ಕೂದಲು ಬೆಳಗಾಗುವುದು ವಯಸ್ಸಾಗುತ್ತಿರುವುದರ ಸಂಕೇತ ಎಂದುಕೊಳ್ಳಲಾಗುತ್ತಿತ್ತು. ಆದರೆ ಈಗ ಚಿಕ್ಕ ವಯಸ್ಸಿಗೆ ಕೂದಲು ಬೆಳಗಾಗುತ್ತಿದೆ, ಇದು ಪ್ರಕೃತಿಗೆ ವಿರುದ್ಧ. ಆದರೆ ಇದಕ್ಕೆ ಕಾರಣ ಮನುಷ್ಯನ ಆಹಾರ ಪದ್ಧತಿ ಮತ್ತು ಆತ ಈಗ ಅಳವಡಿಸಿಕೊಂಡಿರುವ ಜೀವನ ಶೈಲಿ ತೀರ ಇತ್ತೀಚೆಗೆ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಈ 25 ವರ್ಷಗಳ ಹಿಂದೆ ಈಗ ಸರ್ವೇ ಸಾಮಾನ್ಯವಾಗಿ ಇರುವ ಯಾವುದೇ ಸಮಸ್ಯೆಗಳು ಅವರಿಗೆ ಇರಲಿಲ್ಲ.
ಯಾಕೆಂದರೆ ಬಹಳ ಕ್ರಾಂತಿಕಾರಿಯಾಗಿ ಈ ಎರಡು ದಶಕದಲ್ಲಿ ಜೀವನ ಬದಲಾಗಿ ಹೋಗಿದೆ. ಊಟ ಬಟ್ಟೆ ಸೇರಿ ನಮ್ಮ ದೈನಂದಿಕ ಚಟುವಟಿಕೆಗಳು ಕೂಡ ಸಂಪೂರ್ಣ ಹದಗೆಟ್ಟಿದೆ ಎಂದರೆ ತಪ್ಪಲ್ಲ, ಇದೇ ಮುಂತಾದ ಕಾರಣಗಳಿಂದಾಗಿ ಈ ರೀತಿ ವಯಸ್ಸಾಗೋ ಮುಂಚೆ ಕೂದಲು ಬೆಳ್ಳಗಾಗುವಂತಹ ಕಾಲ ಬಂದಿದೆ.
ವಿಟಮಿನ್ B12 ಹಾಗೂ ವಿಟಮಿನ್ B17 ಕೊರತೆಯಿಂದಾಗಿ ದೇಹದಲ್ಲಿ ಈ ಸಮಸ್ಯೆ ಆಗುತ್ತಿದೆ. ತುಪ್ಪ ತಿನ್ನುವುದರಿಂದ ದೇಹಕ್ಕೆ B12ಹಾಗೂ ಸಿರಿಧಾನ್ಯಗಳನ್ನು ತಿನ್ನುವುದರಿಂದ ವಿಟಮಿನ್ B17 ದೇಹಕ್ಕೆ ಸಿಗುತ್ತದೆ. ಆದರೆ ಸಮಸ್ಯೆ ಏನೆಂದರೆ ನಾವು ತಿನ್ನುತ್ತಿರುವ ಆಹಾರವು ದೇಹಕ್ಕೆ ಹಿಡಿಯಲು ಕೆಲವು ಕೆಮಿಕಲ್ ಗಳು ಬಿಡುತ್ತಿಲ್ಲ, ಅದರಲ್ಲಿ ನಾವು ಪ್ರತಿನಿತ್ಯ ಸೇವಿಸುತ್ತಿರುವ ಅನೇಕ ಪದಾರ್ಥಗಳಲ್ಲಿ ಈ ಕೆಮಿಕಳ್ ಗಳು ಇವೆ.
ಉದಾಹರಣೆಗೆ ನಾವು ಅತಿ ಕಳಪೆ ಗುಣಮಟ್ಟದ ಅಡುಗೆ ಎಣ್ಣೆಗಳನ್ನು ಬಳಸುತ್ತಿದ್ದೇವೆ, ಅದರಲ್ಲೂ ಪಾಮ್ ಆಯಿಲ್ ನಂತಹ ಅಡುಗೆ ಎಣ್ಣೆಗಳು ಅತಿ ಹೆಚ್ಚು ಕೆಮಿಕಲ್ ಗಳನ್ನು ಒಳಗೊಂಡಿರುತ್ತವೆ. ಅನೇಕ ದೇಶಗಳಲ್ಲಿ ಇದು ಬ್ಯಾನ್ ಆಗಿದೆ ಪ್ರತಿಷ್ಠಿತ ಆಹಾರ ಪದಾರ್ಥಗಳನ್ನು ಅಥವಾ ತಿಂಡಿ ತಿನಿಸುಗಳನ್ನು ತಯಾರಿಸುವ ಕಂಪನಿಗಳಲ್ಲಿ ಇದನ್ನು ಬಳಕೆ ಮಾಡಬಾರದು ಎನ್ನುವ ಸರ್ಕಾರದ ನಿಯಮ ಕೂಡ ಇದೆ.
ಆದರೆ ಇಂದು ನಾವು ಯಾವ ಎಣ್ಣೆ ಹಾಕಿ ತಯಾರಿಸಿದ್ದಾರೆ ಎನ್ನುವುದನ್ನು ನೋಡುವುದು ಬಿಟ್ಟು ಚಪ್ಪರಿಸಿಕೊಂಡು ಜಂಕ್ ಫುಡ್ ಗಳನ್ನು ತಿನ್ನುತ್ತಿದ್ದೇವೆ. ಮತ್ತೊಂದು ಕಾರಣ ಏನೆಂದರೆ ಈಗ ಬೆಳೆಯುತ್ತಿರುವ ಎಲ್ಲ ತರಕಾರಿ ಹಾಗೂ ಧಾನ್ಯಗಳು ಎಲ್ಲದಕ್ಕೂ ಕೂಡ ರೈತರು ರಸಗೊಬ್ಬರ ಹಾಗೂ ಕ್ರಿಮಿನಾಶಕಗಳನ್ನು ಬಳಸುತ್ತಿದ್ದಾರೆ.
ಇದರ ಎಫೆಕ್ಟ್ ಕೂಡ ಆಗಿದೆ ಹಾಗೆ ನಾವು ಈಗ ಪಾತ್ರೆ ತೊಳೆಯಲು ವಿಮ್ ಜೆಲ್ ಅಥವಾ ಡಿಶ್ ವಾಷರ್ ಬಾರ್ ಗಳನ್ನು ಬಳಸುತ್ತಿದ್ದೇವೆ. ಇದು ತೊಳೆದ ಮೇಲೆ ಕೂಡ ವಾಸನೆ ಹಾಗೆ ಇರುತ್ತದೆ ಅಂದರೆ ಅದರಲ್ಲಿ ಕೆಮಿಕಲ್ ಅಂಶ ಇದೆ ಎಂದು ಅರ್ಥ. ಇದಕ್ಕೆ ಬಿಸಿ ಊಟ ಅಥವಾ ಬಿಸಿ ತುಪ್ಪ ಹಾಕಿಕೊಂಡು ತಿಂದರೆ ಅದು ದೇಹಕ್ಕೆ ಸೇರುವುದಿಲ್ಲ ಅಥವಾ ಅದರಲ್ಲಿರುವ ಪೋಷಕಾಂಶಗಳನ್ನು ಕೆಮಿಕಲ್ ಕೊಂ’ದು ಬಿಡಬಹುದು.
ಬೂದಿ ಅಥವಾ ಮಣ್ಣು ಹಾಕಿಕೊಂಡು ಪಾತ್ರೆಗಳನ್ನು ಹಿಂದಿನವರು ತೊಳೆಯುತ್ತಿದ್ದರು. ಆದರೆ ಈಗ ನಾವು ಬುದ್ಧಿವಂತರು ಎಂದುಕೊಂಡು ಬೇಡದ್ದವುಗಳನ್ನೇ ಬಳಸುತ್ತಿದ್ದೇವೆ. ನಾವು ಬಳಸೋ ಪೇಸ್ಟ್ ನಲ್ಲೂ ಕೂಡ ಎಷ್ಟೋ ಪ್ರಮಾಣದ ಕೆಮಿಕಲ್ ಇದೆ ಆದರೂ ಅದರ ಡಿಟೇಲ್ ನೋಡುವ ತಾಳ್ಮೆ ಯಾರಿಗೂ ಇಲ್ಲ ಇದರ ಜೊತೆಗೆ ಕುಡಿಯುವ ನೀರು ಕೂಡ ಮುಖ್ಯ ಪಾತ್ರ ವಹಿಸುತ್ತದೆ.
ಯಾಕೆಂದರೆ ಕುಡಿಯುವ ನೀರಿನಲ್ಲಿ ಅಸಿಡಿಕ್ ಅಂಶ ಹೆಚ್ಚಾಗುತ್ತಿದೆ ನಮ್ಮ ದೇಹಕ್ಕೆ ಸೇರುವ ಯಾವುದೇ ಪದಾರ್ಥವಾದರೂ ಆಲಾಕಲಿನ್ ಆಗಬೇಕು ಅದು ಹೊರಗೆ ಬರುವಾಗ ಅಸಿಡಿಕ್ ಆಗಿರಬೇಕು. ಇಂದು ನಾವು RO ವಾಟರ್ ಎಂದು ಸಂಸ್ಕರಿಸಿದ ನೀರನ್ನು ಕುಡಿಯುತ್ತಿದ್ದೇವೆ. ನಾವು ದುಬಾರಿ ಬೆಲೆಯ ಎಣ್ಣೆಗಳು, ಶಾಂಪುಗಳು ಬಳಸಿದರೆ ಕೂದಲು ಚೆನ್ನಾಗಿ ಆಗುತ್ತದೆ ಎಂದುಕೊಳ್ಳುತ್ತೇವೆ.
ಅದರಲ್ಲೂ ರಾಸಾಯನಿಕ ಅಂಶಗಳು ಇರುವುದರಿಂದ ಅದು ಕೂದಲು ಬೆಳಗಾಗುವುದಕ್ಕೆ ಕಾರಣವಾಗುತ್ತಿದೆ ಎನ್ನುವುದು ಕೂಡ ಪ್ರಮುಖ ಅಂಶ. ಇಂತಹ ಸಾಕಷ್ಟು ಕರಣಗಳನ್ನು ಹೇಳಬಹುದು ಆದರೆ ಇದನ್ನು ಸರಿಪಡಿಸುವುದು ಹೇಗೆ ಎಂದರೆ ಆಯುರ್ವೇದದಲ್ಲಿ ನಶ್ಯ ತೈಲ ಚಿಕಿತ್ಸೆ ಎಂದು ಇದೆ. ಅಣುತೈಲ ಎನ್ನುವ ಔಷಧಿಯೊಂದು ಎಲ್ಲಾ ಆಯುರ್ವೇದಿಕ್ ಅಂಗಡಿಗಳಲ್ಲೂ ಸಿಗುತ್ತದೆ, ಅದನ್ನು ಖರೀದಿಸಬಹುದು.
ಇದನ್ನು ಬೆಳಗ್ಗೆ ರಾತ್ರಿ ಎರಡು ಹನಿ ಮೂಗಿನ ಎರಡು ಹೊಳ್ಳೆಗಳಿಗೆ ಹಾಕಿಕೊಳ್ಳಬೇಕು ಅಥವಾ ನಿಮ್ಮ ಮನೆಯಲ್ಲಿ ಇರುವ ಶುದ್ಧವಾದ ಹರಳೆಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಎರಡು ಹನಿ ಬೆಳಿಗ್ಗೆ ರಾತ್ರಿ ಮೂಗಿಗೆ ಹಾಕಿಕೊಳ್ಳಬೇಕು ಈ ರೀತಿ ಮಾಡಿದರೆ ಸಂಪೂರ್ಣ ರಿವರ್ಸ್ ಆಗಿ ಕೂದಲು ಕಪ್ಪಗಾಗುವುದಕ್ಕೆ ಖಂಡಿತವಾಗಿಯೂ ಸಾಧ್ಯವಿದೆ.