Friday, June 9, 2023
HomeNewsಯಾವನು ನನ್ಗೆ ಸಹಾಯ ಮಾಡಿಲ್ಲ ಸುಮ್ನೆ ನಾನ್ ಸಹಾಯ ಮಾಡ್ದೆ ಅಂತ ಮಿಡಿಯಾ ಮುಂದೆ ಗಿಮಿಕ್...

ಯಾವನು ನನ್ಗೆ ಸಹಾಯ ಮಾಡಿಲ್ಲ ಸುಮ್ನೆ ನಾನ್ ಸಹಾಯ ಮಾಡ್ದೆ ಅಂತ ಮಿಡಿಯಾ ಮುಂದೆ ಗಿಮಿಕ್ ಮಾಡ್ಬೇಡಿ ಅಂತ ಖಡಕ್ ಆಗಿ ಎಚ್ಚರಿಕೆ ಕೊಟ್ಟ ನಟ ರವಿಚಂದ್ರನ್.

 

ಟಿವಿಗಳಲ್ಲಿ ಅವರಿವರು ನನಗೆ ಸಹಾಯ ಮಾಡಿದರು ಎಂದು ಹೇಳುತ್ತಿರುವುದೆಲ್ಲ ಸುಳ್ಳು ಎಂದು ರವಿಚಂದ್ರನ್.

ಕ್ರೇಜಿಸ್ಟಾರ್ ರವಿಚಂದ್ರನ್ ಎಂದರೆ ಅದೊಂದು ರಾಯಲ್ ನೇಮ್ ಹೆಸರಿಗೆ ತಕ್ಕಂತೆ ರಾಯಲ್ ಆಗಿಯೇ ಸಿನಿಮಾಗಳನ್ನು ಮಾಡಿ ರಾಯಲ್ ಆಗಿಯೇ ಬದುಕಿದವರು ರವಿಚಂದ್ರನ್ ಅವರು. ಒಂದು ಕಾಲದಲ್ಲಿ ಕರ್ನಾಟಕದ ಅತಿ ಶ್ರೀಮಂತರ ಸಾಲಿನ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ಇರುತ್ತಿದ್ದ ರವಿಚಂದ್ರನ್ ಅವರು ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಬಗ್ಗೆ ಜೀ ಕನ್ನಡ ವಾಹಿನಿಯ ಕಾರ್ಯಕ್ರಮ ಒಂದರ ವೇದಿಕೆ ಮೇಲೆ ಮನಸಾರೆ ತಮ್ಮ ಮಾತುಗಳನ್ನೆಲ್ಲ ಹೇಳಿಕೊಂಡು ಪ್ರೇಕ್ಷಕರ ಮತ್ತು ಅಭಿಮಾನಿಗಳ ಎದುರು ಇಷ್ಟು ದಿನ ಇಟ್ಟುಕೊಂಡಿದ್ದ ದುಃಖವನ್ನೆಲ್ಲ ತೋಡಿಕೊಂಡಿದ್ದರು. ಅವರ ಮಾತುಗಳಲ್ಲಿ ಅವರು ಮನೆ ಮಾರಿದ ನೋವಿಗಿಂತ ಅಭಿಮಾನಿಗಳಿಗೆ ಸಿನಿಮಾ ವಿಚಾರವಾಗಿ ನಿರಾಸೆ ಮೂಡಿಸಿದ್ದೀನಲ್ಲ ಎನ್ನುವ ನೋವೇ ಹೆಚ್ಚಾಗಿತ್ತು.

ಆದರೆ ಅದನ್ನೇ ಬಂಡವಾಳ ಮಾಡಿಕೊಂಡು ಕೆಲವರು ರವಿಚಂದ್ರನ್ ಅವರ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ರವಿಚಂದ್ರನ್ ಅವರ ಕಷ್ಟ ನೋಡಿ ಈ ಹೀರೋ ಸಹಾಯ ಮಾಡಿದ್ದಾರೆ ಅಥವಾ ಇಂಥವರು ಸಹಾಯ ಮಾಡಿದ್ದಾರೆ ಎನ್ನುವ ಸುದ್ದಿಗಳನ್ನು ಮಾಧ್ಯಮಗಳಲ್ಲಿ ನಾವು ಕೂಡ ನೋಡಿದ್ದೇವೆ. ಇವುಗಳ ಬಗ್ಗೆ ಸ್ವತಃ ರವಿಚಂದ್ರನ್ ಅವರೇ ಈಗ ಸ್ಪಷ್ಟನೆ ಕೊಟ್ಟಿದ್ದಾರೆ.

ತಿಲಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ರವಿಚಂದ್ರನ್ ಅವರು ನನ್ನ ಬಗ್ಗೆ ಟೀವಿಯಲ್ಲಿ ಏನೇನೋ ಮಾತನಾಡುತ್ತಿದ್ದಾರೆ, ಏನೇನು ತೋರಿಸುತ್ತಿದ್ದಾರೆ. ನನಗೆ ಯಾರ್ಯಾರೋ ಬಂದು ಹಣ ಸಹಾಯ ಮಾಡಿದ್ದಾರೆ ಎಂದು ಸುದ್ದಿ ಮಾಡುತ್ತಿದ್ದಾರೆ ಆದರೆ ಇವೆಲ್ಲವೂ ಶುದ್ಧ ಸುಳ್ಳು ನನಗೆ ಈವರೆಗೆ ಯಾರು ಕೂಡ ಬಂದು ಹಣ ನೀಡಿಲ್ಲ ಮುಖ್ಯವಾಗಿ ನನಗೆ ಯಾರ ಸಹಾಯವು ಬೇಕಾಗಿಲ್ಲ, ನಾನು ಇನ್ನು ಅಂತಹ ಸ್ಥಿತಿಯನ್ನು ತಲುಪಿಲ್ಲ ಎಂದು ಈ ಊಹಾಪೋಹಕ್ಕೆಲ್ಲ ತೆರೆ ಎಳೆದಿದ್ದಾರೆ.

ಹಣ ಸಂಪಾದನೆ ಮಾಡುವುದೇ ಜೀವನದ ಮುಖ್ಯ ಉದ್ದೇಶವಲ್ಲ ಆದರೆ ಬದುಕಿನ ನಿರ್ವಹಣೆಗೆ ಹಣ ಬೇಕು ಅಷ್ಟೇ, ಒಂದು ಫೋನ್ ಇದ್ದರೆ ಸಾಕು ಎಕ್ಸ್ಟ್ರಾ ಫೋನ್ ಬೇಕು ಎಂದಾಗಲೇ ಅದು ಎಕ್ಸ್ಟ್ರಾ ಖರ್ಚು. ನಾನು ಏನೇ ಗಳಿಸಿದ್ದರು ಸಿನಿಮಾದಿಂದ ಗಳಿಸಿ ಸಿನಿಮಾಗೆ ಖರ್ಚು ಮಾಡಿದ್ದೇನೆ ನನ್ನ ಸಂಕಷ್ಟದ ಸ್ಥಿತಿಯಲ್ಲಿ ಸಂಬಂಧಿಕರೇ ಸಹಾಯ ಮಾಡಲಿಲ್ಲ ಅಂತಹದರಲ್ಲಿ ಸ್ನೇಹಿತರು ಮತ್ತು ಅಭಿಮಾನಿಗಳು ಸಹಾಯಕ್ಕಾಗಿದ್ದಾರೆ.

ಈಗಲೂ ನನ್ನ ಸುತ್ತಮುತ್ತ ಇರುವ ಸ್ನೇಹಿತರುಗಳಲ್ಲಿ ಸಿನಿಮಾಗಾಗಿ ಹಣ ಕೊಟ್ಟವರು ಇನ್ನು ವಾಪಸ್ ಕೇಳಿಲ್ಲ. ಈಗಲೂ ಸಹ ಕೊಟ್ರೇಶಿ ಬಂದು ಹೇಳುತ್ತಾನೆ, ಸರ್ ಮುಂದಿನ ವರ್ಷ ಹಣ ಮಾಡುತ್ತೇನೆ ನಿಮಗೆ ಕೊಡುತ್ತೇನೆ ಸಿನಿಮಾ ಮಾಡಿ ಎಂದು ಮತ್ತು ಇಲ್ಲೇ ಇರುವ ನನ್ನ ಇನ್ನೊಬ್ಬ ಸ್ನೇಹಿತ ದಿಲೀಪ್ ಕೂಡ ಹೇಳುತ್ತಾನೆ ನನ್ನ ಮನೆಯಲ್ಲಿ ಸುಮ್ಮನೆ ಹಾಗೆ ಹಣ ಇದೆ ನಿನ್ನ ಕಷ್ಟಕ್ಕೆ ಬೇಕಾದರೆ ಉಪಯೋಗಿಸಿಕೋ ಎಂದು ಆದರೆ ನನಗೆ ಯಾರ ಹಣ ಕೂಡ ಬೇಡ ಇಷ್ಟು ನಂಬಿಕೆ ಮತ್ತು ಪ್ರೀತಿ ನನ್ನ ಮೇಲೆ ಇಟ್ಟಿದ್ದರಲ್ಲ ಅದೇ ದೊಡ್ಡದು ಎಂದು ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಾರೆ ರವಿಚಂದ್ರನ್ ಅವರು.

ಇತ್ತೀಚೆಗಷ್ಟೇ ರವಿಚಂದ್ರನ್ ಅವರು ತಾವು ಇಷ್ಟು ವರ್ಷ ಜೀವನ ನಡೆಸಿದ್ದ ಮನೆಯನ್ನು ಮಾರಿ ಬೇರೆ ಮನೆಗೆ ಹೋಗಿದ್ದಾರೆ. ಆ ಮನೆ ಮಾರಿದ ದಿನದಿಂದ ರವಿಚಂದ್ರನ್ ಅವರ ಆರ್ಥಿಕ ಸ್ಥಿತಿ ಬಗ್ಗೆ ಅನೇಕ ಗಾಳಿ ಸುದ್ದಿ ಹಬ್ಬಿವೆ. ಜೊತೆಗೆ ಜೀ ಕನ್ನಡ ವಾಹಿನಿ ವೇದಿಕೆ ಮೇಲೆ ಕೂಡ ಇದೇ ವಿಷಯವಾಗಿ ರವಿಚಂದ್ರನ್ ಅವರು ಮಾತನಾಡಿದರು ಆಗಲೂ ಸಾಕಷ್ಟು ವಿಷಯಗಳು ಸುದ್ದಿ ಆಗಿದ್ದವು ಈಗ ರವಿಚಂದ್ರನ್ ಅವರ ಮಾತಿನಂದಲೇ ಇವೆಲ್ಲಕ್ಕೂ ಸ್ಪಷ್ಟನೆ ದೊರೆತಿದೆ.