ಕೆಲವರಿಗೆ ಮದುವೆ ಬಹಳ ವಿಳಂಬ ಆಗುತ್ತಿರುತ್ತದೆ. ಬಹಳ ವರ್ಷಗಳಿಂದ ಕೂಡ ಮದುವೆಗಾಗಿ ಸಂಬಂಧ ನೋಡುತ್ತಾ ಇದ್ದರೆ ಯಾವುದು ಕೂಡ ಹೊಂದಾಣಿಕೆ ಆಗುವುದಿಲ್ಲ. ಹತ್ತಾರು ಕಡೆ ಹುಡುಗಿ ನೋಡಿಕೊಂಡು ಬಂದು ಯಾವುದು ಸೆಟ್ ಆಗದೆ ಬೇಜಾರಾಗಿರುತ್ತದೆ. ಹಾಗೆಯೇ ಹೆಣ್ಣು ಮಕ್ಕಳಿಗೂ ಕೂಡ ಹತ್ತಾರು ಮನೆಯವರು ಬಂದು ನೋಡಿಕೊಂಡು ಹೋಗಿ ಒಪ್ಪಿಗೆ ಆಗದೇ ಇದ್ದಾಗ ಹಣೆಬರಹದ ಮೇಲೆ ಬಹಳ ಬೇಸರವಾಗಿರುತ್ತದೆ.
ಮದುವೆ ಹಂತಕ್ಕೆ ಬಂದು ನಿಶ್ಚಿತಾರ್ಥ ಆಗಿ ಮುರಿದು ಹೋಗುತ್ತಿರುತ್ತದೆ. ಸರಿಯಾದ ಸಮಯಕ್ಕೆ ಮದುವೆ ಆಗದೆ ಇರುವುದು ಕೂಡ ಒಂದು ರೀತಿಯ ಕಷ್ಟವೇ. ಇದರಿಂದ ಆಗುವ ಮಾನಸಿಕ ನೋ’ವು ಅಷ್ಟಿಷ್ಟಲ್ಲ. ನಿಮ್ಮ ಮನೆಯಲ್ಲಿ ಯಾರಾದರೂ ಈ ರೀತಿ ಸಮಸ್ಯೆಯಲ್ಲಿದ್ದರೆ ಇವರಿಗೆ ಬಹಳ ಚಮತ್ಕಾರಿಯಾದ ಒಂದು ಉಪಾಯದ ಬಗ್ಗೆ ಹೇಳಿಕೊಡುತ್ತಿದ್ದೇವೆ. ಈ ಆಚರಣೆ ಮಾಡುವುದರಿಂದ ಖಂಡಿತವಾಗಿಯೂ ಅವರಿಗೆ ಕಂಕಣ ಬಲ ಕೂಡಿಬರುತ್ತದೆ.
ಇದನ್ನು ಮಾಡಲು ಮುಖ್ಯವಾಗಿ ಬೇಕಾಗಿರುವುದು ಅಪಾರವಾದ ನಂಬಿಕೆ ಶ್ರದ್ಧೆ ಭಕ್ತಿ. ಇದನ್ನು ಮಾಡುವುದು ಹೇಗೆಂದರೆ ಒಂದು ಶುಕ್ರವಾರದಂದು ಶುದ್ಧವಾಗಿ ಸ್ಥಾನ ಮಾಡಿ ಮಾಡಿ ಮನೆಯಲ್ಲಿ ಮನೆ ದೇವರ ಪೂಜೆ ಮಾಡಿ ಹಾಗೂ ನಿಮ್ಮ ಇಷ್ಟ ದೇವರನ್ನು ಪ್ರಾರ್ಥಿಸಿಕೊಂಡು ಒಂದು ಹಳದಿ ಬಣ್ಣದ ಚಿಕ್ಕ ವಸ್ತ್ರ ತೆಗೆದುಕೊಳ್ಳಿ,
ಇದಕ್ಕೆ ಏಳು ಏಲಕ್ಕಿ ಹಾಕಿ ಒಂದು ಕೆಂಪು ಬಣ್ಣದ ದಾರದಿಂದ ಕಟ್ಟಿ ಈಗ ಇದನ್ನು ಹತ್ತಿರದಲ್ಲಿರುವ ಯಾವುದೇ ವಿಷ್ಣುವಿನ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ವಿಷ್ಣುವಿನ ಪಾದದ ಬಳಿ ಇಟ್ಟು ಪೂಜೆ ಮಾಡಿ ಕೊಡುವಂತೆ ಅರ್ಚಕರನ್ನು ಕೇಳಿ ಆ ಸಮಯದಲ್ಲಿ ನೀವು ಸಹ ಮಹಾಲಕ್ಷ್ಮಿ ಹಾಗೂ ಮಹಾವಿಷ್ಣುವನ್ನು ನಿಮ್ಮ ಸಮಸ್ಯೆ ಪರಿಹರಿಸುವಂತೆ ನಿಮಗೆ ವಿವಾಹ ಭಾಗ್ಯ ದೊರಕಿಸಿ ಕೊಡುವಂತೆ ಕೇಳಿಕೊಳ್ಳಿ.
ಬಳಿಕ ನೀವು ಆ ಗಂಟನ್ನು ಮನೆಗೆ ತಂದು ದೇವರ ಕೋಣೆಯಲ್ಲಿ ಇಟ್ಟು ಅಥವಾ ನಿಮ್ಮ ಬೆಡ್ ರೂಮಿನಲ್ಲಿ ಶುದ್ಧವಾದ ಜಾಗದಲ್ಲಿ ಇಟ್ಟು ಪ್ರತಿದಿನ ಪೂಜೆ ಮಾಡುತ್ತಾ ಬನ್ನಿ ಬಹಳ ಬೇಗ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ, ಒಳ್ಳೆಯ ಸಂಬಂಧ ಕೂಡ ಕೂಡಿಬರುತ್ತದೆ. ಇದೇ ಆಚರಣೆಯನ್ನು ಮತ್ತೊಂದು ಬಗೆಯಲ್ಲಿ ಮಾಡುವುದರಿಂದ ಹಣಕಾಸಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ವಿವಾಹ ಭಾಗ್ಯದ ಪೂಜೆಗಾಗಿ ಆಚರಣೆಯಲ್ಲಿ ನೀವು ಹಳದಿ ಬಣ್ಣದ ತೆಗೆದುಕೊಂಡಿದ್ದೀರಿ ಈಗ ಇದರ ಬದಲು ಹಸಿರು ಬಣ್ಣದ ವಸ್ತ್ರವನ್ನು ತೆಗೆದುಕೊಂಡು ಏಳು ಏಲಕ್ಕಿಯನ್ನು ಹಾಕಿ ಕೆಂಪು ದಾರದಲ್ಲಿ ಕಟ್ಟಿ ಶುಭ ಶುಕ್ರವಾರದಂದು ಮಹಾಲಕ್ಷ್ಮಿ ಹಾಗೂ ಮಹಾವಿಷ್ಣು ಇರುವ ದೇವಸ್ಥಾನದಲ್ಲಿ ಅವರ ಪಾದದ ಬಳಿ ಇಟ್ಟು ಇದನ್ನು ಕೊಡುವಂತೆ ಕೇಳಿಕೊಂಡು ಅಲ್ಲಿ ನಿಮ್ಮ ಹಣಕಾಸಿನ ಸಮಸ್ಯೆ ಪರಿಹಾರಕ್ಕಾಗಿ ಪ್ರಾರ್ಥಿಸಿ.
ಮನೆಗೆ ತಂದು ದೇವರ ಕೋಣೆಯಲ್ಲಿ ಇಟ್ಟು ಪ್ರತಿ ದಿನವೂ ಬಹಳ ಪೂಜ್ಯ ಭಾವನೆಯಲ್ಲಿ ಈ ಗಂಟಿಗೆ ಪೂಜೆ ಮಾಡುತ್ತಾ ಬಂದರೆ, ಬಹಳ ಶುಭವಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ, ಅನಿರೀಕ್ಷಿತ ಧನಲಾಭ ಅಥವಾ ನಿಮ್ಮ ಬಳಿ ಇರುವ ಹಣ ಎಲ್ಲಾದರೂ ಸಿಲುಕಿಕೊಂಡಿದ್ದರೆ ಇದಕ್ಕೆ ಪರಿಹಾರ ಅಥವಾ ಬೇರೆಯವರಿಂದ ನೀವು ತೆಗೆದುಕೊಂಡಿರುವ ಸಾಲ ತೀರಿಸಲು ದಾರಿಯಾಗುವಂತಹ ಯೋಗ ಎಲ್ಲವೂ ಕೂಡ ಬರುತ್ತದೆ. ಸದ್ಭಕ್ತಿ ಭಾವನೆಗಳಿಂದ ಭಗವಂತನ ಮೇಲೆ ಸಂಪೂರ್ಣ ನಂಬಿಕೆ ಇಟ್ಟು ಈ ರೀತಿ ಮಾಡುವುದರಿಂದ ನೀವು ಉತ್ತಮ ಫಲಗಳನ್ನು ಕಾಣಬಹುದು..