ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ಪ್ರೀತಿಸಿ ಮದುವೆಯಾಗಿರುವ ಜೋಡಿ ದರ್ಶನ್ ಅವರು ಸಣ್ಣ ಪುಟ್ಟ ಪಾತ್ರದಲ್ಲಿ ಅಭಿನಯ ಮಾಡುವಾಗ ವಿಜಯಲಕ್ಷ್ಮಿ ಅವರು ದರ್ಶನ್ ಅವರಿಗೆ ಕಾಮನ್ ಫ್ರೆಂಡ್ ಆಗಿರುತ್ತಾರೆ. ಇವರಿಬ್ಬರ ನಡುವೆ ಮೊದಲು ಸ್ನೇಹ ವಾಗುತ್ತದೆ ತದನಂತರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಪ್ರೀತಿಸುವುದಕ್ಕೆ ಪ್ರಾರಂಭಿಸುತ್ತಾರೆ.
ತಮ್ಮ ಪ್ರೀತಿಯ ವಿಚಾರವನ್ನು ದರ್ಶನ್ ತಮ್ಮ ಮನೆಯಲ್ಲಿ ಹೇಳಿದಾಗ ಮನೆಯವರು ಒಪ್ಪಿಗೆಯನ್ನು ಸೂಚಿಸುತ್ತಾರೆ ತದನಂತರ ಸಂಪ್ರದಾಯದಂತೆ ಮತ್ತು ಶಾಸ್ತ್ರ ಬದ್ಧವಾಗಿ ಇವರ ಮದುವೆಯನ್ನು ಮಾಡಲಾಗುತ್ತದೆ. ಮದುವೆಯಾದ ನಂತರ ಇವರಿಬ್ಬರೂ ಕೂಡ ಬಹಳ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದರು ಈ ಪ್ರೀತಿಗೆ ಪ್ರತೀಕವಾಗಿ ಮಗ ವಿನೀಶ್ ಕೂಡ ಹುಟ್ಟಿದ್ದಾರೆ.
ಇನ್ನು ಒಂದು ಕಾಲದಲ್ಲಿ ಚಿಕ್ಕ ಪುಟ್ಟ ಪಾತ್ರದಲ್ಲಿ ಅಭಿನಯಿಸುತ್ತಿದ್ದಂತಹ ನಟ ದರ್ಶನ್ ಅವರಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗಿ ಸದ್ಯಕ್ಕೆ ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ಒಂದರ ಹಿಂದೆ ಮತ್ತೊಂದರಂತೆ ಹಿಟ್ ಸಿನಿಮಾಗಳನ್ನು ನೀಡುವುದರ ಮೂಲಕ ತಮ್ಮ ಸಂಭಾವನೆ ಮತ್ತು ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ.
ಸದ್ಯಕ್ಕೆ ನಟ ದರ್ಶನ್ ಅವರು ಕೈಗೆ ಸಿಗದಂತಹ ವ್ಯಕ್ತಿ ಅಂತ ಹೇಳಬಹುದು ಇನ್ನು ದರ್ಶನ್ ಅವರಿಗೆ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿರುವ ವಿಚಾರವು ಕೂಡ ನಿಮಗೆ ತಿಳಿದೇ ಇದೆ. ಒಟ್ಟಾರೆಯಾಗಿ ಹೇಳುವುದಾದರೆ ಸಿನಿಮಾ ಜೀವನದಲ್ಲಿ ದರ್ಶನ್ ಅರು ಇದೀಗ ಉತ್ತುಂಗ ಶಿಖರದಲ್ಲಿದ್ದಾರೆ ಆದರೆ ಕೆಲವು ಕಾರಣಾಂತರಗಳಿಂದ ಕಳೆದ ಎಂಟು ವರ್ಷದ ಹಿಂದೆ ವಿಜಯಲಕ್ಷ್ಮಿ ಮತ್ತು ದರ್ಶನ್ ಅವರ ಬದುಕಿನಲ್ಲಿ ಬಿರುಕು ಉಂಟಾಗುತ್ತದೆ.
ಇದು ಯಾವ ಮಟ್ಟಕ್ಕೆ ತಲುಪುತ್ತದೆ ಅಂದರೆ ದರ್ಶನ್ ಅವರು ಕೆಲ ದಿನಗಳ ಕಾಲ ಜೈಲು ವಾಸವನ್ನು ಕೂಡ ಅನುಭವಿಸಬೇಕಾಗುತ್ತದೆ ತದನಂತರ ಅಲ್ಲಿಂದ ಹೊರ ಬಂದು ಇಬ್ಬರೂ ಕೂಡ ತಮ್ಮ ತಪ್ಪಿನ ಅರಿವನ್ನು ಮನವರಿಕೆ ಮಾಡಿಕೊಂಡು ಇದೀಗ ಒಟ್ಟಾಗಿ ಸಂಸಾರವನ್ನು ಸಾಗಿಸುತ್ತಿದ್ದಾರೆ ಆದರೆ ದರ್ಶನ್ ಅರಿಗೆ ಕೆಲಸ ಹೆಚ್ಚಾಗಿರುವುದರಿಂದ ತಮ್ಮ ಮಗನಿಗೆ ಮತ್ತು ಹೆಂಡತಿಗೆ ಹೆಚ್ಚಿನ ಸಮಯವನ್ನು ನೀಡಲು ಸಾಧ್ಯವಾಗುತ್ತಿಲ್ಲ.
ಆದರೂ ಕೂಡ ವಿಶೇಷ ದಿನಗಳಲ್ಲಿ ಮತ್ತು ವಿಶೇಷ ಸಂದರ್ಭದಲ್ಲಿ ಪತ್ನಿ ಮತ್ತು ಮಗನೊಟ್ಟಿಗೆ ಹೆಚ್ಚಿನ ಕಾಲ ಕಳೆಯುತ್ತಾರೆ. ಕಳೆದ ವಾರವಷ್ಟೇ ದರ್ಶನ್ ಅವರ ಮಗ ವಿನೀಶ್ ಅವರ ಹುಟ್ಟುಹಬ್ಬವಿತ್ತು ಹುಟ್ಟು ಹಬ್ಬಕ್ಕೆ ದರ್ಶನ್ ಅವರು ಮನೆಗೆ ಬಂದು ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿದರಿ. ಅದಾದ ನಂತರ ಈಗ ದರ್ಶನ ಅವರ ಹೆಂಡತಿ ವಿಜಯಲಕ್ಷ್ಮಿ ಅವರ ಹುಟ್ಟುಹಬ್ಬ ಹಾಗಾಗಿ ಪತ್ನಿಯ ಹುಟ್ಟುಹಬ್ಬವನ್ನು ದರ್ಶನ್ ಅವರು ಸರ್ಪ್ರೈಸ್ ಆಗಿ ಏರ್ಪಡಿಸಿದ್ದಾರೆ.
ಈ ಸರ್ಪ್ರೈಸ್ ಅನ್ನು ನೋಡಿ ವಿಜಯಲಕ್ಷ್ಮಿ ಅವರು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ ಇನ್ನು ಹೆಂಡತಿ ಕೇಕ್ ಕತ್ತರಿಸುವಂತಹ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಸ್ವತಃ ವಿಜಯಲಕ್ಷ್ಮಿ ಅವರೇ ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಇನ್ನು ದರ್ಶನ್ ತಮ್ಮ ಪ್ರೀತಿಯ ಮಡದಿಗೆ ಚಿನ್ನಾಭರಣವನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಆಭರಣ ಎಂದರೆ ತುಂಬಾನೆ ಇಷ್ಟ ಹಾಗಾಗಿ ತಮ್ಮ ಪತ್ನಿಗೆ ಚಿನ್ನದ ನಕ್ಲೆಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಚಾರವನ್ನು ಕೇಳಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ ಅಷ್ಟೇ ಅಲ್ಲದೆ ಈ ದಂಪತಿಗಳಿಗೆ ಎಂದು ಹೀಗೆ ಖುಷಿಯಾಗಿ ಇರಲಿ ಎಂದು ಆಶಿಸಿದ್ದಾರೆ.