ಎಲ್ಲರಿಗೂ ತಿಳಿದಿರುವಂತೆ ಗುರುರಾಯರು ಕಲಿಯುಗದ ಕಾಮಧೇನು ಎಂದೇ ಹೇಳಬಹುದು. ಅದೇ ರೀತಿಯಾಗಿ ರಾಘವೇಂದ್ರ ಸ್ವಾಮಿಗಳನ್ನು ಪೂಜೆ ಮಾಡಿದವರು ಹಾಗೂ ವ್ರತ ಅನುಷ್ಠಾನವನ್ನು ಮಾಡಿದವರು ಜೀವನದಲ್ಲಿ ಎಂದಿಗೂ ಕೂಡ ಕಷ್ಟದ ಪರಿಸ್ಥಿತಿಯನ್ನು ಎದುರಿಸುವ ಮಟ್ಟಕ್ಕೆ ಬಂದಿಲ್ಲ ಬದಲಿಗೆ ಅವರ ಜೀವನದಲ್ಲಿ ಇರುವಂತಹ ಕಷ್ಟ ದೂರವಾಗುತ್ತದೆ ಎಂದು ಹೇಳಬಹುದು.
ಅದೇ ರೀತಿಯಾಗಿ ರಾಯರ ಪೂಜೆಯನ್ನು ಬಹಳ ನಿಷ್ಠೆಯಿಂದ ಬಹಳ ನಂಬಿಕೆಯಿಂದ ಮಾಡಿದರೆ ಅವರು ನಮ್ಮ ಎಲ್ಲಾ ಕಷ್ಟಗಳನ್ನು ಸಹ ದೂರ ಮಾಡುತ್ತಾರೆ. ಅದೇ ರೀತಿಯಾಗಿ ನಮ್ಮ ಜೀವನದಲ್ಲಿ ಎದುರಾಗುವಂತಹ ಕೆಲವೊಂದು ಕಷ್ಟದ ಪರಿಸ್ಥಿತಿಗಳನ್ನು ಅವರು ದೂರ ಮಾಡಿ ನಮ್ಮನ್ನು ಒಳ್ಳೆಯ ಸ್ಥಾನಕ್ಕೆ ಕೊಂಡೊಯ್ಯುತ್ತಾರೆ ಆದರೆ ಇಲ್ಲಿ ಪ್ರತಿಯೊಬ್ಬರಲ್ಲೂ ಇರಬೇಕಾದದ್ದು ರಾಯರ ಮೇಲಿನ ಭಕ್ತಿ ಮಾತ್ರ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ರಾಯರ ಈ ಒಂದು ಪೂಜಾ ವಿಧಾನವನ್ನು ಮಾಡಿದರೆ ಜೀವನದಲ್ಲಿ ಎಂತದ್ದೇ ಕಷ್ಟದ ಪರಿಸ್ಥಿತಿಗಳಿ ದ್ದರೂ ಅವೆಲ್ಲವೂ ಸಹ ದೂರವಾಗುತ್ತದೆ. ಅದರಲ್ಲೂ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ 7 ಗುರುವಾರದ ದಿನ ಈ ಒಂದು ಪೂಜಾ ಅನುಷ್ಠಾನವನ್ನು ಮಾಡುವುದರಿಂದ ಜೀವನದಲ್ಲಿ ಎಂತದ್ದೇ ಕಷ್ಟದ ಪರಿಸ್ಥಿತಿ ಇದ್ದರೂ.
ಮನೆಯಲ್ಲಿ ಹಣಕಾಸಿನ ಸಮಸ್ಯೆ ಅಂದರೆ ಆರ್ಥಿಕವಾಗಿ ಎಲ್ಲದರಲ್ಲಿಯೂ ನಷ್ಟವನ್ನು ಅನುಭವಿಸುತ್ತಿದ್ದರೆ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಯಾವುದೇ ಲಾಭ ಬರದೇ ಇದ್ದರೆ ಪ್ರತಿಯೊಂದಕ್ಕೂ ಕೂಡ ನೀವು ಈ ಪೂಜೆಯನ್ನು ಮಾಡುವುದರಿಂದ ಪ್ರತಿಫಲವನ್ನು ಪಡೆದುಕೊಳ್ಳಬಹುದಾಗಿದೆ.
ಹಾಗಾದರೆ ಈ ಒಂದು ಪೂಜಾ ಅನುಷ್ಠಾನವನ್ನು ಹೇಗೆ ಮಾಡುವುದು ಹಾಗೂ ಯಾವ ಸಮಯದಲ್ಲಿ ಈ ಒಂದು ಪೂಜೆಯನ್ನು ಮಾಡಬೇಕು ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎನ್ನುವುದನ್ನು ಈ ದಿನ ಈ ಕೆಳಗಿನಂತೆ ತಿಳಿಯೋಣ. ಈ ಒಂದು ಪೂಜಾ ಅನುಷ್ಠಾನವನ್ನು ಮಾಡುವುದಕ್ಕೆ ಬೇಕಾಗಿರು ವಂಥದ್ದು ರಾಘವೇಂದ್ರ ಸ್ವಾಮಿಯ ವಿಗ್ರಹ ಅಥವಾ ಫೋಟೋ ಇರಬಹುದು.
ಆದರೆ ಆ ಫೋಟೋ ವಿಗ್ರಹದ ಹಿಂದೆ ಕಾಮದೇನು ಇರಬೇಕು ಹೌದು ಕಡ್ಡಾಯವಾಗಿ ರಾಘವೇಂದ್ರ ಸ್ವಾಮಿಯ ಫೋಟೋ ಅಥವಾ ವಿಗ್ರಹದ ಹಿಂದೆ ಕಾಮದೇನು ಇರುವಂತದ್ದು ಬಹಳ ಶ್ರೇಷ್ಠವಾದದ್ದು ಆದ್ದರಿಂದ ಈ ರೀತಿಯ ಫೋಟೋ ವಿಗ್ರಹ ಇದ್ದರೆ ಒಳ್ಳೆಯದು. ಹಾಗಾದರೆ ಈ ಒಂದು ಪೂಜಾ ಅನುಷ್ಠಾನವನ್ನು ಮಾಡುವುದಕ್ಕೂ ಮುಂಚೆ ಯಾವ ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಎಂದು ನೋಡುವುದಾದರೆ.
* ಈ ಒಂದು ಪೂಜೆಯನ್ನು ಬ್ರಾಹ್ಮೀ ಮುಹೂರ್ತದಲ್ಲಿ ಮಾಡಬೇಕಾಗು ತ್ತದೆ. ಆದರೆ ಕೆಲವೊಂದಷ್ಟು ಜನರಿಗೆ ಬ್ರಾಹ್ಮಿ ಮುಹೂರ್ತದಲ್ಲಿ ಮಾಡಲು ಸಾಧ್ಯವಾಗುವುದಿಲ್ಲ ಅಂಥವರ ಮೊದಲನೆಯ ದಿನವಾದರೂ ಬ್ರಾಹ್ಮಿ ಮುಹೂರ್ತದಲ್ಲಿ ಮಾಡುವುದು ಅತ್ಯಂತ ಶ್ರೇಷ್ಠ ಎಂದೇ ಹೇಳಬಹುದು.
* ನೀವು ಯಾವುದೇ ಪೂಜೆಯ ಸಂಕಲ್ಪವನ್ನು ಮಾಡಿಕೊಳ್ಳುತ್ತಿದ್ದರು ಮುಖ್ಯವಾಗಿ ತಲೆಯಿಂದ ಸ್ನಾನವನ್ನು ಮಾಡಿ ಆನಂತರ ನೀವು ಪೂಜೆ ಯನ್ನು ಪ್ರಾರಂಭ ಮಾಡುವುದು ಒಳ್ಳೆಯದು.
* ಮೊದಲನೆಯದಾಗಿ ನೀವು ಯಾವುದೇ ಸಂಕಲ್ಪವನ್ನು ಮಾಡಿಕೊಳ್ಳುತ್ತಿ ದ್ದರು ಮೊದಲು ಗಣಪತಿಯ ಪೂಜಾ ಅನುಷ್ಠಾನವನ್ನು ಮಾಡಿ ಆನಂತರ ನಿಮ್ಮ ಕುಲದೇವರನ್ನು ಪ್ರಾರ್ಥನೆ ಮಾಡಿ ನೀವು ಯಾವ ಒಂದು ಸಿದ್ಧಿಗಾಗಿ ಪೂಜೆಯನ್ನು ಮಾಡುತ್ತಿರುತ್ತೀರೋ ಅದನ್ನು ನೆರವೇರಲಿ ಎಂದು ಮನದಲ್ಲಿಯೇ ಪ್ರಾರ್ಥಿಸುತ್ತಾ ಆನಂತರ ನೀವು ಪೂಜೆಯನ್ನು ಕೈಗೊಳ್ಳುವುದು ಉತ್ತಮ.
* ಅದರಲ್ಲೂ ಪೂಜೆಯನ್ನು ಪ್ರಾರಂಭ ಮಾಡುವಂತ ಸಮಯದಲ್ಲಿ ಎಲ್ಲಾ ದೇವರಿಗೂ ಅರಿಶಿನ ಕುಂಕುಮ ಹೂವನ್ನು ಇಟ್ಟು ಪೂಜೆ ಮಾಡಿ ಆನಂತರ ಕೈಯಲ್ಲಿ ಅಕ್ಷತೆಯನ್ನು ಹಿಡಿದು ಮನಸ್ಸಿನಲ್ಲಿ ನಾನು ಈ ರೀತಿಯ ಸಂಕಲ್ಪವನ್ನು ಮಾಡುತ್ತಿದ್ದೇನೆ ದಯಮಾಡಿ ನನ್ನ ಈ ಒಂದು ಇಷ್ಟಾರ್ಥಗಳನ್ನು ಈಡೇರಿಸು ರಾಯರೇ ಎಂದು ಹೇಳುತ್ತಾ ಮನದಲ್ಲಿ ಯೇ ಸಂಕಲ್ಪವನ್ನು ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ