ಐಸ್ ಕ್ಯೂಬ್ ಮಸಾಜ್ ನಿಂದ ಮುಖಕ್ಕೆ ಎಷ್ಟೆಲ್ಲ ಪ್ರಯೋಜನ ಗೊತ್ತಾ.?

 

ನಮ್ಮ ಮುಖದ ಕಾಂತಿಯನ್ನು ಹೆಚ್ಚು ಮಾಡುವಲ್ಲಿ ಐಸ್ ಕ್ಯೂಬ್ ಬಹಳ ಪ್ರಮುಖವಾದ ಪಾತ್ರ ವಹಿಸುತ್ತದೆ. ಹೌದು ನಮ್ಮ ಮುಖದ ಮೇಲಿರುವಂತಹ ಕಪ್ಪು ಕಲೆ, ರಂಧ್ರಗಳು ಇವೆಲ್ಲವನ್ನು ಸಹ ಐಸ್ ಕ್ಯೂಬ್ ದೂರ ಮಾಡುತ್ತದೆ. ಹಾಗಾಗಿ ವಾರದಲ್ಲಿ ಎರಡರಿಂದ ಮೂರು ದಿನ ಐಸ್ ಕ್ಯೂಬ್ ನಿಂದ ಮಸಾಜ್ ಮಾಡಿಕೊಳ್ಳುವುದು ಉತ್ತಮ. ಇದು ನಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ನಮ್ಮ ತ್ವಚೆ ಯಾವುದೇ ರೀತಿಯ ತೊಂದರೆಯಲ್ಲಿ ಇದ್ದರು ಅದನ್ನು ದೂರ ಮಾಡುತ್ತದೆ.

ಹಾಗಾಗಿ ಇದು ಬಹಳ ಅತ್ಯುತ್ತಮವಾದ ವಿಧಾನವಾಗಿದೆ. ಹಾಗೂ ಐಸ್ ಕ್ಯೂಬ್ ನಿಂದ ಮಸಾಜ್ ಮಾಡಿದರೆ ನಮ್ಮ ಮುಖದಲ್ಲಿ ಉತ್ಪತ್ತಿಯಾಗುವಂತಹ ಎಣ್ಣೆಯ ಅಂಶವನ್ನು ದೂರ ಮಾಡುತ್ತದೆ.
ಹೌದು ಕೆಲವೊಂದಷ್ಟು ಜನರಿಗೆ ಎಷ್ಟೇ ಮುಖ ತೊಳೆದರೂ, ಎಷ್ಟೇ ಮೇಕಪ್ ಮಾಡಿದರು ಸ್ವಲ್ಪ ಸಮಯದಲ್ಲಿಯೇ ಅವರ ಮುಖವೆಲ್ಲ ಎಣ್ಣೆ ಆಗಿರುವ ಹಾಗೆ ಕಾಣಿಸುತ್ತದೆ.

ಈ ಒಂದು ಸಮಸ್ಯೆ ಕೆಲವೊಂದಷ್ಟು ಜನರಲ್ಲಿ ಇರುತ್ತದೆ. ಅಂತವರು ತಮ್ಮ ಮುಖಕ್ಕೆ ಐಸ್ ಕ್ಯೂಬ್ ಬಳಸಿ ಮಸಾಜ್ ಮಾಡಿಕೊಳ್ಳುವುದ ರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ. ಹಾಗಾದರೆ ಈ ದಿನ ಐಸ್ ಕ್ಯೂಬ್ ಅನ್ನು ನಾವು ಯಾವ ರೀತಿಯಾಗಿ ಉಪಯೋಗಿಸ ಬಹುದು ಅಂದರೆ ಯಾವ ಸಮಯದಲ್ಲಿ ಯಾವ ರೀತಿಯಾಗಿ ಬಳಕೆ ಮಾಡಿಕೊಂಡರೆ ಅದರಿಂದ ನಮಗೆ ಯಾವುದೆಲ್ಲ ರೀತಿಯ ಪ್ರಯೋಜನಗಳು ಸಿಗುತ್ತದೆ. ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ಕೆಳಗೆ ತಿಳಿದುಕೊಳ್ಳುತ್ತಾ ಹೋಗೋಣ.

* ಐಸ್ ಕ್ಯೂಬ್ ನಿಂದ ಕಣ್ಣಿನ ಕೆಳಗಡೆ ಕಪ್ಪುಗಟ್ಟುವುದನ್ನು ಹೋಗಲಾ ಡಿಸಬಹುದು.
* ನಮಗೆ ಹಲ್ಲು ನೋವು ಇದ್ದರೆ ತಕ್ಷಣ ಚಿಕಿತ್ಸೆ ನೀಡುತ್ತದೆ.
* ವಯಸ್ಸಾಗುವಿಕೆಯನ್ನು ತಡೆಯಲು ಇದರಿಂದ ಮುಖದ ಚರ್ಮಕ್ಕೆ ಮಸಾಜ್ ಮಾಡಿ.
* ಮುಖದ ಮೇಲಿನ ಸುಕ್ಕುಗಳು, ರಂಧ್ರಗಳಿಂದ ಮುಕ್ತಿ ದೊರಕಿಸುವ ಕೆಲಸ ಐಸ್ ಕ್ಯೂಬ್ ಮಾಡುತ್ತದೆ.

* ಬಿಸಿಲಿನಿಂದ ಕಪ್ಪದ ಮುಖಕ್ಕೆ ಐಸ್ ಕ್ಯೂಬ್ ಮಸಾಜ್ ಮುಖಕ್ಕೆ ವಿಶ್ರಾಂತಿ ನೀಡಿ ಆ ಸಮಸ್ಯೆಯನ್ನು ನಿವಾರಿಸುತ್ತದೆ.
* ದದ್ದುಗಳು ಹಾಗೂ ಯಾವುದಾದರೂ ಕೀಟಗಳು ಕಡಿತದಿಂದ ಐಸ್ ಕ್ಯೂಬ್ ಮಸಾಜ್ ತಕ್ಷಣ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
* ಮುಖದ ಮೇಲಿನ ಎಣ್ಣೆಯ ಅಂಶವನ್ನು ತೆಗೆದು ಹಾಕಿ ಚರ್ಮಕ್ಕೆ ಹೊಳಪನ್ನು ನೀಡುತ್ತದೆ.
* ಐಸ್ ಕ್ಯೂಬ್ ಮಸಾಜ್ ಮಾಡುವುದರಿಂದ ಮುಖದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುತ್ತದೆ.

* ಮೊಡವೆಗಳಿಂದ ಹಾಗೂ ಮುಖದಲ್ಲಿನ ಕಪ್ಪು ಕಲೆಯನ್ನು ಹೋಗಲಾಡಿಸಲು ವಾರದಲ್ಲಿ 3 ದಿನ ಐಸ್ ಕ್ಯೂಬ್ ಮಸಾಜ್ ಮಾಡಿ.
* ನಾವು ಹಚ್ಚುವ ಮೇಕಪ್ ನಿಂದ ನಮ್ಮ ಚರ್ಮಕ್ಕೆ ಆಗುವ ಅಡ್ಡ ಪರಿಣಾಮಗಳನ್ನು ಐಸ್ ಕ್ಯೂಬ್ ಮಸಾಜ್ ತಡೆಯುತ್ತದೆ.

* ಮುಖದಲ್ಲಿನ ನೆರಿಗೆಗಳು ಕಾಣದಂತೆ ಮಾಡುತ್ತದೆ.
ಅದರಲ್ಲೂ ಪ್ರತಿಯೊಬ್ಬರ ತಿಳಿದುಕೊಳ್ಳಬೇಕಾದಂತಹ ಮಾಹಿತಿ ಏನು ಎಂದರೆ ಐಸ್ ಕ್ಯೂಬ್ ಬಳಸುವಂತಹ ಸಮಯದಲ್ಲಿ ಕೆಲವೊಂದು ಎಚ್ಚರಿಕೆಯನ್ನು ತೆಗೆದುಕೊಳ್ಳುವುದು ಉತ್ತಮ. ಹೌದು ಐಸ್ ಕ್ಯೂಬ್ ನಲ್ಲಿ ಇರುವಂತಹ ನೀರು ನಮ್ಮ ಕಣ್ಣಿನ ಒಳಗಡೆ ಹೋಗದ ಹಾಗೆ ಮುಖದಲ್ಲಿ ಮಸಾಜ್ ಮಾಡಬೇಕು.

* ಐಸ್‌ಕ್ಯೂಬ್ ಅನ್ನು ಕಣ್ಣಿನ ಸುತ್ತ ನಿಯಮಿತವಾಗಿ ಉಜ್ಜುವುದರಿಂದ ರಕ್ತದ ನಾಳಗಳಿಗೆ ವ್ಯಾಯಾಮ ದೊರಕಿ ಕಣ್ಣಿನ ಊತ ಕಡಿಮೆಯಾಗುತ್ತದೆ.
* ವಯಸ್ಸಾಗುವುದನ್ನು ತಡೆಯುವಲ್ಲಿ ಐಸ್‌ಕ್ಯೂಬ್ ಹೆಚ್ಚು ಪರಿಣಾಮ ಕಾರಿ. ಇದು ತ್ವಚೆಯನ್ನು ಬಿಗಿಗೊಳಿಸುತ್ತದೆ ಮತ್ತು ಕಣ್ಣಿನ ಸುತ್ತದ ಗೆರೆಗಳನ್ನು ನಿವಾರಿಸುತ್ತದೆ.

https://youtu.be/ibRFG1ltSak?si=8oVQw-oVRaZpu4Ih

Leave a Comment

WhatsApp Group Join Now
Telegram Group Join Now