ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕರ್ನಾಟಕದ ನಂಬರ್ ಒನ್ ಹೀರೋ ಎನ್ನಬಹುದು ಯಾಕೆಂದರೆ ಬೇರೆ ಎಲ್ಲಾ ಕಲಾವಿದರಿಗೆ ಹೋಲಿಸಿದರೆ ದರ್ಶನ್ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ದರ್ಶನ್ ಅವರ ಮೇಲೆ ಅಭಿಮಾನಿಗಳಿಗೆ ಎಷ್ಟು ಪ್ರೀತಿ ಇದೆ ಎನ್ನುವುದಕ್ಕೆ ಉತ್ತಮ ಸಾಕ್ಷಿ ಎಂದರೆ ಮಾಧ್ಯಮಗಳು ದರ್ಶನ್ ಅವರ ಕ್ರಾಂತಿ ಸಿನಿಮಾವನ್ನು ಪ್ರಚಾರ ಮಾಡುವುದಿಲ್ಲ ಎಂದು ಹೇಳಿದಾಗ ಬಿಡುಗಡೆಗೆ ಸಿದ್ಧವಾಗಿರುವ ಕ್ರಾಂತಿ ಸಿನಿಮಾದ ಪ್ರಚಾರ ಕೆಲಸವನ್ನು ಅಭಿಮಾನಿಗಳು ತಮ್ಮ ಹಣದಲ್ಲಿ ಖರ್ಚು ಮಾಡಿ ಸಿನಿಮಾಕ್ಕೆ ಪ್ರಚಾರ ನೀಡುತ್ತಿದ್ದಾರೆ ಹಾಗೂ ಈ ಹಠಕ್ಕಾಗಿ ನಮ್ಮ ಬಾಸ್ ಸಿನಿಮಾವನ್ನು ಹಿಂದಿನ ಎಲ್ಲಾ ಸಿನಿಮಾಗಳು ಅಂತ ಹೆಚ್ಚಿನ ಮಟ್ಟದಲ್ಲಿ ಹಿಟ್ಟಾಗುವಂತೆ ಮಾಡುತ್ತೇವೆ ಎಂದು ಚಾಲೆಂಜ್ ಮಾಡಿದ್ದಾರೆ. ಇಂತಹ ಅಭಿಮಾನಿಗಳನ್ನು ಪಡೆದಿರುವ ದಾಸ ನಿಜಕ್ಕೂ ಅದೃಷ್ಟವಂತ ಎನ್ನಬಹುದು. ಅಭಿಮಾನಿಗಳು ಇವರನ್ನು ಇಷ್ಟಪಡಲು ಅಷ್ಟೇ ಕಾರಣ ಕೂಡ ಇದೆ.
ಯಾಕೆಂದರೆ ದರ್ಶನ್ ಅವರು ಎಲ್ಲಾ ಅಭಿಮಾನಿಗಳನ್ನು ಒಂದೇ ಸಮವಾಗಿ ಕಾಣುತ್ತಾರೆ. ದರ್ಶನ್ ಅವರನ್ನು ಬರುವ ಅಭಿಮಾನಿಗಳು ಹಾಗೂ ರಸ್ತೆಯಲ್ಲಿ ಅಥವಾ ಕಾರ್ಯಕ್ರಮಗಳಲ್ಲಿ ಅವರ ಬಳಿ ಬರುವ ಅಭಿಮಾನಿಗಳು ಎಲ್ಲರನ್ನು ಕೂಡ ಅಷ್ಟೇ ಪ್ರೀತಿ ವಿಶ್ವಾಸದಿಂದ ಮಾತನಾಡಿಸಿ ಅವರ ಕಷ್ಟ ಸುಖ ವಿಚಾರಿಸುತ್ತಾರೆ ಹಾಗೂ ಸಿನಿಮಾ ಇಂಡಸ್ಟ್ರಿಯಲ್ಲಿ ಅವರು ಈ ಮಟ್ಟಕ್ಕೆ ಬೆಳೆಯಲು ಅವರು ಹಿಂದೆಪಟ್ಟಿರುವ ಶ್ರಮವನ್ನು ಅರಿತಿರುವ ಕರ್ನಾಟಕದ ಜನತೆ ಈಗ ಅವರನ್ನು ಒಬ್ಬ ದೊಡ್ಡ ನಟನನ್ನಾಗಿ ಮೆರೆಸುತ್ತಿದ್ದಾರೆ. ಮತ್ತು ಸಿನಿಮಾ ಅಭಿನಯಕ್ಕಾಗಿ ದರ್ಶನ್ ಅವರು ಕೊಂಟ್ಯಾತರ ರುಪಾಯಿಗಳನ್ನು ಸಂಭಾವನೆ ರೂಪದಲ್ಲಿ ಪಡೆಯುತ್ತಾರೆ. ಹಾಗೆಯೇ ರಾಜಕೀಯ ಪ್ರಚಾರಗಳನ್ನು ಕೂಡ ಭಾಗಿಯಾಗುವ ದರ್ಶನ್ ಅವರು ಅದಕ್ಕಾಗಿ ಎಷ್ಟು ಹಣ ಪಡೆಯುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ಅದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ದರ್ಶನ್ ಅವರು ಯಾವುದೇ ರಾಜಕೀಯ ಪಕ್ಷಗಳ ಬಗ್ಗೆ ಪ್ರಚಾರ ಮಾಡಿದರೂ ಕೂಡ ಆ ಪಕ್ಷಗಳ ಬಾವುಟವನ್ನು ಅವರ ಕೈಯಲ್ಲಿ ಹಿಡಿಯುವುದಿಲ್ಲ ಯಾಕೆಂದರೆ ಅವರು ಯಾವುದೇ ಪಕ್ಷದ ಪರವಾಗಿ ಎಂದಿಗೂ ಪ್ರಚಾರ ಮಾಡುವುದಿಲ್ಲ ಬದಲಾಗಿ ಅವರು ವ್ಯಕ್ತಿಗಳನ್ನು ನೋಡಿ ಪ್ರಚಾರ ಮಾಡುತ್ತಾರೆ. ಹಿಂದೆ ದರ್ಶನ್ ಅವರ ಕುರುಕ್ಷೇತ್ರ ಸಿನಿಮಾದ ನಿರ್ಮಾಪಕರಾಗಿದ್ದ ಮುನಿರತ್ನ ಅವರು ಚುನಾವಣಾ ಕಣಕ್ಕೆ ಇಳಿದಿದ್ದ ಸಮಯದಲ್ಲಿ ಮುನಿರತ್ನ ಅವರ ಪರವಾಗಿ ದರ್ಶನ್ ಅವರು ಪ್ರಚಾರ ಮಾಡಿದ್ದರು ಮತ್ತು ಮಂಡ್ಯದಲ್ಲಿ ತಾರಕಕ್ಕೇರಿದ್ದ ಚುನಾವಣಾ ಸ್ಪರ್ಧೆಯಲ್ಲಿ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಅವರ ಪರವಾಗಿ ದರ್ಶನ್ ಅವರು ಪ್ರಚಾರ ಮಾಡಿದ್ದರು. ಚುನಾವಣಾ ರ್ಯಾಲಿಯಲ್ಲಿ ಭಾಗಿಯಾದಾಗ ಅಥವಾ ಪ್ರಚಾರ ಕಾರ್ಯಕ್ರಮಗಳಿಗೆ ಭಾಗಿಯಾದಾಗ ದರ್ಶನ್ ಅವರು ಯಾವುದೇ ರೀತಿಯ ಹಣವನ್ನು ಅದರ ಪ್ರತಿಯಾಗಿ ಪಡೆಯುವುದಿಲ್ಲವಂತೆ. ಬದಲಾಗಿ ಅವರು ಈ ಕೆಲಸವನ್ನು ಮಾಡುತ್ತಾರೆ.
ಚುನಾವಣೆಯಲ್ಲಿ ಯಾವ ವ್ಯಕ್ತಿ ಪರವಾಗಿ ಪ್ರಚಾರ ಮಾಡುತ್ತಾರೆ ಅವರಿಂದ ಒಂದು ಲೆಟರ್ ಬರೆಸಿಕೊಳ್ಳುತ್ತಾರಂತೆ. ಈ ಮೂಲಕ ದರ್ಶನ್ ಅವರ ಬಳಿ ಸಹಾಯ ಕೇಳಿಸಿಕೊಂಡು ಬರುವ ಬಡ ರೋಗಿಗಳಿಗೆ ಆಸ್ಪತ್ರೆಯಲ್ಲಿ ಈ ಲೆಟರ್ ಕೊಟ್ಟರೆ 30 ರಿಂದ 40 ಸಾವಿರ ರೂಗಳು ಆಸ್ಪತ್ರೆ ವೆಚ್ಛದಲ್ಲಿ ಕಡಿಮೆ ಆಗಲಿದೆಯಂತೆ. ಮತ್ತು ಇದಕ್ಕಿಂತ ಹೆಚ್ಚಿನ ಮೊತ್ತವಾದ ಸಂದರ್ಭದಲ್ಲಿ ದರ್ಶನ್ ಅವರು ಅವರ ಕಡೆಯಿಂದ ಹಣ ಕೊಡುತ್ತಾರಂತೆ ಅದಕ್ಕಾಗಿ ಅವರ ಬಳಿ ಆ ಲೆಟರ್ ಇಟ್ಟುಕೊಳ್ಳುತ್ತಾರಂತೆ. ಸುಮಲತಾ ಅಂಬರೀಶ್ ಅವರ ವಿಚಾರದಲ್ಲಿ ಹೇಳುವುದಾದರೆ ಅಂಬರೀಶ್ ಅವರು ಇದ್ದ ದಿನದಿಂದಲೂ ಕೂಡ ದರ್ಶನ್ ಅವರನ್ನು ತಮ್ಮ ಮಗ ಎಂದು ಹೇಳಿಕೊಳ್ಳುತ್ತಿದ್ದರು. ಅಂಬರೀಶ್ ಅವರ ಮೇಲಿರುವ ಅಭಿಮಾನದ ಕಾರಣದಿಂದ ಅವರು ಸುಮಲತಾ ಅವರ ಪರವಾಗಿ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ ದರ್ಶನ್ ಸಿನಿಮಾ ಪ್ರಚಾರಕ್ಕೆ ಹೋದಾಗ ಹಣ ಪಡೆಯುತ್ತಾರೆ ಆದರೆ ಆ ಹಣವನ್ನು ಬಡವರಿಗೆ & ನಿರ್ಗತಿಕರಿಗೆ ಹಂಚುತ್ತಾರೆ. ದರ್ಶನ್ ಅವರ ಈ ಗುಣದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮುಖಾಂತರ ತಿಳಿಸಿ