ಈಗಿನ ಕಾಲದಲ್ಲಿ ಹಣಕ್ಕೆ ಬೆಲೆ ಹೆಚ್ಚು ಹಣ ಇಲ್ಲದಿದ್ದರೆ ನಮ್ಮ ಹತ್ತಿರದವರಿಗು ಕೂಡ ನಾವು ಬೇಡವಾಗುತ್ತವೆ. ಇಂದು ಹಣ ಇಲ್ಲದೆ ಇದ್ದರೆ ನಾವು ಏನು ಕೂಡ ಮಾಡಲು ಸಾಧ್ಯವೇ ಇಲ್ಲ ಅದೇ ಕಲಿಗಾಲ. ನಾವು ಈ ಕಲಿಯುಗದಲ್ಲಿ ಬದುಕುತ್ತಿದ್ದೇವೆ ಇಲ್ಲಿ ಬದುಕಬೇಕು ಎಂದರೆ ಪ್ರತಿಯೊಬ್ಬರ ಬಳಿಯೂ ಕೂಡ ಹಣ ಇರಲೇಬೇಕು.
ಇದಕ್ಕಾಗಿಯೇ ನಾವು ಇಷ್ಟು ಕಷ್ಟಪಟ್ಟು ಪ್ರತಿದಿನ ಹೋರಾಟ ಮಾಡುತ್ತಿರುವುದು ಆದರೆ ಕೆಲವರಿಗೆ ಎಷ್ಟೇ ಕಷ್ಟ ಪಟ್ಟರು ಈ ಹಣಕಾಸಿನ ತೊಂದರೆ ಹೋಗುವುದಿಲ್ಲ ಮತ್ತು ಇನ್ನೂ ಕೆಲವರು ದಿಢೀರ್ ಎಂದು ಶ್ರೀಮಂತರಾಗಿ ಬಿಡುತ್ತಾರೆ. ಆಗ ಅವರಿಗೆ ಲಕ್ಷ್ಮಿ ಅನುಗ್ರಹವಾಗಿದೆ, ಅದೃಷ್ಟದ ಬಾಗಿಲು ತೆರೆದಿದೆ ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ ನಿಮಗೂ ಕೂಡ ಈ ರೀತಿ ನಮ್ಮ ಹಣೆಬರಹ ಬದಲಾಗಬೇಕು ಎಂದರೆ ತಾಯಿ ಮಹಾಲಕ್ಷ್ಮಿಯ ಅನುಗ್ರಹ ಆಗಬೇಕು.
ಹಣ ಮತ್ತು ಸಂಪತ್ತನ್ನು ತಾಯಿ ಮಹಾಲಕ್ಷ್ಮಿಗೆ ಹೋಲಿಕೆ ಮಾಡಲಾಗುತ್ತದೆ ಮತ್ತು ಈ ಪ್ರಕೃತಿಯಲ್ಲಿರುವ ಹಲವು ವಸ್ತುಗಳನ್ನು ತಾಯಿ ಲಕ್ಷ್ಮಿಗೆ ಹೋಲಿಸಲಾಗುತ್ತಿದೆ ನಾವು ಕೂಡ ಇಂತಹ ವಸ್ತುಗಳನ್ನು ಪೂಜ್ಯ ಭಾವದಿಂದ ಕಾಣುವುದರಿಂದ ತಾಯಿ ಮಹಾಲಕ್ಷ್ಮಿ ಪ್ರಸನ್ನರಾಗಿ ನಮಗೆ ಆಶೀರ್ವದಿಸುತ್ತಾರೆ.
ಈ ಸುದ್ದಿ ಓದಿ:- ಇನ್ಮುಂದೆ ಬಡವರಿಗೆ 6 ತಿಂಗಳಲ್ಲಿ ನ್ಯಾಯ ಸಿಗುತ್ತೆ, ಸಿವಿಲ್ ಪ್ರೊಸೀಜರ್ ಕೋಡ್ ತಿದ್ದುಪಡಿ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ನಂತರ ನಾವು ನಮ್ಮ ಸಮಸ್ಯೆಗಳಿಂದ ಮುಕ್ತಿ ಕಾಣಬಹುದು ಹಾಗಾದರೆ ಯಾವ ರೀತಿ ದೇವಿ ಅನುಗ್ರಹಕ್ಕೆ ಪಾತ್ರರಾಗಬಹುದು ಎನ್ನುವುದನ್ನು ಪುರಾಣಗಳಲ್ಲಿ ಶಾಸ್ತ್ರಗಳಲ್ಲಿ ಉಪನಿಷತ್ತುಗಳಲ್ಲಿ ತಿಳಿಸಲಾಗಿದೆ ಮತ್ತು ವಿದುರ ಮತ್ತು ಚಾಣಕ್ಯರಂತಹ ನ್ಯಾಯ ತಜ್ಞರು ಆರ್ಥಿಕ ತಜ್ಞರು ಕೂಡ ಇದರ ಬಗ್ಗೆ ಸಲಹೆ ನೀಡಿದ್ದಾರೆ. ವಿದುರ ನೀತಿಯಲ್ಲಿ ಈ ಬಗ್ಗೆ ವಿದುರರು ತಿಳಿಸಿರುವ ಕೆಲ ಸಂಗತಿ ಬಗ್ಗೆ ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ ಇದನ್ನು ಪಾಲಿಸಿ ಧನವಂತರಾಗಿ.
* ನಾವು ಯಾವಾಗಲೂ ಹಣಕಾಸು ಇಡುವ ಪರ್ಸ್ ನಲ್ಲಿ ಚಿಕ್ಕದೊಂದು ತಾಯಿ ಮಹಾಲಕ್ಷ್ಮಿಯ ಫೋಟೋ ಇಟ್ಟುಕೊಳ್ಳಬೇಕು. ಆ ಫೋಟೋದಲ್ಲಿ ಲಕ್ಷ್ಮಿ ದೇವಿಯು ಕುಳಿತಿರುವ ಭಂಗಿಯಲ್ಲಿ ಇರಬೇಕು ಯಾವುದೇ ಕಾರಣಕ್ಕೂ ನಿಂತಿರುವ ದೇವರ ಫೋಟೋವನ್ನು ಇಟ್ಟುಕೊಳ್ಳಬಾರದು ಹೀಗೆ ಲಕ್ಷ್ಮಿಯ ಫೋಟೋವನ್ನು ನಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳುವುದರಿಂದ ಹಣ ನಮ್ಮ ಪರ್ಸನಲ್ಲಿ ಯಾವಾಗಲೂ ಇರುತ್ತದೆ ಎಂದು ಹೇಳಲಾಗುತ್ತದೆ.
* ಕೆಂಪು ಬಣ್ಣದ ಕಾಗದದಲ್ಲಿ ನಮ್ಮ ಹಣಕಾಸಿನ ಗುರಿಗಳನ್ನು ಬರೆದುಕೊಂಡು ಪರ್ಸ್ ನಲ್ಲಿ ಇಟ್ಟುಕೊಳ್ಳುವುದರಿಂದ ಅದು ಶೀಘ್ರವಾಗಿ ನೆರವೇರುತ್ತವೆ ಎಂದು ಹೇಳಲಾಗಿದೆ
* ಸ್ವಲ್ಪ ಅಕ್ಕಿ ಕಾಳುಗಳನ್ನು ಪರ್ಸನಲ್ ಇಟ್ಟುಕೊಳ್ಳುವುದರಿಂದ ಅನವಶ್ಯಕ ಖರ್ಚುಗಳು ತಗುತ್ತವೆ ಎಂದು ಹೇಳಲಾಗುತ್ತದೆ.
ಈ ಸುದ್ದಿ ಓದಿ:- ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಲ್ಲಿ ಉದ್ಯೋಗವಕಾಶ, ಬ್ಯಾಂಕ್ ಸಹಾಯಕರ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ ವೇತನ 87,125/-
* ಬೆಳ್ಳಿ ಮತ್ತು ಚಿನ್ನ ಸಂಪತ್ತನ್ನು ಸೂಚಿಸುವುದರಿಂದ ಬೆಳ್ಳಿ ಹಾಗೂ ಬಂಗಾರದ ನಾಣ್ಯಗಳನ್ನು ಮೊದಲು ದೇವರ ಕೋಣೆಯಲ್ಲಿ ಇಟ್ಟು ಪೂಜಿಸಿ ಮಹಾಲಕ್ಷ್ಮಿಯ ಆಶೀರ್ವಾದದೊಂದಿಗೆ ಅದನ್ನು ತೆಗೆದುಕೊಂಡು ಪರ್ಸ್ ನಲ್ಲಿ ಇಟ್ಟುಕೊಳ್ಳುವುದರಿಂದ ಕೂಡ ಹಣಕಾಸು ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ.
* ರುದ್ರಾಕ್ಷಿಯನ್ನು ಕೂಡ ವಿಧಿ ವಿಧಾನದಿಂದ ಪೂಜಿಸಿ ನಂತರ ಪರ್ಸ್ ನಲ್ಲಿ ಇಟ್ಟುಕೊಳ್ಳುವುದರಿಂದ ಅಥವಾ ಧರಿಸುವುದರಿಂದ ಧರಿದ್ರ ಬಡತನಗಳು ನಿವಾರಣೆಯಾಗುತ್ತದೆ
* ಆಲದ ಮರವು ತ್ರಿಮೂರ್ತಿಗಳ ಆಶೀರ್ವಾದ ಪಡೆದಿರುವ ಮರ ಎಂದು ಹೇಳಲಾಗುತ್ತದೆ, ಇದಕ್ಕೆ ಶಾಸ್ತ್ರಗಳಲ್ಲಿ ಮಹನೀಯವಾದ ಸ್ಥಾನವಿದೆ ಈ ಆಲದ ಮರದ ಎಲೆಗೆ ಹಣವನ್ನು ಆಕರ್ಷಿಸುವ ಶಕ್ತಿಯು ಕೂಡ ಇದೆ.
ಆಲದ ಮರದ ಎಲೆಯನ್ನು ಶುಕ್ರವಾರದಂದು ಮನೆಗೆ ತಂದು ಅರಿಶಿನದ ನೀರಿನಲ್ಲಿ ತೊಳೆದು ನಂತರ ತಾಯಿ ಮಹಾಲಕ್ಷ್ಮಿ ಫೋಟೋ ಮುಂದೆ ಇಟ್ಟು ಪೂಜಿಸಿ ಪರ್ಸನಲ್ ಇಟ್ಟುಕೊಳ್ಳುವುದರಿಂದ ಎಂದೂ ಹಣಕಾಸಿನ ಕೊರತೆ ಬರುವುದಿಲ್ಲ. ಮ್ಯಾಗ್ನೆಟ್ ರೀತಿ ಹಣವನ್ನು ಇದು ಎಳೆದು ತರುತ್ತದೆ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.
ಈ ಸುದ್ದಿ ಓದಿ:- ಬ್ಯಾಂಕ್ ಹರಾಜಿನಲ್ಲಿ ಮನೆ ಕೊಂಡುಕೊಳ್ಳಬಹುದೇ.? ಎಲ್ಲಿ ಪರ್ಚೇಸ್ ಮಾಡುವುದು.? ಹೇಗೆ ಅಪ್ಲೈ ಮಾಡುವುದು.? ಡಿಸ್ಕೌಂಟ್ ಇರುತ್ತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
* ಆದರೆ ನೆನಪಿರಲಿ ಯಾವುದೇ ಕಾರಣಕ್ಕೂ ಈ ಮೇಲೆ ತಿಳಿಸಿದ ವಸ್ತುಗಳನ್ನು ಇಡುವಾಗ ನಿಮ್ಮ ಪರ್ಸನಲ್ ಹರಿದಿರುವ ನೋಟುಗಳನ್ನು ಇಟ್ಟುಕೊಂಡಿರಬಾರದು.