಾವುದೇ ಕಾರನ್ನು ಕೊಂಡರೂ ಕೂಡ ಮೊದಲು ಅವರು ಪೂಜೆ ಮಾಡಿಸುವುದು ತಾಯಿ ಚಾಮುಂಡೇಶ್ವರಿಯ ಕ್ಷೇತ್ರದಲ್ಲಿ. ಆ ತಾಯಿ ದರ್ಶನ್ ಅವರಿಗೆ ಆಶೀರ್ವಾದ ಮಾಡಲಿ ಅವರು ಸಿನಿಮಾ ರಂಗದಲ್ಲಿ ಮತ್ತಷ್ಟು ಬೆಳೆಯಲಿ ಹಾಗೂ ಇನ್ನಷ್ಟು ಇದೇ ರೀತಿ ಫ್ಯಾಷನ್ ಮುಂದುವರಿಸಿಕೊಂಡು ಹೋಗುವಂತೆ ಮಾಡಲಿ ಎಂದು ನಾವು ಕೇಳಿಕೊಳ್ಳೋಣ.