ಪ್ರತಿಯೊಂದು ಕುಟುಂಬದಲ್ಲೂ ಕೂಡ ಆಗುವ ಜನನ ಹಾಗೂ ಮ.ರಣವನ್ನು ಕುಟುಂಬದವರು ನೋಂದಾಯಿಸಬೇಕು. ಜೊತೆಗೆ ಜನನ ಪ್ರಮಾಣ ಪತ್ರವನ್ನು ಹೇಗೆ ಪಡೆದುಕೊಳ್ಳುತ್ತೇವೆಯೋ ಅದೇ ರೀತಿ ಮನೆಯಲ್ಲಿ ಯಾರಾದರೂ ಮೃ.ತರಾದಾಗ ಅವರ ಮರಣ ಪ್ರಮಾಣ ಪತ್ರವನ್ನು ಕೂಡ ಸಂಬಂಧ ಪಟ್ಟ ಕಚೇರಿಯಿಂದ ಪಡೆದುಕೊಳ್ಳಬೇಕು. ಭವಿಷ್ಯದಲ್ಲಿ ಹಲವು ಸಂದರ್ಭಗಳಲ್ಲಿ ದಾಖಲೆಯಾಗಿ ಈ ಮ.ರಣ ಪ್ರಮಾಣ ಪತ್ರವನ್ನು ಕೇಳುತ್ತಾರೆ.
ಹಾಗಾಗಿ ಈ ಅಂಕಣದಲ್ಲಿ ಮರಣ ಪ್ರಮಾಣ ಪತ್ರವನ್ನು ಯಾಕೆ ಪಡೆದುಕೊಳ್ಳಬೇಕು ಅದನ್ನು ಹೇಗೆ ಪಡೆದುಕೊಳ್ಳಬೇಕು ಅದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಒಂದು ವೇಳೆ ನಮ್ಮ ಕುಟುಂಬದಲ್ಲಿ ಯಾರಾದರೂ ಮೃ.ತರಾಗಿದ್ದು ಅವರ ಮರ.ಣ ಪ್ರಮಾಣ ಪತ್ರವನ್ನು ನಾವು ಇನ್ನೂ ಪಡೆದಿಲ್ಲ ಎಂದರೆ ಅದನ್ನು ಹೇಗೆ ಈಗ ಪಡೆದುಕೊಳ್ಳಬಹುದು ದಾಖಲೆಗಳಾಗಿ ಏನೆಲ್ಲಾ ಕೊಡಬೇಕು ಎನ್ನುವ ವಿಷಯವನ್ನು ತಿಳಿಸುತ್ತಿದ್ದೇವೆ.
ಮ.ರಣ ಪ್ರಮಾಣಪತ್ರದ ಪ್ರಾಮುಖ್ಯತೆ:-
● ಜಮೀನಿನ ವಿವಾದಗಳು ಇದ್ದಲ್ಲಿ ಅಥವಾ ಆಸ್ತಿ ಭಾಗ ಮಾಡಿಕೊಳ್ಳುವಾಗ ಅಥವಾ ವಂಶಾವಳಿ ಪತ್ರಕ್ಕಾಗಿ ಅರ್ಜಿ ಸಲ್ಲಿಸುವಾಗ ಈ ಮ.ರಣ ಪ್ರಮಾಣ ಪತ್ರ ಬೇಕಾಗುತ್ತದೆ.
● ಮ.ರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿ ಯಾವುದಾದರೂ ಇನ್ಸುರೆನ್ಸ್ ಅಥವಾ LIC ಪಾಲಿಸಿಗಳಿದ್ದರೆ ಆ ಹಣವನ್ನು ಪಡೆಯಲು ಮ.ರಣ ಪ್ರಮಾಣ ಪತ್ರ ಬೇಕೇ ಬೇಕು.
● ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿ ಪೋಸ್ಟ್ ಆಫೀಸ್ ಸ್ಕೀಮ್ ಗಳು FD, EPF, PPF ಗಳು ಇದ್ದಲ್ಲಿ ಅದನ್ನು ಪಡೆದುಕೊಳ್ಳಲು ಸಹ ಮ.ರಣ ಪ್ರಮಾಣ ಪತ್ರ ಬೇಕು.
● ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಯಾವುದಾದರೂ ವ್ಯಕ್ತಿ ಮರಣ ಹೊಂದಿದ್ದರೆ ತಹಶೀಲ್ದಾರ್ ಕಚೇರಿಯಿಂದ ಅಂತ್ಯಸಂಸ್ಕಾರಕ್ಕೆ ಸಹಾಯಧನ ಸಿಗುತ್ತದೆ. ಅದನ್ನು ಪಡೆಯಲು ಕೂಡ ಈ ಮ.ರಣ ಪ್ರಮಾಣ ಪತ್ರ ಬೇಕು.
ಡೆತ್ ಸರ್ಟಿಫಿಕೇಟ್ ಗೆ ಅರ್ಜಿ ಸಲ್ಲಿಸುವ ವಿಧಾನ:-
● ತಹಶೀಲ್ದಾರ್ ಕಚೇರಿಯಲ್ಲಿರುವ ಜನನ ಮ.ರಣ ಶಾಖೆಯಲ್ಲಿ ಮೃತ ವ್ಯಕ್ತಿಯ ಆಧಾರ್ ಕಾರ್ಡ್ ಜೊತೆ ಹಿಂಬರಹ ದೃಢೀಕರಣ ತೆಗೆದುಕೊಳ್ಳಬೇಕು .
ಜನನ ಮ.ರಣ ಶಾಖೆಯಿಂದ ವ್ಯಕ್ತಿಯು ಮರ.ಣ ಹೊಂದಿದ್ದ ಪುರವೆಯಾಗಿ ಯಾವುದೇ ದಾಖಲೆ ಇಲ್ಲ ಎನ್ನುವ ಹಿಂಬರಹ ಧೃಡೀಕರಣ ಪತ್ರ ನೀಡುತ್ತಾರೆ.
● ಗ್ರಾಮೀಣ ಭಾಗದವರು ಆಗಿದ್ದರೆ ಮರ.ಣ ವರದಿ ಜೊತೆಗೆ ನಾಡಕಚೇರಿಯಲ್ಲಿ ಅರ್ಜಿ ಹಾಕಬಹುದು.
● ಪ್ರಮುಖವಾದ ವಿಷಯ ಎಂದರೆ ಜನನ ಮ.ರಣ ಶಾಖೆಯಲ್ಲಿ ಹೋಗಿ ಹಿಂಬರಹ ದೃಢೀಕರಣ ಪತ್ರ ಪಡೆಯುವುದು ಎಂದರೆ ತಿರಸ್ಕಾರ ಪತ್ರ ಪಡೆಯುವುದು ಎಂದರ್ಥ. ಒಂದು ವೇಳೆ ಅವರ ಬಳಿ ಈಗಾಗಲೇ ನೀವು ಕೇಳುತ್ತಿರುವ ವ್ಯಕ್ತಿಯ ಮರ.ಣ ಪ್ರಮಾಣ ಪತ್ರ ಇದ್ದರೆ ಅದರ ಪ್ರತಿಯನ್ನು ಕೊಡುತ್ತಾರೆ. ಒಂದು ವೇಳೆ ಇಲ್ಲದೆ ಇದ್ದಾಗ ಮಾತ್ರ ಅವರು ಹಿಂಬರಹ ಧೃಡೀಕರಣ ಪತ್ರವನ್ನು ನೀಡುತ್ತಾರೆ.
● ಈ ರೀತಿ ಪಡೆದ ಹಿಂಬರಹಪತ್ರ, ಮರ.ಣ ಹೊಂದಿದ ವ್ಯಕ್ತಿ ಐಡಿ ಕಾರ್ಡ್, ವಾರಸುದಾರರ ಆಧಾರ್ ಕಾರ್ಡ್, ಸಾಕ್ಷಿಗಳ ಹೇಳಿಕೆ ಪತ್ರ, ನಮೂನೆ ಫಾರಂ ಈ ದಾಖಲೆಗಳ ಸಹಾಯದಿಂದ ಕೋರ್ಟಿನಲ್ಲಿ ತಡ ನೋಂದಣಿ ಪತ್ರ ತೆಗೆದುಕೊಳ್ಳಬೇಕು.
ಇದಕ್ಕೆ ಸಂಬಂಧಪಟ್ಟ ಕೆಲವು ಅಂಗಡಿಗಳಲ್ಲಿ ಸಿಗುತ್ತವೆ ಇವುಗಳನ್ನು ತೆಗೆದುಕೊಂಡು ಸಮೀಪದ ಕೋರ್ಟಿನಲ್ಲಿ ಆದೇಶ ಪತ್ರಕ್ಕಾಗಿ ಅರ್ಜಿ ಹಾಕಬೇಕು. ಅಥವಾ ಈ ದಾಖಲೆಗಳೆಲ್ಲವನ್ನು ಕೂಡ ತೆಗೆದುಕೊಂಡು ವಕೀಲರ ಮೂಲಕವೂ ಕೂಡ ಈ ತಡ ನೋಂದಣಿ ಆದೇಶ ಪತ್ರವನ್ನು ಪಡೆದುಕೊಳ್ಳಬಹುದು. ಆದರೆ ಅದಕ್ಕಾಗಿ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ.
● ಈ ಎಲ್ಲಾ ದಾಖಲೆಗಳ ಜೊತೆ ತಹಶೀಲ್ದಾರ್ ಕಚೇರಿಯ ಜನನ ಮ.ರಣ ಶಾಖೆಯಲ್ಲಿ ತಡ ನೋಂದಣಿ ಪತ್ರ ಪಡೆದುಕೊಳ್ಳಲು ಮತ್ತು ಮರಣ ದೃಢೀಕರಣ ಪತ್ರ ಪಡೆದುಕೊಳ್ಳಲು ಅರ್ಜಿ ಹಾಕಬೇಕು. ಈ ಪ್ರಕ್ರಿಯೆಯು ಪೂರ್ತಿಯಾಗಲು ಕನಿಷ್ಠ ಒಂದು ತಿಂಗಳಾದರೂ ಆಗಬಹುದು.