ನಾವೆಲ್ಲರೂ ಕೂಡ ಅಡುಗೆ ಮನೆಯಲ್ಲಿ ಕೆಲವೊಂದು ಆಹಾರ ಪದಾರ್ಥಗಳನ್ನು ಆಚೆ ಇಡುತ್ತೇವೆ. ಹಾಗೆಂದ ಮಾತ್ರಕ್ಕೆ ಎಲ್ಲಾ ಆಹಾರ ಪದಾರ್ಥಗಳಿಗೂ ಕೂಡ ಸೊಳ್ಳೆ ಅಥವಾ ಗುಂಗರು ಬರುವುದಿಲ್ಲ ಯಾವ ಆಹಾರ ಪದಾರ್ಥ ಹೊರಗಡೆ ತೆರೆದಂತೆ ಇರುತ್ತದೆಯೋ ಅಂತಹ ಪದಾರ್ಥಗಳ ಮೇಲೆ ಚಿಕ್ಕ ಸೊಳ್ಳೆ ಅಥವಾ ಗುಂಗುರು ಕೂರುತ್ತದೆ.
ಇದರಿಂದ ಆಹಾರ ಪದಾರ್ಥ ಹಾಳಾಗುತ್ತದೆ ಆನಂತರ ಮತ್ತೆ ನಾವು ಆಹಾರ ಪದಾರ್ಥವನ್ನು ಉಪಯೋಗಿಸಲು ಸಾಧ್ಯವಿಲ್ಲ ಆದ್ದರಿಂದ ಯಾರು ಕೂಡ ಇಂತಹ ವಿಧಾನವನ್ನು ಅನುಸರಿಸಬೇಡಿ ಯಾವುದೇ ಆಹಾರ ಪದಾರ್ಥವನ್ನು ಸಹ ಆಚೆ ಇಡದೆ ಒಂದು ಬಾಕ್ಸ್ ಅಥವಾ ಬಟ್ಟೆಯನ್ನು ಮುಚ್ಚಿ ಇಡುವುದು ಸೂಕ್ತ.
ನೀವೇನಾದರೂ ಈ ರೀತಿ ಇಟ್ಟಿಲ್ಲ ಎಂದರೆ ನೀವು ಆ ಆಹಾರವನ್ನು ಸೇವನೆ ಮಾಡಿದರೆ ನಿಮಗೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಆದ್ದರಿಂದ ಯಾವುದೇ ಆಹಾರ ಪದಾರ್ಥವನ್ನು ಸರಿಯಾದ ಸ್ಥಳದಲ್ಲಿ ಸರಿಯಾದ ರೀತಿಯಲ್ಲಿ ಮುಚ್ಚಿಟ್ಟು ಆನಂತರ ತಿನ್ನುವುದು ಉತ್ತಮ. ಅದರಲ್ಲೂ ಮಕ್ಕಳಿಗೆ ಆಹಾರವನ್ನು ಕೊಡುವ ಸಂದರ್ಭದಲ್ಲಿ ಇಂತಹ ಎಲ್ಲ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.
ಸಾಮಾನ್ಯವಾಗಿ ಮನೆಯಲ್ಲಿರುವಂತಹ ಮಹಿಳೆಯರಿಗೆ ತಿಳಿದಿರುವಂತೆ ಪಾತ್ರೆಯನ್ನು ತೊಳೆಯುವಂತಹ ಸಿಂಕ್ ಭಾಗದಲ್ಲಿ ಹಾಗೂ ಟೊಮೆಟೊ ಬಾಳೆಹಣ್ಣು ಇಡುವಂತಹ ಸ್ಥಳಗಳಲ್ಲಿ ಇಂತಹ ಗುಂಗುರು ಅಥವಾ ಸೊಳ್ಳೆ ಇರುವುದು ಸರ್ವೇಸಾಮಾನ್ಯ. ಏಕೆಂದರೆ ಈ ಸ್ಥಳದಲ್ಲಿ ಆಹಾರ ಪದಾರ್ಥ ಯಾವಾಗಲೂ ಇರುತ್ತದೆ ಆದ್ದರಿಂದ ಅಂತಹ ಸ್ಥಳಗಳಿಗೆ ಇವು ಬರುವುದು ಹೆಚ್ಚು.
ಹಾಗಾಗಿ ಅಂತಹ ಒಂದು ಸ್ಥಳಕ್ಕೆ ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸಿ ಮಾಡಿ ಅಲ್ಲಿ ಇಟ್ಟರೆ ಸಾಕು ಆ ಒಂದು ಸೊಳ್ಳೆ ಗುಂಗುರು ಎಲ್ಲವೂ ಸಹ ನಾಶವಾಗುತ್ತದೆ. ಹಾಗಾದಈ ಯಾವ ವಿಧಾನ ಅನುಸರಿಸುವುದರಿಂದ ಯಾವ ಕೆಲವು ಪದಾರ್ಥಗಳನ್ನು ಉಪಯೋಗಿಸಿ ಇವುಗಳನ್ನು ನಾಶ ಮಾಡಬಹುದು ಎಂದು ಈ ಕೆಳಗೆ ತಿಳಿಯೋಣ.
ಮೊದಲು ಈ ಒಂದು ಲಿಕ್ವಿಡ್ ಫಾರ್ಮ್ ಅನ್ನು ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು.
* ಒಂದು ಲೋಟ ನೀರು
* ಒಂದು ಚಮಚ ಸಕ್ಕರೆ
* ಕಾಲು ಚಮಚ ಲಿಕ್ವಿಡ್ ಸೋಪ್
* ಒಂದು ಬಾಳೆಹಣ್ಣು
* ಒಂದು ಟೊಮ್ಯಾಟೋ
ಇಷ್ಟನ್ನು ಸಹ ಒಂದು ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮೇಲೆ ಒಂದು ಕವರ್ ಹಾಕಿ ಬಿಗಿಯಾಗಿ ಕಟ್ಟಬೇಕು ಆನಂತರ ಆ ಕವರ್ ಮೇಲ್ಭಾಗದಲ್ಲಿ ಸಣ್ಣ ಸಣ್ಣದಾಗಿ ತೂತುಗಳನ್ನು ಮಾಡಿ ಇದನ್ನು ನಿಮ್ಮ ಅಡುಗೆ ಮನೆ ಹಾಗೂ ಗುಂಗರು ಇರುವಂತಹ ಸ್ಥಳಕ್ಕೆ ಇಡಬೇಕು. ಈ ರೀತಿ ಇಡುವುದರಿಂದ ಈ ಒಂದು ವಾಸನೆಗೆ ಗುಂಗರು ಅಥವಾ ಸೊಳ್ಳೆ ಅದರ ಒಳಗಡೆ ಹೋಗುತ್ತದೆ ಆನಂತರ ಅದು ಮತ್ತೆ ಹೊರಗಡೆ ಬರಲು ಸಾಧ್ಯವಿಲ್ಲ ಈ ರೀತಿಯಾಗಿ ನಾವು ಇವುಗಳನ್ನು ನಾಶ ಮಾಡಬಹುದು.
ಇಷ್ಟೆಲ್ಲಾ ಪದಾರ್ಥ ಇಲ್ಲ ಎನ್ನುವವರು ಒಂದು ಪ್ಲಾಸ್ಟಿಕ್ ಲೋಟಕ್ಕೆ ನೀರನ್ನು ಹಾಕಿ ಎರಡರಿಂದ ಮೂರು ಹನಿ ಆಪಲ್ ಸೈಡರ್ ವಿನಿಗರ್ ಹಾಕಿ ಮಿಶ್ರಣ ಮಾಡಿ ಇದೇ ವಿಧಾನವನ್ನು ಅನುಸರಿಸಿ ಇಟ್ಟರೆ ಸಾಕು ಇದರಿಂದಲೂ ಸಹ ನೀವು ಸೊಳ್ಳೆ ಅಥವಾ ಗುಂಗರನ್ನು ನಾಶ ಮಾಡಬಹುದು. ಈ ರೀತಿ ಮಾಡುವುದರಿಂದ ನಿಮ್ಮ ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬಹುದು ಹಾಗೂ ರೋಗಗಳು ಬಾರದಂತೆ ತಡೆಗಟ್ಟಬಹುದಾಗಿದೆ.