ಕೆಲವರ ಕಾಲುಗಳಲ್ಲಿ ನರಗಳು ಹಸಿರು ಬಣ್ಣದಲ್ಲಿ ಅಥವಾ ಕಪ್ಪು ಬಣ್ಣದಲ್ಲಿ ಊದಿಕೊಂಡಿರುವುದನ್ನು ಕಾಣುತ್ತೇವೆ. ಕಾಣಿಸದೆ ಇದ್ದರೂ ಬಹಳ ಓದಿಕೊಂಡು ನೋವು ಕೊಡುತ್ತಿರುತ್ತವೆ ಕೆಲವರಿಗೆ ವೆರಿಕೋಸ್ ವೇನ್ಸ್ ಎಂದು ಮೆಡಿಕಲ್ ಭಾಷೆಯಲ್ಲಿ ಕರೆಯುತ್ತಾರೆ.
ವೆರಿಕೋಸ್ ವೆನ್ಸ್ ಸಮಸ್ಯೆಯಿಂದ ಬಹಳ ಜನರು ನರಳುತ್ತಿದ್ದು ಇತ್ತೀಚೆಗೆ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಆಯುರ್ವೇದದಲ್ಲಿ ಇರುವ ಸುಲಭವಾದ ಪರಿಹಾರಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.
ಆದರೆ ಯಾವುದೇ ಕಾಯಿಲೆ ಆದರು ಕಾಯಿಲೆ ಬರುವುದಕ್ಕೆ ಕಾರಣವನ್ನು ತಿಳಿದುಕೊಂಡರೆ ಅರ್ಧ ಕಾಯಿಲೆ ವಾಸಿ ಆದಂತೆಯೇ ಸರಿ. ಈ ರೀತಿಯಾಗಲು ಕಾರಣವೇನೆಂದರೆ ರಕ್ತನಾಳಗಳಲ್ಲಿ ರಕ್ತ ಸಂಚಾರಕ್ಕೆ ಅಡ್ಡಿಯಾಗಿ ಬ್ಲಾಕೇಜ್ ಗಳು ಆಗುವುದು.
ಈ ರೀತಿ ಹೃದಯದಿಂದ ರಕ್ತನಾಳಕ್ಕೆ, ರಕ್ತನಾಳದಿಂದ ಹೃದಯಕ್ಕೆ ರಕ್ತ ಸಂಚಾರಕ್ಕೆ ಅಡೆತಡೆ ಉಂಟುಮಾಡುವ ವಿಷಯವೇನೆಂದರೆ ನಮ್ಮ ದೇಹದಲ್ಲಿ ಇರುವ ವಾತ ಹಾಗೂ ಪಿತ್ತ ವಿಕಾರಗಳು. ನಾವು ಸೇವಿಸುವ ಆಹಾರ ಮತ್ತು ಬದುಕುವ ರೀತಿಯಲ್ಲಿ ತಪ್ಪಾಗಿರುವುದು ಇದಕ್ಕೆ ಮುಖ್ಯ ಕಾರಣ.
ಆಯುರ್ವೇದ ಹೇಳುವ ಪ್ರಕಾರ ಸರಿಯಾದ ದಿನಚರಿಯವನ್ನು ಪಾಲಿಸದೆ ಇದ್ದಾಗ ಅಜೀರ್ಣ ಮಲಬದ್ಧತೆ ಇತ್ಯಾದಿಗಳು ಉಂಟಾಗಿ ಇದರಿಂದ ದೇಹದಲ್ಲಿ ವಾತ ಹಾಗೂ ಪಿತ್ತ ವಿಕಾರಗಳು ಹೆಚ್ಚಾಗುತ್ತವೆ. ಇವು ರಕ್ತನಾಳಗಳಿಗೆ ಸೇರಿ ಬ್ಲಾಕೆಜ್ ಉಂಟು ಮಾಡಿ ಹೃದಯದಿಂದ ದೂರವಿರುವ ರಕ್ತನಾಳಗಳಿಗೆ ರಕ್ತ ಸಂಚಾರಕ್ಕೆ ಅಡ್ಡಿಪಡಿಸುತ್ತವೆ.
ರಕ್ತನಾಳಗಳ ಊದಿಕೊಳ್ಳುವಿಕೆ, ನೋ’ವು, ರಕ್ತನಾಳಗಳ ಒಡೆದುಹೋಗುವಿಕೆಗೂ ಕೂಡ ಕಾರಣ ಆಗಬಹುದು ಇದನ್ನು ಕಂಟ್ರೋಲ್ ಮಾಡುವುದು ಹೇಗೆ ಎಂದರೆ ನಮ್ಮ ಜೀವನ ಶೈಲಿಯನ್ನು ಸರಿಪಡಿಸಿಕೊಳ್ಳಬೇಕು. ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದರಿಂದ ಪಿತ್ತ ವಿಕಾರಗಳನ್ನು ಕಡಿಮೆಗೊಳಿಸಬಹುದು.
ಹಾಗೆಯೇ ಬೆಳಿಗ್ಗೆ ಬೇಗ ಎದ್ದು ಯೋಗ ಪ್ರಾಣಾಯಾಮ ವ್ಯಾಯಾಮ ಧ್ಯಾನ ಇತ್ಯಾದಿಗಳಲ್ಲಿ ಸಾಧ್ಯವಾದಷ್ಟು ತೊಡಗಿ ಕೊಳ್ಳಬೇಕು. ನಾವು ಸೇವಿಸುವ ಆಹಾರ ಶುದ್ಧವಾಗಿರಬೇಕು. ಕಾಫಿ, ಚಹಾ, ಬೇಕರಿ ಉತ್ಪನ್ನಗಳು ಇತ್ಯಾದಿಗಳಿಂದ ಸಂಪೂರ್ಣವಾಗಿ ದೂರ ಇರಬೇಕು ಇದರಿಂದಲೇ ಗ್ಯಾಸ್ಟ್ರಿಕ್ ಹಾಗೂ ಅಜೀರ್ಣತೆ ಉಂಟಾಗುತ್ತಿರುವುದು.
ಧೂಮಪಾನ ಮಧ್ಯಪಾನ ಗುಟ್ಕಾ ಇಂತಹ ದುಶ್ಚಟಗಳಿಂದ ಹೊರಬರಬೇಕು. ಇಷ್ಟಾದರೆ ಸಲೀಸಾಗಿ ಸಮಸ್ಯೆ ಕಂಟ್ರೋಲ್ ಗೆ ಬರುತ್ತದೆ. ಇದರ ಜೊತೆಗೆ ಈಗಾಗಲೇ ವೆರಿಕೋಸ್ ವೆನ್ಸ್ ಆಗಿದ್ದರೆ ಬೇಗ ಗುಣವಾಗಲು ಆಯುರ್ವೇದಿಕ್ ಟಿಪ್ಸ್ ಹೀಗಿದೆ ನೋಡಿ.
1. ಜೀರಿಗೆ ಹಾಗೂ ಓಂಕಾಳು ಇವೆರಡನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಿ ಬೆಲ್ಲದ ಜೊತೆ ಸೇರಿಸಿ ಸಣ್ಣ ಗುಲಗಂಜಿ ಗಾತ್ರದ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. ಈ ಉಂಡೆಗಳನ್ನು ಬೆಳಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ಎರಡೆರಡು ಉಂಡೆಗಳಾಗಿ ಸೇವಿಸಿದರೆ ದೇಹದಲ್ಲಿರುವ ಕಲ್ಮಶಗಳೆಲ್ಲ ದೇಹದಿಂದ ಹೊರ ಹೋಗಲು ಇದು ಸಹಾಯ ಮಾಡುತ್ತದೆ. ಡಯಾಬಿಟಿಸ್ ಸಮಸ್ಯೆ ಇರುವವರು ಬೆಲ್ಲದ ಬದಲು ಶುಂಠಿರಸ ಹಾಗೂ ನಿಂಬೆ ರಸದೊಂದಿಗೆ ಸೇವಿಸಬೇಕು.
2. ಅಭ್ಯಂಗ ಸ್ನಾನವನ್ನು ಕನಿಷ್ಠ 15 ದಿನಗಳಿಗೆ ಒಮ್ಮೆಯಾದರೂ ಮಾಡಬೇಕು, ಈ ರೀತಿ ಮಾಡುವುದರಿಂದ ನರನಾಡಿಗಳು ಕ್ರಿಯಾಶೀಲಗೊಳ್ಳುತ್ತವೆ. ಆಗ ನರನಾಡಿಗಳಲ್ಲಿ ಬ್ಲಾಕೆಜ್ ಸಮಸ್ಯೆ ಇದ್ದರೆ ಅದು ಪರಿಹಾರವಾಗುತ್ತದೆ.
3. ಯಾವಾಗಲೂ ನಿಂತುಕೊಂಡು ಇರುವುದು ಅಥವಾ ಒಂದೇ ಕಡೆ ಕುಳಿತು ಕೆಲಸ ಮಾಡುವವರಿಗೆ ಈ ಸಮಸ್ಯೆ ಹೆಚ್ಚು. ಯಾಕೆಂದರೆ ಆ ರೀತಿ ಇದ್ದಾಗ ರಕ್ತ ಸಂಚಾರಕ್ಕೆ ಹೆಚ್ಚು ಅಡ್ಡಿ ಆಗುತ್ತದೆ ಜೊತೆಗೆ ಭೂಮಿಯ ಗುರುತ್ವಾಕರ್ಷಣೆ ಕೂಡ ಕೆಳಮುಖವಾಗಿ ಸೆಳೆಯುವುದರಿಂದ ವಿನಾಕಾರಣ ನಿಂತುಕೊಂಡಿರುವುದು ಇಂತಹ ಅಭ್ಯಾಸಗಳನ್ನು ತಪ್ಪಿಸಿ.
4. ವೆರಿಕೋಸ್ ವೇನ್ಸ್ ಸಮಸ್ಯೆಯಿಂದ ಬಹಳ ನರಳುತ್ತಿದ್ದರೆ ನಿತ್ಯ ಪುಷ್ಪದ ಎಲೆ ಹಾಗೂ ಹೂವು, ಅಲೋವೆರಾ ಮತ್ತು ಉತ್ತ್ರಾಣಿಯನ್ನು ಚೆನ್ನಾಗಿ ಅರೆದು ಆ ಮಿಶ್ರಣವನ್ನು ಎಳ್ಳೆಣ್ಣೆಗೆ ಹಾಕಿ ನೀರಿನಾಂಶ ಹೋಗುವವರೆಗೂ ಕುದಿಸಿ ಈ ರೀತಿ ನರಗಳು ಊದಿಕೊಂಡಿರುವ ಕಡೆ, ನಿಧಾನವಾಗಿ ಮಸಾಜ್ ಮಾಡಬೇಕು ಆಗ ಸಮಸ್ಯೆ ಕಂಟ್ರೋಲ್ ಗೆ ಬರುತ್ತದೆ.