ಎಳ್ಳಿಗೆ ಆಯುರ್ವೇದದಲ್ಲಿ ಮಹತ್ವದ ಸ್ಥಾನವಿದೆ. ಮಹರ್ಷಿ ವಾಗ್ಬಟರು ಹಾಗೂ ಚರಕ ಮಹರ್ಷಿಗಳು ತಮ್ಮ ಸಂಹಿತೆಗಳಲ್ಲಿ ಎಳ್ಳಿನ ಪ್ರಾಮುಖ್ಯತೆ ಬಗ್ಗೆ ಉಲ್ಲೇಖ ಮಾಡಿ ತಿಳಿಸಿದ್ದಾರೆ. ಎಳ್ಳು ಯಥೇಚ್ಛವಾಗಿ ಪೋಷಕಾಂಶಗಳನ್ನು ಹೊಂದಿದ್ದು, ದೇಹಕ್ಕೆ ಕಂಡು ಬರುವ ನಾನಾ ರೀತಿಯ ಸಮಸ್ಯೆಗಳಿಗೆ ಪರಿಹಾರವಾಗಿದೆ. ಹೀಗಾಗಿ ನಮ್ಮ ಹಿರಿಯರು ಕೆಲವು ಹಬ್ಬಗಳಿಗೆ ಎಳ್ಳಿನ ತಿನಿಸುಗಳನ್ನು ಮಾಡುವುದನ್ನು ಆಚರಣೆ ರೂಪದಲ್ಲಿ ರೂಢಿ ಮಾಡಿಸಿ ಅಭ್ಯಾಸವಾಗಿಸಿದ್ದರು.
ಈಗಲೂ ಸಹ ನಾಗರ ಪಂಚಮಿ ಹಬ್ಬ ಕ್ಕೆ ಎಳ್ಳುಯಂಡೆ ಮಾಡುವುದು, ಸಂಕ್ರಾಂತಿ ಹಬ್ಬಕ್ಕೆ ಎಳ್ಳು ಬೆಲ್ಲ ಬೀರುವುದು ಚಾಲ್ತಿಯಲ್ಲಿದೆ. ತೈಲ ಧಾನ್ಯಗಳಲ್ಲಿ ಅತಿ ಶ್ರೇಷ್ಠವಾದ ವಿಶೇಷ ಧಾನ್ಯ ಎಂದು ಹೆಸರಾಗಿರುವ ಈ ಎಳ್ಳನ್ನು ಸೇವಿಸುವುದರಿಂದ ದೇಹಕ್ಕೆ ಏನೆಲ್ಲ ಪ್ರಯೋಜನ ಇದೆ ಎನ್ನುವುದರ ಬಗ್ಗೆ ನಾವು ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.
ಬಿಳಿ ದಾಸವಾಳದಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಇದನ್ನು ಹೇಗೆ ಬಳಸಬೇಕು ನೋಡಿ.!
ಎಳ್ಳಿನಲ್ಲಿ ಪ್ರೊಟೀನ್, ಕಾರ್ಬೋಹೈಡ್ರೇಟ್ಸ್, ಫ್ಯಾಟ್ ಜೊತೆಗೆ ಮೈಕ್ರೋ ನ್ಯೂಟ್ರಿಯೆಂಟ್ಸ್ ಗಳು ಹೇರಳವಾಗಿ ಇರುತ್ತದೆ. ಆಂಟಿ ಕ್ಯಾನ್ಸರಸ್ ಪ್ರಾಪರ್ಟಿಗಳು ಕೂಡ ಇರುತ್ತವೆ. ಆಯುರ್ವೇದ ತಿಳಿಸುವ ಪ್ರಕಾರ ಧಾತುಗಳನ್ನು ಸಮತೋಲನ ಮಾಡುವಂತಹ ಶಕ್ತಿಯು ಎಳ್ಳಿನಲ್ಲಿ ಇದೆ. ಸಪ್ತ ಧಾತುಗಳು ಎಂದು ಕರಿಸಿಕೊಳ್ಳುವ ರಸ, ರಕ್ತ, ಮೇಧ, ಅಸ್ತಿ, ಮಾಂಸ, ಮಜ್ಜೆ, ಶುಕ್ರ ಇವುಗಳನ್ನು ಕ್ರಿಯಾಶೀಲಗೊಳಿಸಿ ಬಲಪಡಿಸಿ ನಿಯಂತ್ರಣದಲ್ಲಿಟ್ಟುಕೊಂಡು ಇವುಗಳ ವರ್ಧನೆ ಮಾಡಲು ಎಳ್ಳಿನಲ್ಲಿರುವ ಪೋಷಕಾಂಶಗಳು ಕಾರಣವಾಗುತ್ತದೆ.
ಎಳ್ಳು ಮತ್ತು ಬೆಲ್ಲ ಅಥವಾ ಎಳ್ಳುಂಡೆಯನ್ನು ತಿನ್ನುವುದರಿಂದ ಸಂಧಿವಾತ, ಮಂಡಿ ನೋವು, ಕೈಕಾಲು ಮೂಳೆ ನೋವು ಇಂತಹ ಆಥ್ರೈಟಿಸ್ ಗೆ ಸಂಬಂಧಿಸಿದ ನೋವುಗಳು ಬರುವುದಿಲ್ಲ. ಎಳ್ಳಿನಲ್ಲಿರುವ ಇನ್ನೊಂದು ಮ್ಯಾಜಿಕ್ ಎಂದು ಹೇಳಬಹುದಾದ ವಿಶೇಷ ಗುಣ ಏನೆಂದರೆ ಈ ಎಳ್ಳಿನ ಪದಾರ್ಥಗಳು ಅಥವಾ ಎಳ್ಳುಂಡೆ ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ತೂಕವನ್ನು ನಿಯಂತ್ರಣ ಗೊಳಿಸಿಕೊಳ್ಳಬಹುದು.
ಮಹಿಳೆಯರನ್ನು ಕಾಡುವ ಸ್ತನ ಕ್ಯಾನ್ಸರ್ ನಾ ಲಕ್ಷಣಗಳು ಇವೇ ನೋಡಿ, ಎಲ್ಲಾ ಮಹಿಳೆಯರು ಇದನ್ನು ತಿಳಿದುಕೊಂಡಿರಲೇಬೇಕು.!
ದೇಹದ ತೂಕ ಹೆಚ್ಚಾಗಿರುವವರು ಅದನ್ನು ಇಳಿಸಿಕೊಳ್ಳಲು ಅಥವಾ ತೂಕ ಕಡಿಮೆ ಇರುವವರು ದೇಹದ ತೂಕವನ್ನು ಹೆಚ್ಚು ಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ದೇಹದ ನರನಾಡಿಗಳಿಗೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳು ಎಳ್ಳಿನಲ್ಲಿ ಇದೆ. ನರನಾಡಿಗಳನ್ನು ಕ್ರಿಯಾಶೀಲಗೊಳಿಸುವಲ್ಲಿ ಎಳ್ಳಿನ ಪಾತ್ರ ಮಹತ್ವವಾದದ್ದು. ಕೈ ಕಾಲು ಜೋಮು ಹಿಡಿಯುವುದು, ಸುಸ್ತಾಗುವುದು ಮುಂತಾದ ಸಮಸ್ಯೆಗಳು ಬರುವುದಿಲ್ಲ.
ತೀವ್ರ ಆಯಾಸ ಆಗುತ್ತಿರುವಾಗ ಎಳ್ಳುಂಡೆ ತಿಂದು ನೀರು ಕುಡಿಯುವುದರಿಂದ ಅದು ತಕ್ಷಣ ಕಡಿಮೆಯಾಗುವುದನ್ನು ನಾವು ಕಾಣಬಹುದು. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಾದ ಗ್ಯಾಸ್ಟಿಕ್, ಗ್ಯಾಸ್ಟ್ರಬಲ್, ಮಲಬದ್ಧತೆ ಇಂಥ. ಕಾಯಿಲೆಗಳು ಕೂಡ ಪ್ರತಿನಿತ್ಯ ನಿಯಮಿತವಾಗಿ ಎಳ್ಳಿನ ಸೇವನೆ ಮಾಡುವುದರಿಂದ ಗುಣವಾಗುತ್ತದೆ. ಕ್ಯಾಲ್ಸಿಯಂ ಕೊರತೆಯಿಂದ ಔಷಧಿಗಳನ್ನು ಸೇವಿಸುತ್ತಿರುವವರು ಅದರ ಬದಲು ನ್ಯಾಚುರಲ್ ಆಗಿ ಎಳ್ಳು ಹಾಗೂ ಎಳ್ಳಿನ ಪದಾರ್ಥಗಳ ಸೇವನೆ ಮಾಡುವುದು ಉತ್ತಮ.
ಎಳ್ಳನ್ನು ಚೆನ್ನಾಗಿ ಜಗಿದು ನಂತರ ಸೇವಿಸಬೇಕು ಹಾಗಿದ್ದಾಗ ಮಾತ್ರ ಅದರಲ್ಲಿರುವ ಎಲ್ಲಾ ಪೋಷಕಾಂಶಗಳು ಸರಿಯಾದ ರೀತಿಯಲ್ಲಿ ದೇಹವನ್ನು ಸೇರಿಸುತ್ತವೆ. ಈ ರೀತಿಯಾಗಿ ಮೂಳೆಗಳು ಗಟ್ಟಿಯಾಗಲು, ಕೂದಲು ಗಟ್ಟಿಯಾಗಿ ಕೂದಲಿನ ಆರೋಗ್ಯ ಉತ್ತಮವಾಗಲು, ಚರ್ಮ ಕಾಂತಿಯುತವಾಗಲು, ಕಣ್ಣಿನ ದೃಷ್ಟಿ ದೋಷ ಸಮಸ್ಯೆಗೆ ಇನ್ನು ಮುಂತಾದ 20ಕ್ಕೂ ಹೆಚ್ಚು ಬಗೆಯ ಆರೋಗ್ಯ ಸಮಸ್ಯೆಗಳಿಗೆ ಎಳ್ಳನ್ನು ಸೇವನೆ ಮಾಡುವುದು ಉತ್ತಮ ಪರಿಹಾರ ಆಗಿದೆ.