ಈಗಿನ ಕಾಲದಲ್ಲಿ ಸಂಖ್ಯಾಶಾಸ್ತ್ರವನ್ನು ಜನರು ಅತಿ ಹೆಚ್ಚು ನಂಬುತ್ತಾರೆ. ಆದರೆ ಅದು ಇತ್ತೀಚಿನ ವಿಜ್ಞಾನವಲ್ಲ, ಬಹಳ ಹಿಂದಿನಿಂದಲೂ ಕೂಡ ಸಂಖ್ಯಾಶಾಸ್ತ್ರ ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾಗಿ ಇತ್ತು. ಬಹಳ ಹಿಂದಿನಿಂದಲೂ ಕೂಡ ನಮ್ಮ ಜನರು ಲಕ್ಕಿ ನಂಬರ್ ಎಂದು ಹೇಳುವುದನ್ನು ಕೇಳಬಹುದು.
ಆದರೆ ಇತ್ತೀಚಿನ ದಿನಗಳಲ್ಲಿ ಸಂಖ್ಯಾಶಾಸ್ತ್ರದ ಮಹತ್ವ ಅನೇಕರಿಗೆ ತಿಳಿದು ಅದರಿಂದ ಅನುಕೂಲಕರ ಬದಲಾವಣೆ ಆದ ಕಾರಣ ಹೆಚ್ಚು ಸುದ್ದಿಯಲ್ಲಿದೆ. ಸಂಖ್ಯಾಶಾಸ್ತ್ರದ ಪ್ರಕಾರ ಹುಟ್ಟಿದ ದಿನಾಂಕ ಬಹಳ ಮುಖ್ಯ. ಹುಟ್ಟಿದ ದಿನಾಂಕ ತಿಂಗಳು ಹಾಗೂ ಆ ವರ್ಷದ ಆಧಾರದ ಮೇಲೆ ಅವರ ಲಕ್ಕಿ ನಂಬರ್ ಯಾವುದು ಅನ್ ಲಕ್ಕಿ ನಂಬರ್ ಯಾವುದು ಮತ್ತು ಅವರಿಗೆ ಸಪೋರ್ಟ್ ಮಾಡಲು ಯಾವ ಸಂಖ್ಯೆ ಕಡಿಮೆಯಾಗಿದೆ.
ಅದಕ್ಕೆ ಸಂಬಂಧಿಸಿದಂತೆ ಆ ಕಾಂಬಿನೇಷನ್ ಆಧಾರದ ಮೇಲೆ ನಂಬರ್ ಗಳನ್ನು ಪಾಲಿಸಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ಈ ವಿಚಾರ ಎಷ್ಟೊಂದು ಅನ್ವಯವಾಗುತ್ತದೆ ಎಂದರೆ ನೀವು ಮದುವೆ ಆಗುವ ದಿನಾಂಕದಿಂದ ಹಿಡಿದು ನೀವು ಒಂದು ವಾಹನವನ್ನು ಖರೀದಿಸಿದರೆ ಅದನ್ನು ಖರೀದಿಸುವ ದಿನಾಂಕ ಮತ್ತು ವಾಹನಕ್ಕೆ ಹಾಕಿರುವ ನಂಬರ್ ಪ್ಲೇಟ್ ಸಂಖ್ಯೆ ಇತ್ಯಾದಿವರೆಗೂ ಕೂಡ ಸಂಖ್ಯಾಶಾಸ್ತ್ರ ಪ್ರಭಾವ ಬೀರುತ್ತದೆ.
ಹಾಗಾಗಿ ಸಂಖ್ಯಾಶಾಸ್ತ್ರದಲ್ಲಿ ಯಾವ ದಿನಾಂಕದಂದು ಹುಟ್ಟಿದವರು ಯಾವ ಸಂಖ್ಯೆಗಳ ನಂಬರ್ ಪ್ಲೇಟ್ ಹೊಂದಿರಬೇಕು ಎನ್ನುವ ವಿಷಯದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ. ಅದಕ್ಕೂ ಮೊದಲು ನೀವು ಈ ವಿಚಾರವನ್ನು ಅರಿತಿರಬೇಕು. ಉದಾಹರಣೆಗೆ ನೀವು ಏಪ್ರಿಲ್ 14, 1994 ರಂದು ಜನಿಸಿದ್ದೀರಾ ಎಂದುಕೊಳ್ಳೋಣ 1+4=5 ಇಲ್ಲಿ ಐದು ನಿಮ್ಮ ಜನ್ಮ ಸಂಖ್ಯೆ ಆಗುತ್ತದೆ ಮತ್ತು 1+4+0+4+1+9+9+4=32, 3+2=5 ನಿಮ್ಮ ಭಾಗ್ಯ ಸಂಖ್ಯೆ ಕೂಡ 5 ಆಗಿರುತ್ತದೆ.
ನಿಮ್ಮ ಜನ್ಮ ಸಂಖ್ಯೆ ಅಥವಾ ಭಾಗ್ಯ ಸಂಖ್ಯೆಗೆ ಅನುಗುಣವಾದ ನಂಬರ್ ಇರುವ ಕಾಂಬಿನೇಷನ್ ಕಾರ್ ಸಂಖ್ಯೆಗಳನ್ನು ನೀವು ಖರೀದಿಸಿದರೆ ಅದರಿಂದ ನಿಮಗೆ ಲಾಭವಾಗುತ್ತದೆ. ಆಗ ಯಾವುದೇ ರೀತಿಯ ಅ’ಪಾ’ಯ ಹಾಗೂ ಅ’ಪ’ಘಾ’ತವಾಗುವ ಸಾಧ್ಯತೆಗಳು ಅಥವಾ ಅದರಿಂದ ಕೆಡುಕಾಗುವ ಸಾಧ್ಯತೆಗಳು ಬಹಳ ಕಡಿಮೆ.
ಯಾವ ದಿನಾಂಕದಂದು ಹುಟ್ಟಿದವರಿಗೆ ಯಾವ ದಿನಾಂಕ ಲಕ್ಕಿ ಆಗಿರುತ್ತದೆ ವಿವರ ಹೀಗಿದೆ
1, 10, 19, 28 —– 2, 3, 4, 5, 9
2, 11, 20, 29 —– 3, 5, 6
3, 12, 21, 30 —– 2, 4, 7, 9
4, 13, 22, 31 —– 1, 6, 7, 9
5, 14, 23 ——– 1, 2, 6, 8, 9
6, 15, 24 ——– 1, 4, 5, 7
7, 16, 25 ——– 3, 4, 6
8, 17, 26 ——– 5, 6, 9
9, 18, 27 ——– 1, 3, 5, 6, 8.
ನಂಬರ್ ಪ್ಲೇಟ್ ನ ಎಲ್ಲಾ ಸಂಖ್ಯೆಗಳನ್ನು ಕೂಡಿ ಬರುವ ಭಾಗ್ಯ ಸಂಖ್ಯೆ ಆಧಾರದ ಮೇಲೆ ಕೂಡ ಕೆಲ ವಿಚಾರವನ್ನು ಲೆಕ್ಕ ಹಾಕಲಾಗುತ್ತದೆ ಅದರ ವಿವರ ಹೀಗಿದೆ.
* ಸಂಖ್ಯೆ 1 ಬಂದರೆ, ಇದನ್ನು ಸೂರ್ಯ ಸಂಖ್ಯೆ ಎಂದು ಹೇಳಲಾಗುತ್ತದೆ. ಸರ್ಕಾರಿ ಕೆಲಸಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ಆಡಳಿತಾತ್ಮಕ ಕಾರ್ಯಗಳಲ್ಲಿ ಹೆಚ್ಚು ಅನುಕೂಲಕ್ಕೆ ಬರುತ್ತದೆ ಎಂದು ಹೇಳಲಾಗುತ್ತದೆ.
* ಸಂಖ್ಯೆ 2 ಬಂದರೆ ಆದು ಚಂದ್ರ ಸಂಖ್ಯೆ. ನೀವು ಅನೇಕ ಪ್ರಯಾಣವನ್ನು ಹೊಂದಿರಬಹುದು, ಸಣ್ಣ ಅ’ಪ’ಘಾ’ತಗಳಿಗೆ ಕಾರಣವಾಗಬಹುದು.
* ಸಂಖ್ಯೆ 3 ಗುರು ಸಂಖ್ಯೆ ಆಗಿರುತ್ತದೆ. ಸಮಾಲೋಚನೆ ಕಾರ್ಯಗಳಿಗೆ ಇದು ಉತ್ತಮ, ಈ ರೀತಿ ಸೇವೆಯ ಕಾರ್ಯಗಳಿಗೆ ಇದು ಬಳಕೆಯಾಗುತ್ತದೆ.
* ಸಂಖ್ಯೆ 4 ರಾಹು ಸಂಖ್ಯೆ. ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ, ಜೀವನದಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳಲು ನಿಮ್ಮನ್ನು ಒತ್ತಾಯಿಸಬಹುದು.
* ಸಂಖ್ಯೆ 5 ಬುಧನ ಪ್ರಭಾವವಿರುವ ಸಂಖ್ಯೆ, ವ್ಯಾಪಾರಕ್ಕಾಗಿ ಪರಿಪೂರ್ಣ.
* ಸಂಖ್ಯೆ 6 ಶುಕ್ರನ ಪ್ರಭಾವ ಬೀರುವ ಸಂಖ್ಯೆ, ನಿಮ್ಮ ಸ್ವಂತ ಬಳಕೆಗೆ ಈ ಸಂಖ್ಯೆ ಕಾರ್ ಒಳ್ಳೆಯದು.
* ಸಂಖ್ಯೆ 7 ಕೇತುವಿನ ಸಂಖ್ಯೆ, ನೀವು ಹೆಚ್ಚು ಧಾರ್ಮಿಕ ಪ್ರವಾಸಗಳನ್ನು ಮಾಡುತ್ತೀರಿ.
* ಸಂಖ್ಯೆ 8 ಶನಿಗ್ರಹದ ಸಂಖ್ರೆ, ಹೆಚ್ಚು ಜನರನ್ನು ತಲುಪಲು ನಿಮಗೆ ಸಹಾಯ ಮಾಡುತ್ತದೆ.ನಿಮ್ಮನ್ನು ತುಂಬಾ ಕಾರ್ಯನಿರತರನ್ನಾಗಿ ಮಾಡುತ್ತದೆ ಆದರೆ ಬಹಳ ಎಚ್ಚರಿಕೆಯಿಂದ ಇರಬೇಕು.
* ಸಂಖ್ಯೆ 9 ಮಂಗಳನ ಸಂಖ್ಯೆ ಅವಸರದ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸಿ ಸಣ್ಣ ಅ’ಪ’ಘಾ’ತಗಳಿಗೆ ಕಾರಣವಾಗಬಹುದು.