ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ಆರಂಭವಾಗಿ ಜನವರಿ ತಿಂಗಳಲ್ಲಿ ಬರುವ ಸಂಕ್ರಾಂತಿವರೆಗೂ ಕೂಡ ನಮ್ಮ ಹಿಂದೂ ಸಂಪ್ರದಾಯದಲ್ಲಿ ಧನುರ್ ಮಾಸ ಎಂದು ಆಚರಿಸುತ್ತೇವೆ. ಕೆಲವು ಕಡೆ ಶೂನ್ಯಮಾಸ ಎನ್ನುತ್ತಾರೆ ಈ ಮಾಸವು ದೇವರ ಪೂಜೆ ಮಾಡಿಸುವುದಕ್ಕೆ ಹೇಳಿ ಮಾಡಿಸಿದ ಮಾಸವಾಗಿದೆ ಧನುರ್ಮಾಸ ವ್ರತವನ್ನು ಆಚರಿಸುವವರು ಇದ್ದಾರೆ ಇವರು ಈ ತಿಂಗಳು ಪೂರ್ತಿ ಇದನ್ನು ಆಚರಿಸುತ್ತಾರೆ.
ಧನುರ್ಮಾಸ ವ್ರತವನ್ನು ಆಚರಿಸುವುದರಿಂದ ಜೀವನದ ಬಹುತೇಕ ಕ’ಷ್ಟಗಳು ನಿವಾರಣೆ ಆಗುತ್ತದೆ ಈ ವ್ರತವನ್ನು ಯಾವ ರೀತಿ ಆಚರಣೆ ಮಾಡಬೇಕು, ಒಂದು ತಿಂಗಳು ಪೂರ್ತಿ ಆಚರಿಸಲು ಅನುಕೂಲತೆ ಇಲ್ಲದವರು ಎಷ್ಟು ದಿನ ಆಚರಿಸಿದರೆ ಫಲ ಸಿಗುತ್ತದೆ ಮತ್ತು ಇದನ್ನು ಹೇಗೆ ಆಚರಿಸುವುದು ಮತ್ತು ಯಾವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.
ಸಾಮಾನ್ಯವಾಗಿ ಮನುಷ್ಯನು ವರ್ಷದ 365 ದಿನವೂ ಕೂಡ ಬಹಳ ಬಿಝೀ ಎನ್ನುತ್ತಾನೆ. ದಿನದ 24 ಗಂಟೆಯೂ ಕೂಡ ಅವನಿಗೆ ಬಿಡುವಿಲ್ಲ. ಆದರೆ ಅಸಲಿಗೆ ಪರೀಕ್ಷಿಸಿದರೆ ಯಾವುದೇ ವಿಷಯದಲ್ಲಿ ಮನಸಿದ್ದರೆ ಖಂಡಿತವಾಗಿಯೂ ಬಿಡುವು ಮಾಡಿಕೊಳ್ಳುತ್ತಾನೆ.
ಈ ರೀತಿ ಪ್ರತಿದಿನವೂ ಕೂಡ ನಮಗೆ ಬದುಕಲು ಹೊಸ ದಿನವನ್ನು ಕೊಟ್ಟ ಭಗವಂತನನ್ನು ಸ್ಮರಿಸಲು ದಿನದ ಅಲ್ಪಕಾಲ ತೆಗೆದಿಡಬೇಕು ಹಾಗೆ ವರ್ಷದ ಒಂದು ತಿಂಗಳಾದರೂ ಸಂಪೂರ್ಣವಾಗಿ ಭಗವಂತನ ಧ್ಯಾನದಲ್ಲಿ ಇದ್ದು ಭಗವಂತನ ಸೇವೆ ಧ್ಯಾನ ಮಾಡುತ್ತಾ ಧನ್ಯವಾದ ಅರ್ಪಿಸುವುದು ಬಹಳ ಒಳ್ಳೆಯ ಅಭ್ಯಾಸ.
ಇದಲ್ಲದೆ ಜೀವನದ ಯಾವುದೇ ಕ’ಷ್ಟ ಇದ್ದರೂ ಕೂಡ ಪರಿಹಾರಕ್ಕಾಗಿ ಕೂಡ ಭಗವಂತನನ್ನು ಸ್ಮರಿಸಿ ಈ ವ್ರತ ಮಾಡಬಹುದು. ಈ ರೀತಿ ಮಾಡುವುದಕ್ಕೆ ವರ್ಷದಲ್ಲಿ ಹಲವು ಮಾಸಗಳು ಇದ್ದು ಅವುಗಳಲ್ಲಿ ಧನುರ್ಮಾಸ ಎನ್ನುವುದು ದೇವತೆಗಳನ್ನು ಆರಾಧಿಸುವುದಕ್ಕಾಗಿಯೇ ಇರುವ ಪವಿತ್ರ ಮಾಸ ಎನಿಸಿದೆ. ಈ ಸಮಯದಲ್ಲಿ ಮಾಡುವ ಪೂಜೆಗೆ ಫಲ ಹೆಚ್ಚು.
ಹೆಚ್ಚಾಗಿ ಈ ಸಮಯದಲ್ಲಿ ಶಿವನನ್ನು ಕುರಿತು ವ್ರತ ಮಾಡುತ್ತಾರೆ. ಶಿವ ಮಾತ್ರವಲ್ಲದೆ ಆದಿಶಕ್ತಿ ಪಾರ್ವತಿ, ಲಕ್ಷ್ಮೀನಾರಾಯಣ ಇತ್ಯಾದಿ ನಿಮ್ಮ ಯಾವುದೇ ಇಷ್ಟದೈವವಿದ್ದರೂ ಅವರಿಗಾಗಿ ಕೂಡ ಮಾಡಬಹುದು. ಕೆಲವರು ಇದೇ ಮಾಸದಲ್ಲಿ ಮಾಲೆ ಹಾಕುವುದಕ್ಕಾಗಿ ಕೂಡ ಕಾಯುತ್ತಿರುತ್ತಾರೆ.
ಈ ಒಂದು ಮಾಸದಲ್ಲಿ ವಿಶೇಷವಾಗಿ ಧನುರ್ಮಾಸ ವ್ರತ ಆಚರಿಸುವುದರಿಂದ ನಿಮಗೆ ವ್ಯಾಪಾರ ವ್ಯವಹಾರದಲ್ಲಿ ತೊಡಕುಗಳು ಉಂಟಾಗಿದ್ದರೆ ನಿವಾರಣೆಯಾಗಿ ಅದರಲ್ಲಿ ಯಶಸ್ಸು ಕಾಣುತ್ತೀರಿ. ವಿವಾಹ ಯೋಗ ವಿಳಂಬವಾಗುತ್ತಿರುವವರು ಮತ್ತು ಮದುವೆ ಆಗಿ ಮಕ್ಕಳಿರದ ದಂಪತಿಗಳು ವ್ರತ ಆಚರಿಸುತ್ತಾರೆ.
ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಹೆಚ್ಚಿಸಿಕೊಳ್ಳಲು ಮಕ್ಕಳು ಕೂಡ ಈ ವ್ರತವನ್ನು ಮಾಡುತ್ತಾರೆ. ಆರೋಗ್ಯಕ್ಕಾಗಿ, ಹಣಕಾಸು ಅಭಿವೃದ್ಧಿಗಾಗಿ, ಮನಶಾಂತಿಗಾಗಿ ಮತ್ತು ಪುಣ್ಯ ಸಂಪಾದನೆ ಮಾಡುವ ಕಾರಣಕ್ಕಾಗಿ ಆಚರಣೆ ಮಾಡಬೇಕು.
ಆದರೆ ಒಂದು ತಿಂಗಳು ಪೂರ್ತಿ ಈ ರೀತಿ ಮಾಡಲು ಖಂಡಿತವಾಗಿಯೂ ಸಾಧ್ಯವಾಗುತ್ತಿಲ್ಲ ಎನ್ನುವವರು ಒಂದು ತಿಂಗಳ ಮಾಡಲು ಆಗದೆ ಇದ್ದರೆ 16 ದಿನ ಅಥವಾ 9 ದಿನ ಅಥವಾ 5 ದಿನ ಕಡೆ ಪಕ್ಷ ಒಂದು ದಿನ ಆದರೂ ಬಹಳ ನಂಬಿಕೆಯಿಂದ ಪ್ರಾಮಾಣಿಕತೆಯಿಂದ ಸಂಪೂರ್ಣವಾಗಿ ನಿಷ್ಠೆಯಿಂದ ಈ ವ್ರತ ಮಾಡಿ.
ಇದನ್ನು ಮಾಡುವುದು ಬಹಳ ಸುಲಭ, ಬೆಳಗ್ಗೆ ಕಡ್ಡಾಯವಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು ಎದ್ದು ತಣ್ಣೀರಿನಿಂದ ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗಬೇಕು, ಅಲ್ಲಿ ಕುಳಿತು ನಿಮ್ಮ ಇಷ್ಟ ದೈವದ ಅಥವಾ ಕುಲದೇವರ ಸ್ತೋತ್ರಗಳನ್ನು ಮಂತ್ರಗಳನ್ನು ಅಷ್ಟೋತ್ತರಗಳನ್ನು ಪಠಿಸುತ್ತಾ ಭಗವಂತನನ್ನು ಧ್ಯಾನಿಸಬೇಕು ಮತ್ತು ಅಶ್ವತ್ಥರಳಿ ಮರದ ಕಟ್ಟೆಯಲ್ಲಿ 9 ಅಥವಾ 12 ಪ್ರದಕ್ಷಿಣೆ ಹಾಕಿ ನಿಮ್ಮ ಇಷ್ಟಾರ್ಥಗಳ ಬಗ್ಗೆ ಕೇಳಿಕೊಳ್ಳಬೇಕು.
ಸಾಧ್ಯವಾದರೆ ದಿನ ಪೂರ್ತಿ ಉಪವಾಸ ಮಾಡಬಹುದು, ಈ ಆಚರಣೆ ಮಾಡುವಾಗ ಮಡಿಯಾಗಿರಬೇಕಾದ್ದು ಮುಖ್ಯ. ಇದು ಬಹಳ ಸರಳವಾಗಿರುವುದರಿಂದ ಪ್ರತಿಯೊಬ್ಬರೂ ಕೂಡ ಆಚರಿಸಬಹುದು. ತಪ್ಪದೇ ಸಾಧ್ಯವಾದಷ್ಟು ದಿನ ಇದನ್ನು ಮಾಡಿ.