ಒಬ್ಬ ತಾಯಿಯು ತನ್ನ ಮಕ್ಕಳಿಗಾಗಿ ಏನು ಬೇಕಾದರೂ ಮಾಡಲು ಸಿದ್ಧಳಿರುತ್ತಾಳೆ. ಆದರೆ ಒಬ್ಬ ಅತ್ತೆ ಈ ನಿರ್ಧಾರ ಕೈಗೊಳ್ಳುವುದು ಬಹಳ ಕಷ್ಟ. ಆದರೂ ಈಗಿನ ಕಾಲಮಾನದಲ್ಲಿ ನೋಡುವ ಅತ್ತೆ ಸೊಸೆ (Mother in law and Daughter in law relationship) ಜೋಡಿಯಲ್ಲಂತೂ ಶತ್ರುವಿಗಿಂತ ಹೆಚ್ಚಾಗಿ ಭಿನ್ನಾಭಿಪ್ರಾಯಗಳು ಇರುತ್ತವೆ ಈಗ ಒಂದೇ ಮನೆಯಲ್ಲಿ ಅವರಿಬ್ಬರು ವಾಸಿಸುವುದೇ ಅಪರೂಪ ಇನ್ನೂ ಅನ್ಯೋನ್ಯತೆಯಂತೂ ತೀರ ವಿರಳ.
ಇಂತಹ ಸಂದರ್ಭದಲ್ಲಿ ತಾಯಿಯಂತಿರುವ ಅತ್ತೆ, ಮಗಳಂತಿರುವ ಸೊಸೆ ಜೋಡಿ ಸಿಗುತ್ತದೆ ಎಂದರೆ ಅದು ಪ್ರಪಂಚದ ಎಂಟನೇ ಅದ್ಭುತಕ್ಕಿಂತ ವಿಶೇಷ ಎನಿಸದಿರದು. ಆದರೂ ಕೂಡ ಒಮ್ಮೊಮ್ಮೆ ಇಂತಹ ವಿಶೇಷ ಘಟನೆಗಳ ನಡೆದು ಉಳಿದೆಲ್ಲರಿಗೂ ಮಾದರಿ ಆಗುವಂತೆ ಆಗುತ್ತದೆ. ಈಗ ಆ ಪಟ್ಟಿಗೆ ಮಹಾರಾಷ್ಟ್ರದಲ್ಲಿ (Maharastra) ನಡೆದ ಈ ಒಂದು ಘಟನೆ ಸೇರಿದೆ. ಇಲ್ಲಿ ಅತ್ತೆಯೊಬ್ಬರು ತನ್ನ ಸೊಸೆಗಾಗಿ ದೇಹದ ಅಂಗವನ್ನೇ ದಾನವಾಗಿ ಕೊಟ್ಟಿದ್ದಾರೆ.
ಮುಂಬೈನ ಕಂಡ್ಲಿವಿಯಲ್ಲಿ (Munbai Kandlivi) 43 ವರ್ಷದ ಆಮಿಷಾ ಜಿತೇಶ್ ಮೋಟಾ (Daughter in law Amisha Jithesh Mota) ಅವರಿಗೆ ಅವರ 70 ವರ್ಷದ ಅತ್ತೆ ಪ್ರಭಾ ಕಂಠಿಲಾಲ್ ಮೋಟ (Mother in law Prabha Kantilala Mota) ಅವರು ಈ ರೀತಿ ಕಿಡ್ನಿ ದಾನ (Kidney donate )ಮಾಡಿದ್ದಾರೆ. ಆಮಿಷಾ
ಅವರು ಕಳೆದ ವರ್ಷ ಅನಾರೋಗ್ಯಕ್ಕೆ ತುತ್ತಾಗಿದ್ದರು, ಇದರಿಂದ ಗುಣವಾಗದ ಅವರು ಹಲವು ದಿನಗಳವರೆಗೆ ಹಾಸಿಗೆ ಹಿಡಿದಿದ್ದರು.
ಇತ್ತೀಚೆಗೆ ಅವಳ ಎರಡು ಕಿಡ್ನಿ ಕೂಡ ಫೇಲ್ಯೂರ್ ಆಗಿತ್ತು ತಕ್ಷಣವೇ ಕಿಡ್ನಿ ಕಸಿ ಮಾಡಬೇಕೆಂದು ವೈದ್ಯರು ಸೂಚಿಸಿದ್ದರು. ಕುಟುಂಬದ ಎಲ್ಲರೂ ಸಹ ಕಿಡ್ನಿ ನೀಡುವುದಕ್ಕೆ ಮುಂದೆ ಬಂದು ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದರು. ಆದರೆ ಎಲ್ಲರೂ ಸಹ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಯಾರ ಕಿಡ್ನಿಯನ್ನು ಕಸಿ ಮಾಡಲು ಆಗದು ಎಂದು ವೈದ್ಯರು ಸೂಚಿಸಿದ್ದರು.
1 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ರೈತರಿಗೆ ಉಚಿತ ಟ್ರ್ಯಾಕ್ಟರ್ ಯೋಜನೆ, ಆಸಕ್ತರು ತಪ್ಪದೇ ಅರ್ಜಿ ಹಾಕಿ.!
ಕಣ್ಣ ಮುಂದೆ ಇಷ್ಟು ಸಮಸ್ಯೆ ನಡೆಯುತ್ತಿರುವುದನ್ನು ಸಹಿಸಿಕೊಳ್ಳಲಾಗದ ಜಿತೇಶ್ ತಾಯಿ (Jithesh Mother ) ಪ್ರಭಾ ಕಂಠೀಲಾಲ್ ಮೋಟಾ ಅವರು ತಮ್ಮ ಸೊಸೆಗಾಗಿ ತಾವೇ ಕಿಡ್ನಿ ಕೊಡುತ್ತೇನೆ ಎಂದು ಮುಂದೆ ಬಂದರು. ಆದರೆ 70 ವರ್ಷ ವಯಸ್ಸಾಗಿದ್ದ ಇವರ ಕಿಡ್ನಿಯನ್ನು ಕಸಿ ಮಾಡಲು ತೆಗೆದುಕೊಳ್ಳುವುದು ಪ್ರಭಾ ರವರ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಡಾಕ್ಟರ್ ಮೊದಲೇ ಹೇಳಿದ್ದರು.
ಆದರೂ ಹಠ ಬಿಡದ ಪ್ರಭಾ ಕಂಠೀಲಾಲ್ ಮೋಟ ಅವರು ತನಗೆ ಏನಾದರೂ ಪರವಾಗಿಲ್ಲ ಆಮಿಷ ಬದುಕಬೇಕು ಅವಳು ಚೆನ್ನಾಗಿರಬೇಕು ಎಂದು ಹಠ ಹಿಡಿದರು. ಕೊನೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ವೈದ್ಯರಿಗೆ ಅಚ್ಚರಿ ಕಾದಿತ್ತು. ಏನೆಂದರೆ, 70 ವರ್ಷನ ವಯಸ್ಸಿನ ಪ್ರಭಾ ಅವರು ಬಹಳ ಆರೋಗ್ಯವಾಗಿದ್ದರು ತಕ್ಷಣವೇ ಆಮಿಷ ಅವರಿಗೆ ಕಿಡ್ನಿಯನ್ನು ಬದಲಾಯಿಸಿದ್ದಾರೆ.
ಲೇಬರ್ ಕಾರ್ಡ್ ಹೊಸ ವೆಬ್ಸೈಟ್ ಪ್ರಾರಂಭ, ಹೊಸ ವೆಬ್ಸೈಟ್ ನಲ್ಲಿ ರಿಜಿಸ್ಟರ್ ಆಗಿ ಸೇವೆಗಳನ್ನು ಪಡೆಯುವುದು ಹೇಗೆ ನೋಡಿ.!
ವೈದ್ಯರ ಚಿಕಿತ್ಸೆ ಕೂಡ ಯಶಸ್ವಿಯಾಗಿದೆ. ಈಗ ಇಬ್ಬರೂ ಡಿಸ್ಚಾರ್ಜ್ ಆಗಿ ಮನೆ ಕೂಡ ಸೇರಿದ್ದಾರೆ ಆರೋಗ್ಯವಾಗಿ ಮನೆಗೆ ಬಂದ ಅತ್ತೆ ಮತ್ತು ಸೊಸೆ ಜೋಡಿಯನ್ನು ಕುಟುಂಬಸ್ಥರೆಲ್ಲರೂ ವಿಶೇಷವಾಗಿ ಬರಮಾಡಿಕೊಂಡಿದ್ದಾರೆ. ಅವರನ್ನು ವಿಶೇಷವಾಗಿ ಸ್ವಾಗತ ಮಾಡಿಕೊಂಡ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ ಹಾಗೆಯೇ ಕಲಿಯುಗದಲ್ಲಿಯೇ ವಿಶೇಷವಾದ ಘಟನೆ ಎಂದೇ ಹೇಳಬಹುದು.
ಈ ಅತ್ತೆ ಸೊಸೆ ಬಾಂಧವ್ಯ ನೋಡಿ ನೆಟ್ಟಿಗರು ಬಹಳ ಆಶ್ಚರ್ಯ ಪಟ್ಟು ಕಮೆಂಟ್ ಮಾಡುತ್ತಿದ್ದಾರೆ ಹಾಗೂ ಅತ್ತೆ ಮನಗೆದ್ದ ಸೊಸೆ ಅಮೀಷಾ ಹಾಗೂ ಸೊಸೆಗೆ ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದ ಪ್ರಭ ಅವರ ಗುಣದ ಬಗ್ಗೆ ಹಾಡಿಹೋಗುತ್ತಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.