ಡಾಕ್ಟರ್ ರಾಜ್ (Dr.Raj) ಹಾಗೂ ಲೀಲಾವತಿ (Leelavathi) ಅವರ ನಡುವಿನ ಸಂಬಂಧದ ಸತ್ಯಾಂಶ ಬಿಚ್ಚಿಟ್ಟ ಡಿಂಗ್ರಿ ನಾಗರಾಜ್ (Dingri Nagaraj) ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರು ಇದುವರೆಗೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ತಮ್ಮ ವಿಭಿನ್ನ ಬಗೆಯ ಹಾಸ್ಯ ಹಾವಭಾವಗಳಿಂದ ಕನ್ನಡಿಗರನ್ನು ಮನೋರಂಜಸಿದ್ದಾರೆ. ಡಿಂಗ್ರಿ ನಾಗರಾಜ್ ಅವರು ಡಾಕ್ಟರ್ ರಾಜ್ ಅವರ ಸಮಕಾಲೀನರು ಎನ್ನಬಹುದು.
ಯಾಕೆಂದರೆ ಅವರ ಜೊತೆ ಕೆಲಸ ಮಾಡಿದ್ದಾರೆ ಮತ್ತು ಆ ಸಮಯದಲ್ಲಿ ಸ್ಟಾರ್ ಹೀರೋ ಅಥವಾ ಕಾಮಿಡಿ ಹೀರೋ ಅಥವಾ ಸಹಕಲಾವಿದರು ಎನ್ನುವ ಯಾವ ಭೇದಭಾವ ಕೂಡ ಇರುತ್ತಿಲ್ಲದ ಕಾರಣ ಎಲ್ಲರೂ ಸಹ ಒಂದೇ ತಂಡದಲ್ಲಿ ಕೆಲಸಗಾರರು ಎನ್ನುವ ಭಾವನೆಯಿಂದ ಇರುತ್ತಿದ್ದರಿಂದ ಎಲ್ಲರ ಜೊತೆ ಉತ್ತಮ ಸ್ನೇಹ ಬಾಂಧವ್ಯ ಇತ್ತು ಹೀಗಾಗಿ ಡಿಂಗ್ರಿ ನಾಗರಾಜ್ ಅವರು ಕೂಡ ಒಬ್ಬರು ರಾಜಕುಮಾರ್ ಅವರಿಗೆ ಹತ್ತಿರದವರಲ್ಲಿ ಒಬ್ಬರು.
ಡಾಕ್ಟರ್ ರಾಜಕುಮಾರ್ ಅವರು ಎಂತಹ ಶುದ್ಧ ವ್ಯಕ್ತಿತ್ವ ಹೊಂದಿದ್ದ ಮೇರು ನಟ ಅವರ ಘನತೆ ಎಂತದ್ದು ಎಂದು ಕರ್ನಾಟಕದಲ್ಲಿ ಈಗ ಕಣ್ ಬಿಟ್ಟಿರುವ ಮಗುವಿಗೂ ಕೂಡ ಗೊತ್ತು. ಅಷ್ಟರ ಮಟ್ಟಿಗೆ ಹೆಸರು ಉಳಿಸಿಕೊಂಡಿರುವ ರಾಜಕುಮಾರ್ ಅವರ ಜೀವನದ ಒಂದೇ ಒಂದು ಕಪ್ಪು ಚುಕ್ಕೆ ಎಂದರೆ ಅದು ಲೀಲಾವತಿ ಅವರ ಜೊತೆಗಿನ ಸಂಬಂಧದ ಕುರಿತ ವಿವಾದ. ಇಷ್ಟು ವರ್ಷದ ತನಕ ಸಾಕಷ್ಟು ಬಾರಿ ಈ ವಿಷಯ ಚರ್ಚೆ ಆಗಿದ್ದರು ಕೂಡ ಯಾರು ಎಲ್ಲೂ ಇದರ ನಿಜ ಅಂಶ ಏನು ಎನ್ನುವುದನ್ನು ಹೇಳುತ್ತಿರಲಿಲ್ಲ.
ಯಾಕೆಂದರೆ ಈಗಿನ ಕಾಲದಲ್ಲಿ ಜನರ ರೀತಿ ಆ ಕಾಲದಲ್ಲಿ ಬೇರೆ ಕಲಾವಿದರ ವೈಯುಕ್ತಿಕ ವಿಚಾರವನ್ನು ಅದರಲ್ಲೂ ಸ್ಟಾರ್ ನಟರ ವಿಚಾರವನ್ನು ಅಷ್ಟು ಈಝಿಯಾಗಿ ಎಲ್ಲೂ ಯಾರು ಬಾಯಿ ಬಿಡುತ್ತಿರಲಿಲ್ಲ. ಗೊತ್ತಿದ್ದರೂ ಕೂಡ ಏನು ಗೊತ್ತಿಲ್ಲದ ರೀತಿಯೇ ಇದ್ದುಬಿಡುತ್ತಿದ್ದರು. ಹಾಗಾಗಿ ಎಷ್ಟೋ ನಟರ ತಪ್ಪುಗಳು ಮುಚ್ಚಿ ಹೋಗುತ್ತಿತ್ತು. ಡಾಕ್ಟರ್ ರಾಜಕುಮಾರ್ ಅವರು ಇದ್ದ ದಿನದಿಂದಲೂ ಕೂಡ ಈ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದ್ದರು ರಾಜಕುಮಾರ್ ಅವರೇ ಆಗಲಿ ಪಾರ್ವತಮ್ಮ (Parvathamma) ನವರೇ ಆಗಲಿ ಅಥವಾ ಲೀಲಾವತಿ ಆಗಲೇ ಆಗಲಿ ರಾಜ್ ಕುಮಾರ ಮಕ್ಕಳಾಗಲಿ ಎಂದು ಸಹ ಈ ಟಾಪಿಕ್ ಬಗ್ಗೆ ಮಾತನಾಡಿಲ್ಲ.
ಸಾಕಷ್ಟು ಲೇಖಕರು ಪತ್ರಕರ್ತರು ತಮಗೆ ಇಷ್ಟ ಬಂದ ರೀತಿ ಬರೆದುಕೊಳ್ಳುತ್ತಾ ಇದ್ದರೂ ಸಹ ಅದನ್ನು ತಡೆಯಲೂ ಇಲ್ಲ. ಅಕ್ಷಯ ಪ್ರೇಮಿ ರವಿ ಬೆಳಗೆರೆ (Ravi Belagere) ಅವರು ರಾಜ್ ಲೀಲಾ ವಿನೋದ (Raj Leela Vinoda) ಎನ್ನುವ ಪುಸ್ತಕವನ್ನು ಸಹ ಬರೆದು ಅದರಲ್ಲಿ ಲೀಲಾವತಿ ಹೇಳಿದ್ದೇನೆ ಬರೆದಿದ್ದೇವೆ ಎನ್ನುವ ರೀತಿ ಬಿಂಬಿಸಿ ಬಿಡುಗಡೆಯನ್ನು ಮಾಡಿದ್ದರು ಅದರಲ್ಲಿ ಏನೋ ವಿಷಯ ಇದೆ ಎನ್ನುವ ಆಸಕ್ತಿಯಿಂದ ಎಷ್ಟೋ ಜನ ಖರೀದಿಸಿದ್ದಾದರೂ ಅದೊಂದು ಮಾರ್ಕೆಟಿಂಗ್ ಸ್ಟಾರ್ಟರ್ಜಿ ಆಗಿತ್ತು ಅಷ್ಟೇ.
ಈ ವಿಷಯದ ಬಗ್ಗೆ ಸತ್ಯಾಂಶ ತಿಳಿಯಬೇಕು ಎಂದರೆ ಆ ದಿನಗಳಲ್ಲಿ ರಾಜಕುಮಾರ್ ಅವರ ಜೊತೆ ಇದ್ದವರನ್ನು ಕೇಳಬೇಕು. ಈಗ ಇಷ್ಟು ವರ್ಷದ ಬಳಿಕ ಡಿಗ್ರಿ ನಾಗರಾಜ್ ಅವರು ಈ ವಿಷಯದ ಕುರಿತು ಮಾತನಾಡಿದ್ದು ಅವರಿಗೆ ಗೊತ್ತಿರುವ ವಿಷಯವನ್ನು ಹೇಳಿದ್ದಾರೆ. ನಾವು ಕಂಡಂತೆ ಲೀಲಾವತಿ ಅವರಿಗೆ ಭಾಗವತ(Bhagavatha) ಅವರ ಜೊತೆಗೆ ಸ್ನೇಹವಿತ್ತು ಆ ದಿನಗಳಲ್ಲಿ ರಾಜ್ ಕುಮಾರ್ ಮತ್ತು ಲೀಲಾ ಅವರ ಮಧ್ಯೆ ಏನಾದರೂ ಬಾಂಧವ್ಯ ಇದಿಯಾ ಎನ್ನುವ ಅನುಮಾನ ಕೂಡ ನಮ್ಮಲ್ಲಿ ಬರಲಿಲ್ಲ ಆ ರೀತಿ ಅವರು ಸುಳಿವು ಸಹ ಕೊಟ್ಟಿರಲಿಲ್ಲ ಇದಷ್ಟೇ ನನಗೆ ಗೊತ್ತಿರುವುದು ಎಂದು ತಮಗೆ ತಿಳಿದಿರುವ ಸತ್ಯವನ್ನು ಹೇಳಿದ್ದಾರೆ.