ನಮಗೆ ಬೇಕಾದ ವಸ್ತು ತಕ್ಷಣಕ್ಕೆ ಸಿಕ್ಕಲಿಲ್ಲ ಎಂದರೆ ಸಹಜವಾಗಿ ನಾವು ಅದನ್ನು ಬೇರೆಯಿಂದ ತೆಗೆದುಕೊಳ್ಳುತ್ತೇವೆ. ಆದರೆ ವಾಸ್ತು ಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಈ ರೀತಿ ಎಲ್ಲರಿಂದಲೂ ಕೂಡ ಎಲ್ಲ ವಸ್ತುಗಳನ್ನು ಪಡೆಯುವಂತಿಲ್ಲ. ಬೇರೆಯವರನ್ನು ಸಹಾಯ ಕೇಳುವುದು ಮ, ಬೇರೆಯವರಿಗೆ ಸಹಾಯ ಮಾಡುವುದು ತಪ್ಪಲ್ಲ. ಆದರೆ ಕೆಲವು ವಸ್ತುಗಳನ್ನು ಮಾತ್ರ ಒಬ್ಬರಿಂದ ಮತ್ತೊಬ್ಬರು ಕೇಳಿ ಪಡೆಯಬಾರದು ಅಥವಾ ಮತ್ತೊಬ್ಬರಿಗೆ ಕೊಡಬಾರದು ಎನ್ನುವ ನಿಯಮ ಇದೆ.
ಕೆಲವು ಸಮಯ ಇಬ್ಬರಿಗೂ ಅದು ಕೆ’ಡ’ಕು ಉಂಟು ಮಾಡಿದರೆ ಕೆಲವೊಮ್ಮೆ ಬಲವಂತವಾಗಿ ಯಾರೋ ಕೊಟ್ಟರು ಎಂದು ತೆಗೆದುಕೊಂಡರೆ ತೆಗೆದುಕೊಂಡವರಿಗೆ ಅದರಿಂದ ದೋ’ಷಗಳು ಉಂಟಾಗುತ್ತದೆ. ಹಾಗಾಗಿ ಯಾವ ಯಾವ ವಸ್ತುಗಳನ್ನು ಇನ್ನೊಬ್ಬರಿಂದ ಪಡೆಯಬಾರದು ಎನ್ನುವ ಮಾಹಿತಿಯನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರುವುದು ಒಳ್ಳೆಯದು.
* ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಯಾವುದೇ ಕಾರಣಕ್ಕೂ ಒಬ್ಬರು ಮತ್ತೊಬ್ಬರ ಪಾದರಕ್ಷೆಗಳನ್ನು ಅಥವಾ ಶೂ ಗಳನ್ನು ಬಳಸಲೇಬಾರದು. ಈಗಿನ ಕಾಲದಲ್ಲಿ ತಮ್ಮ ಡ್ರೆಸ್ ಗೆ ಮ್ಯಾಚ್ ಆಗುತ್ತದೆ ಎಂದು ತಮ್ಮ ಫ್ರೆಂಡ್ ಅಥವಾ ರೂಮ್ ಮೇಟ್ ಪಾದ ರಕ್ಷೆಗಳನ್ನು ಸಹಜವಾಗಿ ಹಾಕಿಕೊಂಡು ಹೋಗಿ ಬಿಡುತ್ತಾರೆ. ಆದರೆ ಈ ರೀತಿ ಮಾಡುವುದು ಬಹಳ ದೊಡ್ಡ ತಪ್ಪು ಇದರಿಂದ ಅವರ ಕಷ್ಟಗಳನ್ನು ನೀವು ಎರವಲು ಪಡೆದಂತೆ
* ಈ ರೀತಿ ಪಾದರಕ್ಷೆಗಳು ಮಾತ್ರವಲ್ಲದೆ ಬಟ್ಟೆಗಳಿಗೂ ಕೂಡ ಈ ನಿಯಮ ಇದೆ. ಯಾಕೆಂದರೆ ನಾವು ಹಾಗೆ ಕೊಡುವ ಬಟ್ಟೆಯಲ್ಲಿ ನಮ್ಮದೊಂದು ಭಾವನೆ ಇರುತ್ತದೆ. ಅದು ಹಲವು ದಿನಗಳಿಂದ ನಮ್ಮ ಮೈಮೇಲೆ ಇದ್ದ ಕಾರಣ ನಮ್ಮ ಹಾಗೂ ನಮ್ಮ ಬಟ್ಟೆಗಳ ನಡುವೆ ಸಂಬಂಧ ಬೆಳೆದಿರುತ್ತದೆ.
ನಾವು ಸಕಾರಾತ್ಮಕವಾಗಿದ್ದರೆ ಅಥವಾ ನಮ್ಮ ಕೆಲವು ಬಟ್ಟೆಗಳನ್ನು ಹಾಕಿಕೊಂಡಾಗ ನಮಗೆ ಅವು ಲಕ್ಕಿ ಎನಿಸಿದರೆ ಕನೆಕ್ಷನ್ ಶುರು ಆಗಿರುತ್ತದೆ ಇಂತಹ ಬಟ್ಟೆಗಳನ್ನು ಬೇರೆಯವರಿಗೆ ಕೊಟ್ಟರೆ ಅಥವಾ ಬೇರೆಯವರು ಕೇಳಿ ಹಾಕಿಕೊಂಡರೆ ಅಥವಾ ಬೇರೆಯವರ ಬಟ್ಟೆಗಳನ್ನು ನಾವು ಅಪ್ಪಿ ತಪ್ಪಿ ಧರಿಸಿದರೆ ಈ ಕನೆಕ್ಷನ್ ಗಳು ಬಿಟ್ಟು ಹೋಗುತ್ತವೆ. ಒಂದು ವೇಳೆ ನೀವು ನಕಾರಾತ್ಮಕ ವ್ಯಕ್ತಿಗಳ ಬಟ್ಟೆಯನ್ನು ಧರಿಸಿದರೆ ನಿಮ್ಮ ವ್ಯಕ್ತಿತ್ವವೇ ಹಳಸಿ ಹೋಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಇಂತಹ ತಪ್ಪುಗಳನ್ನು ಮಾಡಬೇಡಿ
* ಬೇರೆಯವರ ವಾಚ್ ಗಳನ್ನು ಕೂಡ ಧರಿಸಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಯಾಕೆಂದರೆ ಇದರಿಂದ ನಿಮ್ಮ ಸಮಯ ಹಾಳಾಗಬಹುದು ಅಥವಾ ಅವರ ಕೆ’ಟ್ಟ ಸಮಯ ನಿಮಗೆ ವರ್ಗಾವಣೆಯಾಗಬಹುದು
* ಬೇರೆಯವರ ಉಂಗುರಗಳನ್ನು ಕೂಡ ಧರಿಸಬಾರದು. ಯಾಕೆಂದರೆ ಕೆಲವರು ಅವರ ಶಾಸ್ತ್ರ ರಾಶಿ ನಕ್ಷತ್ರಗಳಿಗೆ ಹೋಲಿಕೆ ಆಗುವಂತೆ ಉಂಗುರಗಳನ್ನು ಮಾಡಿಸಿಕೊಂಡಿರುತ್ತಾರೆ. ನೀವು ಇಷ್ಟವಾಗಿದೆ ಎಂದಾಗ ಅವರು ಕೊಡದೆ ಇರಲು ಆಗದೆ ಇರಬಹುದು. ನೀವು ಗೊತ್ತಿಲ್ಲದೇ ತೆಗೆದುಕೊಂಡರು ನಿಮಗೆ ಅದು ಸೆಟ್ ಆಗದೆ ಇದ್ದರೆ ಸಮಸ್ಯೆ ಉಂಟಾಗುತ್ತದೆ.
* ಬೇರೆಯವರಿಗೆ ಪೊರಕೆಗಳನ್ನು ಕೊಡುವುದು ತಪ್ಪು, ಉಚಿತವಾಗಿ ಯಾರಿಂದಲೂ ಪೊರಕೆಗಳನ್ನು ತೆಗೆದುಕೊಳ್ಳಬಾರದು. ಹಾಗೆ ನಾವು ನಮ್ಮ ಮನೆಯ ಕಸಗುಡಿಸಿ ಬೇರೆಯವರ ಕೈಗೆ ಅದನ್ನು ಚೆಲ್ಲಲು ಕೊಟ್ಟರೆ ಅದು ಇಬ್ಬರಿಗೂ ಕ’ಷ್ಟವನ್ನುಂಟು ಮಾಡುತ್ತದೆ
* ಬೇರೆಯವರ ಕರವಸ್ರ್ತ ಬಳಸುವುದು ಮಹಾ ಪಾಪ. ಇದರಿಂದ ಆರೋಗ್ಯ ಸಮಸ್ಯೆಗಳು ವರ್ಗಾಯಿಸುವುದು ಮಾತ್ರವಲ್ಲದೆ ಸಂಬಂಧಗಳು ಹಾಳಾಗುತ್ತವೆ. ನಿಮಗೆ ಹೊಸ ಕರ್ಚಿಫ್ ಬೇರೆಯವರಿಂದ ಉಡುಗೊರೆಯಾಗಿ ಬಂದರೂ ಕೂಡ ನೀವು ಅದನ್ನು ನಯವಾಗಿ ನಿರಾಕರಿಸುವುದು ಉತ್ತಮ
* ಬೇರೆಯವರ ಚಾಪೆ, ಹಾಸಿಗೆ, ದಿಂಬು ಇವುಗಳನ್ನು ಕೂಡ ಪಡೆಯಬಾರದು. ಮತ್ತೊಬ್ಬರು ಬಳಸಿರುವ ಇವುಗಳ ಮೇಲೆ ನೀವು ಮಲಗಿಕೊಂಡರೆ ಅದು ನೆಗೆಟಿವ್ ವೈಬ್ರೇಶನ್ ಆಗುತ್ತದೆ.
* ಅಡುಗೆಮನೆ ವಿಚಾರದಲ್ಲಿ ಹೇಳುವುದಾದರೆ ಉಪ್ಪು, ಎಣ್ಣೆ ಮತ್ತು ಹುಳಿ ಪದಾರ್ಥಗಳು ಇವುಗಳನ್ನು ಯಾವುದೇ ಕಾರಣಕ್ಕೂ ಬೇರೆಯವರಿಂದ ಪಡೆಯಬಾರದು. ಯಾರಾದರೂ ಕೇಳಿದರು ನಾವು ಸಬೂಬು ಹೇಳಿ ಅವರಿಗೆ ಬೇಸರ ಪಡಿಸದೆ ತಿರಸ್ಕರಿಸಬೇಕು, ನಾವು ಸಹ ಕೊಡಬಾರದು.