ಮಹಾರಾಷ್ಟ್ರ ರಾಜ್ಯದ ಒಂದು ಸಣ್ಣ ಹಳ್ಳಿಯಲ್ಲಿ ಆಶಾ ಮತ್ತು ಅನಿಲ್ ಎಂಬ ದಂಪತಿಗಳು ವಾಸಿಸುತ್ತಿದ್ದರು. ಇವರಿಬ್ಬರು ತುಂಬಾ ವರ್ಷಗಳ ಕಾಲ ಪ್ರೀತಿಸಿ ಆನಂತರ ಮದುವೆ ಮಾಡಿಕೊಂಡಿದ್ದರು. ದುರಾದೃಷ್ಟ ಎಂಬಂತೆ ಆಶಾ ಮತ್ತು ಅನಿಲ್ ಮದುವೆಯಾಗಿ 5 ವರ್ಷಗಳಾದರೂ ಮಕ್ಕಳಾಗಿರಲಿಲ್ಲ ಅದಕ್ಕಾಗಿ ತುಂಬಾ ದುಃಖಿತರಾಗಿ ಇವರುಗಳು ಹಲವಾರು ಆಸ್ಪತ್ರೆಗಳಿಗೆ ಹೋಗಿದ್ದು ಪರೀಕ್ಷೆ ಮಾಡಿಸದ ಡಾಕ್ಟರ್ ಗಳು ಇಲ್ಲ. ಎಷ್ಟೇ ಪ್ರಯತ್ನ ಪಟ್ಟರು ಮಗು ಆಗದಿದ್ದಾಗ ಕೊನೆಯದಾಗಿ ಯಾವುದಾದರೂ ಸಾಕು ಪ್ರಾಣಿಯನ್ನಾದರೂ ಮಗುವಿನ ರೂಪದಲ್ಲಿ ಸಾಕೋಣ ಎಂದು ನಿರ್ಧರಿಸಿ ಒಂದು ನಾಯಿ ಮರಿಯನ್ನು ತಮ್ಮ ಮನೆಗೆ ತಂದು ಸಾಕಲು ಪ್ರಾರಂಭಿಸಿದರು.
ಇವರಿಬ್ಬರು ಈ ನಾಯಿಮರಿಯನ್ನು ಮಗುವಂತೆ ಹೆಚ್ಚು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಈ ನಾಯಿ ಮರಿಯೂ ಕೂಡ ಆಶಾ ಮತ್ತು ಅನಿಲ್ ದಂಪತಿಗಳನ್ನು ಹೆಚ್ಚಾಗಿ ಹಚ್ಚಿಕೊಂಡಿದ್ದು ಒಂದು ಕ್ಷಣವೂ ಅವರಿಬ್ಬರನ್ನು ಬಿಟ್ಟು ಇರುತ್ತಿರಲಿಲ್ಲ ಹೀಗೆ ದಿನಗಳು ಕಳೆದು ಏಳು ವರ್ಷಗಳು ಕಳೆದು ಸಣ್ಣ ನಾಯಿಮರಿಯೂ ದೈತ್ಯ ನಾಯಿಯಾಗಿ ಬೆಳೆದಿತ್ತು. ನಂತರ 12 ವರ್ಷಗಳ ಬಳಿಕ ದೇವರ ದಯೆಯಿಂದ ಆಶಾ ಗರ್ಭಿಣಿಯಾಗಿ ಒಂದು ಗಂಡು ಮಗುವಿಗೆ ಜನ್ಮ ನೀಡುತ್ತಾಳೆ.
12 ವರ್ಷಗಳ ನಂತರ ತಾನು ತಂದೆಯಾದೆ ಇಂದು ಅನಿಲ್ ಬಹಳ ಸಂತೋಷ ಪಡುತ್ತಾನೆ ತಮಗೆ ಗಂಡು ಮಗು ಜನಿಸಿದ್ದರಿಂದ ಆಶಾ ಮತ್ತು ಅನಿಲ್ ಗೆ ನಾಯಿ ಮೇಲೆ ಇದ್ದ ಪ್ರೀತಿ ಮತ್ತು ವಿಶ್ವಾಸ ದಿನೇ ದಿನೇ ಕಡಿಮೆಯಾಗುತ್ತಾ ಹೋಗುತ್ತದೆ ಇದನ್ನು ನೋಡಿದ ನಾಯಿಗೆ ಸ್ವಲ್ಪ ಹಸುಯೆ ಉಂಟಾಗುತ್ತದೆ ಗಂಡು ಮಗು ಹುಟ್ಟುವ ಮೊದಲು ಈ ದಂಪತಿಗಳು ಯಾವಾಗಲೂ ನಾಯಿಯ ಜೊತೆ ಕಾಲ ಕಳೆಯುತ್ತಾ ಇರುತ್ತಿದ್ದರು ಊಟ ಮಾಡುತ್ತಿದ್ದರು.
ಆದರೆ ಮಗು ಜನಿಸಿದ ನಂತರ ನಾಯಿಯನ್ನು ದೂರ ಮಾಡಿಬಿಟ್ಟರು ಇದು ನಾಯಿಗೆ ತುಂಬಾ ಬೇಸರ ತರಿಸಿತು. ಎಷ್ಟೇ ಬೇಜಾರು ಕೋಪ ಇದ್ದರೂ ಕೂಡ ಈ ನಾಯಿಯು ಆಶಾ ಮತ್ತು ಅನಿಲ್ ಮೇಲೆ ಇಟ್ಟಿದಂತಹ ಪ್ರೀತಿ ಮತ್ತು ವಿಶ್ವಾಸ ಸ್ವಲ್ಪವೂ ಕಡಿಮೆ ಆಗಿರಲಿಲ್ಲ. ಮನೆಗೆ ಯಾರಾದರೂ ಕಳ್ಳರು ಬಂದರೆ ಅವರನ್ನು ಬೊಗಳಿ ಕಚ್ಚಿ ಓಡಿಸಿ ದಂಪತಿಗಳನ್ನು ಕಾಪಾಡುತ್ತಿತ್ತು ಅಲ್ಲದೆ ಅಪರಿಚಿತರನ್ನು ಮನೆಯೊಳಗೆ ಹೋಗಲು ಬಿಡುತ್ತಿರಲಿಲ್ಲ ಹೀಗೆ ದಿನಗಳು ಕಳೆಯಿತು.
ಒಂದು ದಿನ ತಮ್ಮ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ಆ ದಂಪತಿಗಳು ಮಹಡಿ ಮೇಲೆ ಹೋಗಿ ವಾಕ್ ಮಾಡುತ್ತಾ ಮಾತನಾಡುತ್ತಿದ್ದರು ಒಂದು ಗಂಟೆಯ ನಂತರ ಮನೆ ಒಳಗೆ ಇದ್ದ ನಾಯಿಯು ವಿಚಿತ್ರವಾಗಿ ಜೋರಾಗಿ ಬೊಗಳಲು ಪ್ರಾರಂಭಿಸುತ್ತದೆ ಅದನ್ನು ಗಮನಿಸಿದ ದಂಪತಿಗಳು ಇದು ಯಾವಾಗಲೂ ಹೀಗೆ ಎಂದು ನೆಗ್ಲೆಟ್ ಮಾಡುತ್ತಾರೆ ಅದಾದ ಸ್ವಲ್ಪ ಹೊತ್ತಿನ ಬಳಿಕ ತಮ್ಮ ಮಗು ಅಳುವ ಶಬ್ದ ಕೇಳುತ್ತದೆ ಅದನ್ನು ಗಮನಿಸಿ ಮಹಡಿ ಮೇಲಿಂದ ಬಂದ ದಂಪತಿಗಳು ಬಾಗಿಲ ಬಳಿ ನಿಂತಿದ್ದ ನಾಯಿಯನ್ನು ನೋಡಿದರು.
ನಾಯಿಯ ಬಾಯಿಯಿಂದ ರಕ್ತ ಸುರಿಯುತ್ತಿತ್ತು ಇದನ್ನು ನೋಡಿದ ದಂಪತಿಗಳು ಈ ನಾಯಿಯು ನಮ್ಮ ಮಗುವನ್ನು ವಿಚಿತ್ರವಾಗಿ ಕಚ್ಚಿ ಸಾ.ಯಿ.ಸಿ ಬಿಟ್ಟಿದೆ ಎಂದು ಭಾವಿಸಿ ಯೋಚಿಸದೆ ಅಲ್ಲೆ ಇದಂತಹ ಗನ್ ಎತ್ತಿಕೊಂಡು ಅನಿಲ್ ನಾಯಿಯನ್ನು ಶೂಟ್ ಮಾಡಿ ಸಾ.ಯಿ.ಸಿ ಬಿಡುತ್ತಾನೆ. ನಂತರ ಮನೆ ಒಳಗೆ ಹೋಗಿ ನೋಡಿದಾಗ ಅಚ್ಚರಿಗೊಂಡರು ಮಗುವನ್ನು ತೊಟ್ಟಿಲಿನಲ್ಲಿ ಹಾಕಿ ದಂಪತಿಗಳು ಮಹಡಿ ಮೇಲೆ ಇದ್ದಾಗ ದೈತ್ಯ ನಾಗರಹಾವೊಂದು ಮಗುವಿನ ತೊಟ್ಟಿಲ ಬಳಿ ಹೋಗುತ್ತಿದ್ದನ್ನು ನೋಡಿದ ನಾಯಿಯು ಹಾವು ಮಗುವನ್ನು ಕಚ್ಚಬಹುದು ಎಂದು ತಿಳಿದು ಅದನ್ನು ಕಚ್ಚಿ ಸಾಯಿಸುತ್ತದೆ. ಹಾವಿನ ರಕ್ತವು ನಾಯಿಯ ಬಾಯಿಗೆ ಹಂಟಿಕೊಂಡಿತ್ತು. ಹಾವು ಸತ್ತು ತೊಟ್ಟಿಲ ಬಳಿ ಬಿದ್ದಿತ್ತು. ಈ ಸತ್ಯವನ್ನು ಹರಿಯದ ದಂಪತಿಗಳು ದುಡುಕಿ ನಾಯಿಯನ್ನು ಸಾಯಿಸಿ ಬಿಡುತ್ತಾರೆ.