Home Entertainment ಹನುಮ ಜಯಂತಿ ಪ್ರಯುಕ್ತ ಮೊದಲ ಬಾರಿಗೆ ತಮ್ಮ ಮುದ್ದು ಮಗುವಿನ ವಿಡಿಯೋ ಹಂಚಿಕೊಂಡ ನಟ ಧ್ರುವ ಸರ್ಜಾ ದಂಪತಿ. ಈ ವಿಡಿಯೋ ನೋಡಿ ಎಷ್ಟು ಕ್ಯೂಟ್ ಆಗಿದೆ.

ಹನುಮ ಜಯಂತಿ ಪ್ರಯುಕ್ತ ಮೊದಲ ಬಾರಿಗೆ ತಮ್ಮ ಮುದ್ದು ಮಗುವಿನ ವಿಡಿಯೋ ಹಂಚಿಕೊಂಡ ನಟ ಧ್ರುವ ಸರ್ಜಾ ದಂಪತಿ. ಈ ವಿಡಿಯೋ ನೋಡಿ ಎಷ್ಟು ಕ್ಯೂಟ್ ಆಗಿದೆ.

0
ಹನುಮ ಜಯಂತಿ ಪ್ರಯುಕ್ತ ಮೊದಲ ಬಾರಿಗೆ ತಮ್ಮ ಮುದ್ದು ಮಗುವಿನ ವಿಡಿಯೋ ಹಂಚಿಕೊಂಡ ನಟ ಧ್ರುವ ಸರ್ಜಾ ದಂಪತಿ. ಈ ವಿಡಿಯೋ ನೋಡಿ ಎಷ್ಟು ಕ್ಯೂಟ್ ಆಗಿದೆ.

 

ನಟ ಧ್ರುವ ಸರ್ಜಾ ಮಾತ್ರ ಅಲ್ಲದೇ ಸರ್ಜಾ ಕುಟುಂಬದ ಎಲ್ಲರೂ ಕೂಡ ಹನುಮಾನ್ ದೇವರ ಭಕ್ತರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ಕುಟುಂಬಕ್ಕೆ ಮಾರುತಿ ದೇವರ ಮೇಲೆ ಭಕ್ತಿ ಎಷ್ಟಿದೆ ಅಂದರೆ ಅರ್ಜುನ್ ಸರ್ಜಾ ಅವರು ತಮಿಳುನಾಡಿನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಆಂಜನೇಯ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಚಿರಂಜೀವಿ ಸರ್ಜಾ ಅವರು ಸಹ ವಾಯುಪುತ್ರ ಎನ್ನುವ ಸಿನಿಮಾದಿಂದ ಆಂಜನೇಯನ ಹೆಸರಿನಲ್ಲಿಯೇ ಲಾಂಚ್ ಆದರು.

ಧ್ರುವ ಸರ್ಜಾ ಅವರ ಸಿನಿಮಾದ ಡೈಲಾಗ್ ಅಲ್ಲಿ ಆಗಲಿ, ಹಾಡಿನಲ್ಲಿ ಆಗಲಿ ಆಂಜನೇಯ ಬರದೇ ಇರುವುದಿಲ್ಲ. ಅರ್ಜುನ್ ಸರ್ಜಾ ಅವರು ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದ ಪ್ರೇಮ ಬರಹ ಎನ್ನುವ ಚಿತ್ರದ ಹಾಡೊಂದರಲ್ಲಿ ಅತಿಥಿಯಾಗಿ ಕಾಣಿಸಿಕೊಂಡ ದರ್ಶನ್ ಅವರ ಜೊತೆ ಸರ್ಜಾ ಕುಟುಂಬದ ಎಲ್ಲರೂ ಸಹ ಕೇಸರಿ ನಂದನನ ಹೆಸರಿನಲ್ಲಿ ಹಾಡಿ ಕುಣಿದಿದ್ದರು.

ಹೀಗೆ ಆಂಜನೇಯನನ್ನು ಬಹಳ ಆರಾಧಿಸುವ ಈ ಕುಟುಂಬದವರು ಹನುಮಾ ಜಯಂತಿ ಪ್ರಯುಕ್ತ ಮತ್ತೊಂದು ವಿಶೇಷ ಕಾರ್ಯ ಮಾಡಿದ್ದಾರೆ. ಅದೇನೆಂದರೆ ಕಳೆದ ವರ್ಷ ಅಕ್ಟೋಬರ್ 2ರಂದು ಧ್ರುವ ಸರ್ಜಾ ಮತ್ತು ಪ್ರೇರಣ ಶಂಕರ್ ದಂಪತಿಗೆ ಹೆಣ್ಣು ಮಗುವಿನ ಜನನ ಆಗಿತ್ತು. ಧ್ರುವ ಸರ್ಜಾ ಅವರು ಆಸೆ ಪಟ್ಟಂತೆ ಬಜರಂಗಬಲಿ ಕೃಪೆಯಿಂದ ಅವರಿಗೆ ಹೆಣ್ಣು ಮಗುವೇ ಆಗಿ ಅವರ ಸಂತೋಷಕ್ಕೆ ಪಾರ ಇರದಂತೆ ಆಗಿತ್ತು.

ಈವರೆಗೂ ಸರ್ಜಾ ಕುಟುಂಬದ ಎಲ್ಲಾ ಕಾರ್ಯಕ್ರಮಗಳನ್ನು ಕೂಡ ಅದ್ದೂರಿಯಾಗಿ ಆಚರಿಸಿದ್ದರೂ ಮಗು ಹುಟ್ಟಿದಾಗಲಿಂದ ಮಗು ಫೋಟೋ ಮಾತ್ರ ರಿವೀಲ್ ಮಾಡಿರಲಿಲ್ಲ. ಆದರೆ ಪತ್ನಿ ಪ್ರೇರಣ ಶಂಕರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಮಗು ಮುಖ ತೋರದೆ ಮಗುವಿನ ಫೋಟೋ ಹಂಚಿಕೊಳ್ಳುತ್ತಿದ್ದರು. ಈಗ ಹನುಮ ಜಯಂತಿ ಪ್ರಯುಕ್ತ ಮುದ್ದು ಮಗುವಿನ ಫೋಟೋ ರಿವೀಲ್ ಆಗಿದೆ.

ಹನುಮ ಜಯಂತಿಯಲ್ಲಿ ಮಗುವಿಗೆ ಹನುಮಾನ್ ಗೆಟಪ್ ಹಾಕಿಸಿ ದಂಪತಿಗಳು ಫೋಟೋ ಶೂಟ್ ಮಾಡಿಸಿದ್ದಾರೆ. ಇದರೊಂದಿಗೆ ಮಗುವಿನ ಹಳೆಯ ಫೋಟೋ ಶೂಟ್ ಸೇರಿದಂತೆ ಹಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗಿದೆ. ಧ್ರುವ ಸರ್ಜಾ ಆಗಲಿ ಅಥವಾ ಪ್ರೇರಣ ಅವರಾಗಲಿ ಇವುಗಳನ್ನು ಶೇರ್ ಮಾಡಿಕೊಂಡಿಲ್ಲ.

ಬದಲಿಗೆ ಸರ್ಜಾ ಕುಟುಂಬಕ್ಕೆ ಆಪ್ತರಾಗಿರುವ ಸಂಬಂಧಿಕರು ಆಗಿರುವ ಕನ್ನಡದ ರಾಮಚಾರಿ2.0 ಹೀರೋ ಆದ ತೇಜ್ ಅವರು ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ವೇಟಿಂಗ್ ಫಾರ್ ನೇಮಿಂಗ್ ಸೆರೆಮನಿ ಎಂದು ಬರೆದುಕೊಂಡಿದ್ದಾರೆ. ತೇಜ್ ಅವರು ದಿವಂಗತ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾರಾಜ್ ಅವರ ಸಹೋದರ. ಈ ಫೋಟೋಗಳು ಶೇರ್ ಆಗಿರುವುದರಿಂದ ಧ್ರುವ ಸರ್ಜಾ ಅಭಿಮಾನಿಗಳು ಬಹಳ ಖುಷಿ ಆಗಿದ್ದಾರೆ. ಹಾಗೆಯೇ ಮಗುವಿಗೆ ಶುಭ ಹಾರೈಸುತ್ತಿದ್ದಾರೆ.

ಸದ್ಯಕ್ಕೆ ಧ್ರುವ ಸರ್ಜಾ ಅವರು KD ಚಿತ್ರದ ಕೆಲಸಗಳಲ್ಲಿ ಬಹಳ ಬಿಸಿಯಾಗಿದ್ದಾರೆ ಜೊತೆಗೆ ಸಂಸಾರದ ಜವಾಬ್ದಾರಿಯನ್ನು ಕೂಡ ಮೆರೆಯಬೇಕಾಗಿದೆ. ಮುದ್ದು ಮಗಳ ಅದ್ದೂರಿ ನಾಮಕರಣ ಹಾಗೂ ಒಂದೊಳ್ಳೆ ಹೆಸರು ಸೆಲೆಕ್ಟ್ ಮಾಡುವ ಹೊಣೆ ಅವರ ಹೆಗಲಿಗಿದೆ. ನೀವು ಸಹ ನಿಮ್ಮ ನೆಚ್ಚಿನ ಈ ನಟನ ಮುದ್ದು ಮಗುವಿಗೆ ಹೆಸರು ಸೂಚಿಸಬಹುದು. ನಿಮ್ಮ ಪ್ರಕಾರ ಅಂಜನಿಪುತ್ರ ನ ಆರಾಧಕರಾದ ಈ ಕುಟುಂಬದ ಕುಡಿಯ ಮಗುವಿಗೆ ಯಾವ ಹೆಸರಿನಿಂದ ಕರೆದರೆ ಚೆನ್ನಾಗಿರುತ್ತದೆ ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಿ.

LEAVE A REPLY

Please enter your comment!
Please enter your name here