ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಹರಳೆಣ್ಣೆಯು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಎಂದೇ ಹೇಳಬಹುದು. ಅದರಲ್ಲೂ ಹರಳೆಣ್ಣೆಯನ್ನು ಆಯುರ್ವೇದದ ಔಷಧಿ ತಯಾರಿಕೆಯಲ್ಲಿ ಕೆಲವೊಂದು ಕಾಸ್ಮೆಟಿಕ್ ಉತ್ಪಾದನೆಯಲ್ಲಿ ಹಾಗೂ ಮಸಾಜ್ ಮಾಡುವುದಕ್ಕೆ, ಫ್ಯಾಬ್ರಿಕ್ ಉತ್ಪನ್ನಗಳಲ್ಲಿ ಹರಳೆಣ್ಣೆಯ ಬಳಕೆ ಆಗುತ್ತದೆ.
ಹೀಗೆ ಇನ್ನೂ ಹಲವಾರು ರೀತಿಯ ಪ್ರಯೋಜನಗಳನ್ನು ನಾವು ಹರಳೆಣ್ಣೆಯಿಂದ ಪಡೆದುಕೊಳ್ಳ ಬಹುದು. ಹಾಗಾದರೆ ಈ ದಿನ ಹರಳೆಣ್ಣೆಯನ್ನು ಉಪಯೋಗಿಸುವುದ ರಿಂದ ಯಾವುದೆಲ್ಲ ಆರೋಗ್ಯಕರ ಪ್ರಯೋಜನವನ್ನು ಪಡೆದುಕೊಳ್ಳ ಬಹುದು ಎಂದು ನೋಡುವುದಾದರೆ.
* ಆರೋಗ್ಯಕರವಾಗಿ ದೇಹದ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಹರಳೆಣ್ಣೆ ಸಹಾಯ ಮಾಡುತ್ತದೆ.
* ಇದು ನಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚು ಮಾಡಿ ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನಮ್ಮಲ್ಲಿ ಬೆಳೆಸುತ್ತದೆ.
* ಇದು ಕ್ಯಾನ್ಸರ್ ಕಾರಕ ಜೀವಕೋಶಗಳ ವಿರುದ್ಧ ಕೆಲಸ ಮಾಡುತ್ತದೆ.
* ಗರ್ಭಿಣಿ ಮಹಿಳೆಯರು ತಮ್ಮ ಹೆರಿಗೆ ನೋವನ್ನು ಪಡೆಯಲು ಗರ್ಭಾವಸ್ಥೆಯ ಪೂರ್ಣಪ್ರಮಾಣದ ಸಮಯದಲ್ಲಿ ಸ್ವಲ್ಪ ಹರಳೆಣ್ಣೆ ಬಳಕೆ ಮಾಡುವುದರಿಂದ ಗರ್ಭಕೋಶದ ಚಲನೆ ಉಂಟಾಗಿ ಸರಾಗ ವಾದ ಹೆರಿಗೆ ಉಂಟಾಗುವ ಹಾಗೆ ಮಾಡುತ್ತದೆ.
* ಸ್ವಲ್ಪ ಪ್ರಮಾಣದ ಬೇಕಿಂಗ್ ಸೋಡಾ ಜೊತೆ ಹರಳೆಣ್ಣೆಯನ್ನು ಮಿಶ್ರಣ ಮಾಡಿ ಅದನ್ನು ಕೈ ಮೇಲೆ ಬಂದಿರುವಂತಹ ಗುಳ್ಳೆಯ ಮೇಲೆ ಹಚ್ಚುವು ದರಿಂದ ಆ ಗುಳ್ಳೆಗಳು ಶಮನವಾಗುತ್ತದೆ.
* ಜೊತೆಗೆ ಚರ್ಮದ ಮೇಲೆ ಕಾಣಿಸಿಕೊಳ್ಳುವಂತಹ ಯಾವುದೇ ಸೋಂಕನ್ನು ಕೂಡ ಇದು ನಿವಾರಣೆ ಮಾಡುವಲ್ಲಿ ಬಹಳ ಪ್ರಮುಖವಾದ ಪಾತ್ರ ವಹಿಸುತ್ತದೆ. ಆದ್ದರಿಂದಲೇ ಬಹಳ ಹಿಂದಿನ ದಿನದಿಂದಲೂ ಕೂಡ ಇದರ ಬಳಕೆ ಇತ್ತು ಎಂದು ಹೇಳಬಹುದು.
* ಹರಳೆಣ್ಣೆಯನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬರುವುದ ರಿಂದ ಮಲಬದ್ಧತೆಯ ಸಮಸ್ಯೆಯನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು.
ಇದಲ್ಲದೇ ಹರಳೆಣ್ಣೆ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಇರುವಂತಹ ಒಂದು ಪದಾರ್ಥ. ಹೌದು ಇದರ ಆರೋಗ್ಯ ಪ್ರಯೋಜನ ತಿಳಿದರೆ ಪ್ರತಿಯೊಬ್ಬರೂ ಕೂಡ ಇದನ್ನು ಯಥೇಚ್ಛವಾಗಿ ಇದರ ಬಳಕೆ ಮಾಡುತ್ತೀರಾ ಎಂದೇ ಹೇಳಬಹುದು. ಹಾಗಾದರೆ ಈ ದಿನ ಹರಳೆಣ್ಣೆಯನ್ನು ಯಾವುದೆಲ್ಲ ರೀತಿಯಾಗಿ ಉಪ ಯೋಗಿಸಿದರೆ ಅದರ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿಯೋಣ.
* ಹರಳಣ್ಣಿಯನ್ನು ತಲೆಗೆ ಹಚ್ಚುವುದರಿಂದ ದೇಹಕ್ಕೆ ತಂಪಾಗುವುದು, ಕೂದಲು ಚೆನ್ನಾಗಿ ಬೆಳೆಯುವುದು, ತಲೆಯಲ್ಲಿ ಹೊಟ್ಟು ಏಳುವ ಸಂಭವವಿರುವುದಿಲ್ಲ.
* ಹರಳೆಣ್ಣೆ ಸವರಿದ ವೀಳ್ಯದೆಲೆಯನ್ನು ಬಿಸಿ ಮಾಡಿ ಎಳೆ ಮಗುವಿನ ಹೊಟ್ಟೆಗೆ ಶಾಖ ಕೊಟ್ಟರೆ ಹೊಟ್ಟೆ ಉಬ್ಬರ ಇಳಿದು ನೋವು ಶಮನವಾಗುವುದು.
* ಕೀಲುನೋವು ಇದ್ದಲ್ಲಿ ಹರಳು ಎಲೆಗೆ ಹರಳೆಣ್ಣೆಯನ್ನ ಹಚ್ಚಿ ಬಿಸಿ ಮಾಡಿ ಊತವಿರುವ ಭಾಗಕ್ಕೆ ಕಾವು ಕೊಟ್ಟರೆ ನೋವು ಮಾಯವಾಗುವುದು.
* ಹರಳೆಣ್ಣೆಯನ್ನ ಸಂಪೂರ್ಣ ಶರೀರಕ್ಕೆ ಲೇಪಿಸಿಕೊಂಡು ಸ್ವಲ್ಪ ಸಮಯ ನೆನೆದು ಬಿಸಿ ನೀರಿನ ಸ್ನಾನ ಮಾಡಿದರೆ ಮೈಕೈ ನೋವು ಮಾಯವಾಗಿ ಸುಖನಿದ್ರೆ ಬರುವುದು.
* ನಿಂಬೆರಸದೊಂದಿಗೆ ಹರಳೆಣ್ಣೆಯನ್ನ ಸೇವಿಸುವುದರಿಂದ ಚೆನ್ನಾಗಿ ಭೇದಿಯಾಗುವುದು ಇದರಿಂದ ಉದರ ಬೇನೆ ಪರಿಹಾರವಾಗುವುದು.
* ಹರಳಿನ ಸಿಪ್ಪೆ ತೆಗೆದು ಉಳಿದುದನ್ನು ಎದೆ ಹಾಲಿನಲ್ಲಿ ತೇಯ್ದು ಕಣ್ಣಿಗೆ ಹಚ್ಚಿಕೊಂಡರೆ ಕಣ್ಣು ಉರಿ ನಿವಾರಣೆ ಆಗುವುದು.
* ಕಣ್ಣು ಕೆಂಪಾಗಿದ್ದರೆ, ಕಣ್ಣು ಚುಚ್ಚುತ್ತಿದ್ದರೆ, ಕಣ್ಣಿನಲ್ಲಿ ಯಾತನೆ ಉಂಟಾಗುತ್ತಿದ್ದರೆ ಎದೆ ಹಾಲಿಗೆ ಶುದ್ಧವಾದ ಹರಳೆಣ್ಣೆಯನ್ನು ಮಿಶ್ರಣ ಮಾಡಿ ಕಣ್ಣುಗಳಿಗೆ ಹಾಕಿದರೆ ಶೀಘ್ರವೇ ಎಲ್ಲಾ ವೇದನೆ ಪರಿಹಾರವಾಗುವುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.