ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಹಳೆ ಸೀರೆ ಹಾಗೂ ಹಳೆಯ ಬೆಡ್ ಶೀಟ್ ಇದ್ದೇ ಇರುತ್ತದೆ. ಆದರೆ ಹೆಚ್ಚಿನ ಜನ ಇದು ಮತ್ತೆ ಯಾವುದೇ ಕೆಲಸಕ್ಕೂ ಬರುವುದಿಲ್ಲ ಎಂದು ಅದನ್ನು ಆಚೆ ಹಾಕುತ್ತಿರುತ್ತಾರೆ ಆದರೆ ಇನ್ನು ಮುಂದೆ ಈ ರೀತಿಯಾಗಿ ಆಚೆ ಹಾಕುವ ಅವಶ್ಯಕತೆ ಇರುವುದಿಲ್ಲ ಬದಲಿಗೆ ಅದನ್ನು ಬಹಳ ಮುಖ್ಯವಾದಂತಹ ಕೆಲಸ ಕಾರ್ಯಗಳಿಗೆ ಉಪಯೋಗಿಸಬಹುದಾಗಿದೆ.
ಅದು ನಮಗೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು ಹಾಗಾದರೆ ಈ ದಿನ ಹಳೆ ಸೀರೆ ಹಳೆ ಬೆಡ್ ಶೀಟ್ ಇದ್ದರೆ ಅದನ್ನು ಹೇಗೆ ಮತ್ತೆ ಮರುಬಳಕೆ ಮಾಡಬಹುದು ಅದನ್ನು ಹೇಗೆ ತಯಾರಿಸುವುದು ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಪ್ರತಿಯೊಬ್ಬರೂ ಕೂಡ ನೆಲದ ಮೇಲೆ ಮಲಗಿಕೊಳ್ಳಲು ಇಷ್ಟಪಡುವು ದಿಲ್ಲ ಏಕೆ ಎಂದರೆ ಕೆಳಗಡೆ ಮಲಗಿ ಕೆಲವೊಂದಷ್ಟು ಜನರಿಗೆ ಅಭ್ಯಾಸ ಇರುವುದಿಲ್ಲ. ಆದ್ದರಿಂದ ಅವರು ಹಾಸಿಗೆಯ ಮೇಲೆ ಮಲಗಿಕೊಂಡರೆ ಮಾತ್ರ ಅವರಿಗೆ ನಿದ್ದೆ ಬರುತ್ತಿರುತ್ತದೆ ಇಂತಹ ಸಂದರ್ಭದಲ್ಲಿ ಅವರು ಕೆಳಗೆ ಮಲಗುವಂತಹ ಸಂದರ್ಭದಲ್ಲಿ ಈಗ ನಾವು ಹೇಳುವಂತಹ ಈ ಒಂದು ಹಳೆಯ ಸೀರೆ ಮತ್ತು ಬೆಡ್ ಶೀಟ್ ಕವರ್ ಇಂದ ಚಿಕ್ಕದಾದ ಒಂದು ಮ್ಯಾಟ್ ಅನ್ನು ತಯಾರಿಸಬಹುದು ಅದನ್ನು ಹೇಗೆ ಮಾಡು ವುದು ಎಂದು ಈ ಕೆಳಗೆ ತಿಳಿಯೋಣ.
ಈ ಸುದ್ದಿ ಓದಿ:- ಮಗು ಆದ್ಮೇಲೂ ಹೊಟ್ಟೆ ಕರಗದೆ ಇದ್ರೆ ಹೀಗೆ ಮಾಡಿ.! ಇಲ್ಲಿದೆ ಸಿಂಪಲ್ ಟಿಪ್ಸ್.!
ಮೊದಲ ಬೆಡ್ ಶೀಟ್ ಕವರ್ ಅನ್ನು ತೆಗೆದುಕೊಳ್ಳಬೇಕು ಸಾಮಾನ್ಯವಾಗಿ ಒಂದು ಮ್ಯಾಟ್ ನಿಮಗೆ ಎಷ್ಟು ಅಗಲ ಬೇಕೋ ಅಷ್ಟು ಅಗಲವಾಗಿ ಆ ಒಂದು ಬೆಡ್ ಶೀಟ್ ಕವರನ್ನು ಹಾಕಬೇಕು. ಅದನ್ನು ಎರಡು ಮಡಿಕೆ ಮಾಡಿ ಇಟ್ಟುಕೊಳ್ಳಬೇಕು ಆನಂತರ ಅದರ ಮೇಲ್ಬಾಗಕ್ಕೆ ಬರುವಂತಹ ಸೀರೆಯನ್ನು ಸಹ ಅದೇ ಅಳತೆಯಲ್ಲಿ ತೆಗೆದುಕೊಂಡು ಅದಕ್ಕಿಂತ ಒಂದು ಕಡೆ ಸ್ವಲ್ಪ ಉದ್ದನೆಯ ಅಳತೆಯನ್ನು ತೆಗೆದುಕೊಳ್ಳುವಷ್ಟು ಉದ್ದ ತೆಗೆದುಕೊಂಡು ಸಮನಾಗಿ ಇಟ್ಟುಕೊಳ್ಳಬೇಕು.
ಆನಂತರ ಬೆಡ್ ಶೀಟ್ ಕವರ್ ಒಳಗಡೆ ಹೋಗುವ ಹಾಗೆ ಹಾಗೂ ಸೀರೆ ಬಟ್ಟೆ ಮೇಲೆ ಬರುವ ಹಾಗೆ ಸುತ್ತ ನಾಲ್ಕು ಕಡೆ ಹೊಲಿಗೆ ಹಾಕಿಕೊಳ್ಳಬೇಕು ಆನಂತರ ಬೆಡ್ ಶೀಟ್ ಕವರ್ ನಲ್ಲಿ ಬರುವಂತಹ ಸುತ್ತ ನೆಯ ಡಿಸೈನ್ ಅನ್ನು ಆ ಒಂದು ಮ್ಯಾಟ್ ಸುತ್ತ ಹಾಕಿ ಒಂದು ಹೊಲಿಗೆಯನ್ನು ಹಾಕಿಕೊಳ್ಳಬೇಕು ಈ ರೀತಿ ತಯಾರಿಸಿದಂತಹ ಮ್ಯಾಟ್ ಅನ್ನು ನೀವು ಮಲಗುವಂತಹ ಸಂದರ್ಭದಲ್ಲಿ ಕೆಳಗೆ ಹಾಕಿ ಮಲಗಬಹುದು.
ಅಥವಾ ನೀವು ಸೋಫಾ ಇಟ್ಟಿದ್ದರೆ ಅದರ ಮುಂದೆ ಅಗಲವಾದಂತ ಮ್ಯಾಟ್ ರೀತಿಯೂ ಸಹ ಬಳಸಬಹುದು. ಮಕ್ಕಳನ್ನು ಆಟ ಆಡಿಸು ವಂತಹ ಸಂದರ್ಭದಲ್ಲಿ ಅದನ್ನು ಕೆಳಗಡೆ ಹಾಕಿ ಆ ನಂತರ ಮಕ್ಕಳನ್ನು ಮೇಲೆ ಕೂರಿಸಿ ಆಟ ಆಡಿಸಬಹುದು. ಹೀಗೆ ಹಲವಾರು ಕೆಲಸ ಕಾರ್ಯಗಳಿಗೆ ಇದು ತುಂಬಾ ಉಪಯೋಗವಾಗುತ್ತದೆ.
ಈ ಸುದ್ದಿ ಓದಿ:-1 ಸೀಕ್ರೆಟ್ ವಸ್ತು ಬರೇ 5 ನಿಮಿಷದಲ್ಲಿ ಗ್ಯಾಸ್ ಸ್ಟವ್ ಉಜ್ಜದೆ ತಿಕ್ಕದೆ ಸೂಪರ್ ಕ್ಲೀನ್ ಮಾಡುವ ವಿಧಾನ.!
ಆದ್ದರಿಂದ ಯಾರೂ ಕೂಡ ಇನ್ನು ಮುಂದೆ ಇಂತಹ ಹಳೆಯ ಸೀರೆ ಮತ್ತು ಬೆಡ್ ಶೀಟ್ ಅನ್ನು ಎಸೆಯಬೇಡಿ ಈಗ ನಾವು ಹೇಳಿದ ಈ ವಿಧಾನವನ್ನು ಅನುಸರಿಸಿ ಮತ್ತೆ ಪುನರ್ ಬಳಕೆ ಮಾಡಿಕೊಳ್ಳಿ ಇದನ್ನು ನೀವೇ ನಿಮ್ಮ ಮನೆಯಲ್ಲಿಯೇ ಸುಲಭವಾಗಿ ತಯಾರಿಸಿರುವುದರಿಂದ ನಿಮಗೂ ಕೂಡ ಅದರ ಮೇಲೆ ಬಹಳ ವಿಶ್ವಾಸ ಇರುತ್ತದೆ ನಾನೇ ಮಾಡಿದ್ದು ಎನ್ನುವಂತಹ ಖುಷಿ ಕೂಡ ಇರುತ್ತದೆ ಇದನ್ನು ನೋಡಿ ಬೇರೆಯವರು ಸಹ ಇದೇ ರೀತಿ ಮಾಡಬಹುದು.