ಈರುಳ್ಳಿ ಕಟ್ ಮಾಡುವಾಗ ಕ’ಣ್ಣೀ’ರು ಹಾಕಿಸಿದರು ಅಥವಾ ಕೆಲವೊಮ್ಮೆ ಬೆಲೆ ಕೇಳಿ ಬೇಸರವಾದರೂ ಈರುಳ್ಳಿಯಿಂದ ಎಷ್ಟೆಲ್ಲ ದೇಹಕ್ಕೆ ಅನುಕೂಲವಿದೆ ಎನ್ನುವುದನ್ನು ನೀವು ತಿಳಿದುಕೊಂಡರೆ ಇನ್ನು ಮುಂದೆ ಮೂರು ಹೊತ್ತು ಕೂಡ ತಪ್ಪದೇ ಅಡಿಗೆ ಮಾಡುವಾಗ ಈರುಳ್ಳಿ ಬಳಸುತ್ತೀರಿ ಮತ್ತು ಊಟದ ಜೊತೆಯಲ್ಲಿ ಹಸಿ ಈರುಳ್ಳಿ ತಿನ್ನುತ್ತೀರಿ.
ಈರುಳ್ಳಿ ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹದ ಆರೋಗ್ಯಕ್ಕೆ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಮತ್ತು ಮಾನಸಿಕ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು. ಗೃಹಿಣಿಯರಿಗೆ ಚೆನ್ನಾಗಿ ಗೊತ್ತಿರುತ್ತದೆ ಈರುಳ್ಳಿಯನ್ನು ಅಡುಗೆಗೆ ಹೆಚ್ಚಾಗಿ ಬಳಸುವುದರಿಂದ ಆಹಾರದ ರುಚಿ ಹೇಗೆ ಹೆಚ್ಚಿಸಬಹುದು ಎಂದು ಈ ರೀತಿ ರುಚಿ ಮತ್ತು ಆರೋಗ್ಯ ಎರಡನ್ನು ನೀಡುವ ಈ ಈರುಳ್ಳಿಯನ್ನು ಹೇಗೆ ಸೇವನೆ ಮಾಡುವುದರಿಂದ ಮತ್ತು ಯಾವ ರೀತಿ ಬಳಸುವುದರಿಂದ ಏನೆಲ್ಲಾ ಪ್ರಯೋಜನಗಳು ಇದೆ ಎನ್ನುವುದರ ಪಟ್ಟಿ ಹೀಗಿದೆ ನೋಡಿ.
* ಪ್ರತಿದಿನವೂ ಕೂಡ ಆಹಾರದ ಜೊತೆ ಹಸಿ ಈರುಳ್ಳಿ ತಿನ್ನುವುದರಿಂದ ಹೃದಯ ಸಂಬಂಧಿತ ಸಮಸ್ಯೆಗಳು ಬರುವ ಸಾಧ್ಯತೆ ಬಹಳ ಕಡಿಮೆ ಎಂದು ಹೇಳಲಾಗುತ್ತದೆ, ಹಾಗೆಯೇ ಊಟ ಮಾಡಿದ ಆಹಾರವು ಚೆನ್ನಾಗಿ ಜೀರ್ಣ ಆಗುತ್ತದೆ.
* ವಸಡಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ ಆ ಪೇಸ್ಟ್ ಅನ್ನು ಹಚ್ಚಿದಾಗ ಅದು ತಕ್ಷಣ ನಿಲ್ಲುತ್ತದೆ.
* ಸುಟ್ಟ ಈರುಳ್ಳಿಯನ್ನು ತಿಂದರೆ ಅಜೀರ್ಣ ನಿವಾರಣೆಯಾಗುತ್ತದೆ, ಮತ್ತು ಆಮಶಂಕೆ ಕೂಡ ಕಂಟ್ರೋಲ್ ಗೆ ಬರುತ್ತದೆ.
* ಚೇಳು ಅಥವಾ ಜೇನು ಕಚ್ಚಿದ ಸ್ಥಳಕ್ಕೆ ಈ ಹಸಿ ಈರುಳ್ಳಿಯ ಸಿಪ್ಪೆ ತೆಗೆದು ಜಜ್ಜಿ ತಿಕ್ಕುವುದರಿಂದ ಶೀಘ್ರವೇ ನೋವು ಉಪಶಮನವಾಗುತ್ತದೆ.
* ತುರಿಕೆ ಕಜ್ಜಿ ವಾಸಿಯಾಗಲು ಬಿಳಿ ಈರುಳ್ಳಿಯನ್ನು ಜಜ್ಜಿ ರಸ ಹಿಂಡಿಕೊಂಡು ಅದರಲ್ಲಿ ಅರಿಶಿಣ ಪುಡಿಯನ್ನು ಕಲಸಿ ಹಚ್ಚಬೇಕು. ಪ್ರತಿನಿತ್ಯ ಕೂಡ ಈ ಮನೆ ಮದ್ದು ಮಾಡುವುದರಿಂದ ಬಹಳ ಬೇಗನೆ ಸಂಪೂರ್ಣವಾಗಿ ಇದನ್ನು ಗುಣ ಮಾಡಿಕೊಳ್ಳಬಹುದು.
* ಜಜ್ಜಿದ ಈರುಳ್ಳಿಯ ವಾಸನೆಯನ್ನು ತೆಗೆದುಕೊಳ್ಳುವುದರಿಂದ ನೆಗಡಿ, ತಲೆನೋವು ಮುಂತಾದ ಶೀತಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತದೆ.
* ಬೆಲ್ಲದ ಜೊತೆಯಲ್ಲಿ ಈರುಳ್ಳಿ ತಿನ್ನುವುದರಿಂದ ರಕ್ತ ವೃದ್ಧಿಯಾಗುತ್ತದೆ ಮತ್ತು ರಕ್ತ ಶುದ್ಧಿಯಾಗುತ್ತದೆ. ಶರೀರ ತೂಕವು ಹೆಚ್ಚಾಗುತ್ತದೆ.
* ಈರುಳ್ಳಿ ಹೂವನ್ನು ತಿನ್ನುವುದರಿಂದ ಜೀರ್ಣಶಕ್ತಿ ವೃದ್ಧಿಯಾಗುತ್ತದೆ. ಅರಿಶಿಣ ಕಾಮಾಲೆ, ಮೂಲವ್ಯಾಧಿ ಮುಂತಾದ ರೋಗಗಳಿಗೆ ಅತ್ಯುತ್ತಮ ಔಷಧಿಯಾಗಿದೆ ಈರುಳ್ಳಿ ಹೂವು.
* ಊಟದ ಜೊತೆ ಈರುಳ್ಳಿ ನೆಂಚಿಕೊಂಡು ತಿನ್ನುವುದರಿಂದ ಕಣ್ಣು ನೋವು ಅರ್ಧ ತಲೆನೋವು ಗುಣವಾಗುತ್ತದೆ.
* ಹಸಿ ಈರುಳ್ಳಿ ಸೇವನೆ ಮಾಡುವುದರಿಂದ ನಿದ್ರೆಗೆ ಸಂಬಂಧಿತ ಸಮಸ್ಯೆಗಳು ಗುಣವಾಗುತ್ತವೆ. ನಿದ್ರಾಹೀನತೆ ವಾಸಿಯಾಗುತ್ತದೆ ಮತ್ತು ಸ್ನಾಯುಮಂಡಲಕ್ಕೆ ಚೈತನ್ಯ ಒದಗುತ್ತದೆ.
* ಹಸಿ ಈರುಳ್ಳಿಯ ಸೇವನೆಯಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಆಗುತ್ತದೆ.
* ಆಹಾರದ ಜೊತೆಯಲ್ಲಿ ಹಸಿ ಈರುಳ್ಳಿಯನ್ನು ಕೂಡ ಕಟ್ ಮಾಡಿ ಕೊಡುವುದರಿಂದ ಆಹಾರದ ರುಚಿ ಹೆಚ್ಚಾಗುತ್ತದೆ. ಮತ್ತು ಹಸಿವು ಚೆನ್ನಾಗಿ ಆಗುತ್ತದೆ.
* ತಲೆ ಹೊಟ್ಟು, ತಲೆ ಕೂದಲು ಕಟ್ ಆಗುವುದು ಕವಲು ಒಡೆಯುವುದು ಮುಂತಾದ ಸಮಸ್ಯೆಗೆ ಈರುಳ್ಳಿ ಪೇಸ್ಟ್ ತಲೆಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡುವುದರಿಂದ ಕಂಟ್ರೋಲ್ ಆಗುತ್ತದೆ.
* ತಲೆ ಕೂದಲಿಗೆ ಈರುಳ್ಳಿ ಪೇಸ್ಟ್ ಹಚ್ಚಿ ಒಣಗಿಸಿ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಕೂದಲಿಗೆ ಶೈನಿಂಗ್ ಬರುತ್ತದೆ ಕೂದಲು ಸೋಂಪಾಗಿ ಬೆಳೆಯುತ್ತದೆ ಮತ್ತು ಕೂದಲು ಗಟ್ಟಿಯಾಗುತ್ತದೆ.