Sunday, June 4, 2023
HomeNewsದರ್ಶನ್ ಬಗ್ಗೆ ಯಾರಿಗೂ ತಿಳಿಯದ ವಿಚಾರ ರಿವೀಲ್ ಮಾಡಿದ ನಟ ದಿಂಗತ್, ಡಿ-ಬಾಸ್ ಅಸಲಿ ಮುಖದ...

ದರ್ಶನ್ ಬಗ್ಗೆ ಯಾರಿಗೂ ತಿಳಿಯದ ವಿಚಾರ ರಿವೀಲ್ ಮಾಡಿದ ನಟ ದಿಂಗತ್, ಡಿ-ಬಾಸ್ ಅಸಲಿ ಮುಖದ ಬಗ್ಗೆ ತಿಳಿದ್ರೆ ನಿಜಕ್ಕೂ ದಂಗಾಗುತ್ತಿರ.

 

ಪಾಕೆಟ್ ಗೆ ಕೈ ಹಾಕಿದ್ರೆ ಒದೆ ತಿಂತಿಯಾ ಎಂದು ದಿಗಂತ್ ಗೆ ಡಿ ಬಾಸ್ ಎಚ್ಚರಿಕೆ ಕೊಟ್ಟಿದ್ದು ಯಾಕೆ ಗೊತ್ತಾ?

ಸ್ಯಾಂಡಲ್ವುಡ್ ದೂದ್ ಪೇಡ ದಿಗಂತ್ ಅನಂತನಾಗ್ ಹಾಗೂ ಐಂದ್ರಿತಾ ರೇ ಕಾಂಬಿನೇಷನ್ನ ತಿಮ್ಮಯ್ಯ ವರ್ಸಸ್ ತಿಮ್ಮಯ್ಯ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು ಚಿತ್ರತಂಡದ ಎಲ್ಲರೂ ಕೂಡ ಪ್ರಚಾರ ಕಾರ್ಯಗಳಲ್ಲಿ ಬಿಸಿ ಆಗಿದ್ದಾರೆ. ಈ ರೀತಿ ತಿಮ್ಮಯ್ಯ ವರ್ಸಸ್ ತಿಮ್ಮಯ್ಯ ಸಿನಿಮಾದ ಪ್ರಚಾರದ ಸಮಯದಲ್ಲಿ ದಿಗಂತ್ ಅವರು ದರ್ಶನ್ ಅವರನ್ನು ನೆನೆಸಿಕೊಂಡಿದ್ದಾರೆ.

ಸಂದರ್ಶನದಲ್ಲಿ ಮಾತಿನ ಮಧ್ಯೆ ದರ್ಶನ್ ಅವರನ್ನು ನೆನೆದ ದಿಗಂತ್ ಅವರು ಹಲವಾರು ವಿಷಯಗಳನ್ನು ದರ್ಶನ್ ಅವರ ಬಗ್ಗೆ ಹಂಚಿಕೊಂಡಿದ್ದಾರೆ. ಮೊದಲಿಗೆ ಮಂಡ್ಯ ಸಿನಿಮಾದಲ್ಲಿ ದರ್ಶನ ಅವರ ಜೊತೆ ದಿಗಂತ್ ಅವರು ಕಾಣಿಸಿಕೊಂಡಿದ್ದರು, ದಿಗಂತ್ ಅವರು ಆಗಸ್ಟೇ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದ ದಿನವದು.

ಆ ಸಮಯದಲ್ಲಿ ಫೈಟಿಂಗ್ ಸೀನ್ ಒಂದರಲ್ಲಿ ತುಂಬಾ ಸುಸ್ತಾಗಿದ್ದ ದಿಗಂತ್ ಅವರನ್ನು ಕಾಪಾಡಲು ದರ್ಶನ್ ಅವರು ಬರುತ್ತಾರೆ ಹಾಗೂ ದರ್ಶನ್ ದಿಗಂತ್ ಅಣ್ಣನಾಗಿ ಸಿನಿಮಾದಲ್ಲಿ ಇರುತ್ತಾರೆ. ಈ ಸಿನಿಮಾದಲ್ಲಿ ದಿಗಂತವರಿಗೆ ಒಂದೇ ಒಂದು ಡೈಲಾಗ್ ಇತ್ತು ಅಷ್ಟೇ ಆದರೆ ಆ ಬಗ್ಗೆ ಯಾವುದೇ ಬೇಸರ ಇಲ್ಲ ಯಾಕೆಂದರೆ ಆ ಸಿನಿಮಾ ಇಂದ ದರ್ಶನ್ ಅಂತಹ ಉತ್ತಮ ಸ್ನೇಹಿತರನ್ನು ಪಡೆದುಕೊಂಡೆ ಎಂದಿದ್ದಾರೆ ದಿಗಂತ್.

ದರ್ಶನ್ ಅವರು ಬಹಳ ಸೂಕ್ಷ್ಮ ಮನೋಭಾವದ ವ್ಯಕ್ತಿ. ಆ ರೀತಿ ವಿಶೇಷ ವ್ಯಕ್ತಿತ್ವ ಹೊಂದಿದ್ದ ಜನರನ್ನು ನಾನು ಬಹಳ ಕಡಿಮೆ ನೋಡಿದ್ದೇನೆ. ಯಾಕೆಂದರೆ ಶೂಟಿಂಗ್ ಸೆಟ್ ಅಲ್ಲಿ ಯಾರಿಗೆ ಹಸಿವಾದರೂ ಅವರು ಸಹಿಸಿಕೊಳ್ಳುವುದಿಲ್ಲ ತಕ್ಷಣ ಊಟದ ವ್ಯವಸ್ಥೆ ಮಾಡುತ್ತಾರೆ ಅಲ್ಲದೆ ಅವರ ಜಿಪ್ಸಿ ಒಂದು ಇರುತ್ತದೆ ಅದರಲ್ಲಿ ಆಹಾರ ಸಾಮಾಗ್ರಿಗಳೇ ತುಂಬಿರುತ್ತದೆ.

ಅವರ ಜೊತೆ ಜರ್ನಿ ಮಾಡುವವರಿಗೆ ಹಸಿವಾದಾಗ ತಕ್ಷಣ ಆಮ್ಲೆಟ್ ಅಥವಾ ಬ್ರೆಡ್ ಅನ್ನು ಮಾಡಿಕೊಡುತ್ತಾರೆ ಅವರು ಬೈಕ್ ರೈಸ್ ಮಾಡಲು ಇಷ್ಟ ಪಟ್ಟರೆ ಮೊದಲಿಗೆ ನನಗೆ ಕರೆ ಮಾಡುತ್ತಾರೆ. 10, 12 ಜನ ಬೈಕ್ ರೈಡ್ ಹೊರಟರು ಯಾರಿಗೂ ಪೆಟ್ರೋಲ್ ಹಾಕಿಸಲು ಬಿಡುವುದಿಲ್ಲ. ನಾವೇನಾದರೂ ಹಣ ಕೊಡಲು ಹೋದರೆ ಯಾರಾದರೂ ಪರ್ಸ್ ಗೆ ಕೈ ಹಾಕಿದರೆ ಒದೆ ಬೀಳುತ್ತವೆ ಎಂದು ಎಚ್ಚರಿಸುತ್ತಾರೆ.

ಎಲ್ಲರ ಬೈಕ್ಗಳು ಕೂಡ ದುಬಾರಿ ಬೆಲೆಯ ಬೈಕ್ ಗಳು ಆಗಿದ್ದು ಸುಮಾರು ಲೀಟರ್ ಪೆಟ್ರೋಲ್ ಕುಡಿಯುತ್ತವೆ. ಆದರೂ ದರ್ಶನ್ ಅವರೇ ಎಲ್ಲರಿಗೂ ಫುಲ್ ಟ್ಯಾಂಕ್ ಮಾಡಿಸಿಕೊಡುತ್ತಾರೆ ಎಂದಿದ್ದಾರೆ. ಜೊತೆಗೆ ಪ್ರಾಣಿಗಳ ಬಗ್ಗೆ ದರ್ಶನ್ ಅವರಿಗೆ ಇರುವಷ್ಟು ಇಂಟರೆಸ್ಟ್ ಬೇರೆ ಯಾರಿಗೂ ಇಲ್ಲ ಯಾಕೆಂದರೆ ಅವರು ವೈಲ್ಡ್ ಲೈಟ್ ಫೋಟೋಗ್ರಾಫಿ ಬಗ್ಗೆ ಅಷ್ಟು ಕ್ರೇಜ್ ಹೊಂದಿದ್ದಾರೆ.

ಒಂದು ಪಕ್ಷಿಯ ಫೋಟೋ ತೆಗೆಯುವ ಸಲುವಾಗಿ 12 ದಿನಗಳವರೆಗೆ ಕಾದಿದ್ದು ಅದು ಬಂದ ನಂತರ ತೆಗೆದಿದ್ದಾರೆ ಇಷ್ಟು ಅವುಗಳ ಬಗ್ಗೆ ಆಸಕ್ತಿ ಹಾಗೂ ಕುತೂಹಲ ಹೊಂದಿರುವ ಒಬ್ಬರೇ ಒಬ್ಬ ನಾನು ಕಂಡ ವ್ಯಕ್ತಿ ಎಂದರೆ ಅದು ದರ್ಶನ್ ಅವರು ಎಂದು ದರ್ಶನ್ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ.

ಮಂಡ್ಯ ಸಿನಿಮಾದ ಬಳಿಕ ಚೌಕ ಸಿನಿಮಾದಲ್ಲೂ ಸಹ ದರ್ಶನ ಅವರ ಜೊತೆ ಕಾಣಿಸಿಕೊಳ್ಳುವ ಅದೃಷ್ಟ ಸಿಕ್ಕಿತು, ಕೊನೆಯವರೆಗೂ ಕೂಡ ನಾನು ಈ ಸ್ನೇಹವನ್ನು ಹಾಗೆ ಉಳಿಸಿಕೊಳ್ಳುತ್ತೇನೆ ಎಂದು ಕೂಡ ಮಾತನಾಡಿದ್ದಾರೆ. ಸದ್ಯಕ್ಕೆ ತಿಮ್ಮಯ್ಯ ವರ್ಸಸ್ ತಿಮ್ಮಯ್ಯ ಸಿನಿಮಾದಲ್ಲಿ ದಿಗ್ಗಿ ಮತ್ತು ಅನಂತ್ ನಾಗ್ ಹಾಗೂ ದಿಗ್ಗಿ ಮತ್ತು ಐಂದ್ರಿತಾ ಕಾಂಬಿನೇಷನ್ ಅನ್ನು ಬಹುದಿನಗಳ ಬಳಿಕ ತೆರೆ ಮೇಲೆ ಕಾಣಲು ಪ್ರೇಕ್ಷಕರು ಕಾತುರವಾಗಿದ್ದು ಸಿನಿಮಾ ರಿಲೀಸ್ ಗಾಗಿ ಕಾಯುತ್ತಿದ್ದಾರೆ.