ವೆಹಿಕಲ್ ಲೋನ್ ಗಳನ್ನು ಪಡೆದಿರುವವರು ಈ ಒಂದು ಸಾಮಾನ್ಯ ಸಮಸ್ಯೆಯನ್ನು ಯಾವಾಗ ಅನುಭವಿಸುತ್ತಾ ಇರುತ್ತಾರೆ. ಡೌನ್ ಪೇಮೆಂಟ್ ಕಟ್ಟಿ EMI ಕಟ್ಟುತ್ತಾ ಸಾಲದ ಮೇಲೆ ಗಾಡಿಗಳನ್ನು ಪಡೆದವರು ಒಂದು ಅಥವಾ ಎರಡು ಕಂತುಗಳನ್ನು ಉಳಿಸಿಕೊಂಡಿದ್ದರು ಕೂಡ ಅದು ಕಟ್ಟುವುದು ವಿಳಂಬವಾದಾಗ ಸಾಲ ಕೊಟ್ಟ ಬ್ಯಾಂಕ್ ಗಳು ರಿಕವರಿ ಏಜೆಂಟ್ ಗಳಿಂದ ವಾಹನಗಳನ್ನು ಸೀಝ್ ಮಾಡಿಸುತ್ತಾರೆ.
ಜೊತೆಗೆ ಸೀಝ್ ಮಾಡಿಕೊಂಡ ವಾಹನವನ್ನು ಮಾಲೀಕನಿಗೆ ಒಂದು ಮಾತು ತಿಳಿಸದೆ ಸೇಲ್ ಮಾಡಿಬಿಡುತ್ತಾರೆ. ಸೇಲ್ ಆದಮೇಲೆ ಕೂಡ ಕಡಿಮೆ ಮೊತ್ತಕ್ಕೆ ಸೇಲ್ ಆಯ್ತು ಎಂದು ಸಬೂಬು ಕೊಟ್ಟು ಇನ್ನಷ್ಟು ಹಣವನ್ನು ವಾಹನ ಮಾಲೀಕನಿಂದಲೇ ಕಿತ್ತುಕೊಳ್ಳುತ್ತಾರೆ. ಈ ರೀತಿ ರಸ್ತೆ ಮಧ್ಯದಲ್ಲೇ ಸೀಝರ್ ಗಳು ಹೆದರಿಸಿ, ಬೆದರಿಕೆ ಹಾಕಿ ವೆಹಿಕಲ್ ಗಳನ್ನು ಕಸಿದುಕೊಂಡು ಹೋಗುವುದನ್ನು ನಾವು ಕಣ್ಣಾರೆ ಕಂಡಿರುತ್ತೇವೆ.
ಅಥವಾ ಕುಟುಂಬದಲ್ಲಿ ಈ ರೀತಿ ಪರಿಸ್ಥಿತಿಯನ್ನು ಯಾರಾದರೂ ಅನುಭವಿಸಿ ಆ ದುಃಖ ಹಂಚಿಕೊಳ್ಳುವುದನ್ನು ಕೇಳಿರುತ್ತೇವೆ. ಆದರೆ ಈ ರೀತಿ ಡೌನ್ ಪೇಮೆಂಟ್ ಕಟ್ಟಿ EMI ಕಟ್ಟಿಕೊಂಡು ಹೋಗುವವರ ವೆಹಿಕಲ್ ಅನ್ನು ಯಾವುದೇ ಸೀಝರ್ ಏಕಾಏಕಿ ಕಸಿದುಕೊಂಡು ಹೋಗುವಂತಿಲ್ಲ. ಈ ವಿಷಯದಲ್ಲಿ ವಾಹನದ ಮಾಲೀಕನಿಗೂ ಆತನದ್ದೇ ಆದ ಹಕ್ಕುಗಳಿವೆ. ಅವುಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.
● ಈ ರೀತಿ ವಾಹನಗಳನ್ನು ಸೀಝ್ ಮಾಡಿಕೊಂಡು ಹೋಗುವ ವ್ಯಕ್ತಿಗಳು ಗೂಂಡಾಗಳ ರೀತಿ ವರ್ತಿಸುತ್ತಿರುತ್ತಾರೆ, ಆದರೆ ಅವರಿಗೆ ಆ ಹಕ್ಕು ಇರುವುದಿಲ್ಲ. ಬ್ಯಾಂಕ್ ಗಳು ಅವರನ್ನು ರಿಕವರಿ ಏಜೆಂಟ್ ಗಳಾಗಿ ನೇಮಿಸಿಕೊಂಡಿದ್ದರು ಕೂಡ ಅವರು RBI ಗೈಡ್ ಲೈನ್ಸ್ ಗಳನ್ನು ಅರಿತು ತರಬೇತಿಗಳನ್ನು ಪಡೆದು DRA ಪರೀಕ್ಷೆಗಳನ್ನು ಪಾಸ್ ಮಾಡಿರುವ ಸ್ಟಾಫ್ ಆಗಿರಬೇಕು. ಜೊತೆಗೆ ಅವರ ಜೊತೆಯಲ್ಲಿ ತಾವು DRA ಎನ್ನುವುದಕ್ಕೆ ಐಡಿ ಕಾರ್ಡ್ ಹೊಂದಿರಬೇಕು. ನಿಮ್ಮ ವಾಹನಗಳನ್ನು ಅವರು ಕಿತ್ತುಕೊಂಡು ಹೋಗಲು ಬಂದಾಗ ನೀವು ಅವರನ್ನು ದಬಾಯಿಸಿ ಅವರ ಐ.ಡಿ ಕಾರ್ಡ್ ಕೇಳಬಹುದು.
● ನೀವು ಕೆಲಸಕ್ಕೆ ಹೋಗುವ ಸಮಯದಲ್ಲಿ ಅಥವಾ ಕೆಲಸ ಮಾಡುತ್ತಿರುವಾಗ ಎಲ್ಲೆಂದರಲ್ಲಿ ರಸ್ತೆಗಳಲ್ಲಿ ಅಡ್ಡಗಟ್ಟಿ ನಿಮ್ಮ ವಾಹನಗಳನ್ನು ಸೀಝ್ ಮಾಡುವಂತಿಲ್ಲ. ಆದರೆ ಇತ್ತೀಚೆಗೆ ಇದೇ ರೀತಿ ಸೀಝ್ ಮಾಡುವ ಕೇಸ್ ಗಳು ಹೆಚ್ಚಾಗುತ್ತಿವೆ. ಈ ರೀತಿ ವಾಹನಗಳ ಲೋನ್ ಕಟ್ಟುವುದು ವಿಳಂಬವಾದಾಗ ಅವರು ವಾಹನವನ್ನು ಸೀಝ್ ಮಾಡಲೇಬೇಕು ಎಂದರೆ ಅವು ಮನೆಗಳಲ್ಲಿ ಇರುವಾಗ ಮಾತ್ರ ಸೀಝ್ ಮಾಡಬೇಕು.
● ನಿಮ್ಮ ವಾಹನಗಳನ್ನು ಸೀಝ್ ಮಾಡಲು ಬರುವವರು ಕೋರ್ಟ್ ಇಂದ ಸೀಝ್ ಮಾಡಲು ಆರ್ಡರ್ ತೆಗೆದುಕೊಂಡು ಬಂದು ಅದನ್ನು ನಿಮಗೆ ಕೊಟ್ಟು ನಂತರ ಸೀಝ್ ಮಾಡಬೇಕು. ಏಕಾಏಕಿ ನಿಮ್ಮಿಂದ ವಾಹನಗಳನ್ನು ಕಸಿದುಕೊಳ್ಳಲು ಬ್ಯಾಂಕ್ ಸಿಬ್ಬಂದಿಗೆ ಆಗಲಿ ರಿಕವರಿ ಏಜೆಂಟ್ ಗಳಿಗೆ ಆಗಲಿ ಹಕ್ಕು ಇರುವುದಿಲ್ಲ. ಯಾಕೆಂದರೆ ಆ ವಾಹನಗಳಿಗೆ ನೀವು ಸಹ ಹಣ ಕಟ್ಟಿರುತ್ತೀರಾ ಅದು ನಿಮ್ಮ ವಾಹನವೇ ಆಗಿರುತ್ತದೆ.
● ರಿಕವರಿ ಏಜೆಂಟ್ ಗಳು ಸಾಲ ಪಡೆದವರು ನೀವಾಗಿದ್ದರೆ ನಿಮ್ಮ ಹೆಸರಿನಲ್ಲಿ ಲೋನ್ ಇದ್ದರೆ ನಿಮ್ಮನ್ನು ಮಾತ್ರ ಸಂಪರ್ಕ ಮಾಡಿ ಮಾತನಾಡಬೇಕು. ನಿಮ್ಮ ಪೋಷಕರ ಮನೆಗೆ ಆಗಲಿ ಅಥವಾ ನಿಮ್ಮ ಸಂಗಾತಿಯ ಆಫೀಸ್ ಗಳಲ್ಲಿ ಹೋಗಿ ಗಲಾಟೆ ಮಾಡುವಂತಿಲ್ಲ. ಆ ಸಮಯಗಳಲ್ಲಿ ಅವರು ಪ್ರಶ್ನೆ ಮಾಡಿ ಅವರನ್ನು ರಕ್ಷಿಸಿಕೊಳ್ಳಬಹುದು.
● RBI ಸಾಲ ಕೊಡುವ ಬ್ಯಾಂಕ್ಗಳಿಗೆ ಸಾಲ ವಸೂಲಿ ಮಾಡುವಾಗಲು ಕೂಡ ಅದೇ ರೀತಿ ಚೌಕಟ್ಟಿನೊಳಗೆ ಸಾಲವಸೂಲಿ ಮಾಡಬೇಕು ಎನ್ನುವ ನಿಯಮಗಳನ್ನು ಹಾಕಿಕೊಟ್ಟಿದೆ. ಇದನ್ನು ಮೀರಿ ಯಾವುದೇ ಹಣಕಾಸಿನ ಸಂಸ್ಥೆ ವರ್ತಿಸುವಂತಿಲ್ಲ. ಒಬ್ಬ ಬ್ಯಾಂಕ್ ಗ್ರಾಹಕನಾಗಿ ಮತ್ತು ವಾಹಕನದ ಮಾಲೀಕನಾಗಿ ನೀವು ನಿಮ್ಮ ಹಕ್ಕುಗಳ ರಕ್ಷಣೆಗೆ ಹೋರಾಡಬಹುದು. ಆದರೆ ನೀವು ತೆಗೆದುಕೊಂಡಿರುವ ಲೋನ್ ಕಟ್ಟುವುದಿಲ್ಲ ಎಂದು ಹೇಳುವಂತಿಲ್ಲ.
ಅದಕ್ಕೆ ಸಕಾರಣಗಳನ್ನು ಕೊಟ್ಟು ಆದಷ್ಟು ಬೇಗ ಸಾಲ ತೀರಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು. ಈ ರೀತಿ ಕಾನೂನು ಮೂಲಕ ಇನ್ನಷ್ಟು ಅನುಕೂಲತೆಗಳು ವಾಹನಗಳ ಗ್ರಾಹಕನಿಗೆ ಸಿಗುತ್ತದೆ ಅವುಗಳ ಪೂರ್ತಿ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ.