ಪ್ರಪಂಚದಲ್ಲಿ ಏನು ಕಂಡು ಹಿಡಿದರು ಕೊಬ್ಬರಿ ಒಳಗೆ ಹೇಗಿದೆ ಎಂದು ಕಂಡುಹಿಡಿಯಲು ಯಾವ ಟೆಕ್ನಾಲಜಿಯೂ ಬರಲಿಲ್ಲ. ಯಾವ ತಂತ್ರ ವಿದ್ಯೆ ವಿದ್ಯೆಯಿಂದಲೂ ತಿಳಿಯಲಾಗಲಿಲ್ಲ ಎಂದು ಹೇಳಬಹುದು. ಇದು ಕೆಲವರಿಗೆ ತಮಾಷೆ ಎನಿಸಬಹುದು ಆದರೆ ನಿಜವಾಗಿಯೂ ದೊಡ್ಡ ಮಟ್ಟದಲ್ಲಿ ಕೊಬ್ಬರಿ ಖರೀದಿಸುವವರು ಅಥವಾ ಮಾರಾಟ ಮಾಡುವವರಿಗೆ ಈ ರೀತಿ ಕೇಳಿ ನೋಡಿದರೆ ಅದರ ಹಿಂದಿನ ಕಷ್ಟ ತಿಳಿಯುತ್ತದೆ.
ಅಲ್ಲದೇ ನಾವೇ ಮನೆಯಲ್ಲಿ ಯಾವುದಾದರೂ ಶುಭ ಸಮಾರಂಭ ಇದ್ದಾಗ ಜಾಸ್ತಿ ಕೊಬ್ಬರಿ ತಂದಾಗ ನಮಗೆ ಇದರ ಅನುಭವ ಆಗಿರುತ್ತದೆ. ಒಳಗೆ ಹೇಗಿದೆ ಎಂದು ಗೊತ್ತಾಗದೆ ನಾವು ಕೆಟ್ಟಿರುವ ಕೊಬ್ಬರಿಗೂ ಸಾವಿರಾರು ರೂಪಾಯಿ ಸುರಿದಿರುತ್ತೇವೆ ಕೆಲವೊಮ್ಮೆ ತೆಂಗಿನಕಾಯಿ ವಿಚಾರದಲ್ಲೂ ಹೀಗೆ ಆಗುವುದು ಇದೆ.
ಇನ್ನು ಮುಂದೆ ಈ ಬಗ್ಗೆ ಬೇಸರ ಮಾಡಿಕೊಳ್ಳುವುದು ಬೇಡ. ಕೊಬ್ಬರಿ ಕೆಟ್ಟಿದ್ದರು ಅಥವಾ ತೆಂಗಿನಕಾಯಿ ಕೆಟ್ಟಿದ್ದರು ಅಥವಾ ನಿಮ್ಮ ಮನೆಯಲ್ಲಿ ಯಾವುದಾದರೂ ಹಬ್ಬ ಹರಿದಿನ ಅಥವಾ ದೇವಸ್ಥಾನಗಳಿಗೆ ಹೋದಾಗ ಅಥವಾ ಇನ್ಯಾವುದೇ ಕಾರಣಕ್ಕಾಗಿ ಜಾಸ್ತಿ ತೆಂಗಿನ ಕಾಯಿಯನ್ನು ಹೊಡೆದು ಬಳಸಲು ಆಗುತ್ತಿಲ್ಲ.
ಈ ಸುದ್ದಿ ಓದಿ:- ಮಹಿಳೆಯರಿಗೆ ಸಿಹಿ ಸುದ್ದಿ, ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಕೇವಲ ರೂ.100 ಮಾತ್ರ.!
ಕೆಟ್ಟು ಹೋಗುತ್ತಿದೆ ಎಂದು ಬೇಸರವಾಗುತ್ತಿದ್ದರೆ ಆ ಸಮಯದಲ್ಲಿ ಇಂದು ನಾವು ಈ ಲೇಖನದಲ್ಲಿ ತಿಳಿಸುತ್ತಿರುವ ಒಂದು ಸಿಂಪಲ್ ಟ್ರಿಕ್ ಬಳಸಿ, ಇವುಗಳು ವೇಸ್ಟ್ ಆಗದಂತೆ ನೋಡಿಕೊಳ್ಳಿ. ನೀವು ಕಸಕ್ಕೆ ಹಾಕುತ್ತಿದ್ದ ಕೊಬ್ಬರಿಯಿಂದಲೇ ಒಂದು ಒಳ್ಳೆಯ ರಸವನ್ನು ಹೇಗೆ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಹೇಳಿಕೊಡುತ್ತಿದ್ದೇವೆ.
ಕೊಬ್ಬರಿ, ತೆಂಗಿನಕಾಯಿ ಕೆಟ್ಟಾಗ ಒಳಗಡೆ ಕಪ್ಪು ಚುಕ್ಕೆ ಆಗಿರುತ್ತದೆ, ಅದನ್ನು ತೊಳೆದುಕೊಳ್ಳಬೇಕು. ಅದು ಸುಲಭಕ್ಕೆ ಹೋಗುವುದಿಲ್ಲ ಹಾಗಾಗಿ ಎಲ್ಲವನ್ನು ಬಿಡಿಸಿ ಒಂದು ನೀರಿನ ಪಾತ್ರೆಯಲ್ಲಿ ಹಾಕಿ ರಾತ್ರಿ ನೆನೆಯಲು ಬಿಡಿ ಬೆಳಗ್ಗೆ ಬೇಗ ಎದ್ದು ಸ್ಪೂನ್ ಅಥವಾ ಚಾಕು ಸಹಾಯದಿಂದ ಒಳಗೆ ಕಪ್ಪು ಕಪ್ಪಾಗಿರುವುದನ್ನೆಲ್ಲಾ ತೆರೆಯಿರಿ ಮತ್ತು ಈಗ ಎಲ್ಲವನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿಕೊಂಡು ಮಿಕ್ಸಿ ಜಾರಿಗೆ ಹಾಕಿ.
ಸ್ವಲ್ಪ ನೀರು ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಎಷ್ಟು ನೈಸ್ ಸಾಧ್ಯ ಅಷ್ಟು ನೈಸ್ ಆಗಿ ಇದು ಬರಬೇಕು ಈಗ ಈ ಪೇಸ್ಟ್ ಅನ್ನು ಒಂದು ಕಾಟನ್ ಬಟ್ಟೆ ಸಹಾಯದಿಂದ ಶೋಧಿಸಿಕೊಳ್ಳಿ. ಶುದ್ಧವಾದ ತೆಂಗಿನಕಾಯಿ ಹಾಲು ಬರುತ್ತದೆ ನಂತರ ಒಂದು ದೊಡ್ಡ ಅಗಲವಾದ ಬಾಣಲಿಗೆ ಹಾಕಿ ಗ್ಯಾಸ್ ಮೇಲೆ ಇಡಿ ಮೀಡಿಯಂ ಫ್ಲೇಮ್ ನಲ್ಲಿ 15 ನಿಮಿಷಗಳ ಕಾಲ ಇದನ್ನು ಕಾಯಲು ಬಿಡಿ ಮತ್ತು ತಳ ಹಿಡಿಯಬಾರದು ಹಾಗಾಗಿ ಕೈ ಆಡುತ್ತಾ ಇರಿ.
ಈ ಸುದ್ದಿ ಓದಿ:- ಮನೆ ಕಟ್ಟುವವರಿಗೆ ಕೇಂದ್ರಸರ್ಕಾರದಿಂದ 2.7 ಲಕ್ಷ ಸಹಾಯಧನ, ಹೇಗೆ ಅರ್ಜಿ ಸಲ್ಲಿಸಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರು ಅರ್ಹರು ನೋಡಿ.!
ಒಂದೆರಡು ತುಳಸಿ ಎಲೆಯನ್ನು ಚೆನ್ನಾಗಿ ಕೈಯಲ್ಲಿ ತೀಡಿ ರಸವನ್ನು ಹಾಕಿ ನಿಮಗೆ ತೆಂಗಿನಕಾಯಿ ಹಾಲು ಇರುವುದು ಬ್ರೌನ್ ಬಣ್ಣಕ್ಕೆ ತಿರುಗುತ್ತಿರುವುದು ಗೊತ್ತಾಗುತ್ತದೆ. ಮೇಲೆ ಎಣ್ಣೆ ತೇಲುತ್ತಾ ಇರುವ ರೀತಿ ಬರುತ್ತದೆ ಆಗ ಇದು ಎಣ್ಣೆ ಆಗಿದೆ ಎನ್ನುವುದು ಅದರ ಘಮದಿಂದ ಹಾಗೂ ಬದಲಾಗುತ್ತಿರುವ ಬಣ್ಣದಿಂದ ತಿಳಿಯುತ್ತದೆ ಇದು ಸೀದು ಹೋಗದಂತೆ ನೋಡಿಕೊಂಡು ಸ್ಟವ್ ಆಫ್ ಮಾಡಿ.
ಸ್ವಲ್ಪ ಬೆಚ್ಚಗಿರುವಾಗ ಇದನ್ನು ಮತ್ತೆ ಕಾಟನ್ ಬಟ್ಟೆ ಅಥವಾ ಸ್ಟೇನರ್ ಸಹಾಯದಿಂದ ಶೋಧಿಸಿಕೊಳ್ಳಿ. ಒಂದು ಚಿಟಿಕೆ ಪಚ್ಚ ಕರ್ಪೂರ ಪುಡಿಯನ್ನು ಕೂಡ ಸೇರಿಸಿ ಈಗ ಶುದ್ಧವಾದ ಘಮಘಮ ಎನ್ನುವ ತೆಂಗಿನಕಾಯಿ ಎಣ್ಣೆಯು ತಯಾರಾಗಿರುತ್ತದೆ. ದೇವರ ದೀಪಕ್ಕೆ ಅಥವಾ ಮಸಾಜ್ ಮಾಡಲು ಅಥವಾ ಕೂದಲಿಗೆ ಹಚ್ಚಲು ಬಳಸಬಹುದು.