ನಮ್ಮ ದೇಶದಲ್ಲಿ ತೆಂಗಿನಕಾಯಿ ವಿಶೇಷವಾದ ಸ್ಥಾನಮಾನ ಇದೆ. ಯಾವುದೇ ಶುಭ ಕಾರ್ಯಗಳಲ್ಲಾಗಲಿ ಮನೆಯಲ್ಲಿ ನಡೆಯುವ ಪೂಜ ವಿಧಿ ವಿಧಾನಗಳಲೇ ಆಗಲಿ ತೆಂಗಿನಕಾಯಿ ಇಲ್ಲದೇ ಇದ್ದರೆ ನಡೆಯುವುದೇ ಇಲ್ಲ ಅಷ್ಟೇ ಅಲ್ಲದೆ ಅಡಿಗೆಗೂ ಕೂಡ ತೆಂಗಿನಕಾಯಿ ಬೇಕೇ ಬೇಕು ಮನೆಗಳಲ್ಲಿ ದೇವರಿಗೆ ಪೂಜೆ ಮಾಡುವಾಗಲೂ ಅಥವಾ ದೇವಸ್ಥಾನದಲ್ಲಿ ಹೋಗಿ ದೇವರಿಗೆ ಪೂಜೆ ಮಾಡಿಸುವಾಗಲು ಅಥವಾ ಮುತ್ತೈದೆಯರಿಗೆ ಮಡಿಲು ತುಂಬುವಾಗಲು ತೆಂಗಿನಕಾಯಿ ಇರಲೇಬೇಕು, ಇಲ್ಲವಾದಲ್ಲಿ ಅದು ಅಪೂರ್ಣ ಆಗುತ್ತದೆ.
ಆದರೆ ಅನೇಕರಿಗೆ ಈ ರೀತಿ ತೆಂಗಿನಕಾಯಿ ಬಳಕೆ ಬಗ್ಗೆ ಗೊಂದಲ ಇದೆ. ಯಾಕೆಂದರೆ ತೆಂಗಿನಕಾಯಿಯಲ್ಲಿ ಕೆಲವೊಮ್ಮೆ ಮೂರು ಕಣ್ಣುಗಳು ಕಾಣುತ್ತವೆ, ಕೆಲವರು ಪೂರ್ತಿ ಕ್ಲೀನ್ ಮಾಡಿ ತೆಂಗಿನ ಕಾಯಿಯನ್ನು ಪೂಜೆಗೆ ಕೊಟ್ಟರೆ ಇನ್ನೂ ಕೆಲವರು ಪೂರ್ಣ ಕಾಯಿಯನ್ನೇ ಕೊಡುತ್ತಾರೆ. ಹೀಗಾಗಿ ಯಾವುದು ಸರಿಯಾದ ಕ್ರಮ ಎನ್ನುವುದರ ಬಗ್ಗೆ ಗೊಂದಲವಿದೆ ಅದಕ್ಕೆ ಉತ್ತರ ಹೀಗಿದೆ ನೋಡಿ.
ಗರ್ಭಕೋಶ ತೆಗೆದ ನಂತರ ಮಹಿಳೆಯರಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತೆ ಗೊತ್ತ.?
ತೆಂಗಿನಕಾಯಿಯಲ್ಲಿರುವ ಮೂರು ಕಣ್ಣನ್ನು ಶಿವನ ಮೂರು ಕಣ್ಣುಗಳಿಗೆ ಹೋಲಿಸಲಾಗುತ್ತದೆ. ಹಾಗಾಗಿ ತೆಂಗಿನ ಕಾಯಿಯನ್ನು ಸಾಕ್ಷಾತ್ ಶಿವ ಎನ್ನುತ್ತಾರೆ. ಈ ಕುರಿತಾದ ಮತ್ತೊಂದು ದಂತ ಕಥೆ ಇದೆ. ಅದರಲ್ಲಿ ಹೇಳುವ ಪ್ರಕಾರ ತೆಂಗಿನ ಕಾಯಿಯಲ್ಲಿರುವ ಮೂರು ಕಣ್ಣುಗಳ ಮನುಷ್ಯನ ಮುಖದ ರೀತಿ ಕಾಣುತ್ತದೆ ಹಿಂದೆಲ್ಲಾ ನರಬಲಿ ಹಾಗೂ ಪ್ರಾಣಿಬಲಿ ಹೆಚ್ಚು ರೂಢಿಯಲ್ಲಿ ಇತ್ತು.
ಇದನ್ನು ತಪ್ಪಿಸುವ ಸಲುವಾಗಿ ಈ ರೀತಿ ಮನುಷ್ಯನ ಮುಖ ಪ್ರಾಣಿಯ ಮುಖವನ್ನು ಹೋಲುವ ರೀತಿ ಇರುವ ತೆಂಗಿನಕಾಯಿಯನ್ನು ಪೂಜೆಗಳಲ್ಲಿ ಒಡೆಯಲು ಆರಂಭಿಸಿ ದೇವರಿಗೆ ತಾವು ಸಂಪೂರ್ಣ ಶರಣು ಎಂದು ಮನವರಿಕೆ ಮಾಡಲು ಶುರು ಮಾಡಿದರು. ಅಂದಿನಿಂದ ಪ್ರಾಣಿಬಲಿ ಹಾಗೂ ನರಬಲಿ ಕ್ರಮೇಣ ಕಡಿಮೆಯಾಯಿತು ಎಂದು ಹೇಳಲಾಗುತ್ತದೆ.
ಇಂತಹದ್ದೇ ಕಿವಿ ನೋವಿರಲಿ, ಕಿವಿಯಲ್ಲಿ ಗುಂಯ್ ಶಬ್ಧವಿರಲಿ ಈ ಎಣ್ಣೆ ಎರಡು ಹನಿ ಹಾಕು.!
ಮೂರು ಕಣ್ಣುಗಳಿರುವ ತೆಂಗಿನಕಾಯಿಯನ್ನು ಸಾಮಾನ್ಯವಾಗಿ ನೋಡುತ್ತೇವೆ. ಹಾಗೆಯೇ ಒಂದು ಕಣ್ಣು ಕಾಣುವ, ಎರಡು ಕಣ್ಣು ಕಾಣುವ ತೆಂಗಿನಕಾಯಿಗಳು ಕೂಡ ಇವೆ. ಇದನ್ನು ಏಕಾಕ್ಷಿ ಹಾಗೂ ದ್ವಿಅಕ್ಷಿ ಎಂದು ಕರೆಯುತ್ತಾರೆ. ಈ ರೀತಿ ತೆಂಗಿನಕಾಯಿಯನ್ನು ನೀವು ದೇವಸ್ಥಾನಕ್ಕೆ ಕೊಟ್ಟರೆ ಅದನ್ನು ಅವರು ವಾಪಸ್ಸು ಕೊಡುತ್ತಾರೆ ಯಾಕೆಂದರೆ ಇಂತಹ ಒಂದು ಹಾಗೂ ಎರಡು ಕಣ್ಣುಗಳು ಇರುವ ತೆಂಗಿನಕಾಯಿಯನ್ನು ನೋಡ ಸಿಗುವುದೇ ಪುಣ್ಯ.
ಹಾಗಾಗಿ ಇವುಗಳನ್ನು ಮನೆಯಲ್ಲಿ ಇಟ್ಟುಕೊಂಡು ಪೂಜಿಸಲು ಪ್ರಯತ್ನಿಸಿ. ಇನ್ನು ಚಿಕ್ಕ ಚಿಕ್ಕ ತೆಂಗಿನ ಕಾಯಿಯನ್ನು ಲಕ್ಷ್ಮಿಗೆ ಹೋಲಿಸಲಾಗುತ್ತದೆ. ಕಳಸಕ್ಕೆ ಇಡುವ ತೆಂಗಿನಕಾಯಿಯ ಬಗ್ಗೆ ಹೆಚ್ಚು ಗಮನ ಹರಿಸಲೇಬೇಕು. ಇದು ತಲೆಬುರುಡೆ ಹೋಲುವ ಕಾರಣ ಕಣ್ಣುಗಳು ಕಾಣದೇ ಇದ್ದರೆ ಉತ್ತಮ. ಒಂದು ಅನಿವಾರ್ಯ ಸಮಯದಲ್ಲಿ ಸಿಗದೇ ಇದ್ದರೆ ಕಣ್ಣು ಕಾಣುವುದನ್ನೇ ಇಡಬಹುದು ಯಾವುದೇ ದೋಷವಿರುವುದಿಲ್ಲ.
ಕಿವಿಯಲ್ಲಿ ಗುಂಯ್ ಶಬ್ದ ಕೇಳಿಸುತ್ತಿದೆಯಾ, ಈ ಸಮಸ್ಯೆ ಇರಬಹುದು ಎಚ್ಚರಿಕೆಯಿಂದ ಇರಿ.!
ದೇವಸ್ಥಾನಕ್ಕೆ ಕೊಡುವ ತೆಂಗಿನಕಾಯಿ ಬಗ್ಗೆ ಹೇಳುವುದಾದರೆ ಒಂದೊಂದು ದೇವಾಲಯದಲ್ಲಿ ಒಂದೊಂದು ರೀತಿಯ ನಿಯಮ ಇರುತ್ತದೆ. ಕೆಲವು ಕಡೆಗಳಲ್ಲಿ ನೀವು ಕೊಟ್ಟ ತೆಂಗಿನಕಾಯಿ ಇಟ್ಟುಕೊಂಡು ಒಡೆದಿರುವ ಕಾಯಿಯನ್ನು ಕೊಡುತ್ತಾರೆ. ಈ ರೀತಿ ಕೊಟ್ಟರೆ ಏನು ಸಮಸ್ಯೆ ಇಲ್ಲ ನೀವು ಕೊಟ್ಟ ಫಲವು ದೇವರಿಗೆ ಸೇರಿದೆ ಎಂದುಕೊಳ್ಳಿ.
ಕೆಲವು ಕಡೆ ಸಿಪ್ಪೆ ಸುಲಿಯದ ತೆಂಗಿನಕಾಯಿಯನ್ನು ಕೊಡುವ ರೂಢಿ ಇದೆ, ಇನ್ನು ಕೆಲವು ಕಡೆ ಪೂರ್ತಿ ಸುಲಿದ ತೆಂಗಿನಕಾಯಿಯನ್ನು ಕೊಡುವ ರೂಢಿ ಇದೆ. ಹೀಗೆ ಆಯಾ ದೇವಸ್ಥಾನಕ್ಕೆ ಸಂಬಂಧಿಸಿದ ಸಂಪ್ರದಾಯದ ಪ್ರಕಾರ ಅಲ್ಲಿನ ವಿಶೇಷದ ಪ್ರಕಾರ ನೀವು ಕೂಡ ನಡೆದುಕೊಳ್ಳಿ. ತೆಂಗಿನಕಾಯಿ ದೇವರಿಗೆ ಸಮಾನವಾದ ಫಲವಾದ ಕಾರಣ ಇದರಿಂದ ಯಾವುದೇ ದೋಷವು ಕೂಡ ಬರುವುದಿಲ್ಲ ಎನ್ನುವುದನ್ನು ಬಲವಾಗಿ ನಂಬಬಹುದು.