Thursday, April 24, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeNewsವಿಷ್ಣುವರ್ಧನ್ ಎರಡನೇ ಪುತ್ರಿ ಚಂದನ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ ಯಾಕೆ ಗೊತ್ತಾ.? ವಿಷ್ಣು ಹೋದ ಮೇಲೆ ಕುಟುಂಬದಲ್ಲಿ...

ವಿಷ್ಣುವರ್ಧನ್ ಎರಡನೇ ಪುತ್ರಿ ಚಂದನ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ ಯಾಕೆ ಗೊತ್ತಾ.? ವಿಷ್ಣು ಹೋದ ಮೇಲೆ ಕುಟುಂಬದಲ್ಲಿ ಮನಸ್ತಾಪ, ಗುಟ್ಟು ಬಿಟ್ಟು ಕೊಡದ ಭಾರತಿ ವಿಷ್ಣುವರ್ಧನ್.

ವಿಷ್ಣು ವರ್ಧನ್

ಕರುನಾಡ ದಾದಾ ಸಾಹಸಸಿಂಹ ವಿಷ್ಣುವರ್ಧನ್ ಅವರು ಒಬ್ಬ ಸಂತನಂತೆ ತಮ್ಮ ಜೀವನ ಸಾಗಿಸಿದ್ದಾರೆ. ಭಾರತಿ ಅವರನ್ನು ವಿವಾಹವಾಗಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡು ಚೆನ್ನಾಗಿ ಬೆಳೆಸಿದ ಇದರ ಬದುಕು ಅನೇಕ ಪಾಲಿಗೆ ಆದರ್ಶಮಯ. ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸದಾ ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಸಂಬಂಧಪಟ್ಟ ಹಾಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ.

ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳು ಮತ್ತು ಅವರ ಸಮಾಧಿಗೆ ಸಂಬಂಧಪಟ್ಟ ವಿವಾದಗಳು ಇಂತಹ ಸಮಯದಲ್ಲೆಲ್ಲ ಕುಟುಂಬಸ್ಥರು ಮೀಡಿಯಾ ಮುಂದೆ ಕಾಣಿಸಿಕೊಳ್ಳುತ್ತಾರೆ. ಆದರೆ ಭಾರತಿ ವಿಷ್ಣುವರ್ಧನ್, ಹಿರಿಯ ಮಗಳು ಕೀರ್ತಿ ಹಾಗೂ ಅನಿರುದ್ಧ್ ಅವರೇ ಹೆಚ್ಚಾಗಿ ಮಾತನಾಡುತ್ತಾರೆ ಹೊರತು ವಿಷ್ಣು ವರ್ಧನ್ ಅವರ ಇನ್ನೊಬ್ಬ ಪುತ್ರಿ ಚಂದನ ಬಗ್ಗೆ ಎಲ್ಲೂ ಕೂಡ ಹೆಚ್ಚಿನ ಮಾಹಿತಿ ಇಲ್ಲ.

ಹೀಗಾಗಿ ಅವರು ವಿದೇಶದಲ್ಲಿ ಇದ್ದಾರಾ ಎನ್ನುವ ಅನುಮಾನ ಅನೇಕರಲ್ಲಿ ಇದೆ. ಆದರೆ ಇದು ಸುಳ್ಳು, ವಿಷ್ಣುವರ್ಧನ್ ಅವರ ಎರಡನೇ ಮಗಳು ಚಂದನ ಕೂಡ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕೀರ್ತಿ ಅವರು ಡಿಗ್ರಿ ಆದ ಬಳಿಕ ಫ್ಯಾಶನ್ ಡಿಸೈನಿಂಗ್ ಅಂತ ಆಕರ್ಷಣೆ ಇದೆ ಎಂದು ಹೇಳಿ ಆ ಕ್ಷೇತ್ರ ಆಯ್ದುಕೊಂಡು ಮುಂದುವರೆದರು. ಕೋಟಿಗೊಬ್ಬ ಯಜಮಾನ ಮುಂತಾದ ವಿಷ್ಣುವರ್ಧನ್ ಅವರ ಅನೇಕ ಸಿನಿಮಾಗಳಿಗೆ ಕೀರ್ತಿ ಅವರು ಕಾಸ್ಟ್ಚೂಮ್ ಡಿಸೈನ್ ಮಾಡಿದ್ದಾರೆ.

ನಂತರ ತಂದೆ ಮೆಚ್ಚಿದ ಕಲಾವಿದ ಅನಿರುದ್ಧ್ ಅವರನ್ನೇ ವಿವಾಹ ಆಗಿ ಇಬ್ಬರು ಮಕ್ಕಳ ತಾಯಿ ಆಗಿದ್ದಾರೆ. ಇನ್ನೇನು ಕೀರ್ತಿ ಹಾಗೂ ಅನಿರುದ್ಧ್ ಅವರ ಹಿರಿಯ ಪುತ್ರ ಜೇಷ್ಠ ವರ್ಧನ್ ಕೂಡ ಬೆಳೆದಿದ್ದು ಸದ್ಯದಲ್ಲೇ ಸಿನಿಮಾ ಇಂಡಸ್ಟ್ರಿಯಲ್ಲಿ ಲಾಂಚ್ ಕೂಡ ಆಗಲಿದ್ದಾರೆ. ಕೀರ್ತಿ ಅವರು ವಿಷ್ಣುವರ್ಧನ್, ಭಾರತಿ ಮತ್ತು ಅನಿರುದ್ಧ ಅವರಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಆಗಾಗ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಸಂದರ್ಶನ ಕೊಡುತ್ತಾರೆ.

ಎರಡನೇ ಪುತ್ರಿ ಚಂದನ ಮಾತ್ರ ಯಾವುದೇ ಮೀಡಿಯಾಗಳಿಗೆ ಇದುವರೆಗೆ ಸಂದರ್ಶನ ಕೊಟ್ಟಿಲ್ಲ. ಇವರಿಗೆ ಏನು ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಅನೇಕರಿಗೆ ಗೊತ್ತೇ ಇಲ್ಲ. ವಿಷ್ಣುವರ್ಧನ್ ಅವರು ಚಂದನ ಅವರನ್ನು ಒಬ್ಬ ಉದ್ಯಮಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಇಬ್ಬರೂ ಕೂಡ ಈಗ ತಮ್ಮ ಬಿಸಿನೆಸ್ ಕಡೆ ತೊಡಗಿಕೊಂಡಿದ್ದು ಬದುಕು ಕಟ್ಟಿಕೊಂಡಿದ್ದಾರೆ.

ವಿಷ್ಣುವರ್ಧನ್ ಅವರ ಕುಟುಂಬದ ಎಲ್ಲಾ ಕಾರ್ಯಕ್ರಮಗಳಿಗೂ ಕೂಡ ಚಂದನ ಅವರು ಬರುತ್ತಾರೆ ಆದರೆ ಮೀಡಿಯಾದವರಿಗೆ ಮಾತ್ರ ಕಾಣಿಸುವುದಿಲ್ಲ ಯಾಕೆಂದರೆ ಇನ್ನೂ ಸಹ ಅವರಿಗೆ ಕ್ಯಾಮರ ಎಂದರೆ ಮುಜುಗರವಂತೆ. ಎಷ್ಟೋ ಬಾರಿ ಇವರಿಗಾಗಿ ಸಂದರ್ಶನಗಳನ್ನು ಕರೆದಿದ್ದರು ಚಂದನ ಮಾತ್ರ ಎಲ್ಲೂ ಈವರಿಗೆ ಮಾತನಾಡಿಲ್ಲ.

ಮೊನ್ನೆ ಅಷ್ಟೇ ವಿಷ್ಣುವರ್ಧನ್ ಅವರ ಹಳೆಯ ನಿವಾಸವು ಹೊಸ ವಿನ್ಯಾಸಗೊಂಡು ವಲ್ಮೀಕ ಎನ್ನುವ ಹೆಸರಿನಲ್ಲಿ ಗೃಹಪ್ರವೇಶ ಕೂಡ ನಡೆದಿದೆ. ಈ ಕಾರ್ಯಕ್ರಮದಲ್ಲೂ ಸಹ ಚಂದನ ಅವರು ಭಾಗಿಯಾಗಿದ್ದರು ಆದರೆ ಮಾಧ್ಯಮದವರನ್ನು ಕಂಡ ತಕ್ಷಣ ಮನೆ ಒಳಗಡೆ ಹೋಗಿಬಿಟ್ಟರಂತೆ.

ವಿಷ್ಣುವರ್ಧನ್ ಅವರ ಆರೈಕೆಯಲ್ಲಿ ಬೆಳೆದಿರುವ ಚಂದನ ಅವರ ಸಹ ಬಹಳ ಸರಳ ಜೀವನ ಇಷ್ಟಪಡುತ್ತಾರಂತೆ. ಸೂಪರ್ ಸ್ಟಾರ್ ಪುತ್ರಿ ಆಗಿದ್ದರೂ ಕೂಡ ಎಲ್ಲೂ ಆ ಹೆಸರು ಬಳಸದೆ ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರಂತೆ. ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಆಗಾಗ ವಿಷ್ಣುವರ್ಧನ್ ಅವರ ಕುಟುಂಬದ ಹಳೆ ಫೋಟೋಗಳು ವೈರಲ್ ಆದಾಗ ಚಂದನ ಅವರನ್ನು ಫೋಟೋಗಳಲ್ಲಿ ಕಾಣಬಹುದಾಗಿದೆ.