Sunday, June 4, 2023
HomeNewsಸಾನಿಯಾ ಅಯ್ಯರ್ "ನನ್ ಮೈ ಮೇಲೆ ದೇವಿ ಬರ್ತಾಳೆ, ಒಮ್ಮೆ ದೇವಿನ ಮನಸಲ್ಲಿ ಸ್ಮರಿದ್ರೆ ಸಾಕು...

ಸಾನಿಯಾ ಅಯ್ಯರ್ “ನನ್ ಮೈ ಮೇಲೆ ದೇವಿ ಬರ್ತಾಳೆ, ಒಮ್ಮೆ ದೇವಿನ ಮನಸಲ್ಲಿ ಸ್ಮರಿದ್ರೆ ಸಾಕು ನನ್ನನ್ನು ಆವರಿಸುತ್ತಾಳೆ.

 

ಮೈ ಮೇಲೆ ದೇವಿ ಬರುತ್ತಾರಂತೆ…

ಸಾನಿಯಾ ಅಯ್ಯರ್ ಅವರು ಸದ್ಯಕ್ಕೆ ಬಿಗ್ ಬಾಸ್ ಸಾನಿಯಾ ಆಗಿ ಕರ್ನಾಟಕದಲ್ಲಿ ಗುರುತಿಸಿ ಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 9ರ ಸ್ಟ್ರಾಂಗೆಸ್ಟ್ ಕಂಟೆಸ್ಟೆಂಟ್ ಎನಿಸಿಕೊಂಡಿದ್ದ ಸಾನಿಯಾ ಅವರು ಅರ್ಧಕ್ಕೆ ಆಟ ನಿಲ್ಲಿಸಿ ಮನೆಯಿಂದ ಆಚೆ ಬಂದಿದ್ದಾರೆ. ಇದಕ್ಕೂ ಮುನ್ನ ಓ ಟಿ ಟಿ ಸೀಸನ್ನಲ್ಲಿ ಇವರ ಆಟ ನೋಡಿದ ಯಾರು ಇಷ್ಟು ಬೇಗ ಸಾನಿಯಾ ಆಚೆ ಬರುತ್ತದೆ ಎಂದುಕೊಂಡಿರಲಿಲ್ಲ.

ಓಟಿಟಿ ಸೀಸನ್ ಪೂರ್ತಿ ಚಟುವಟಿಕೆಗಳಲ್ಲಿ, ಪರ್ಫಾರ್ಮೆನ್ಸ್, ಟಾಸ್ಕ್ಗಳಲ್ಲಿ ಮನೋರಂಜನೆಯಲ್ಲಿ ತೊಡಗಿಕೊಂಡು ಮನೆ ಪೂರ್ತಿ ಆವರಿಸಿಕೊಂಡಿದ್ದರು. ಹಾಗಾಗಿ ಬಿಗ್ ತೆರೆ ಬಿಗ್ ಬಾಸ್ ಅಲ್ಲೂ ಕೂಡ ಇವರು ಫೈನಲ್ ಗೆ ಬರುತ್ತಾರೆ ಎಂದೇ ಅವರ ಅಭಿಮಾನಿಗಳು ಭಾವಿಸಿದ್ದರು. ಆದರೆ ಎಲ್ಲರಿಗೂ ಆಶ್ಚರ್ಯ ಆಗುವಂತೆ ಸಾನಿಯಾ ಅವರು ಕಿರುತೆರೆಯ ಬಿಗ್ ಬಾಸ್ ಬಂದಮೇಲೆ ಯಾಕೋ ಬಹಳ ಡಲ್ಲಾಗಿ ಹೋದರು.

ಇದೇ ಕಾರಣಕ್ಕಾಗಿ ಅವರು ಇಷ್ಟು ಬೇಗ ಆಟದಿಂದ ಹಾಗೂ ಮನೆಯಿಂದ ಔಟ್ ಆಗಬೇಕಾಯಿತು. ಬಿಗ್ ಬಾಸ್ ಗೆ ಕಾಣಿಸಿಕೊಳ್ಳುವುದಕ್ಕಿಂತ ಮುಂಚೆ ಪುಟ್ಟಗೌರಿ ಮದುವೆ ಧಾರಾವಾಹಿಯ ಪುಟ್ಟಗೌರಿಯಾಗಿ ಮತ್ತು ಜೀ ಕನ್ನಡ ವಾಹಿನಿಯಂತೆ ಪ್ರಸಾರವಾಗುತ್ತಿದ್ದ ಅರಸಿ ಧಾರಾವಾಹಿಯ ರಶ್ಮಿ ಯಾಗಿ ಮತ್ತು ಡ್ಯಾನ್ಸಿಂಗ್ ರಿಯಾಲಿಟಿ ಶೋಗಳಲ್ಲಿ ಕಂಟೆಸ್ಟೆಂಟ್ ಆಗಿ ಕಾಣಿಸಿಕೊಂಡಿದ್ದ ಸಾನಿಯಾ ರವರು ಅಪ್ಪಟ ಕನ್ನಡದ ಕಲಾವಿದೆ.

ಇವರ ಸ್ಪಷ್ಟ ಕನ್ನಡ ಹಾಗೂ ಕನ್ನಡ ಪದ ಬಳಕೆ ಬಗ್ಗೆ ಕನ್ನಡಿಗರಾದ ಎಲ್ಲರಿಗೂ ಹೆಮ್ಮೆ ಇದೆ. ಈ ಕಾಲದ ನಟಿಯರಿಗೆ ಇಷ್ಟು ಚೆನ್ನಾಗಿ ಕನ್ನಡ ಬರುತ್ತದಾ ಎಂದು ಆಶ್ಚರ್ಯ ಪಡುವಂತೆ ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ಕನ್ನಡ ಬಳಸಿ ಮಾತನಾಡಿದ್ದಾರೆ ಸಾನಿಯಾ ಅಯ್ಯರ್. ಸಾನಿಯಾ ಅಯ್ಯರ್ ಅವರ ಕುಟುಂಬಸ್ಥರಲ್ಲಿ ಬಹುತೇಕ ಎಲ್ಲರೂ ಕಲಾವಿದರೇ. ಈಕೆಯ ತಾಯಿ ಸುನಿತಾ ಧಾರಾವಾಹಿಗಳಲ್ಲಿ ಅಭಿನಯಿಸಿದರೆ ಚಿಕ್ಕಮ್ಮ ರೂಪ ಅಯ್ಯರ್ ಅವರು ಕನ್ನಡದ ಹೆಸರಾಂತ ನಿರ್ಮಾಪಕಿಯಾಗಿದ್ದಾರೆ.

ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಸಾನಿಯಾ ಅಯ್ಯರ್ ಅವರು ಸಾಕಷ್ಟು ಸಂದರ್ಶನಗಳನ್ನು ಕೊಟ್ಟಿದ್ದು ಅದರಲ್ಲಿ ಸುದ್ದಿ ಮಾಧ್ಯಮದ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಅವರು ಹೇಳಿದ ಒಂದು ವಿಷಯದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಮಾತಿನ ಮಧ್ಯೆ ದೇವರ ವಿಷಯಕ್ಕೆ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಉದಾಹರಣೆ ಕೊಡುವುದಕ್ಕೆ ತನ್ನ ಹಳೆಯ ಘಟನೆ ಯನ್ನು ನೆನೆದು ಸಾನಿಯಾ ಮಾತನಾಡಿದ್ದಾರೆ.

ತಾನು ದೇವಿ ಪಾತ್ರ ಮಾಡಬೇಕಾಗಿ ಬಂದ ಒಂದು ಸಮಯದಲ್ಲಿ ತನ್ನ ಹಾಗೂ ದೇವಿ ನಡುವೆ ಇದ್ದ ಮೌನದ ಮನಸಿನ ಮಾತುಕತೆ ಬಗ್ಗೆ ಸಾನಿಯಾ ಮನ ಬಿಚ್ಚಿ ಮಾತನಾಡಿದ್ದಾರೆ ಈ ಹಿಂದೆ ಒಮ್ಮೆ ನಾನು ದೇವಿ ಪಾತ್ರ ಮಾಡಿದ್ದೆ ವಾರ ಪೂರ್ತಿ ಹಾಗೂ ಆ ಸಮಯದಲ್ಲಿ ನಾನು ಹೆಚ್ಚು ಅದೇ ಯೋಚನೆಯಲ್ಲಿ ಇರುತ್ತಿದ್ದೇನೆ ಮನಸ್ಸಿನಲ್ಲಿಯೇ ದೇವಿಯ ಜೊತೆ ಮಾತನಾಡುತ್ತಿದ್ದೆ, ಧ್ಯಾನಿಸುತಿದ್ದೆ.

ಅದಕ್ಕೆ ತಕ್ಕ ಹಾಗೆ ಶುದ್ಧವಾಗಿ, ಮಡಿಯಾಗಿರುವುದು ಪಾಲಿಸುತ್ತಿದ್ದೆ. ಹೀಗೆ ದೇವಿಯೇ ನನ್ನ ಮನಸ್ಸಿನ ಪೂರ್ತಿ ತುಂಬಿಕೊಂಡಿದ್ದಳು. ಆಗ ನಾನು ಅಂದುಕೊಳ್ಳುತ್ತಿದ್ದೆ ಇಷ್ಟು ಭಕ್ತಿಯಿಂದ ಪ್ರೀತಿಯಿಂದ ಹಾಗೂ ಆಸಕ್ತಿಯಿಂದ ಆರಾಧಿಸುತ್ತಿದ್ದೇನೆ ಎಲ್ಲರೂ ನೀನು ಮೈ ಮೇಲೆ ಬರುತ್ತೀಯ ಎಂದು ಹೇಳುತ್ತಾರೆ ಹಾಗಾದರೆ ನೀನು ನನ್ನ ಮೈ ಮೇಲೆ ಕೂಡ ಬರಬೇಕು.

ನೀನು ಹೇಗೆ ಬರೆದೆ ಹೋಗುತ್ತೀಯ ನಾನು ನೋಡುತ್ತೇನೆ ಎಂದು ಹಠ ಹಿಡಿದಿದ್ದೆ ಆಗ ನನ್ನ ಮೇಲೆ ದೇವರು ಬಂದಿದ್ದರು ಎಂದು ಹಳೆಯದ್ದನ್ನು ನೆನೆಸಿಕೊಂಡಿದ್ದಾರೆ. ಭಾರತದ ಸಂಸ್ಕೃತಿ ಸಂಪ್ರದಾಯ ಆಚರಣೆಗಳು ಜಪತಪ ಮಂತ್ರಗಳಲ್ಲಿ ಬಹಳ ಶಕ್ತಿಯಿದ್ದು ಅದನ್ನು ಅಲ್ಲಗಳೆಯುವುದಕ್ಕೆ ಸಾಧ್ಯವೇ ಇಲ್ಲ ಎಂದು ಸಹ ಅವರು ಮಾತನಾಡಿದ್ದಾರೆ.