ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಪಾಲಿದೆ ಎಂದು ಹೇಳುತ್ತಿರುತ್ತಾರೆ. ಆದರೆ ಎಲ್ಲಾ ರೀತಿಯ ಆಸ್ತಿಯಲ್ಲಿಯೂ ಕೂಡ ಹೆಣ್ಣು ಮಕ್ಕಳಿಗೆ ತಂದೆ ಆಸ್ತಿ ಸಿಗುವುದಿಲ್ಲ ಎಂದೇ ಹೇಳಬಹುದು. ಹೌದು ಆದರೆ ಈ ದಿನ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಯಾವ ಆಸ್ತಿ ಸಿಗುತ್ತದೆ ಯಾವ ಆಸ್ತಿ ಸಿಗುವುದಿಲ್ಲ.
ಹಾಗೂ ಆಸ್ತಿಯಲ್ಲಿ ಎಷ್ಟು ವಿಧಗಳಿದೆ ಹಾಗೂ ಆ ಆಸ್ತಿ ಯಾರಿಗೆ ಸಿಗುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಬಹಳ ಪ್ರಮುಖವಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ ಆಸ್ತಿಯಲ್ಲಿ ಎರಡು ವಿಧ.
* ಪಿತ್ರಾರ್ಜಿತ ಆಸ್ತಿ
* ಸ್ವಯಾರ್ಜಿತ ಆಸ್ತಿ.
ಈ ಸುದ್ದಿ ಓದಿ:- ಮನೆಯಲ್ಲಿ ಎಲ್ಲರ ಕೆಲಸ ಶೀಘ್ರವಾಗಿ ನೆರವೇರಿ ಅದೃಷ್ಟ ಒಲಿಯಬೇಕೆಂದರೆ ಮುಖ್ಯ ದ್ವಾರದ ಮೇಲೆ ಈ ನಂಬರ್ ಬರೆದು, ದಿನ ನೋಡಿ.!
* ಪಿತ್ರಾರ್ಜಿತ ಆಸ್ತಿ ಎಂದರೆ ಹೆಣ್ಣು ಮಕ್ಕಳ ತಂದೆಯ ಮೂರು ತಲೆಮಾರಿನಿಂದ ಇರುವಂತಹ ಆಸ್ತಿ ಅಂದರೆ ಅಜ್ಜ ತಾತ ಮುತ್ತಾತ ಹೀಗೆ ಇವರ ಹೆಸರುಗಳಲ್ಲಿ ಇದ್ದಂತಹ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎಂದು ಕರೆಯುತ್ತಾರೆ.
* ಅದೇ ರೀತಿ ಸ್ವಯಾರ್ಜಿತ ಆಸ್ತಿ ಎಂದರೆ ತಾನೆ ಸ್ವಂತ ದುಡಿಮೆಯನ್ನು ಮಾಡುವುದರ ಮೂಲಕ ಸ್ವಂತ ಹಣದಲ್ಲಿ ಕೊಂಡುಕೊಳ್ಳುವಂತಹ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎಂದು ಕರೆಯುತ್ತಾರೆ. ಹೀಗೆ ಈ ಎರಡು ಆಸ್ತಿಯಲ್ಲೂ ಕೂಡ ಬಹಳ ವಿಭಿನ್ನವಾದ ಅರ್ಥ ಇದೆ ಎಂದೇ ಹೇಳಬಹುದು.
ಪಿತ್ರಾರ್ಜಿತ ಆಸ್ತಿ ಎಂದರೆ ನಮ್ಮ ಹಿಂದಿನವರು ಮಾಡಿಟ್ಟಂತಹ ಆಸ್ತಿ, ಸ್ವಯಾರ್ಜಿತ ಆಸ್ತಿ ಎಂದರೆ ನಮ್ಮ ಸ್ವಂತ ಹಣದಲ್ಲಿ ಖರೀದಿ ಮಾಡಿದಂತಹ ಆಸ್ತಿ. ಅವೆರಡರಲ್ಲಿಯೂ ಕೂಡ ನಮಗೆ ಒಂದೇ ರೀತಿಯ ಹಕ್ಕು ಇರುವುದಿಲ್ಲ ಅಂದರೆ ಹೆಣ್ಣು ಮಕ್ಕಳಿಗೆ ಒಂದೇ ರೀತಿಯ ಹಕ್ಕು ಇರುವುದಿಲ್ಲ. ಹಾಗಾದರೆ ಈಗ ಹೆಣ್ಣು ಮಕ್ಕಳಿಗೆ ತನ್ನ ತಂದೆಯ ಆಸ್ತಿಯಲ್ಲಿ ಯಾವಾಗ ಪಾಲು ಸಿಗುವುದಿಲ್ಲ ಎಂದು ನೋಡುವುದಾದರೆ.
ಈ ಸುದ್ದಿ ಓದಿ:- ಈ ತಪ್ಪುಗಳನ್ನು ಮಾಡಿದರೆ ಮನೆಯಲ್ಲಿ ದರಿದ್ರತನ ಹೆಚ್ಚಾಗುತ್ತದೆ……
* ಸ್ವ ಇಚ್ಛೆಯಿಂದ ಆಸ್ತಿ ಕೊಟ್ಟು ಪುನಹ ಕೇಳಿದರೆ ಕಷ್ಟ. ಅಂದರೆ ಸ್ವಯಿಚ್ಛೆಯಿಂದ ತಂದೆ ಆಸ್ತಿಯಿಂದ ಪಡೆದುಕೊಂಡು ಮತ್ತೆ ನನಗೆ ಈಗ ಬೇಡ ನಾನೇ ಕೇಳಿ ಪಡೆದುಕೊಳ್ಳುತ್ತೇನೆ ಎಂದು ಹೇಳಿ ಮತ್ತೆ ಅವರಿಗೆ ಆಸ್ತಿ ಕೊಟ್ಟರೆ ಮತ್ತೆ ಅದನ್ನು ನೀವು ಕೇಳಿದರೆ ಅದನ್ನು ನೀವು ಪಡೆದುಕೊಳ್ಳುವುದಕ್ಕೆ ಸ್ವಲ್ಪ ಕಷ್ಟವಾಗಬಹುದು.
* ಎಲ್ಲರಿಗೂ ತಿಳಿದಿರುವಂತೆ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕು ಇದೆ ಆದರೆ ಕೆಲವೊಂದು ಸಂದರ್ಭದಲ್ಲಿ ಅಂದರೆ ಹಿರಿಯರನ್ನು ನೋಡಿಕೊಳ್ಳುತ್ತಿದ್ದರೆ ಅವರ ಆರೋಗ್ಯದ ವಿಚಾರವಾಗಿ ನೀವೇನಾ ದರೂ ಖರ್ಚು ಮಾಡುತ್ತಿದ್ದರೆ. ಆ ಒಂದು ಸಮಯದ ಆಧಾರದ ಮೇಲೆ ಆ ಒಂದು ಸಂದರ್ಭದಲ್ಲಿ ಅನುಗುಣವಾಗಿ ನಿಮಗೆ ಆಸ್ತಿ ಸಿಗಬಹುದು ಅಥವಾ ಸಿಗದೇ ಇರಬಹುದು.
* 2005 ಇಸವಿಗಿಂತ ಮುಂಚಿತವಾಗಿ ಆಸ್ತಿ ಆಗಲೇ ಭಾಗವಾಗಿ ನಿಮ್ಮ ಅಣ್ಣ ಅಥವಾ ತಮ್ಮನ ಹೆಸರಲ್ಲಿ ರಿಜಿಸ್ಟರ್ ಆಗಿದ್ದರೆ ಆ ಒಂದು ಆಸ್ತಿಯಲ್ಲಿ ನಿಮಗೆ ಪಾಲು ಸಿಗುವುದಿಲ್ಲ.
* ಕಾಲಮಿತಿ ಕಾಯ್ದೆಯ ಅನ್ವಯ ಹೆಣ್ಣು ಮಕ್ಕಳು ಆಸ್ತಿ ಹಂಚಿಕೆ ಮಾಡುವ ಸಂದರ್ಭದಲ್ಲಿ ಆಸ್ತಿ ಬೇಡ ಎಂದು ಹೇಳಿ ಸ್ವಲ್ಪ ವರ್ಷಗಳು ಕಳೆದ ನಂತರ ಆಸ್ತಿ ಬೇಕು ಎಂದರೆ ಕಾಲ ಮಿತಿ ಕಾಯ್ದೆಯ ಅಡಿ ಆ ಆಸ್ತಿಯಲ್ಲಿ ಅವಳಿಗೆ ಯಾವುದೇ ರೀತಿಯ ಹಕ್ಕು ಇರುವುದಿಲ್ಲ. ಅಂದರೆ ಅವಳು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ.
ಈ ಸುದ್ದಿ ಓದಿ:- ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ 12 ಲಕ್ಷ ಪಡೆಯಬಹುದು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
* ಯಾವುದೇ ಆಸ್ತಿಯ ಮೇಲೆ ಸಾಲ ಇದ್ದು ಅದನ್ನು ತಿಳಿಸಲು ಒಪ್ಪಿ ಕೊಳ್ಳದೆ ಇದ್ದಂತಹ ಸಮಯದಲ್ಲಿಯೂ ಕೂಡ ಅವಳು ಆ ಒಂದು ಆಸ್ತಿಯನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ.
* ಅದೇ ರೀತಿ ಸ್ವಯಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ತನ್ನ ತಂದೆಯ ಸಂಪೂರ್ಣವಾದ ಆಸ್ತಿಯಲ್ಲಿ ಹಕ್ಕು ಇರುತ್ತದೆ ಹಾಗೇನಾದರೂ ಅವರ ತಂದೆ ಯಾವುದೇ ರೀತಿಯ ಆಸ್ತಿಯನ್ನು ಭಾಗ ಮಾಡದೆ ಮರಣ ಹೊಂದಿದರೆ ಅವನು ಸಂಪಾದಿಸಿರುವಂತಹ ಆಸ್ತಿ ಅವನ ಮಗ ಮಗಳು ಹೆಂಡತಿ ಎಲ್ಲರಿಗೂ ಕೂಡ ಸಮನಾದ ಪಾಲು ಹೋಗುತ್ತದೆ.