ಹೆಣ್ಣು ಮಕ್ಕಳಿಗೆ ತಾವು ಧರಿಸುವಂತಹ ಬಟ್ಟೆಗಳ ಮೇಲೆ ಹಾಗೂ ತಾವು ಉಪಯೋಗಿಸುವಂತಹ ಯಾವುದೇ ವಸ್ತುಗಳಾಗಿರಬಹುದು ಅವುಗಳ ಮೇಲೆ ಬಹಳ ಪ್ರೀತಿ. ಅದರಲ್ಲೂ ಅವರು ಉಪಯೋಗಿಸುವ ಬಟ್ಟೆಯನ್ನು ಅವರು ಬಹಳ ಜೋಪಾನವಾಗಿ ಇಟ್ಟುಕೊಂಡಿರುತ್ತಾರೆ ಹಾಗೇನಾದರೂ ಆ ಬಟ್ಟೆಗಳ ಮೇಲೆ ಏನಾದರೂ ಕೊಳೆ ಅಥವಾ ಎಣ್ಣೆ ಕಲೆ ಆದರೆ ಅವರಿಗೆ ತುಂಬಾ ಬೇಜಾರಾಗುತ್ತದೆ ಎಂದೇ ಹೇಳಬಹುದು.
ಅದರಲ್ಲೂ ಕೆಲವೊಂದು ಸಂದರ್ಭಗಳಲ್ಲಿ ನಮಗೆ ತಿಳಿದ ರೀತಿ ಕೆಲವೊಂದು ಕೊಳೆಗಳು ನಮ್ಮ ರೇಷ್ಮೆ ಸೀರೆಗಳಿಗೆ ಆಗಿರುತ್ತದೆ ಅಂತಹ ಸಂದರ್ಭದಲ್ಲಿ ಕೆಲವೊಂದಷ್ಟು ಜನ ಅದನ್ನು ಡ್ರೈವಾಷ್ ಗೆ ಕೊಡುವುದರ ಮೂಲಕ ತಕ್ಷಣವೇ ಸರಿಪಡಿಸಿಕೊಳ್ಳುತ್ತಾರೆ. ಆದರೆ ಕೆಲವೊಂದಷ್ಟು ಜನರಿಗೆ ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎನ್ನುವಂತಹ ಮಾಹಿತಿ ತಿಳಿದಿರುವುದಿಲ್ಲ.
ಇಂತಹ ಸಂದರ್ಭದಲ್ಲಿ ಅವರು ಆ ಒಂದು ಸೀರೆಯನ್ನು ಅವರು ಹಾಗೆ ಇಟ್ಟಿರುತ್ತಾರೆ ಬಿಸಾಡುವುದಕ್ಕೂ ಕೂಡ ಅವರಿಗೆ ಇಷ್ಟ ಇರುವುದಿಲ್ಲ. ಯಾವುದೇ ಒಂದು ವಸ್ತುಗಳಾಗಿರಬಹುದು, ಅದರ ಮೇಲೆ ಒಂದು ಪ್ರೀತಿ ಎನ್ನುವುದು ಇರುತ್ತದೆ ಹೀಗಾಗಿದೆ ಎಂದ ತಕ್ಷಣ ಅದನ್ನು ಆಚೆ ಬಿಸಾಡುವುದಕ್ಕೆ ಸಾಧ್ಯವಿಲ್ಲ.
ಈ ಸುದ್ದಿ ಓದಿ:- ಈ ರೀತಿ ಮಾಡಿ ಚಿಕ್ಕ ಸೊಳ್ಳೆ ಗುಂಗುರು\ನೋಣ ಯಾವುದು ನಿಮ್ಮ ಅಡುಗೆ ಮನೆಯಲ್ಲಿ ಇರಲ್ಲ.!
ಆದ್ದರಿಂದ ಈ ರೀತಿಯ ಯಾವುದೇ ಸಂದರ್ಭದಲ್ಲಿ ನಿಮ್ಮ ರೇಷ್ಮೆ ಸೀರೆಗಳ ಮೇಲೆ ಯಾವುದೇ ರೀತಿಯ ಅಡುಗೆ ಕೊಳೆ, ಎಣ್ಣೆ ಅಥವಾ ಇನ್ಯಾವುದೇ ರೀತಿಯ ಕೊಳೆ ಇದ್ದರೂ ಅದನ್ನು ಹೇಗೆ ಸುಲಭವಾಗಿ ತೆಗೆಯುವುದು ಎನ್ನುವಂತಹ ಮಾಹಿತಿಗಳನ್ನು ಮಹಿಳೆಯರು ತಿಳಿದುಕೊಂಡಿರುವುದು ತುಂಬಾ ಒಳ್ಳೆಯದು.
ಹಾಗೇನಾದರೂ ಆ ಒಂದು ಸಂದರ್ಭದಲ್ಲಿ ನಿಮ್ಮ ಸೀರೆಯ ಮೇಲೆ ಈ ರೀತಿ ಕಲೆ ಉಂಟಾದಾಗ ತಕ್ಷಣವೇ ಈ ವಿಧಾನಗಳನ್ನು ಅನುಸರಿಸುವುದರ ಮೂಲಕ ಸರಿಪಡಿಸಿ ಕೊಳ್ಳಬಹುದಾಗಿದೆ. ಮೊದಲನೆಯದಾಗಿ ನಿಮ್ಮ ರೇಷ್ಮೆ ಸೀರೆಗಳ ಮೇಲೆ ಎಣ್ಣೆ ಕಲೆ ಆಗಿದ್ದರೆ ಅದನ್ನು ಹೇಗೆ ಸುಲಭವಾಗಿ ಕೇವಲ ಒಂದೇ ಒಂದು ವಸ್ತುವನ್ನು ಉಪ ಯೋಗಿಸಿ ಸರಿಪಡಿಸಿಕೊಳ್ಳಬಹುದು ಎಂದು ನೋಡೋಣ.
ಮೊದಲು ಎಣ್ಣೆ ಕಲೆ ಆಗಿರುವಂತಹ ಸೀರಿಯಲ್ ದೊಡ್ಡದಾಗಿ ಇಡಬೇಕು ಅದರ ಕೆಳಭಾಗಕ್ಕೆ ಒಂದು ಬಿಳಿ ಬಣ್ಣದ ಕಾಟನ್ ಬಟ್ಟೆಯನ್ನು ಇಡಬೇಕು ಆನಂತರ ಒಂದು ಚಿಕ್ಕ ಬೌಲ್ ತೆಗೆದುಕೊಂಡು ಅದರಲ್ಲಿ ಸ್ವಲ್ಪ ನೀರನ್ನು ಹಾಕಿ ಇಟ್ಟುಕೊಳ್ಳಬೇಕು ನಂತರ ಒಂದು ಪಿಯರ್ಸ್ ಸೋಪ್ ತೆಗೆದು ಕೊಂಡು ಅದನ್ನು ನೀರಿನಲ್ಲಿ ಅದ್ದಿ ಅದನ್ನು ಎಣ್ಣೆ ಆಗಿರುವಂತಹ ಸ್ಥಳಕ್ಕೆ ಹಾಕಿ ನೊರೆ ಬರುವತನಕ ಮೆಲ್ಲನೆ ಉಚ್ಚಬೇಕು.
ಈ ಸುದ್ದಿ ಓದಿ:- ಸಿಂಹ ರಾಶಿಯವರಿಗೆ ಏಪ್ರಿಲ್ ವಿಪರೀತ ರಾಜಯೋಗ.!
ಆನಂತರ ನೊರೆ ಬಂದ ಮೇಲೆ ಕೈಯಿಂದ 5 ನಿಮಿಷ ಹಾಗೆ ಉಜ್ಜಬೇಕು. ಈ ರೀತಿ ಮಾಡುವುದರಿಂದ ಎಣ್ಣೆಯ ಅಂಶ ನಿಧಾನವಾಗಿ ಬಿಡುತ್ತಾ ಬರುತ್ತದೆ ಆನಂತರ ನಿಮ್ಮ ಕೈಯಿಂದಲೇ ಆಯಾ ನೊರೆಯನ್ನು ಆಚೆ ತೆಗಿಯಬೇಕು.
ಆನಂತರ ಶುದ್ಧವಾದ ನೀರಿನಿಂದ ಒಂದು ಕಾಟನ್ ಬಟ್ಟೆಯ ಸಹಾಯದಿಂದ ಅದನ್ನು ಸಂಪೂರ್ಣವಾಗಿ ಒಣಗಲು ಬಿಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ರೇಷ್ಮೆ ಸೀರೆಯ ಮೇಲೆ ಬಿದ್ದಿರುವಂತಹ ಎಣ್ಣೆಯ ಕಲೆಯನ್ನು ಸಂಪೂರ್ಣವಾಗಿ ತೆಗೆಯಬಹುದು.
ಹಾಗೂ ಮತ್ತೊಂದು ವಿಧಾನ ಯಾವುದು ಎಂದು ನೋಡುವುದಾದರೆ ಯಾವುದೇ ಸೀರೆಗೆ ಎಣ್ಣೆ ಕಲೆ ಆದ ತಕ್ಷಣವೇ ನಿಮ್ಮ ಬಳಿ ಯಾವುದೇ ರೀತಿಯ ಟಾಲ್ಕಮ್ ಪೌಡರ್ ಇದ್ದರೆ ಅದನ್ನು ಎಣ್ಣೆ ಆಗಿರುವಂತಹ ಸೀರಿಯಲ್ ಹಿಂಭಾಗ ಮತ್ತು ಮುಂಭಾಗಕ್ಕೆ ಮಂದವಾಗಿ ಹಾಕಿ ಬಿಡಬೇಕು ಹೀಗೆ ಮಾಡುವುದರಿಂದ ಎಣ್ಣೆಯ ಅಂಶವನ್ನು ಸಂಪೂರ್ಣ ವಾಗಿ ಟಾಲ್ಕಂ ಪೌಡರ್ ಎಳೆದುಕೊಳ್ಳುತ್ತದೆ.
ನಂತರ ಮೊದಲು ಹೇಳಿದಂತಹ ವಿಧಾನವನ್ನು ಅನುಸರಿಸಿದರೆ ನಿಮ್ಮ ಸೀರೆಗೆ ಆಗಿರುವ ಎಣ್ಣೆ ಕಲೆಯನ್ನು ಸಂಪೂರ್ಣವಾಗಿ ತೆಗೆಯಬಹುದು. ಈ ರೀತಿ ಮಾಡುವುದರಿಂದ ನೀವು ಡ್ರೈವಾಷ್ ಗೆ ಕೊಡುವ ಅವಶ್ಯಕತೆ ಇಲ್ಲ. ನೀವೇ ಸುಲಭವಾಗಿ ಈ ವಿಧಾನವನ್ನು ಸರಿಸುವುದರಿಂದ ನಿಮ್ಮ ಸೀರೆಯನ್ನು ಸರಿಪಡಿಸಿ ಕೊಳ್ಳಬಹುದು.