ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಕಳೆದ ತಿಂಗಳಷ್ಟೇ ತಾವು ತಂದೆಯಾಗುತ್ತಿರುವಂತಹ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡುವುದರ ಮೂಲಕ ತಿಳಿಸಿದ್ದರೂ. ಈ ವಿಡಿಯೋ ಹೊರ ಬರುತ್ತಿದ್ದ ಹಾಗೆ ಸಾಕಷ್ಟು ಅಭಿಮಾನಿಗಳು ಹಾಗೂ ಸಿನಿಮಾರಂಗಕ್ಕೆ ಸೇರಿದಂತವರು ಸ್ನೇಹಿತರು ಬಂಧು ಬಳಗದವರು ಎಲ್ಲರೂ ಕೂಡ ಪ್ರೇರಣಾ ಮತ್ತು ಧ್ರುವ ಸರ್ಜಾ ಜೋಡಿಗೆ ಶುಭವನ್ನು ಕೋರಿದ್ದರು. ವಿಶೇಷ ಏನೆಂದರೆ ಧ್ರುವ ಸರ್ಜಾ ಅವರು ತಮ್ಮ ಪತ್ನಿ ಗರ್ಭಿಣಿ ಆಗಿರುವಂತಹ ವಿಚಾರವನ್ನು ಇಲಿಯವರೆಗೂ ಎಲ್ಲಿಯೂ ಕೂಡ ರಿವೀಲ್ ಮಾಡಿರಲಿಲ್ಲ. ಆದರೆ ವಿಶೇಷವಾದ ಫೋಟೋ ಶೂಟ್ ಮಾಡಿಸುವುದರ ಮೂಲಕ ಈ ವಿಚಾರವನ್ನು ಹೊರ ಹಾಕಿದರು ಕೆಲವರು ಅಭಿಮಾನಿಗಳು ಇಷ್ಟು ತಡವಾಗಿ ನೀವು ವಿಷಯವನ್ನು ಹೇಳಿದ್ದೀರಿ ಎಂದು ಬೇಸರವನ್ನು ಕೂಡ ವ್ಯಕ್ತಪಡಿಸಿದ್ದರು.
ಆದರೆ ಧ್ರುವ ಸರ್ಜಾ ಅವರ ಅಜ್ಜಿ ಲಕ್ಷ್ಮೀದೇವಿಯವರು ವಿ.ಧಿ.ವ.ಶ.ರಾದ ಕಾರಣ ಈ ವಿಚಾರವನ್ನು ಅವರು ರಿವೀಲ್ ಮಾಡಿರಲಿಲ್ಲ. ಈಗ ಎಲ್ಲಾ ದುಃಖವನ್ನು ಮರೆತ ನಂತರ ಪ್ರೇರಣಾ ಅವರು ತಾಯಿಯಾಗುತ್ತಿರುವಂತಹ ವಿಚಾರವನ್ನು ಹೊರ ಹಾಕಿದರು ಕಳೆದ ಎರಡು ವಾರಗಳ ಹಿಂದೆ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಅವರ ಸೀಮಂತ ಶಾಸ್ತ್ರವನ್ನು ಕೂಡ ಅದ್ದೂರಿಯಾಗಿ ಮಾಡಲಾಯಿತು. ಕೆಲವು ಮೂಲಗಳ ಪ್ರಕಾರ ಸೆಪ್ಟೆಂಬರ್ ಕೊನೆಯ ವಾರದಂದು ಪ್ರೇರಣ ಅವರ ಮಗುವಿಗೆ ಜನ್ಮ ನೀಡುತ್ತಾರೆ ಎಂದು ಹೇಳುತ್ತಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಫೋಟೋಶೂಟ್ನಲ್ಲಿಯೂ ಕೂಡ ಅರೈವಿಂಗ್ ಸೆಪ್ಟೆಂಬರ್ ಎಂಬ ಲೈನ್ ಗಳನ್ನು ಕೂಡ ಸ್ವತಹ ಧ್ರುವ ಸರ್ಜಾ ಅವರೇ ಬರೆದು ಕೊಂಡಿದ್ದರು. ಅಭಿಮಾನಿಗಳು ಸೆಪ್ಟಂಬರ್ ತಿಂಗಳಿನಲ್ಲಿ ಧ್ರುವ ಸರ್ಜಾ ಅವರು ಮುದ್ದಾದ ಮಗುವಿನ ತಂದೆಯಾಗಲಿದ್ದಾರೆ ಅಂತ ಅಂದುಕೊಂಡಿದ್ದರು ಆದರೆ ಸೆಪ್ಟೆಂಬರ್ ನಲ್ಲಿ ಯಾವುದೇ ಶುಭ ಸುದ್ದಿ ಕೇಳಿ ಬರಲಿಲ್ಲ.
ಆದರೆ ನೆನ್ನೆ ಸಂಜೆ ಕೆಆರ್ ರೋಡ್‌ನಲ್ಲಿರುವ ಅಕ್ಷ ಆಸ್ಪತ್ರೆಗೆ ಪ್ರೇರಣಾ ದಾಖಲಾಗಿದ್ದರು ಇಂದು ಬೆಳಗ್ಗೆ 8.30ಕ್ಕೆ ಆಪರೇಷನ್ ಥಿಯೇಟರ್ ಪ್ರವೇಶಿಸಿದ್ದಾರೆ. ಈಗ ಪ್ರೇರಣ ಅವರು ಮುದ್ದಾದ ಹೆಣ್ಣು ಮಗು ಒಂದಕ್ಕೆ ಜನ್ಮವನ್ನು ನೀಡಿದ್ದಾರೆ ಗಾಂಧಿ ಜಯಂತಿಯ ದಿನದಂದು ಮಗು ಹುಟ್ಟಿರುವುದು ನಿಜಕ್ಕೂ ವಿಶೇಷ ಅಂತಾನೆ ಹೇಳಬಹುದು. ಅಷ್ಟೇ ಅಲ್ಲದೆ ಇದೀಗ ನವರಾತ್ರಿಯ ಸಂಭ್ರಮ ನವರಾತ್ರಿಯ 9 ದಿನದಂದು ಕೂಡ ವಿಶೇಷವಾದಂತಹ ದಿನಾ ಆಗಿರುತ್ತದೆ ಹಾಗಾಗಿ ನವರಾತ್ರಿಯ ಸಂಭ್ರಮದಲ್ಲಿ ಹುಟ್ಟಿದಂತಹ ಮಗು ಬಹಳಷ್ಟು ಅದೃಷ್ಟವನ್ನು ಪಡೆದುಕೊಂಡು ಹುಟ್ಟಿದೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಧ್ರುವ ಸರ್ಜಾ ಅವರು ಆಸ್ಪತ್ರೆಯ ಮುಂದೆ ಓಡಾಡುತ್ತಿರುವಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಈ ವಿಚಾರ ಹೊರ ಬರುತ್ತಿದ್ದ ಹಾಗೆ ಸಾಕಷ್ಟು ಅಭಿಮಾನಿಗಳು ಧ್ರುವ ಸರ್ಜಾ ಪ್ರೇರಣಾ ಅವರಿಗೆ ಶುಭಾಶಯಗಳು ಕೋರಿದ್ದಾರೆ ಅಷ್ಟೇ ಅಲ್ಲದೆ ಹೆಣ್ಣು ಮಗುವಿಗೂ ಕೂಡ ಆಯಸ್ಸು ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸಿದ್ದಾರೆ.
ಕಳೆದ ತಿಂಗಳಷ್ಟೇ ಧ್ರುವ ಸರ್ಜಾ ಅವರು ಖಾಸಗಿ ಚಾನೆಲ್ ಒಂದರ ಸಂದರ್ಶನದಲ್ಲಿ ಪಾಲ್ಗೊಂಡ ಸಮಯದಲ್ಲಿ ನಿಮಗೆ ಯಾವ ಮಗು ಬೇಕು ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಆ ಸಮಯದಲ್ಲಿ ಧ್ರುವ ಸರ್ಜಾ ಅವರು ಯಾವ ಮಗುವಾದರೂ ಸರಿಯೇ ಅಂತ ಹೇಳಿದ್ದರು ಆದರೆ ನಮ್ಮ ಮನೆಯಲ್ಲಿ ಈಗಾಗಲೇ ಅಣ್ಣನ ಮಗ ಇದ್ದಾನೆ ಹಾಗಾಗಿ ನನಗೆ ಹೆಣ್ಣು ಮಗು ಬೇಕು. ಹೆಣ್ಣು ಮಕ್ಕಳು ಅಂದರೆ ನನಗೆ ಬಹಳನೇ ಇಷ್ಟ ಅಣ್ಣನ ಮಗನೇ ನನ್ನ ಸ್ವಂತ ಮಗ ಇದ್ದಹಾಗೆ ಹಾಗಾಗಿ ಹೆಣ್ಣು ಮಗುವಿಗೆ ನಾನು ಹೆಚ್ಚು ಹೊತ್ತನ್ನು ನೀಡುತ್ತೇನೆ ಹಾಗಾಗಿ ನನಗೆ ಹೆಣ್ಣು ಮಗುವೇ ಆಗಲಿ ಎಂದು ಬಯಸುತ್ತೇನೆ ಎಂದು ಹೇಳಿಕೊಂಡಿದ್ದರು. ಇದೀಗ ದ್ರುವ ಸರ್ಜಾ ಅವರ ಆಸೆಯಂತೆ ಮುದ್ದಾದ ಹೆಣ್ಣು ಮಗು ಕೂಡ ಜನಿಸಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ ಹಾಗೂ ಧ್ರುವ ಸರ್ಜಾ ಅವರಿಗೆ ಶುಭಾಶಯಗಳು ತಿಳಿಸಿ