ಸತ್ಯಯುಗ, ತ್ರೇತಾಯುಗ, ದ್ವಾಪರ ಯುಗ, ಇವು ಮುಗಿದು ಹೋಗಿದೆ ಈಗ ಕಲಿಯುಗ ನಡೆಯುತ್ತಿದೆ. ಆಗಿನ ಕಾಲದಲ್ಲಿ ಅಂದರೆ ಸತ್ಯಯುಗ ತ್ರೇತಾಯುಗ ದ್ವಾಪರ ಯುಗದಲ್ಲಿ ಇದ್ದ ಜನರು ಹೇಗಿದ್ದರು ಕಲಿಯುಗದ ಜನರ ರೀತಿಯೇ ಇದ್ದರ? ಅವರು ಎಷ್ಟು ಎತ್ತರ ಇದ್ದರು? ಅವರ ಬಣ್ಣ ಯಾವ ರೀತಿಯಾಗಿ ಇತ್ತು? ಅಜಾನಬಾಹು ಅನ್ನುತ್ತಾರಲ್ಲ ಇದು ಕೇವಲ ಪ್ರಶಂಸೆಯ ಅಥವಾ ಅದೇ ರೀತಿ ಇದ್ದರೆ.
ಇಂತಹ ಪ್ರಶ್ನೆಗಳು ತುಂಬಾ ಜನಕ್ಕೆ ಬಂದಿರುತ್ತದೆ. ರಾಮಾಯಣ ಮಹಾಭಾರತದ ಕಾಲದಲ್ಲಿ ಇದ್ದಂತಹ ವೀರರು ಶೂರರು ಮಹಾಪುರುಷರು ಎಷ್ಟು ಎತ್ತರ ಇದ್ದರು ಎನ್ನುವಂತಹ ನಮ್ಮ ಪ್ರಶ್ನೆ ನಮ್ಮಲ್ಲಿ ತುಂಬಾ ಜನಕ್ಕೆ ಬಂದಿರುತ್ತದೆ.
* ಕೃತ ಯುಗ ಅಥವಾ ಸತ್ಯಯುಗದ ಕಾಲ 16,28,000 ವರ್ಷಗಳು ಅಂತ ನಮ್ಮ ಪುರಾಣಗಳು ಹೇಳುತ್ತದೆ.
ಆ ಕಾಲದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ 100000 ವರ್ಷಗಳ ವರೆಗೆ ಜೀವಿಸುತ್ತಿದ್ದ. ಅವರಿಗೆ ಇಚ್ಛಾ ಮರಣವನ್ನು ಪಡೆಯುವಂತಹ ಶಕ್ತಿ ಕೂಡ ಇತ್ತು.
* ಇನ್ನು ತ್ರೇತಾಯುಗದ ಕಾಲ 12,56,000 ವರ್ಷಗಳು ಅಂತ ನಮ್ಮ ಪುರಾಣಗಳು ಹೇಳುತ್ತದೆ. ಈ ಕಾಲದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ 10,000 ವರ್ಷಗಳವರೆಗೆ ಜೀವಿಸುತ್ತಿದ್ದ.
ಸುಕನ್ಯಾ ಸಮೃದ್ಧಿ ಯೋಜನೆಯಿಂದ ನಿಮ್ಮ ಹೆಣ್ಣು ಮಗುವಿಗೆ ಸಿಗಲಿದೆ 28 ಲಕ್ಷ ಹಣ, ಹೆಣ್ಣು ಮಕ್ಕಳಿರುವ ಪ್ರತಿಯೊಬ್ಬ ಪೋಷಕರು ಇದನ್ನು ತಿಳಿದುಕೊಳ್ಳಿ.!
* ದ್ವಾಪರ ಯುಗದ ಕಾಲ 8 ಲಕ್ಷ ವರ್ಷಗಳು. ಈ ಕಾಲದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ 1000 ವರ್ಷಗಳವರೆಗೆ ಜೀವಿಸುತ್ತಿದ್ದ.
ಈ ರೀತಿ ನಮ್ಮ ಪುರಾಣಗಳ ಪ್ರಕಾರ ಈಗಿನ ಕಲಿಯುಗದ ಕಾಲಾವಧಿ 4,32,000 ವರ್ಷಗಳು.
ಆದರೆ ಈ ಕಾಲದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ 100 ವರ್ಷಗಳ ವರೆಗೂ ಕೂಡ ಜೀವಿಸುತ್ತಿಲ್ಲ.
ಇನ್ನು ಈ ಕಾಲದಲ್ಲಿ ಅಂದರೆ ಪ್ರಸ್ತುತ ಕಲಿಯುಗದಲ್ಲಿ ಒಬ್ಬ ಮನುಷ್ಯ 6 ಅಡಿ ಎತ್ತರ ಇದ್ದರೆ ಇವನು ಯಾರು ಲಂಬು ಎಂದು ಹೇಳುತ್ತೇವೆ. ತುಂಬಾ ಉದ್ದ ಇದ್ದಾನೆ ಎಂದು ಭಾವಿಸುತ್ತೇವೆ. ಇನ್ನು ಸ್ವಲ್ಪ ಉದ್ದ ಇದ್ದರೆ ತೆಂಗಿನ ಮರದ ರೀತಿ ಬೆಳೆದಿದ್ದಾನೆ ಎಂದು ಹೇಳುತ್ತೇವೆ. ಆದರೆ ಪೂರ್ವ ಯುಗದಲ್ಲಿ ಮನುಷ್ಯರು ಎಷ್ಟೆಷ್ಟು ಉದ್ದ ಇದ್ದರೂ ಗೊತ್ತಾ? ವಿವಿಧ ಪುರಾಣ ಗ್ರಂಥಗಳಲ್ಲಿ ವಿವಿಧ ರೀತಿಯ ವರ್ಣನೆಗಳು ಇದೆ.
• ಸತ್ಯಯುಗದಲ್ಲಿ ಒಬ್ಬ ಮನುಷ್ಯ 32 ಅಡಿ ಉದ್ದ ಇದ್ದ ಅಂತ ನಮ್ಮ ಪುರಾಣ ಗ್ರಂಥಗಳಲ್ಲಿ ಇದೆ.
• ಇನ್ನು ತ್ರೇತಾಯುಗದಲ್ಲಿ 21 ಅಡಿ ಉದ್ದ ಇದ್ದರು.
• ಇನ್ನೊಂದು ದ್ವಾಪರ ಯುಗದಲ್ಲಿ ಮನುಷ್ಯನ ಉದ್ದ 11 ಅಡಿ.
ಈ ಕಲಿಯುಗದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯ ಎತ್ತರ ಆವರೇಜ್ ಆಗಿ 5 ಅಡಿ ಇದೆ.
ಹಣದ ಸಮಸ್ಯೆ ಸುಳಿಯ ಬಾರದು ಅಂದರೆ ಈ ಸಣ್ಣ ಕೆಲಸ ಮಾಡಿ ಸಾಕು.!
ಯುಗದ ಅವಧಿ ಕಡಿಮೆಯಾಗುತ್ತಿದ್ದಂತೆ ಮನುಷ್ಯನ ಆಯಸ್ಸು ಮತ್ತು ಎತ್ತರವೂ ಕೂಡ ಕಡಿಮೆಯಾಗುತ್ತದೆ ಎಂದು ಇದರಿಂದ ಅರ್ಥವಾಗು ತ್ತದೆ. ಅಷ್ಟಕ್ಕೂ ರಾಮಾಯಣ ಮಹಾಭಾರತದ ಕಾಲದಲ್ಲಿ ಯೋಧರು ಮತ್ತು ಮಹಾಪುರುಷರು ಎಷ್ಟೆಷ್ಟು ಎತ್ತರ ಇದ್ದರು ಅಂತ ಈಗ ನಾವು ತಿಳಿದುಕೊಳ್ಳೋಣ. ರಾಮಾಯಣ ಮಹಾಭಾರತದ ಕಾಲದ ಮನುಷ್ಯರು ತುಂಬಾ ಪಟ್ಟು ಎತ್ತರವಾಗಿದ್ದರು ಅಂತ ನಮ್ಮ ಪುರಾಣ ಗ್ರಂಥಗಳು ಹೇಳುತ್ತದೆ.
ಮಹಾಭಾರತದಲ್ಲಿ ಭೀಷ್ಮನು ಇಚ್ಛಾ ಮರಣವನ್ನು ಹೊಂದಿದವನು. ದೃಢವಾದ ದೇಹವನ್ನು ಹೊಂದಿದವನು. ಇವರ ಎತ್ತರ ಸುಮಾರು 8 ಅಡಿ. ಪಾಂಡವರ ಕುಲ ಗುರುವಾದ ಕೃಪಾಚಾರ್ಯರ ಎತ್ತರ 7 ಅಡಿ. ಗುರು ದ್ರೋಣಾಚಾರ್ಯರ ಎತ್ತರವು ಕೂಡ ಸುಮಾರು 7 ಅಡಿ. ಅವರ ಪ್ರಿಯ ಶಿಷ್ಯನಾದ ಅರ್ಜುನನ ಎತ್ತರ ಸುಮಾರು 7.2 ಅಡಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.