ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಪುಟ್ಟಗೌರಿ ಮದುವೆ ಎಂಬ ಧಾರವಾಹಿಗೆ ಎಲ್ಲಿಲ್ಲದ ಜನಪ್ರಿಯತೆ ಇತ್ತು, ಈ ಧಾರಾವಾಹಿಯನ್ನು ನೋಡುವುದಕ್ಕೆ ಅಭಿಮಾನಿಗಳು ಕಾತುರದಿಂದ ಕಾದುಕೊಳ್ಳುತ್ತಿದ್ದರು. ಬಾಲ್ಯ ವಿವಾಹ ಮಾಡಿದರೆ ಅದರಿಂದ ಏನೆಲ್ಲಾ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಹಾಗೂ ಬಾಲ್ಯ ವಿವಾಹ ಮಾಡುವುದು ಕಾನೂನಿಗೆ ವಿರೋಧ ಎಂಬ ಕಾನ್ಸೆಪ್ಟ್ ಅನ್ನು ಇಟ್ಟುಕೊಂಡು ಕೆ ಎಸ್ ರಾಮ್ ಜಿ ಎಂಬ ನಿರ್ದೇಶಕ ಪುಟ್ಟಗೌರಿ ಮದುವೆ ಎಂಬ ಧಾರವಾಹಿಯನ್ನು ಮೊದಲ ಬಾರಿಗೆ ಪ್ರಸಾರ ಮಾಡುತ್ತಾರೆ. ಅಂದಿನ ಕಾಲದಲ್ಲಿ ಈ ಧಾರಾವಾಹಿ ಎಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿತು ಅಂದರೆ ಸಂಜೆ 7:30 ಗಂಟೆ ಆದರೆ ಸಾಕು ಮನೆ ಮಂದಿಯವರೆಲ್ಲ ಒಟ್ಟಾಗಿ ಕುಳಿತುಕೊಂಡು ಈ ಧಾರಾವಾಹಿಯನ್ನು ನೋಡುತ್ತಿದ್ದರು ಅಷ್ಟು ಪ್ರಸಿದ್ಧಿಯನ್ನು ಈ ಧಾರಾವಾಹಿ ಪಡೆಯಿತು.
ಒಂದೆರಡು ವರ್ಷ ಈ ಧಾರಾವಾಹಿ ಚೆನ್ನಾಗಿಯೇ ನಡೆದುಕೊಂಡು ಹೋಗುತ್ತಿತ್ತು ತದನಂತರ ಪುಟ್ಟಗೌರಿ ವಯಸ್ಕ ವಯಸ್ಸಿಗೆ ಬಂದ ನಂತರ ಅಲ್ಲಿ ಇದ್ದಂತಹ ಬಾಲಕ ಕಲಾವಿದರನ್ನು ಹೊರಹಾಕಿ ಆ ಸ್ಥಾನಕ್ಕೆ ರಕ್ಷಕ್ ಗೌಡ ಹಾಗೂ ರಂಜನಿ ರಾಘವನ್ ಅವರನ್ನು ಕರೆತರಲಾಗುತ್ತದೆ. ಇಲ್ಲಿಂದ ಕತೆ ಬದಲಾವಣೆಯಾಗುತ್ತದೆ ಕಾಲಕ್ಕೆ ತಕ್ಕಂತೆ ಕಥೆಯು ಬದಲಾದಾಗ ಪ್ರೇಕ್ಷಕರು ಕೂಡ ಈ ಕಥೆಗೆ ಹೊಂದಿಕೊಂಡು ಧಾರವಾಹಿಯನ್ನು ಎಂದಿನಂತೆ ನೋಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಪುಟ್ಟಗೌರಿ ಮದುವೆ ಮೊದಲಿಗಿಂತಲೂ ಕೂಡ ಹೆಚ್ಚು ಆಕರ್ಷಿಣಿಯಕರವಾಗಿತ್ತು ಹಾಗಾಗಿ ಈ ಒಂದು ಧಾರಾವಾಹಿಯನ್ನು ನೋಡುವಂತಹ ಅಭಿಮಾನಿಗಳ ಸಂಖ್ಯೆ ಕಡಿಮೆ ಏನು ಆಗಲಿಲ್ಲ.
ಆದರೆ ಕೆಲವು ಕಾರಣಾಂತರಗಳಿಂದ ಕಥೆಯನ್ನು ಎಳೆಯಲಾಯಿತು ಆ ಸಂದರ್ಭದಲ್ಲಿ ಪುಟ್ಟಗೌರಿ ಧಾರಾವಾಹಿಯನ್ನು ಟ್ರೋಲ್ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ತದನಂತರ ಪುಟ್ಟಗೌರಿ ಮದುವೆಯನ್ನು ಸ್ಥಗಿತಗೊಳಿಸಿ ಆ ಒಂದು ಜಾಗಕ್ಕೆ ಮಂಗಳ ಗೌರಿ ಎಂಬ ಶೀರ್ಷಿಕೆಯನ್ನು ಮರು ನಾಮಕರಣ ಮಾಡುತ್ತಾರೆ. ಈ ಒಂದು ಮಂಗಳ ಗೌರಿ ಧಾರವಾಹಿಯಲ್ಲಿ ಸಂಪೂರ್ಣವಾಗಿ ಹಳೆಯ ಪುಟ್ಟಗೌರಿ ಧಾರವಾಹಿಯಲ್ಲಿ ಇದ್ದಂತಹ ಎಲ್ಲಾ ಕಲಾವಿದರ ಪಾತ್ರಗಳನ್ನು ಕೂಡ ಬದಲಾವಣೆ ಮಾಡಲಾಗುತ್ತದೆ. ಈ ಪಾತ್ರಗಳನ್ನು ಬದಲಾವಣೆ ಮಾಡುತ್ತಿದ್ದ ಹಾಗೆ ಅಭಿಮಾನಿಗಳು ತಮ್ಮ ಬೇಸರವನ್ನು ಹೊರಹಾಕುತ್ತಾರೆ.
ಇನ್ನು ಕೆಲವರು ಈ ಪಾತ್ರಗಳು ಮುಕ್ತಾಯವಾಗಿದ್ದು ಒಳ್ಳೆಯದೇ ಆಯಿತು ಎಂದು ಹೇಳುತ್ತಾರೆ ಆದರೂ ಕೂಡ ಇದೀಗ ಪುಟ್ಟಗೌರಿ ಮದುವೆ ಬರೋಬ್ಬರಿ 10 ವರ್ಷಗಳ ಕಾಲ ನಿಮ್ಮನ್ನು ರಂಜಿಸಿದೆ ಎಂದರೆ ನೀವು ನಂಬಲೇಬೇಕು. ಹೌದು ಇದೇ ಮೊದಲ ಬಾರಿಗೆ ಇತಿಹಾಸದಲ್ಲಿ ಕಿರುತೆರೆಯಲ್ಲಿ ಮೂರು ಸಾವಿರ ಸಂಚಿಕೆಗಳನ್ನು ಪೂರೈಸಿದಂತಹ ಹೆಗ್ಗಳಿಕೆ ಮತ್ತು ಕೀರ್ತಿ ಪುಟ್ಟಗೌರಿ ಧಾರಾವಾಹಿ ತಂಡಕ್ಕೆ ಸಲ್ಲುತ್ತದೆ. ಇಲ್ಲಿಯವರೆಗೂ ಕೂಡ ಯಾವ ಧಾರವಾಹಿ ಇಷ್ಟು ದೀರ್ಘ ಕಾಲದ ವರೆಗೆ ಪ್ರಸಾರವಾಗಿಲ್ಲ. ಇದೇ ಮೊದಲ ಬಾರಿಗೆ ಇಷ್ಟು ದೀರ್ಘಕಾಲದ ವರೆಗೆ ಪ್ರಸಾರವಾಗಿರುವುದು ಹಾಗಾಗಿ ಈ ಧಾರಾವಾಹಿಯು ಇದೀಗ ಅಂತ್ಯವಾಗುತ್ತಿದೆ.
ಈ ವಿಚಾರ ಕೇಳುತ್ತಿದ್ದ ಹಾಗೆ ಬಹಳಷ್ಟು ಅಭಿಮಾನಿಗಳು ಸದ್ಯ ಈಗಲಾದರೂ ಈ ಧಾರಾವಾಹಿ ಮುಕ್ತಾಯದ ಹಂತಕ್ಕೆ ಬಂತಲ್ಲ ಎಂದು ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾರೆ, ಇನ್ನು ಕೆಲವರು ಇನ್ನೂ ಕೂಡ ಈ ಕಥೆ ಇನ್ನು ಇರಬೇಕಾಯಿತು ಎಂದು ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕೆಲವೊಂದು ಮೂಲಗಳ ಪ್ರಕಾರ ಈ ಮುಕ್ತಾಯವಾಗುತ್ತಿದೆ ಎಂಬುದು ಖಚಿತವಾಗಿದೆ ಮಂಗಳಗೌರಿ ಕಥೆ ಮುಗಿಯುತ್ತಿದ್ದ ಹಾಗೆ ಆ ಜಾಗಕ್ಕೆ ಇದೀಗ ಹೊಸ ಧಾರಾವಾಹಿ ಆದಂತಹ ಭಾಗ್ಯಲಕ್ಷ್ಮಿ ಎಂಬುದು ಸೇರ್ಪಡೆಯಾಗುತ್ತಿದೆ. ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಮಂಗಳಗೌರಿ ಧಾರಾವಾಹಿಯನ್ನು ಬೀಳ್ಕೊಡಲಾಯಿತು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.