Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಪುಟ್ಟ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಧ್ರುವ ಸರ್ಜಾ ಮತ್ತು ಪ್ರೇರಣ, ಈ ಕ್ಯೂಟ್ ಫೋಟೋಶೂಟ್ ವಿಡಿಯೋ...

ಪುಟ್ಟ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಧ್ರುವ ಸರ್ಜಾ ಮತ್ತು ಪ್ರೇರಣ, ಈ ಕ್ಯೂಟ್ ಫೋಟೋಶೂಟ್ ವಿಡಿಯೋ ನೋಡಿ.

ಸ್ಯಾಂಡಲ್ ವುಡ್ ನಾ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಸದ್ಯಕ್ಕೆ ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ ಹೌದು ಧ್ರುವ ಸರ್ಜಾ ಅವರ ಪತ್ನಿ ಪ್ರೇರಣ ಅವರು ಇದೀಗ ತುಂಬ ಗರ್ಭಿಣಿ ಈ ವಿಚಾರವನ್ನು ಎಲ್ಲಿಯವರೆಗೂ ಗಂಡ ಹೆಂಡತಿ ಎಲ್ಲಿಯೂ ಕೂಡ ರಿವಿಲ್ ಮಾಡಿರಲಿಲ್ಲ. ಆದರೆ ಇದೀಗ ಇದ್ದಕ್ಕಿದ್ದ ಹಾಗೆ ಧ್ರುವ ಸರ್ಜಾ ಮತ್ತು ಪ್ರೇರಣಾ ಅವರು ಬೇಬಿ ಬಂಪರ್ ಇರುವಂತಹ ಫೋಟೋಶೂಟ್ ಅನ್ನು ಮಾಡಿಸಿ ತಮ್ಮ ಅಭಿಮಾನಿಗಳಿಗೆ ನಾವಿಬ್ಬರು ತಂದೆ ತಾಯಿಯಾಗಿ ಬಡ್ತಿ ಪಡೆಯುತ್ತಿದ್ದೇವೆ ನಿಮ್ಮೆಲ್ಲರ ಆಶೀರ್ವಾದ ನಮಗೂ ಮತ್ತು ನಮ್ಮ ಪುಟ್ಟ ಮಗುವಿನ ಮೇಲೆ ಇರಲಿ ಎಂದು ಅಧಿಕೃತವಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ಫೋಟೋಸ್ ಮತ್ತು ಧ್ರುವ ಸರ್ಜಾ ಅವರು ಬರೆದುಕೊಂಡಿರುವಂತಹ ಸಾಲುಗಳನ್ನು ನೋಡಿದಂತಹ ಅಭಿಮಾನಿಗಳು ಶುಭಾಶಯವನ್ನು ಕೋರಿದ್ದಾರೆ. ಅಷ್ಟೇ ಅಲ್ಲದೆ ಈ ವಿಚಾರವನ್ನು ಇಷ್ಟು ತಡವಾಗಿ ತಿಳಿಸುತ್ತಿದ್ದೀರಲ್ಲ ಎಂದು ಧ್ರುವ ಸರ್ಜಾ ಅವರನ್ನು ಕೆಲವು ಅಭಿಮಾನಿಗಳು ತರಟೆಗೂ ಕೂಡ ತೆಗೆದುಕೊಂಡಿದ್ದಾರೆ. ಇನ್ನು ಧ್ರುವ ಸರ್ಜಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವಂತಹ ಫೋಟೋಸ್ಗಳನ್ನು ನೋಡಿದಂತಹ ಚಿರಂಜೀವಿ ಸರ್ಜಾ ಅವರ ಧರ್ಮಪತ್ನಿ ಆದಂತಹ ಹಾಗೂ ಧ್ರುವ ಸರ್ಜಾ ಅವರ ಅತ್ತಿಗೆ ಆದಂತಹ ಮೇಘನಾ ರಾಜ್ ಅವರು “ತುಂಬ ಸುಂದರವಾದ ಸುದ್ದಿ. ನಿಮ್ಮಿಬ್ಬರಿಗೂ ದೇವರು ಒಳ್ಳೆಯದು ಮಾಡಲಿ ಪುಟ್ಟ ಕಂದನಿಗೆ ನನ್ನ ಪ್ರೀತಿ ಇದೆ” ಎಂದು ಧ್ರುವ ಸರ್ಜಾ ಗೆ ಶುಭಾಶಯ ಕೋರಿದ್ದಾರೆ.

ಧ್ರುವ ಸರ್ಜಾ ಅವರ ಮಾವ ಆದಂತಹ ಅರ್ಜುನ್ ಸರ್ಜಾ ಅವರು ಕೂಡ “ದೇವರು ಒಳ್ಳೆಯದನ್ನು ಮಾಡಲಿ” ಎಂದಿದ್ದಾರೆ. ಧ್ರುವ ಸರ್ಜಾ ಅವರ ಹಿರಿಯ ಪುತ್ರಿ ಆದಂತಹ ಐಶ್ವರ್ಯಾ ಅರ್ಜುನ್ ಅವರು ಕ್ಯೂಟ್ ಪುಟ್ಟ ಮಗುವನ್ನು ನೋಡಲು ಹಂಬಲಿಸುತ್ತಿದ್ದೇನೆ ಈ ವಿಷಯ ಗೊತ್ತಿದ್ದು ಹೇಳದೆ ಮೌನವಾಗಿ ಇದ್ದಿದ್ದಕ್ಕೆ ನನಗೆ ಟ್ರೋಫಿ ಸಿಗಬೇಕು ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಧ್ರುವ ಸರ್ಜಾ ಹಾಗೂ ಪ್ರೇರಣ ಅವರಿಗೆ ಸಂಡಲ್ವುಡ್ ಸೇರಿದಂತೆ ಕುಟುಂಬಸ್ಥರು ಸ್ನೇಹಿತರು ಬಂಧು ಬಳಗದವರು ಅಭಿಮಾನಿಗಳು ಎಲ್ಲರಿಂದಲೂ ಕೂಡ ಶುಭಾಶಯಗಳು ಮಹಾಪುರವೇ ಹರಿದು ಬರಲಿದೆ ಇನ್ನೇನು ಕೆಲವೇ ದಿನಗಳಲ್ಲಿ ಧ್ರುವ ಸರ್ಜಾ ಅವರು ಮುದ್ದಾದ ಗಂಡು ಅಥವಾ ಹೆಣ್ಣು ಮಗುವಿನ ತಂದೆಯಾಗಲಿದ್ದಾರೆ.

ಕಳೆದ ಎರಡು ವರ್ಷಗಳಿಂದಲೂ ಕೂಡ ಧ್ರುವ ಸರ್ಜಾ ಅವರ ಕುಟುಂಬದಲ್ಲಿ ಸಂತಸದ ವಾತಾವರಣವೇ ಇರಲಿಲ್ಲ ಏಕೆಂದರೆ ತಾವು ಅತಿಯಾಗಿ ಪ್ರೀತಿಸುತ್ತಿದ್ದ ಅಣ್ಣನನ್ನು ಕಳೆದುಕೊಂಡಿದ್ದರು. ಅಷ್ಟೇ ಅಲ್ಲದೆ ಕಳೆದ ತಿಂಗಳಿನಲ್ಲಿ ತಮ್ಮ ಪ್ರೀತಿಯ ಅಜ್ಜಿಯನ್ನು ಕಳೆದುಕೊಂಡಿದ್ದರು ಎರಡು ವರ್ಷದಲ್ಲಿ ಎರಡು ಸಾ.ವ.ನ್ನು ಕಂಡಿದ್ದಂತಹ ಕುಟುಂಬದಲ್ಲಿ ಇದೀಗ ಸಂತಸದ ವಾತಾವರಣ ಮನೆ ಮಾಡಿದೆ. ಇನ್ನು ಮುಂದೆಯಾದರೂ ಈ ದಂಪತಿಗಳು ಸುಖಕರವಾದ ಜೀವನವನ್ನು ನಡೆಸಲು ಮಗುವಿನ ಆರೋಗ್ಯ ಚೆನ್ನಾಗಿರಲಿ ಎಂದು ನೆಟ್ಟಿಗರು ಆಶಯ ಪಟ್ಟಿದ್ದಾರೆ.

ಪ್ರೇರಣ ಮತ್ತು ಧ್ರುವ ಸರ್ಜಾ ಅವರು ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ಪ್ರೇರಣಾ ಅವರು ಖಾಸಗಿ ಕಾಲೇಜಿನಲ್ಲಿ ಲೆಕ್ಚರರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕೆಲವು ದಿನಗಳಿಂದ ಈ ಕೆಲಸಕ್ಕೆ ಹೋಗದೆ ತಮ್ಮ ಮಗುವಿನ ಪೋಷಣೆಗೆ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಸದ್ಯಕಂತು ಇದೀಗ ಸರ್ಜಾ ಅವರ ಕುಟುಂಬದಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮಾಡಿ ನೀವು ಕೂಡ ಧ್ರುವ ಸರ್ಜಾ ಅವರಿಗೆ ಶುಭಾಶಯ ತಿಳಿಸುವುದಾದರೆ ತಪ್ಪದೆ ಕಾಮೆಂಟ್ ಮಾಡಿ