ಇತ್ತೀಚಿನ ವರ್ಷಗಳಲ್ಲಿ 35 ವರ್ಷಗಳಿಗೆ ಮಹಿಳೆಯರು ಅನೇಕ ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ ಗರ್ಭಕೋಶದ ಚಿಕಿತ್ಸೆ (histecomy) ಮಾಡಸಿಕೊಳ್ಳುತ್ತಿದ್ದಾರೆ. ಮಹಿಳೆಯರಿಗೆ ಮುಟ್ಟಿನ ಸಮಸ್ಯೆಗಳಿದ್ದಾಗ ಅತಿಯಾದ ರಕ್ತಸ್ರಾವ ಅಥವಾ ಗರ್ಭಕೋಶದ ಕ್ಯಾನ್ಸರ್ ಅಥವಾ ಇದೇ ರೀತಿಯ ಇನ್ನಷ್ಟು ಸಮಸ್ಯೆಗಳಿಂದಾಗಿ ಈ ರೀತಿ ಗರ್ಭಕೋಶವನ್ನು ತೆಗೆಸುವ ಸೂಚನೆ ನೀಡಲಾಗುತ್ತದೆ.
ಅನೇಕ ಬಾರಿ ಈ ನೋವುಗಳನ್ನು ತಡೆಯಲಾಗದೆ ಅಥವಾ ಅದನ್ನು ಎದುರಿಸಲಾಗದೆ ಮಹಿಳೆಯರು ಗರ್ಭಕೋಶವನ್ನು (Uterus) ತೆಗೆಸಿಕೊಳ್ಳಲು ಮುಂದಾಗುತ್ತಾರೆ. ಈ ರೀತಿ ಚಿಕಿತ್ಸೆಗೆ ಒಳಗಾಗುವುದರಿಂದ ಮಹಿಳೆಯರ ದೇಹದ ಮೇಲೆ ನಂತರದ ದಿನಗಳಲ್ಲಿ ಏನೆಲ್ಲ ಪರಿಣಾಮ ಬೀರುತ್ತದೆ ಹಾಗೂ ಅದಕ್ಕೆ ಇರುವ ಪರಿಹಾರ ಏನು? ಎನ್ನುವುದರ ಬಗ್ಗೆ ನಾವು ಇಂದು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಇಂತಹದ್ದೇ ಕಿವಿ ನೋವಿರಲಿ, ಕಿವಿಯಲ್ಲಿ ಗುಂಯ್ ಶಬ್ಧವಿರಲಿ ಈ ಎಣ್ಣೆ ಎರಡು ಹನಿ ಹಾಕು.!
ತಪ್ಪದೇ ಕೊನೆಯವರೆಗೂ ಇದನ್ನು ಓದಿ ಮತ್ತು ಈ ಉಪಯುಕ್ತ ಮಾಹಿತಿಯ ಬಗ್ಗೆ ಈ ರೀತಿ ಪರಿಸ್ಥಿತಿಯಿಂದ ಬಳಲುತ್ತಿರುವ ನಿಮ್ಮ ಪರಿಚಯದ ಮಹಿಳೆಯರಿಗೂ ಕೂಡ ತಿಳಿಸಿಕೊಡಿ. ಈ ರೀತಿ ಗರ್ಭಕೋಶವನ್ನು ತೆಗೆಸಿದ ಮೇಲೆ ದೇಹದಲ್ಲಿ ಹಾರ್ಮೋನ್ ವ್ಯತ್ಯಾಸ (harmons variation) ಆಗೋದು ಸರ್ವೇಸಾಮಾನ್ಯ. ಅದರಲ್ಲೂ ಕೂಡ ಪ್ರೊಜೆಸ್ಟಿರಾನ್ (Progesterone), ಈಸ್ಟ್ರೋಜನ್ (Estrogen) ಈ ಹಾರ್ಮೋನ್ಸ್ ಗಳನ್ನು ಮಹಿಳೆಯರ ಗರ್ಭಕೋಶದ ಸಂಬಂಧಿತ ಹಾರ್ಮೋನುಗಳು ಎಂದೇ ಹೇಳಲಾಗುತ್ತದೆ.
ಈ ಹಾರ್ಮೋನ್ ಗಳ ವ್ಯತ್ಯಾಸ ದೇಹದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಗರ್ಭಕೋಶವನ್ನು ತೆಗೆಸುವುದರಿಂದ ಈ ಹಾರ್ಮೋನ್ ಗಳ ಉತ್ಪತ್ತಿ ಕುಂಟಿತಗೋಳ್ಳುತ್ತದೆ ಅಥವಾ ನಿಲ್ಲುತ್ತದೆ. ಇದರ ಪರಿಣಾಮವಾಗಿ ತಲೆ ಕೂದಲು ಉದುರಲು ಶುರು ಆಗುತ್ತದೆ, ವಿಪರೀತ ತಲೆನೋವು ಬರುತ್ತದೆ, ಸಿಟ್ಟು ಕೋಪ ಈ ರೀತಿ ಮಾಡ್ ಸಿಂಗ್ ಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತವೆ. ನಿದ್ರಾಹೀನತೆ ಅವರನ್ನು ಬಲವಾಗಿ ಕಾಡುತ್ತದೆ ಇದರ ಹಿಂದೆಯೇ ಇನ್ನಿತರ ಸಮಸ್ಯೆಗಳು ಹಿಂಬಾಲಿಸಿ ಬರುತ್ತವೆ.
ಕಿವಿಯಲ್ಲಿ ಗುಂಯ್ ಶಬ್ದ ಕೇಳಿಸುತ್ತಿದೆಯಾ, ಈ ಸಮಸ್ಯೆ ಇರಬಹುದು ಎಚ್ಚರಿಕೆಯಿಂದ ಇರಿ.!
ಈಸ್ಟ್ರೋಜನ್ ಹಾರ್ಮೋನ್ಸ್ ಕೊರತೆಯಿಂದ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗುತ್ತದೆ ಅದು ನೇರವಾಗಿ ಆರ್ಥೋರಿಟಿಕ್ಸ್ ಅಂತಹ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಮಂಡಿ ನೋವು, ಕೈ ಕಾಲು ನೋವು ಈ ರೀತಿ ಸಮಸ್ಯೆಗಳು ಕಾಣಿಸಿಕೊಂಡು ದೇಹ ಭಾರವಾದ ಅನುಭವ ಆಗುತ್ತದೆ ಮತ್ತು ಜನಾಂಗಗಳು ಡ್ರೈ ಆಗುತ್ತದೆ. ಇದು ಇನ್ನಷ್ಟು ಸಮಸ್ಯೆಗಳಿಗೆ ದಾರಿಯಾಗುತ್ತದೆ. ಈ ರೀತಿಯಾದಾಗ ಮಹಿಳೆಯರು ನೇರವಾಗಿ ಇದಕ್ಕೆ ಸಂಬಂಧಿಸಿದ ಮಾತ್ರೆಗಳ ಮೊರೆ ಹೋಗುತ್ತಾರೆ.
ಆದರೆ ಇವುಗಳಿಂದ ಸೈಡ್ ಎಫೆಕ್ಟ್ ಗಳು ತಪ್ಪಿದ್ದಲ್ಲ. ಇದ್ಯಾವುದು ಮಾಡದೆ ನ್ಯಾಚುರಲ್ ಆಗಿ ಈಸ್ಟ್ರೋಜನ್ ಹಾಗೂ ಪ್ರೊಜೆಸ್ಟಿರಾನ್ ಉತ್ಪತ್ತಿಗೆ ಪ್ರೇರಣೆ ಕೊಡುವಂತಹ ಮನೆಮದ್ದುಗಳನ್ನು ಮಾಡಿಕೊಂಡು ಸೇವಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಆದ್ದರಿಂದ ಮೇಲೆ ತಿಳಿಸಿದ ಈ ರೀತಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಗರ್ಭಕೋಶಗಳನ್ನು ತೆಗೆಸಿದ ಮಹಿಳೆಯರು ಈಗ ಎರಡು ಮನೆಮದ್ದುಗಳನ್ನು ಫಾಲೋ ಮಾಡಿ, ಈ ಸಮಸ್ಯೆಗಳಿಂದ ಹೊರಬನ್ನಿ.
ಬಿಳಿ ದಾಸವಾಳದಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಇದನ್ನು ಹೇಗೆ ಬಳಸಬೇಕು ನೋಡಿ.!
ದಿನವೂ ಕೂಡ ಮಜ್ಜಿಗೆಯಲ್ಲಿ (buttermilk) ಅಗಸೆ ಬೀಜದ ಪುಡಿಯನ್ನು (flax seeds powder) ಸೇರಿಸಿ ಕುಡಿಯಬೇಕು. ಅಗಸೆ ಬೀಜವನ್ನು ಚೆನ್ನಾಗಿ ಒಣಗಿಸಿ ಅದನ್ನು ಪುಡಿ ಮಾಡಿ ಇಟ್ಟುಕೊಂಡು ಒಂದು ಲೋಟ ಮಜ್ಜಿಗೆಗೆ ಅರ್ಧದಿಂದ ಒಂದು ಚಮಚದಷ್ಟು ಅಗಸೆ ಬೀಜದ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ಕುಡಿಯುವುದರಿಂದ ನ್ಯಾಚುರಲ್ ಆಗಿ ದೇಹದಲ್ಲಿ ಈ ಹಾರ್ಮೋನ್ ಗಳ ಉತ್ಪತ್ತಿ ಆಗುತ್ತದೆ.
ಅದೇ ರೀತಿ ಪ್ರತಿದಿನವೂ ಕೂಡ ಅಶ್ವಗಂಧ ಸೇವಿಸುವುದರಿಂದ ಕೂಡ ಈ ರೀತಿ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅಶ್ವಗಂಧವನ್ನು (Ashwagandha) ನೇರವಾಗಿ ಸೇವಿಸಲು ಸಾಧ್ಯವಾಗದಿದ್ದವರು ಆಯುರ್ವೇದ ಅಂಗಡಿಗಳನ್ನು ಸಂಪರ್ಕಿಸಿದರೆ ಇದಕ್ಕೆ ಸಂಬಂಧಿಸಿದ ಗುಳಗೆಗಳು ಅಥವಾ ಪೌಡರ್ ನ್ನು ನೀಡುತ್ತಾರೆ ಅವುಗಳನ್ನು ಕೂಡ ಸೇವಿಸಬಹುದು.