ಮೇಕಪ್ ಯಾವ ಹೆಣ್ಣು ಮಕ್ಕಳಿಗೆ ಇಷ್ಟ ಇಲ್ಲ. ಸಿಂಪಲ್ ಆಗಿ ಹೊರಗೆ ಹೋಗಬೇಕು ಎಂದರು, ಗ್ರಾಂಡ್ ಆಗಿ ಫಂಕ್ಷನ್ ನಲ್ಲಿ ಮಿಂಚಬೇಕು ಎಂದರು ಮೇಕಪ್ ಇರಲೇಬೇಕು. ನಮ್ಮ ಫೇಸ್ ಗ್ಲೋ ಆಗಿ ಸಿಲ್ಕಿಯಾಗಿ ಅಟ್ಟ್ರಾಕ್ಟಿವ್ ಆಗಿ ಕಾಣಲು ಮೇಕಪ್ ಅವಶ್ಯಕತೆ ಇದೆ. ಅದರಲ್ಲೂ ನಾವು ಹಾಕಿದ ಮೇಕಪ್ ಹಾಗೆ ಉಳಿಯಲು ಮತ್ತು ಅದು ಚೆನ್ನಾಗಿ ಕಾಣಲು, ಬೆಳಗ್ಗೆಯಿಂದ ಸಂಜೆವರೆಗೂ ಕಂಫರ್ಟ್ ಆಗಿರಲು ಮೊದಲು ಮಾಡುವ ಫೌಂಡೇಶನ್ ಬಹಳ ಇಂಪಾರ್ಟೆಂಟ್.
ಫೌಂಡೇಶನ್ ಹಚ್ಚುವಾಗ ಮಾಡುವ ಕೆಲವು ಮಿಸ್ಟೇಕ್ ಗಳಿಂದ ಪೂರ್ತಿ ಲುಕ್ ಹಾಳಾಗಿ ಬಿಡುತ್ತದೆ ಹಾಗಾಗಿ ಇಂದು ಸಿಂಪಲ್ ಆಗಿ ಯಾವ ರೀತಿ ಕರೆಕ್ಟ್ ಆಗಿ ಮೇಕಪ್ ಮಾಡುವುದು ಎನ್ನುವ ವಿಧಾನದ ಬಗ್ಗೆ ತಿಳಿಸುತ್ತಿದ್ದೇವೆ. ಈ ಟಿಪ್ ಗಳನ್ನು ಫಾಲೋ ಮಾಡಿ ಸುಂದರವಾಗಿ ಕಾಣಿಸಿಕೊಳ್ಳಿ.
* ಮೊದಲಿಗೆ ಮೇಕಪ್ ಮಾಡುವ ಮುನ್ನ ಫೇಸ್ ವಾಶ್ ಬಳಸಿ ಚೆನ್ನಾಗಿ ಫೇಸ್ ವಾಶ್ ಮಾಡುವುದು ಬಹಳ ಮುಖ್ಯ.
* ಫೇಸ್ ವಾಶ್ ಆದಮೇಲೆ ಟವಲ್ ನಿಂದ ಮುಖ ಒರೆಸಿಕೊಂಡು ಮಾಯಿಶ್ಚರೈಸರ್ ಹಚ್ಚಿ. ಆಗ ನೀವು ಹಾಕಿದ ಮೇಕಪ್ ಸಿಲ್ಕಿ ಆಗಿ ಕಾಣುತ್ತದೆ ಬಹಳ ಡ್ರೈ ಇರುವ ಫೇಸ್ ಗೆ ಮೇಕಪ್ ಮಾಡುವುದು ಕ’ಷ್ಟ ಹಾಗೂ ಅದು ನೀಟಾಗಿ ಬರುವುದಿಲ್ಲ.
* ಇದಾದ ಮೇಲೆ ಡ್ರೈ ಸ್ಕಿನ್ ಇರುವವರು ಫೇಸ್ ಆಯಿಲ್ ಹಚ್ಚಿ ನೀಟಾಗಿ ಮಸಾಜ್ ಮಾಡಿ ಆಯಿಲ್ ಸ್ಕಿನ್ ಇರುವವರು ಬೇಕಾದರೆ ಇದನ್ನು ಸ್ಕಿಪ್ ಮಾಡಬಹುದು.
* ಇದಾದ ಮೇಲೆ ಆಯಿಲ್ ಸ್ಕಿನ್ ಅಥವಾ ಡ್ರೈ ಸ್ಕಿನ್ ಇರಲಿ ತಪ್ಪದೇ ಪ್ರೈಮರ್ ಹಚ್ಚಬೇಕು. ಮುಖದಲ್ಲಿ ಗುಳ್ಳೆಗಳಿದ್ದರೆ ಅಥವಾ ಕುಳಿಗಳು ಆಗಿದ್ದರೆ ನೀಟಾಗಿ ಕವರ್ ಆಗುತ್ತದೆ ಮೇಕಪ್ ಮಾಡಲು ಚೆನ್ನಾಗಿರುತ್ತೆ.
* ಪ್ರೈಮರ್ ಹಚ್ಚಿದ ಮೇಲೆ ಮುಖ ಬಹಳ ಸ್ಮೂತ್ ಎನಿಸುತ್ತದೆ ಆಗ ಮಾಡುವ ಮೇಕಪ್ ಚೆನ್ನಾಗಿ ಕಾಣುತ್ತದೆ.
* ನಂತರ ಬರುವ ಸ್ಟೆಪ್ ಬಹಳ ಮುಖ್ಯ, ಅದೇ ಫೌಂಡೇಶನ್. ಫೌಂಡೇಶನ್ ಹಚ್ಚುವಾಗ ಮೊದಲು ಮಾಡಬೇಕಾದದ್ದು ಏನು ಎಂದರೆ ನಿಮ್ಮ ಸ್ಕಿನ್ ಟೋನ್ ಗೆ ಕರೆಕ್ಟ್ ಆಗಿ ಮ್ಯಾಚ್ ಆಗುವ ಫೌಂಡೇಶನ್ ಸೆಲೆಕ್ಟ್ ಮಾಡಬೇಕು ಆಗ ಅದು ನಿಮ್ಮ ಮೇಕಪ್ ಗೆ ಸರಿಯಾಗಿ ಹೊಂದಿಕೊಳ್ಳುತ್ತದೆ.
ನಿಮ್ಮ ಮುಖದ ಬಣ್ಣಕ್ಕೂ ಫೌಂಡೇಶನ್ ಶೇಡ್ ಗೂ ಮ್ಯಾಚ್ ಆಗದೆ ಇದ್ದಾಗ ಮೇಕಪ್ ಹಾಕಿರುವುದು ಹೆಚ್ಚಾಯಿತು ಎನ್ನುವ ರೀತಿ ಕಾಣುತ್ತದೆ, ನಂತರ ಅದನ್ನು ಕವರ್ ಮಾಡುವುದಕ್ಕೆ ಹೆಚ್ಚು ಟೈಮ್ ಹಿಡಿಯುತ್ತದೆ. ಇನ್ನಿತರ ಸಮಸ್ಯೆ ಆಗುತ್ತದೆ ಹಾಗಾಗಿ ಫೌಂಡೇಶನ್ ಸೆಲೆಕ್ಟ್ ಮಾಡುವಾಗಲೇ ಒಂದು ಲೈನ್ ಮುಖಕ್ಕೆ ಹಚ್ಚಿಕೊಂಡು ನೋಡಿ ಸೆಲೆಕ್ಟ್ ಮಾಡಿ ನಂತರ ಹಚ್ಚಿಕೊಂಡರೆ ಮೇಕಪ್ ನ ಅರ್ಧ ಭಾಗ ಸಕ್ಸಸ್ ಆದಂತೆ.
ಫೌಂಡೇಶನ್ ಹಚ್ಚಿ ಬ್ಲೆಂಡ್ ಮಾಡಿ. ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಇರುವವರು ಕನ್ಸೀಲರ್ ಬಳಸಿ, ಇದು ಆಪ್ಷನಲ್ ಬೇಡ ಎಂದರೆ ಸ್ಕಿಪ್ ಮಾಡಬಹುದು. ಆದರೆ ಕನ್ಸೀಲರ್ ಸೆಲೆಕ್ಟ್ ಮಾಡುವಾಗ ನಿಮ್ಮ ಫೌಂಡೇಶನ್ ಶೇಡ್ ನಲ್ಲಿಯೇ ಇರಬೇಕು ಎನ್ನುವುದನ್ನು ಮರೆಯಬೇಡಿ, ಎರಡಕ್ಕೂ ವ್ಯತ್ಯಾಸವಾದರೆ ಚೆನ್ನಾಗಿ ಕಾಣುವುದಿಲ್ಲ. ಲೈಟ್ ಆದರೆ ಕಣ್ಣಿನ ಸುತ್ತ ಬೂದಿ ಬೂದಿ ತರ ಕಾಣುತ್ತದೆ.
ಡಾರ್ಕ್ ಆದರೂ ಚೆನ್ನಾಗಿ ಕಾಣುವುದಿಲ್ಲ ಹೆವಿ ಮೇಕಪ್ ಅಂದರೆ ಸ್ಮೋಕಿ ಐ, ಐ ಶಾಡೋ ಎಲ್ಲ ಬಳಸುವುದಾದರೆ ನಂತರ ನೀವು ಬಳಸಿರುವ ಕನ್ಸೀಲರ್ ಗಿಂತ ಲೈಟ್ ಶೇಡ್ ಇರುವ ಕನ್ಸೀಲರ್ ನಿಂದ ಕಣ್ಣಿನ ಸುತ್ತ ಬ್ರೈಟ್ ಮಾಡಿ.
* ಕನ್ಸಿಲರ್ ಹಾಕಿದ ನಂತರ ನಿಧಾನ ಮಾಡದೆ ಪಫ್ ಸಹಾಯದಿಂದ ಪೌಡರ್ ಹಾಕಿ ನೀಟಾಗಿ ಸೆಟ್ ಮಾಡಿ.
* ಕೊನೆಯಲ್ಲಿ ಸೆಟ್ಟಿಂಗ್ ಸ್ಪ್ರೇ ಹಾಕಿ ಆರಿಸಿಕೊಳ್ಳಿ. ಐ ಶಾಡೋ ಐ ಲೈನರ್, ಮಸ್ಕರ ಹಾಕಿಕೊಳ್ಳಿ ನಂತರ ಐಬ್ರೋ ಕೂಡ ಫಿಲ್ ಮಾಡಿ ಲಿಪ್ಟಿಕ್ ಹಚ್ಚಿ ಲಿಪ್ಸ್ಟಿಕ್ ನೆ ಬಳಸಿ ಬ್ಲಶ್ ಕೂಡ ಮಾಡಿ.
* ಯಾವುದೇ ಮೇಕಪ್ ಪ್ರೊಟೆಕ್ಟ್ ಆದರೂ ಕಡಿಮೆ ಬಳಸಿ ಆಗ ತುಂಬಾ ಚೆನ್ನಾಗಿರುವ ಲುಕ್ ಕೊಡುತ್ತದೆ.