ದೇವರ ಪೂಜೆ ಮಾಡುವಂತಹ ಸಮಯದಲ್ಲಿ ಕೆಲವೊಂದಷ್ಟು ವಿಚಾರ ಗಳನ್ನು ನಾವು ಪಾಲಿಸಲೇ ಬೇಕಾಗುತ್ತದೆ. ಹೌದು ಆ ವಿಚಾರ ಗಳು ದೇವರ ವಿಚಾರಕ್ಕೂ ಕೂಡ ಸಂಬಂಧಿಸಿರುತ್ತದೆ ಎಂದೇ ಹೇಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ದೇವರ ಪೂಜೆ ಮಾಡುವಂತಹ ಸಮಯದಲ್ಲಿ ಕೆಲವೊಂದು ನಿಯಮಗಳನ್ನು ಅಂದರೆ ಪದ್ಧತಿಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.
ಹಾಗೇನಾದರೂ ನೀವು ತಪ್ಪು ಮಾಡಿದ್ದಲ್ಲಿ ಅದರಿಂದ ಹಲವಾರು ಸಂಕಷ್ಟಗಳಿಗೆ ಗುರಿಯಾಗ ಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈಗ ನಾವು ಹೇಳುವಂತಹ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡು ಆ ವಿಚಾರಗಳನ್ನು ದೇವರು ಪೂಜೆ ಮಾಡುವಂತಹ ಸಮಯದಲ್ಲಿ ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.
ಹಾಗಾದರೆ ದೇವರ ಪೂಜೆ ಮಾಡುವಂತಹ ಸಮಯದಲ್ಲಿ ನಾವು ಯಾವ ರೀತಿಯ ತಪ್ಪುಗಳನ್ನು ಮಾಡಬಾರದು. ಹಾಗೇನಾದರೂ ಆ ತಪ್ಪುಗಳನ್ನು ನಾವು ಮಾಡಿದರೆ ಯಾವ ರೀತಿಯ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ ಎನ್ನುವಂತಹ ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.
* ದೇವರ ಪೂಜೆ ಮಾಡುವಾಗ ನೈಟಿ ಡ್ರೆಸ್ ಹಾಕಿಕೊಂಡು ಪೂಜೆ ಮಾಡಬಾರದು ಬದಲಿಗೆ ಸೀರೆಯಲ್ಲಿ ನೆರಿಗೆ ಇರುವ ಅಥವ ಅಂಚು ಇರುವ ಸೇರಿ ಧರಿಸಿ ಪೂಜೆ ಮಾಡುವುದು ತುಂಬಾ ಶ್ರೇಷ್ಠ.
* ಸ್ನಾನ ಮಾಡಿ ಕೂದಲು ಬಿಟ್ಟು ಪೂಜೆ ಮಾಡಬೇಡಿ ನೀಟಾಗಿ ಕೂದಲು ಕಟ್ಟಿ ಪೂಜೇ ಮಾಡುವುದು ಒಳಿತು.
* ಮನೆಯ ದೇವರ ಕೋಣೆಯಲ್ಲಿ ನಿಮಗೆ ಉಡುಗೊರೆಯಾಗಿ ಬಂದ ದೇವರ ವಿಗ್ರಹಗಳನ್ನು ಪೂಜೆ ಮನೆಯಲ್ಲಿ ಇಡದೆ ಮರದ ಹಾಗು ಫೈಬರ್ ಮೂರ್ತಿಗಳನ್ನು ನದಿಗಳಿಗೆ ಬಿಡುವುದು ಒಳ್ಳೆಯದು.
* ಅಷ್ಟೇ ಅಲ್ಲದೆ ದೇವರ ಮನೆಯಲ್ಲಿ ಒಂಟಿ ದೇವರ ವಿಗ್ರಹ ಅಥವಾ 3 ದೇವರ ವಿಗ್ರಹಗಳನ್ನು ಇಡಲೇಬಾರದು
* ಹಾಗೆಯೇ 2 ಶಿವ ಲಿಂಗವನ್ನು ಹಾಗೂ ಇದರ ಜೊತೆಗೆ ಸಾಲಿಗ್ರಾಮ ಮತ್ತು ಸೂರ್ಯನ ವಿಗ್ರಹ ಇಟ್ಟರೆ ಅಪಾಯ ಉಂಟು ಮಾಡುತ್ತದೆ.
* ಕೇವಲ ದೇವರ ವಿಗ್ರಹ ಮಾತ್ರ ಅಲ್ಲ ಎಂದಿಗೂ ದೇವರ ಕೋಣೆ ಯಲ್ಲಿ ಬೆಂಕಿ ಪೊಟ್ಟಣ, ದೇವರ ಬಟ್ಟೆ ಇತರ ವಸ್ತುಗಳನ್ನು ಇಡಬಾರದು ದೇವರ ಮನೆ ಯಾವಾಗಲು ಸ್ವಚ್ಛವಾಗಿರಬೇಕು.
ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದವರಿಗೆ ಈ ಕೆಲಸ ಮಾಡುವುದು ಕಡ್ಡಾಯ ಇಲ್ಲದಿದ್ರೆ ಖಾತೆಗೆ ಹಣ ಬರಲ್ಲ.!
* ಎಂದಿಗೂ ದೇವರ ಮನೆಯಲ್ಲಿ ನೆಲದ ಮೇಲೆ ಕುಳಿತು ಪೂಜೆ ಮಾಡ ಬಾರದು ಬದಲಿಗೆ ಒಂದು ಶುದ್ಧ ವಸ್ತ್ರದ ಮೇಲೆ ಅಥವ ಒಂದು ಮಣೆಯ ಮೇಲೆ ಕುಳಿತು ಪೂಜೆ ಮಾಡಿದರೆ ನಿಮ್ಮ ಆಸೆಗಳು ಈಡೇರುತ್ತವೆ ನಿಮ್ಮ ಕಷ್ಟಗಳು ಕಳೆಯುತ್ತವೆ.
* ಇನ್ನು ದೇವರಿಗೆ ದೀಪಾ ಹಚ್ಚುವಾಗ ಎಣ್ಣೆಯ ಬದಲು ತುಪ್ಪದ ದೀಪ ಹಚ್ಚಿ ನೋಡಿ ಇದರಿಂದ ಅಡುಗೆ ಮನೆಯಲ್ಲಿ ಎಂದಿಗೂ ಧಾನ್ಯದ ಕೊರತೆ ಬಾಧಿಸುವುದಿಲ್ಲ.
* ಯಾವಾಗಲು ನಿಮ್ಮ ಅಡುಗೆ ಮನೆಯಲ್ಲಿ ಧಾನ್ಯ ಲಕ್ಷ್ಮಿ ತುಂಬಿರುತ್ತಾಳೆ ಒಂದು ವೇಳೆ ತುಪ್ಪದ ದೀಪ ಹಚ್ಚುವಷ್ಟು ಅನುಕೂಲ ಇಲ್ಲವಾದಲ್ಲಿ ಎಳ್ಳೆಣ್ಣೆ ದೀಪ ಹಚ್ಚುವುದು ತುಂಬ ಶುಭಕರ.
* ಪೂಜೆ ಮಾಡುವಾಗ ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿ ನತ್ತ ಮುಖ ಮಾಡಿ ಮಾಡುವುದರಿಂದ ಒಳ್ಳೆ ಫಲ ಸಿಗುತ್ತದೆ ಹಾಗೆಯೇ ಪೂಜೆ ಮಾಡಿದ ನಂತರ ಆಹಾರ ದಾನ ಮಾಡುವುದು ಉತ್ತಮ ಎನ್ನಲಾಗುತ್ತದೆ.
* ನಿಮ್ಮ ದೇವರ ಕೋಣೆಯಲ್ಲಿ ಅಪ್ಪಿ ತಪ್ಪಿಯೂ 15 ಇಂಚುಗಳಿಗಿಂತ ದೊಡ್ಡದಾದ ವಿಗ್ರಗಳನ್ನು ಇಡಬೇಡಿ ಅಲ್ಲದೆ ಗಣೇಶ ಸರಸ್ವತಿ ಲಕ್ಷ್ಮಿ ನಿಂತಿರುವ ಫೋಟೋ ಇದ್ದರೆ ಈಗಲೇ ತೆಗೆದು ಹಾಕಿ ಇಲ್ಲದಿದ್ದರೇ ಕಷ್ಟ ಕಟ್ಟಿಟ್ಟ ಬುತ್ತಿ.
* ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಪೂಜೆಯ ಸಮಯದಲ್ಲಿ ಹಣ್ಣುಗಳು ಹೂವುಗಳು, ಶಂಕ ನೀರಿನ ಪಾತ್ರೆಗಳನ್ನು ನಿಮ್ಮ ಎಡ ಭಾಗದಲ್ಲಿ ಇಟ್ಟುಕೊಳ್ಳಬೇಕು.