ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ನಾಯಿ ಸಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪಟ್ಟಣ ಪ್ರದೇಶಗಳಲ್ಲಿ ಬೇರೆ ಬೇರೆ ಬ್ರೀಡ್ ನಾಯಿಗಳನ್ನು ತಂದು ಸಾಗುವುದು ಒಂದು ಪ್ರತಿಷ್ಠೆ, ಅದರಲ್ಲಿ ಹೆಣ್ಣು ಮಕ್ಕಳಿಗೆ ನಾಯಿ ಕಂಡರೆ ಪ್ರೀತಿ. ಆದರೆ ಹಳ್ಳಿಗಳ ಕಡೆ ಯಾವುದಾದರೂ ರಸ್ತೆಯಲ್ಲಿ ಸಿಕ್ಕ ನಾಯಿಯನ್ನು ಕೂಡ ಬಲು ಅಕ್ಕರೆಯಿಂದ ತಂದು ಸಾಕುತ್ತಾರೆ.
ಈ ರೀತಿ ಮನೆಯಲ್ಲಿ ನಾಯಿಗಳನ್ನು ಸಾಕುವುದಕ್ಕೆ ಕೂಡ ಋಣ ಇರಬೇಕು ಎನ್ನುವ ಮಾತಿದೆ ಮತ್ತು ಅದು ಯಾವ ನಾಯಿಯೇ ಆಗಿರಲಿ ಆ ಮನೆಗೆ ಹಾಗೂ ಮನೆಯ ಸದಸ್ಯರಿಗೆ ಹೊಂದಿಕೊಂಡು ಬಿಟ್ಟರೆ ಆ ಮನೆಯ ಸದಸ್ಯನಷ್ಟೇ ಅದು ಸ್ಥಾನ ಗಿಟ್ಟಿಸಿಕೊಂಡು ಎಲ್ಲರ ಮನಸ್ಸನ್ನು ಬಹಳ ಬೇಗ ಹೊಕ್ಕಿ ಬಿಡುತ್ತದೆ ಈ ರೀತಿ ನಾಯಿ ಸಾಕುವುದರಿಂದ ಆ ಮನೆಯವರಿಗೆ ಸಾಕಷ್ಟು ಅನುಕೂಲತೆ ಆಗುತ್ತದೆ.
ನಾಯಿಗಳಿಗೆ ಭಗವಂತ ಅತೀಂದ್ರೀಯ ಶಕ್ತಿಯನ್ನು ಕರುಣಿಸಿದ್ದಾನೆ ಮನುಷ್ಯರಿಗಿಂತ ನಾಯಿಗಳು ಬೇಗ ಪರಿಸರದ ಸಕಾರಾತ್ಮಕ ಹಾಗೂ ನಕಾರಾತ್ಮಕ ವಾತಾವರಣವನ್ನು ಗುರುತಿಸುತ್ತದೆ ಮತ್ತು ಎಷ್ಟೋ ಸಮಯಗಳಲ್ಲಿ ನಾಯಿ ಮುನ್ಸೂಚನೆ ಕೊಟ್ಟು ಆಗುವ ಅನಾಹುತಗಳನ್ನು ತಡೆದಿರುವ ಉದಾಹರಣೆಗಳ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ, ನೋಡಿದ್ದೇವೆ.
ಅದೇ ರೀತಿ ನಾಯಿ ತನ್ನ ಪ್ರಾಣವನ್ನು ಕೊಟ್ಟು ತನ್ನ ಮಾಲೀಕನನ್ನು ರಕ್ಷಣೆ ಮಾಡಿದ ಉದಾಹರಣೆಗಳಿಗೂ ಕಡಿಮೆ ಇಲ್ಲ. ಆದಷ್ಟೇ ದಿನವಾದರೂ ಅದೆಷ್ಟು ವರ್ಷವಾದರೂ ತನ್ನ ಮಾಲೀಕನನ್ನು ಗುರುತಿಸುವ ನಾಯಿಯ ನಿಯತ್ತಿನ ಮುಂದೆ ಮನುಷ್ಯನ ನಗಣ್ಯ ಎನಿಸಿಬಿಡುತ್ತಾನೆ ಮತ್ತು ಒಬ್ಬ ವ್ಯಕ್ತಿಗೆ ಅನ್ ಕಂಡಿಶನ್ ಲವ್ ಎನ್ನುವುದನ್ನು ಪರಿಚಯ ಪಡಿಸುವುದೇ ಈ ರೀತಿಯ ಸಾಕು ಪ್ರಾಣಿಗಳು, ಅದರಲ್ಲೂ ನಾಯಿಯು ಹೆಚ್ಚು.
ಈ ನಾಯಿಯನ್ನು ದೇವರ ರೂಪವಾಗಿ ಕೂಡ ಕಾಣುತ್ತಾರೆ ಕಾಲಭೈರವನ ವಾಹನವಾಗಿ ಮತ್ತು ನಾರಾಯಣನ ಅವತಾರವಾಗಿ ನಾಯಿಯನ್ನು ಕಾಣುವವರು ಇದ್ದಾರೆ ಮತ್ತು ಪೊಲೀಸ್ ಇಲಾಖೆಯಲ್ಲೂ ಕೂಡ ನಾಯಿ ಬಳಕೆ ಆಗುವುದರ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಾಯಿಗಳು ನೋಡುವುದಕ್ಕೆ ಉಗ್ರವಾಗಿ ಕಂಡರೂ ಬಹಳ ಮೃದು ಹೃದಯ ಹೊಂದಿರುವ ಪ್ರಾಣಿಗಳಾಗಿವೆ ಮತ್ತು ಬಹಳ ಸೂಕ್ಷ್ಮ ಪ್ರಾಣಿಗಳಾಗಿವೆ.
ಆದರೆ ಇವುಗಳ ಬುದ್ಧಿ ಮಾತ್ರ ಬಲು ಚತುರತೆಯಿಂದ ಕೂಡಿದೆ ಈ ನಾಯಿಗಳನ್ನು ಸಾಕುವುದರಿಂದ ನಮಗೆ ಇನ್ನೆಷ್ಟು ಉಪಯೋಗವಾಗುತ್ತದೆ ಎನ್ನುವುದರ ಪಟ್ಟಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಇದನ್ನು ನೋಡಿದ ಮೇಲೆ ಖಂಡಿತವಾಗಿಯೂ ನೀವು ಇಂದೇ ನಾಯಿಯನ್ನು ತಂದು ಸಾಕಲು ಆರಂಭಿಸುತ್ತೀರಿ.
ನಾಯಿಯನ್ನು ಸಾಕುವುದರಿಂದ ಕಳ್ಳ ಕಾಕರ ಭ’ಯ ಸ್ವಲ್ಪ ಕಡಿಮೆ ಆಗುತ್ತದೆ, ಯಾಕೆಂದರೆ ಮನೆಯ ಮುಂದೆ ನಾಯಿಗಳನ್ನು ಕಟ್ಟುವುದರಿಂದ ಅದು ಅಪರಿಚಿತ ವ್ಯಕ್ತಿಗಳು ಬಂದಾಗ ಅಥವಾ ಅನುಮಾನಸ್ಪದ ವ್ಯಕ್ತಿಗಳು ಬಂದಾಗ ಕೂಗಿ ಕಿರುಚಿ ಮನೆ ಮಾಲೀಕನ ಎಚ್ಚರಗೊಳಿಸುತ್ತವೆ, ಕೆಲವೊಮ್ಮೆ ಬಹಳ ಅಪಾಯಕಾರಿಯಾಗಿದ್ದಾಗ ತಾವೇ ಹೋಗಿ ತನ್ನ ಮಾಲೀಕನಿಗೆ ತೊಂದರೆ ಕೊಡಲು ಬಂದವರಿಗೆ ಕಚ್ಚಿ ಶಿಕ್ಷೆಯನ್ನು ಕೊಡುತ್ತವೆ.
ಹೀಗಾಗಿ ಮನೆಯಲ್ಲಿ ನಾಯಿ ಇದ್ದರೆ ಸಿಸಿಟಿವಿ ಹಾಗೂ ಹೆಚ್ಚಿನ ಸೆಕ್ಯೂರಿಟಿ ಇದ್ದಂತೆ ನಾಯಿಗಳು ಮನೆ ಸುತ್ತ ಆಗುವ ದುಷ್ಟ ಶಕ್ತಿಗಳ ಸಂಚಾರವನ್ನು ತಡೆಯುತ್ತವೆ. ನಾವು ತಿನ್ನುವ ಆಹಾರ ಪದಾರ್ಥಗಳನ್ನು ನಾಯಿಗಳಿಗೆ ಕೊಡುವ ಅಭ್ಯಾಸ ಅನೇಕರಿಗೆ ಇರುತ್ತದೆ. ಒಂದು ವೇಳೆ ನಾವು ತಿನ್ನುವ ಆಹಾರವು ಫುಡ್ ಪಾಯಿಸನ್ ಹಾಗಿದ್ದರೆ ಅಥವಾ ಆಹಾರದಲ್ಲಿ ಯಾರಾದರೂ ಏನಾದರೂ ಆಗಿದ್ದರೆ ನಾಯಿಗಳು ಬಹಳ ಬೇಗ ಅದನ್ನು ಗುರುತಿಸುತ್ತವೆ.
ನಾಯಿಗಳು ಅವುಗಳನ್ನು ತಿನ್ನುವುದಿಲ್ಲ ಹಾಗೂ ನಮಗೂ ಕೂಡ ತಿನ್ನಲು ಬಿಡುವುದಿಲ್ಲ. ಪುರಾಣಗಳಲ್ಲಿ ತಿಳಿಸಿರುವ ಪ್ರಕಾರ ಮನೆಗಳಲ್ಲಿ ನಾಯಿಯನ್ನು ಪ್ರೀತಿಯಿಂದ ಸಾಕುವುದರಿಂದ ಮತ್ತು ಬೀದಿ ನಾಯಿಗಳಿಗೆ ಕೂಡ ಆಹಾರದ ಅನುಕೂಲತೆ ಮಾಡಿಕೊಡುವುದರಿಂದ ಸಾಲಭಾದೆ ಇರುವವರಿಗೆ ಬಹಳ ಬೇಗ ಪರಿಹಾರ ಸಿಗುತ್ತದೆ. ಇವರ ಮೇಲೆ ಬೇಗ ಭಗವಂತನ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕೂ ಮೀರಿ ಇನ್ನು ಹೆಚ್ಚಿನ ಉಪಯೋಗಗಳು ನಾಯಿಗಳಿಂದ ಇವೆ.