ಪ್ರತಿಯೊಬ್ಬರಿಗೂ ಕೂಡ ಅವರ ಹುಟ್ಟಿದ ಸಮಯದಲ್ಲಿ ಗ್ರಹ, ನಕ್ಷತ್ರಗಳು ಯಾವ ರೀತಿ ಯಾವ ಸ್ಥಾನದಲ್ಲಿ ಇದೆ ಎನ್ನುವುದರ ಆಧಾರದ ಮೇಲೆ ಅವರ ಭವಿಷ್ಯವನ್ನು ಊಹಿಸಿ ಜಾತಕದಲ್ಲಿ ಬರೆಯಲಾಗುತ್ತದೆ. ಮತ್ತು ಈ ರೀತಿ ಜಾತಕವನ್ನು ಬರೆಸಿದವರು ಸ್ವಲ್ಪ ಎಚ್ಚರಿಕೆಯಿಂದ ತಮ್ಮ ಜೀವನದಲ್ಲಿ ಮುಂದೆ ಬರುವ ಆಗುಹೋಗುಗಳನ್ನು ತಿಳಿದುಕೊಂಡು ಬರುವ ತೊಂದರೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುವುದು ನಮ್ಮವರ ನಂಬಿಕೆ.
ಈ ರೀತಿ ನಮ್ಮ ರಾಶಿ ಚಿತ್ರದಲ್ಲಿ ಗ್ರಹಗಳ ಸ್ಥಾನಪಲ್ಲಟ ಆದಾಗ ಅಥವಾ ನಮಗೆ ನಡೆಯುತ್ತಿರುವ ದಶೆಭುಕ್ತಿ ಇವುಗಳ ಸಮಯದಲ್ಲಿ ಶನಿ ಪ್ರಭಾವ ಉಂಟಾಗುತ್ತಾ ಇರುತ್ತದೆ. ಶನಿ ಅಂದ ತಕ್ಷಣ ಎಲ್ಲರೂ ಕ’ಷ್ಟಗಳನ್ನು ಕೊಡುವವನು ಎಂದು ಕೊಳ್ಳುತ್ತಾರೆ ಮತ್ತು ಶನಿ ಪ್ರಭಾವ ಇದ್ದರೆ ಸಮಸ್ಯೆಗಳು ಮುಗಿಯುವುದೇ ಇಲ್ಲ ಎನ್ನುವ ಭಾವನೆ ಇದೆ. ಆದರೆ ಇದು ಪೂರ್ತಿ ಸತ್ಯವಲ್ಲ.
ಯಾಕೆಂದರೆ ಶನಿ ಅಂದರೆ ಸನ್ಮಾರ್ಗದಲ್ಲಿ ನಡೆಸುವವನು ನ್ಯಾಯದ ದೇವರು ಶನಿ ನಮ್ಮ ಜಾತಕದಲ್ಲಿ ಏನಾದರೂ ಶನಿ ಪ್ರಭಾವ ಉಂಟಾಗಿದ್ದರೆ ನಾವು ಮಾಡಿದ ಪಾಪ ಕರ್ಮಗಳನ್ನು ತೀರಿಸುತ್ತಿದ್ದೇವೆ ಎಂದುಕೊಳ್ಳಬೇಕು ಅಷ್ಟೇ. ಸಾಡೇಸಾತಿ ಸಮಯದಲ್ಲಿ ಬರುವ ಕ’ಷ್ಟಗಳನ್ನು ಧೈರ್ಯದಿಂದ ಎದುರಿಸಬೇಕು, ಆಗ ನಂತರದ ಜೀವನವು ಇದರ ದುಪ್ಪಟ್ಟು ಸಲೀಸಾಗಿ ಇರುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಒಂದು ವೇಳೆ ಜಾತಕದಲ್ಲಿ ಶನಿ ಪ್ರಭಾವ ಉಂಟಾಗಿದ್ದರೆ ಅದನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎನ್ನುವ ಸುಲಭ ಪರಿಹಾರಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಬಹಳ ಉಪಯುಕ್ತ ಮಾಹಿತಿಯಾಗಿತ್ತು ಈ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
1. ಮುಖ್ಯವಾಗಿ ನಾವು ಶನಿ ದೇವರಿಗೆ ಉಳಿಸಿಕೊಳ್ಳಬೇಕು ಎಂದರೆ ಜೀವನದಲ್ಲಿ ಯಾವಾಗಲೂ ಒಳ್ಳೆಯದನ್ನೇ ಮಾಡಬೇಕು ನಾವು ಪ್ರಾಮಾಣಿಕವಾಗಿ ನ್ಯಾಯವಾದ ಮಾರ್ಗದಲ್ಲಿ ನಡೆದರೆ ಶನಿದೇವರ ಕೃಪಾಕಟಾಕ್ಷ ಇದ್ದೆ ಇರುತ್ತದೆ ಒಂದು ವೇಳೆ ತಪ್ಪುಗಳನ್ನು ಮಾಡಿದ್ದರೆ ಅದನ್ನು ಕೂಡ ಒಪ್ಪಿಕೊಂಡು ಕ್ಷಮೆ ಕೇಳಿ ತಿದ್ದುಕೊಂಡು ನಡೆಯುತ್ತೇನೆ ಎಂದು ಶನಿ ದೇವರ ಬಳಿ ಪ್ರಾರ್ಥಿಸಿಕೊಳ್ಳಿ ಮತ್ತು ಎಂದಿಗೂ ಅಂತಹ ತಪ್ಪುಗಳನ್ನು ಮತ್ತೊಮ್ಮೆ ಮಾಡಬೇಡಿ.
2. ಹೊಸದಾಗಿ ಮನೆ ಕಟ್ಟುವವರನ್ನು ಬಿಟ್ಟು ಯಾರೂ ಕೂಡ ಶನಿವಾರದಂದು ಮನೆಗೆ ಲೋಹವನ್ನಾಗಲಿ ಲೋಹದ, ಪದಾರ್ಥಗಳನ್ನಾಗಲಿ ತರಬಾರದು ಇದರಿಂದ ಶನಿದೇವರ ಕೋಪ ಹೆಚ್ಚಾಗಿ ಕೆಟ್ಟ ದೃಷ್ಟಿ ನಮ್ಮ ಮೇಲೆ ಬೀಳುತ್ತದೆ. ಇದು ತಂದವರಿಗೆ ಮಾತ್ರ ಪರಿಣಾಮ ಬೀಳದೆ ನಿಮ್ಮ ಮನೆಯ ಸದಸ್ಯರ ಜಾತಕದಲ್ಲಿ ಶನಿದೇವರು ಕೆಟ್ಟಿದ್ದರೆ ಅವರ ಮೇಲೂ ಪರಿಣಾಮ ಬೀರುತ್ತದೆ ಮನೆಯಲ್ಲಿ ಅ’ಶಾಂ’ತಿ ಹೆಚ್ಚಾಗುತ್ತದೆ.
3. ಪ್ರತಿ ಶನಿವಾರದಂದು ಶನಿ ದೇವರ ದೇವಸ್ಥಾನದಲ್ಲಿ ಸಾಸಿವೆ ಎಣ್ಣೆ ಹಾಕು ಕರಿ ಎಳ್ಳು ದಾನ ಮಾಡಿದರೆ ಬಹಳ ಶ್ರೇಷ್ಠ.
4. ಯಾವುದೇ ಕಾರಣಕ್ಕೂ ಶನಿವಾರದಂದು ಉಪ್ಪನ್ನು ಖರೀದಿಸಿ ತರಬೇಡಿ ಇದರಿಂದ ದರಿದ್ರ ಹೆಚ್ಚಾಗುತ್ತದೆ. ಸಾಲಗಳು ಹೆಚ್ಚಾಗುತ್ತವೆ ಹಾಗೂ ಅನಾರೋಗ್ಯ ಭಾದಿಸುತ್ತದೆ, ಸಾಡೆ ಸಾತಿ ಅನುಭವಿಸುತ್ತಿರುವವರು ಯಾವುದೇ ಕಾರಣಕ್ಕೂ ಇಂತಹ ತಪ್ಪು ಮಾಡಬಾರದು.
5. ಶನಿವಾರದಂದು ಕತ್ತರಿಯನ್ನು ಖರೀದಿಸಿ ತರುವುದು ಕೂಡ ಕೆಟ್ಟ ಪರಿಣಾಮ ಬೀರುತ್ತದೆ, ಇದರಿಂದ ಮನೆಯ ಸದಸ್ಯರ ನಡುವೆ ಬಿ’ರು’ಕು ಹೆಚ್ಚಾಗುತ್ತದೆ.
6. ಶನಿಯ ಪ್ರಭಾವದಿಂದ ಸಮಸ್ಯೆ ಎದುರಿಸುತ್ತಾ ಇರುವವರು ಆದಷ್ಟು ಶನಿವಾರದ ದಿನದಂದು ತಮ್ಮ ಶಕ್ತಿಯನುಸಾರವಾಗಿ ಬಡವರಿಗೆ, ಅಸಹಾಯಕರಿಗೆ, ವೃದ್ಧರಿಗೆ ಸಹಾಯ ಮಾಡುತ್ತಾ ಬಂದರೆ ಬಹಳ ಒಳ್ಳೆಯ ಪರಿಣಾಮಗಳನ್ನು ಮುಂದೆ ನೋಡಲಿದ್ದೀರಿ.
7. ಲೋಹದ ಪಾತ್ರೆಯಲ್ಲಿ ಸಾಸಿವೆ ಎಣ್ಣೆ ಹಾಕಿ ಶನಿವಾರದಂದು ಮುಖ ನೋಡಿಕೊಂಡು ಆ ಎಣ್ಣೆಯನ್ನು ಅವಶ್ಯಕತೆ ಇರುವವರಿಗೆ ಅಥವಾ ಶನಿ ದೇವರ ಮಂದಿರಕ್ಕೆ ಅರ್ಪಿಸಬೇಕು
8. ಶನಿಪ್ರಭಾವ ಕಡಿಮೆ ಮಾಡಿಕೊಳ್ಳಲು ಕರಿಎಳ್ಳನ್ನು ದಾನ ಮಾಡಬೇಕು. ಅಶ್ವತ್ಥರಳೀ ಮರವನ್ನು ಪೂಜೆ ಮಾಡಿ ನೀರಿನೊಂದಿಗೆ ಅಥವಾ ಹಾಲಿನೊಂದಿಗೆ ಕರಿ ಎಳ್ಳನ್ನು ಅರ್ಪಿಸಬೇಕು. ಅದೇ ನೆನಪಿಡಿ ಶನಿವಾರದಂದು ಖರೀದಿಸಿ ತಂದು ಕರಿ ಎಳ್ಳನ್ನು ಬಳಸಬಾರದು, ಹಿಂದಿನ ದಿನವೇ ಇದನ್ನು ರೆಡಿ ಮಾಡಿ ಇಟ್ಟುಕೊಳ್ಳಬೇಕು.